ಸಿನಿಮಾದಲ್ಲಿ ವಿಲನ್, ರಿಯಲ್ ಲೈಫ್‌ನಲ್ಲಿ ಹೀರೋ ಆದ ಸೋನು ಸೂದ್ ಬಳಿಯಿರುವ ಕಾರುಗಳು

ಬಾಲಿವುಡ್ ಸಿನಿಮಾಗಳಲ್ಲಿ ಸೋನು ಸೂದ್ ಅವರು ಹೆಚ್ಚಾಗಿ ವಿಲನ್ ಪಾತ್ರದಲ್ಲಿ ಅಭಿನಯಿಸಿ ಖಡಕ್ ವಿಲನ್ ಎಂದೇ ಜನಪ್ರಿಯರಾಗಿದ್ದರು. ಆದರೆ ಅವರು ನಿಜ ಜೀವನದಲ್ಲಿ ಕೂಲಿ ಕಾರ್ಮಿಕರಿಗೆ ನೆರವಾಗುವ ಮೂಲಕ ರಿಯಲ್ ಹೀರೋ ಎಂದು ಅನಿಸಿಕೊಂಡಿದ್ದಾರೆ.

ಸಿನಿಮಾದಲ್ಲಿ ವಿಲನ್, ರಿಯಲ್ ಲೈಫ್‌ನಲ್ಲಿ ಹೀರೋ ಆದ ಸೋನು ಸೂದ್ ಬಳಿಯಿರುವ ಕಾರುಗಳು

ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ನೂರಾರು ಕಾರ್ಮಿಕರು ಕೆಲಸಕ್ಕೆ ತೆರಳಿದ್ದರು. ಆದರೆ ಲಾಕ್​ಡೌನ್​ನಿಂದಾಗಿ ಅವರು ಅಲ್ಲಿಯೇ ಉಳಿಯಬೇಕಾಗಿ ಬಂದಿತ್ತು. ಸಂಕಷ್ಟದಲ್ಲಿದ್ದ ಕರ್ನಾಟಕದ ಕಾರ್ಮಿಕ ಸಹಾಯಕ್ಕೆ ಯಾರೊಬ್ಬರೂ ಮುಂದೆ ಬಂದಿರಲಿಲ್ಲ. ಆದರೆ ನಟ ಸೋನು ಸೂದ್ ಥಾಣೆಯಲ್ಲಿ ಸಿಲುಕಿದ ಕಾರ್ಮಿಕರಿಗೆ ವಿಶೇಷವಾಗಿ 10 ಬಸ್​​ಗಳನ್ನು ಮಾಡಿ ಅವರನ್ನು ಊರಿಗೆ ಕಳುಹಿಸಿದ್ದಾರೆ. ಈ ಮೂಲಕ ಸಿನಿಮಾಗಳಲ್ಲಿ ವಿಲನ್ ಆಗಿದ್ದರು ನಿಜ ಜೀವನದಲ್ಲಿ ಕನ್ನಡಿಗರ ಮನ ಗೆದ್ದ ಸೋನ್ ಸೂದ್.

ಸಿನಿಮಾದಲ್ಲಿ ವಿಲನ್, ರಿಯಲ್ ಲೈಫ್‌ನಲ್ಲಿ ಹೀರೋ ಆದ ಸೋನು ಸೂದ್ ಬಳಿಯಿರುವ ಕಾರುಗಳು

ಇಷ್ಟೇ ಅಲ್ಲದೇ ಕಾರ್ಮಿಕರ ಮಾಹಿತಿ ಪಡೆದು ತಾವೇ ಅವರ ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿ ಅವರೆ ಒಪ್ಪಿಗೆ ಪಡೆದಿದ್ದಾರೆ. ಇದುವರೆಗೆ 100 ಬಸ್​ಗಳಲ್ಲಿ 3000ಕ್ಕೂ ಹೆಚ್ಚು ಮಂದಿಯನ್ನು ಕರ್ನಾಟಕ, ಉತ್ತರಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ್, ಒಡಿಶಾ ಸೇರಿದಂತೆ ಇತರ ರಾಜ್ಯಗಳಲ್ಲಿನ ಕಾರ್ಮಿಕರನ್ನು ಕಳುಹಿಸಿದ್ದಾರೆ.

