ಫಾಸ್ಟ್‌ಟ್ಯಾಗ್ ಬಳಕೆಯನ್ನು ಮತ್ತಷ್ಟು ಸುಲಭಗೊಳಿಸಲಿದೆ ಹೊಸ ಫೀಚರ್ಸ್
ಜನವರಿ 1ರಿಂದ ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್ ಬಳಕೆಯನ್ನು ಜಾರಿಗೆ ತರುತ್ತಿರುವ ಕೇಂದ್ರ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಬಳಕೆದಾರರಿಗೆ ಮತ್ತಷ್ಟು ಸುಲಭವಂತೆ ಅಪ್ಲಿಕೇಶನ್‌ನಲ್ಲಿ ಹೊಸ ವೈಶಿಷ್ಟ್ಯತೆಗಳನ್ನು ನವೀಕರಿಸಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್‌ಟ್ಯಾಗ್ ಆಪ್‌ನಲ್ಲಿ ಪರಿಚಯಿಸಿರುವ ಹೊಸ ವೈಶಿಷ್ಟ್ಯತೆಯಿಂದಾಗಿ ಅಪ್ಲಿಕೇಶನ್‌ನಲ್ಲಿ ಬ್ಯಾಲೆನ್ಸ್ ಸ್ಥಿತಿಗತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದ್ದು, ಬ್ಯಾಲೆನ್ಸ್ ಚೆಕ್ ಸ್ಟೇಟಸ್ ವೈಶಿಷ್ಟ್ಯತೆದೊಂದಿಗೆ ಮೊಬೈಲ್ ಅಪ್ಲಿಕೇಶನ್ ಅನ್ನು ನವೀಕರಿಸಿದೆ. ಆ್ಯಪ್‌ನಲ್ಲಿ ಲಭ್ಯವಿರುವ ಬ್ಯಾಲೆನ್ಸ್ ಚೆಕ್ ಸ್ಟೇಟಸ್ ಆಯ್ಕೆಯನ್ನು ಬಳಕೆ ಮಾಡಿಕೊಂಡು ಹಣದ ಲಭ್ಯತೆಯನ್ನು ತಿಳಿಯಬಹುದಾಗಿದ್ದು, ಇದು ಟೋಲ್‌ಗಳಲ್ಲಿ ವಾಹನ ಮಾಲೀಕರು ಅನಾವಶ್ಯಕವಾಗಿ ಕಾಯುವುದನ್ನು ತಪ್ಪಿಸುತ್ತದೆ.

ಬ್ಯಾಲೆನ್ಸ್ ಚೆಕ್ ಸ್ಟೇಟಸ್ ಆಯ್ಕೆಯನ್ನು ಬಳಕೆ ಮಾಡಿದ ನಂತರ ಹಣದ ಲಭ್ಯತೆ ಕುರಿತಂತೆ ಮಾಹಿತಿ ನೀಡುವ ಫಾಸ್ಟ್‌ಟ್ಯಾಗ್ ಆ್ಯಪ್‌ನಲ್ಲಿ ನಿಗದಿತ ಮಟ್ಟದ ಬ್ಯಾನೆನ್ಸ್ ಇದ್ದಲ್ಲಿ ಹಸಿರು ಬಣ್ಣವನ್ನು, ನಿಗದಿತ ಮಟ್ಟದ ಬ್ಯಾನೆನ್ಸ್ ಇಲ್ಲವಾದಲ್ಲಿ ಆರೇಂಜ್ ಬಣ್ಣವನ್ನು ತೊರಿಸುತ್ತದೆ.