MOST READ: ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಖ್ಯಾತ ಕ್ರಿಕೆಟಿಗನ ಸಹೋದರ

ಸಿನಿಮಾದಲ್ಲಿ ವಿಲನ್, ರಿಯಲ್ ಲೈಫ್‌ನಲ್ಲಿ ಹೀರೋ ಆದ ಸೋನು ಸೂದ್ ಬಳಿಯಿರುವ ಕಾರುಗಳು

ಬಸ್​ನಲ್ಲಿ ಸಾಗುವ ಕಾರ್ಮಿಕರಿಗೆ ಆಹಾರದ ಕಿಟ್​ಗಳನ್ನು ನೀಡಿದ್ದರು. ಅಷ್ಟೇ ಅಲ್ಲದೆ ಇದರ ಸಂಪೂರ್ಣ ಖರ್ಚನ್ನು ಅವರೇ ಭರಿಸಿದ್ದಾರೆ. ವಿಶೇಷ ಎಂದರೆ, ಕಾರ್ಮಿಕರನ್ನು ಬಸ್ಸು ಹತ್ತಿಸಲು ಖುದ್ದು ಸೋನು ಸೂದ್​ ಸ್ಥಳಕ್ಕೆ ಆಗಮಿಸಿದ್ದರು.

ಸಿನಿಮಾದಲ್ಲಿ ವಿಲನ್, ರಿಯಲ್ ಲೈಫ್‌ನಲ್ಲಿ ಹೀರೋ ಆದ ಸೋನು ಸೂದ್ ಬಳಿಯಿರುವ ಕಾರುಗಳು

ಇತ್ತೀಚೆಗೆ ಪಂಜಾಬ್​ನಲ್ಲಿ 1,500 ಪಿಪಿಇ ಕಿಟ್​ಗಳನ್ನು ನೀಡುವ ಮೂಲಕ ಸೋನು ಸೂದ್​ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಅಲ್ಲದೆ ಸಾಕಷ್ಟು ಬಡವರಿಗೆ ಅವರು ಆಹಾರವನ್ನು ಒದಗಿಸುತ್ತಿದ್ದಾರೆ. ನಮ್ಮ ರಿಯಲ್ ಹೀರೋ ಸೋನು ಸೂದ್ ಅವರು ಕಾರುಗಳ ಕ್ರೇಜ್ ಅನ್ನು ಕೂಡ ಹೊಂದಿದ್ದಾರೆ. ಸೋನು ಸೂದ್ ಅವರು ಯಾವುದೆಲ್ಲ ಕಾರುಗಳನ್ನು ಹೊಂದಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

MOST READ: ಭಾರತದಲ್ಲಿ ಬಿಡುಗಡೆಯಾಯ್ತು ಅತಿ ವೇಗದ ಹೊಸ ಮರ್ಸಿಡಿಸ್ ಎಎಂಜಿ ಜಿಟಿ-ಆರ್ ಕಾರು

ಸಿನಿಮಾದಲ್ಲಿ ವಿಲನ್, ರಿಯಲ್ ಲೈಫ್‌ನಲ್ಲಿ ಹೀರೋ ಆದ ಸೋನು ಸೂದ್ ಬಳಿಯಿರುವ ಕಾರುಗಳು

ಪೋರ್ಷೆ ಪನಾಮೆರಾ

ಜರ್ಮನ್ ಬ್ರ್ಯಾಂಡ್‌ನ ಮೊದಲ ನಾಲ್ಕು-ಡೋರಿನ ಕೂಪ್ ಕಾರು ಇದಾಗಿದೆ ಮತ್ತು ಇದು ಭಾರತದಲ್ಲಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ ಎಂದು ಹೇಳಬಹುದು. ಸೋನು ಸೂದ್ ಅವರು ಕೆಲವು ವರ್ಷಗಳ ಹಿಂದೆ ಈ ಪನೆಮೆರಾ ಕಾರನ್ನು ಖರೀದಿಸಿದ್ದರು. ಈ ಕಾರು 3.0-ಲೀಟರ್ ವಿ6 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ.

ಸಿನಿಮಾದಲ್ಲಿ ವಿಲನ್, ರಿಯಲ್ ಲೈಫ್‌ನಲ್ಲಿ ಹೀರೋ ಆದ ಸೋನು ಸೂದ್ ಬಳಿಯಿರುವ ಕಾರುಗಳು

ಆಡಿ ಕ್ಯೂ7

ಸೋನು ಸೂದ್ ಅವರ ಮೆಚ್ಚಿನ ಕಾರು ಆಡಿ ಕ್ಯೂ7 ಆಗಿದೆ. ಅವರು ಹೆಚ್ಚಾಗಿ ಈ ಆಡಿ ಕ್ಯೂ7 ಕಾರಿನಲ್ಲಿ ಹೆಚ್ಚಾಗಿ ಓಡಾಡುತ್ತಿದ್ದರು ಆದರೆ ಅವರು ಆಡಿ ಕ್ಯೂ7 ಕಾರು ಬೆಂಕಿಗೆ ಆಹುತಿಯಾಗಿತ್ತು. ಈ ಘಟನೆ ನಡೆದ ಕಲವೇ ವಾರಗಳಲ್ಲಿ ಹೊಸ ಆಡಿ ಕ್ಯೂ7 ಕಾರನ್ನು ಖರೀದಿಸಿದ್ದರು. ಇವರು ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು ಕ್ಯೂ7 ಕಾರನ್ನು ಬಳಸುತ್ತಾರೆ.

MOST READ: ಹೊಸ ಆಕ್ಟೀವಿಯಾ ಆರ್‍ಎಸ್ 245 ಕಾರಿನ ಮಾರಾಟವನ್ನು ಪುನಾರಂಭಿಸಿದ ಸ್ಕೋಡಾ

ಸಿನಿಮಾದಲ್ಲಿ ವಿಲನ್, ರಿಯಲ್ ಲೈಫ್‌ನಲ್ಲಿ ಹೀರೋ ಆದ ಸೋನು ಸೂದ್ ಬಳಿಯಿರುವ ಕಾರುಗಳು

ಮರ್ಸಿಡಿಸ್ ಬೆಂಝ್ ಎಂಎಲ್-ಕ್ಲಾಸ್

ಇವರು ಮಿಡ್ ಎಸ್‍ಯುವಿಯಾದ ಮರ್ಸಿಡಿಸ್ ಬೆಂಝ್ ಎಂಎಲ್ ಕ್ಲಾಸ್ ಅನ್ನು ಹೊಂದಿದ್ದಾರೆ. ಸೋನು ಸೂದ್ ಅವರ ಎಂಎಲ್-ಕ್ಲಾಸ್ ಈಗ ಸಾಕಷ್ಟು ಹಳೆಯದಾಗಿದೆ ಆದರೆ ಇದು ಇನ್ನೂ ಕೂಡ ಉತ್ತಮ ಸ್ಥಿತಿಯಲ್ಲಿದೆ, ಈಗಲೂ ಅವರು ಈ ಕಾರನ್ನು ಬಳಸುತ್ತಾರೆ.

ಸಿನಿಮಾದಲ್ಲಿ ವಿಲನ್, ರಿಯಲ್ ಲೈಫ್‌ನಲ್ಲಿ ಹೀರೋ ಆದ ಸೋನು ಸೂದ್ ಬಳಿಯಿರುವ ಕಾರುಗಳು

ಮಾರುತಿ ಸುಜುಕಿ ಝೆನ್

ಸೋನು ಸೂದ್ ಅವರು ಖರೀದಿಸಿದ ಮೊದಲ ಕಾರು ಈ ಮಾರುತಿ ಝೆನ್ ಆಗಿದೆ, ಈ ಕಾರನ್ನು ಅವರು ಪಂಜಾಬ್‌ನಲ್ಲಿರುವ ಅವರ ಮನೆಯಲ್ಲಿ ನಿಲ್ಲಿಸಲಾಗಿದೆ. ಅವರು ಪಂಜಾಬ್ ನಲ್ಲಿರುವ ತಮ್ಮ ಮನೆಗೆ ತೆರಳಿದಾಗ ಈ ಕಾರನ್ನು ಓಡಿಸುತ್ತಾರೆ. ಈ ಕಾರು ಒಂದು ಕಾಲದಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿತ್ತು.

Article Published On: Thursday, May 28, 2020, 15:07 [IST]
English summary
Real life hero Sonu Sood: The cars that drive him. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+