ಒಂದು ವೇಳೆ ಫಾಸ್ಟ್‌ಟ್ಯಾಗ್ ಖಾತೆಯಲ್ಲಿ ನಿಗದಿತ ಮಟ್ಟಕ್ಕಿಂತಲೂ ಕಡಿಮೆ ಬ್ಯಾಲೆನ್ಸ್ ಹೊಂದಿದ್ದಲ್ಲಿ ರೆಡ್ ಬಣ್ಣದ ಮೂಲಕ ರೀಚಾರ್ಜ್‌ಗೆ ಸೂಚಿಸಲಿದ್ದು, ಅತಿ ಸುಲಭವಾಗಿ ಬ್ಯಾನೆಲ್ಸ್ ಚೆಕ್ ಸೌಲಭ್ಯದೊಂದಿಗೆ ಟೋಲ್ ಪ್ಲಾಜಾಗಳಲ್ಲಿರುವ ಪಾಯಿಂಟ್ ಆಫ್ ಸೇಲ್‌ಗಳ ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಇದರೊಂದಿಗೆ ಬಳಕೆದಾರರಿಗೆ ಮತ್ತಷ್ಟು ಸುಲಭವಾಗುವಂತೆ ಕಪ್ಪು ಪಟ್ಟಿಯಲ್ಲಿರುವ ಖಾತೆಗಳನ್ನು ರಿಫ್ರೆಶ್ ಮಾಡಲು 10 ನಿಮಿಷದಿಂದ 3 ನಿಮಿಷಗಳಿಗೆ ಇಳಿಕೆ ಮಾಡಿದ್ದು, ಇದು ಕಪ್ಪು ಪಟ್ಟಿಯಲ್ಲಿರುವ ಖಾತೆಗಳನ್ನು ತಕ್ಷಣವೇ ಸಾಮಾನ್ಯ ಖಾತೆಗಳ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಮಾಡುತ್ತದೆ. ಇದರಿಂದ ವಾಹನ ಮಾಲೀಕರು ಖಾತೆಯಲ್ಲಿ ಹಣ ಕಡಿಮೆಯಾದರೂ ತಕ್ಷಣವೇ ರೀಚಾರ್ಜ್ ಮಾಡುವ ಮೂಲಕ ಟೋಲ್ ಬಳಕೆ ಮಾಡಬಹುದಾಗಿದೆ.

ಆದರೆ ಈ ಹಿಂದೆ ಫಾಸ್ಟ್‌ಟ್ಯಾಗ್ ಖಾತೆಯಲ್ಲಿ ಹಣವಿಲ್ಲದೆ ಟೋಲ್‌ನಲ್ಲಿ ನುಗ್ಗಿಬಂದ ವಾಹನಗಳನ್ನು ಕಪ್ಪು ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗುತ್ತಿತ್ತು. ಹಾಗೆಯೇ ರೀಚಾರ್ಜ್ ಮಾಡಿದ ನಂತರವು ಅಕೌಂಟ್ ಸಕ್ರಿಯಗೊಳ್ಳಲು ಕನಿಷ್ಠ 10 ನಿಮಿಷ ಸಮಯಾವಕಾಶ ತೆಗೆದುಕೊಳ್ಳುತ್ತಿತ್ತು.

ಹೊಸ ಅಪ್‌ಡೆಟ್ ನಂತರ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿರುವ ಹೆದ್ದಾರಿ ಪ್ರಾಧಿಕಾರವು ಬಳಕೆದಾರರಿಗೆ ಹೊಸ ಶುಲ್ಕ ಪಾವತಿಯನ್ನು ಸರಳಗೊಳಿಸಲಾಗಿದ್ದು, ಜನವರಿ 1ರಿಂದ ಪ್ರತಿಯೊಂದು ವಾಹನವು ಕೂಡಾ ಫಾಸ್ಟ್‌ಟ್ಯಾಗ್ ಮೂಲಕವೇ ಸಂಚರಿಸಬೇಕಿದೆ.

ಇನ್ನು ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿವನ್ನು ಸರಳಗೊಳಿಸಲು ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಕಡ್ಡಾಯಗೊಳಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇದುವರೆಗೆ ದಾಖಲೆ ಪ್ರಮಾಣದಲ್ಲಿ ಹೊಸ ಸೌಲಭ್ಯವನ್ನು ಅಳವಡಿಕೆ ಮಾಡಿದ್ದು, ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಅಳವಡಿಸಿಕೊಳ್ಳದ ವಾಹನ ಮಾಲೀಕರಿಗೆ ಜನವರಿ 1ರಿಂದ ದುಬಾರಿ ಶುಲ್ಕು ವಸೂಲಿ ಮಾಡುವ ಸೂಚನೆ ನೀಡಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹಲವು ಗಡುವುಗಳ ನಂತರ ಈ ವರ್ಷದ ಫೆಬ್ರುವರಿ ತಿಂಗಳಿನಲ್ಲಿ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಕಡ್ಡಾಯಗೊಳಿಸಿದ್ದ ಕೇಂದ್ರ ಹೆದ್ದಾರಿ ಪ್ರಾಧಿಕಾರವು ಬರೋಬ್ಬರಿ 1 ಕೋಟಿಗೂ ಅಧಿಕ ವಾಹನಗಳಿಗೆ ಹೊಸ ಸೌಲಭ್ಯವನ್ನು ಅಳವಡಿಸಿತ್ತು. ಫಾಸ್ಟ್‌ಟ್ಯಾಗ್ ಜಾರಿಗೆ ತಂದ 6 ವರ್ಷಗಳ ನಂತರ 1 ಕೋಟಿ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸುವಲ್ಲಿ ಯಶಸ್ವಿಯಾಗಿದ್ದ ಹೆದ್ದಾರಿ ಪ್ರಾಧಿಕಾರವು ಇದೀಗ ಕೇವಲ 10 ತಿಂಗಳ ಅವಧಿಯಲ್ಲಿ ಸುಮಾರು 2.30 ಕೋಟಿಗೂ ಅಧಿಕ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಜೋಡಣೆ ಮಾಡಿದೆ.

ಕರೋನಾ ವೈರಸ್ ಪರಿಣಾಮದಿಂದಾಗಿ ಕ್ಯಾಶ್‌ಲೆಸ್ ವ್ಯವಹಾರಕ್ಕೆ ಒತ್ತು ನೀಡುತ್ತಿರುವ ವಾಹನ ಸವಾರರು ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಿಕೊಳ್ಳುತ್ತಿದ್ದು, ಕಳೆದ ವರ್ಷದ ಅಕ್ಟೋಬರ್ ಅವಧಿಗಿಂತಲೂ ಇದೀಗ ಶೇ.400 ರಷ್ಟು ಹೊಸ ವಾಹನ ಸವಾರರು ಫಾಸ್ಟ್‌ಟ್ಯಾಗ್ ಖಾತೆ ತೆರೆದ್ದಾರೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಈ ಮೂಲಕ ಸುಗುಮ ಸಂಚಾರದಿಂದಾಗಿ ಟೋಲ್ ಸಂಗ್ರಹದಲ್ಲೂ ಕೂಡಾ ಹೆಚ್ಚಳ ಕಂಡುಬಂದಿದ್ದು, ಕಳೆದ ಕೆಲ ತಿಂಗಳ ಹಿಂದೆ ಹೆದ್ದಾರಿ ಪ್ರಾಧಿಕಾರವು ದಿನಂಪ್ರತಿ ಶುಲ್ಕ ಸಂಗ್ರಹದಲ್ಲಿನ ಮೊತ್ತವು ರೂ.65 ಕೋಟಿಯಿಂದ ರೂ. 80 ಕೋಟಿ ಶುಲ್ಕ ಸಂಗ್ರಹಣೆ ಮಾಡುವ ಮೂಲಕ ಬಳಕೆದಾರರಿಗೂ ಸರಳ ಸೇವೆಗಳನ್ನು ಒದಗಿಸುತ್ತಿದೆ.


Click it and Unblock the Notifications








