ದೋಷ ಪೂರಿತ ಜೀಪ್ ಕಂಪಾಸ್ ಮಾದರಿಗಳನ್ನು ರಿಕಾಲ್ ಮಾಡಲು ಮುಂದಾದ ಎಫ್‌ಸಿಎ

ಎಫ್‌ಸಿಎ ಇಂಡಿಯಾ ಕಂಪನಿಯು ತನ್ನ ಕಂಪಾಸ್ ಮಾದರಿಯಲ್ಲಿ ಕೆಲವು ದೋಷ ಕಂಡು ಬಂದ ಹಿನ್ನಲೆಯಲ್ಲಿ ಅವುಗಳನ್ನು ರಿಕಾಲ್ ಮಾಡಲು ಮುಂದಾಗಿದೆ. ಎಫ್‌ಸಿಎ ಕಂಪನಿಯು ಸುಮಾರು 547 ಕಾರುಗಳನ್ನು ರಿಕಾಲ್ ಮಾಡಲಾಗುತ್ತದೆ.

ದೋಷ ಪೂರಿತ ಕಂಪಾಸ್ ಮಾದರಿಗಳನ್ನು ರಿಕಾಲ್ ಮಾಡಲು ಮುಂದಾದ ಎಫ್‌ಸಿಎ

ಜೀಪ್ ಕಂಪಾಸ್ ಮಾದರಿಯ ವೈಪರ್ ಅಸೆಂಬ್ಲಿಯಲ್ಲಿ ಬಳಸಲಾಗುವ ಬ್ರೇಸ್ ನಟ್ ನಲ್ಲಿ ದೋಷ ಕಂಡು ಬಂದಿದೆ. ಕಂಪನಿಯು ಜೀಪ್ ಕಂಪಾಸ್ ಮಾದರಿಯ ಗುಣ್ಣಮಟ್ಟವನ್ನು ತಪಾಸಣೆ ನಡೆಸುವ ವೇಳೆಯಲ್ಲಿ ಈ ದೋಷ ಕಂಡು ಬಂದಿದೆ. ಇದೀಗ ಕಂಪನಿಯು 547 ಕಾರುಗಳನ್ನು ರಿಕಾಲ್ ಮಾಡಲು ಮುಂದಾಗಿದೆ. ಈ ದೋಷ ಕಂಡು ಬಂದ ಕಂಪಾಸ್ ಮಾದರಿಗಳನ್ನು 2020ರಲ್ಲಿ ತಯಾರಿಸಲಾಗಿದೆ.

ದೋಷ ಪೂರಿತ ಕಂಪಾಸ್ ಮಾದರಿಗಳನ್ನು ರಿಕಾಲ್ ಮಾಡಲು ಮುಂದಾದ ಎಫ್‌ಸಿಎ

ವೈಪರ್ ಸ್ಥಿರವಾಗಿ ಕಾರ್ಯ ನಿರ್ವಹಿಸಲು ಬ್ರೇಸ್ ನಟ್ ಮಾಡಿಫೈ ಮಾಡುವ ಅಗತ್ಯವಿದೆ ಎಂದು ಬ್ರ್ಯಾಂಡ್ ಹೇಳಿದೆ. ಇನ್ನು 2020ರ ಜೀಪ್ ಕಂಪಾಸ್ ಮಾದರಿಯ ವೈಪರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ಯಾರು ಕಂಪ್ಲೇಟ್ ಮಾಡಿಲ್ಲವೆಂದು ಬ್ರ್ಯಾಂಡ್ ಹೇಳಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ದೋಷ ಪೂರಿತ ಕಂಪಾಸ್ ಮಾದರಿಗಳನ್ನು ರಿಕಾಲ್ ಮಾಡಲು ಮುಂದಾದ ಎಫ್‌ಸಿಎ

ಕಂಪನಿಯು ಈಗಾಗಲೇ 2020ರ ಜೀಪ್ ಕಂಪಾಸ್ ಮಾದರಿಯನ್ನು ಹೊಂದಿರುವ ಮಾಲೀಕರನ್ನು ಸಂಪರ್ಕಿಸಲು ಪ್ರಾರಂಭಿಸಿದೆ. ಇನ್ನು ವೈಪರ್ ಬ್ರೇಸ್ ನಟ್ ನಲ್ಲಿ ದೋಷ ಕಂಡು ಬಂದ ಮಾದರಿಯನ್ನು ಸರಿಪಡಿಸಲು ಸೇವಾ ಕೇಂದ್ರಗಳು ಗ್ರಾಹಕರನ್ನು ಸಂಪರ್ಕಿಸುತ್ತವೆ ಎಂದು ಕಂಪನಿ ಹೇಳಿದರು.

ದೋಷ ಪೂರಿತ ಕಂಪಾಸ್ ಮಾದರಿಗಳನ್ನು ರಿಕಾಲ್ ಮಾಡಲು ಮುಂದಾದ ಎಫ್‌ಸಿಎ

2020ರ ಜೀಪ್ ಕಂಪಾಸ್ ಮಾದರಿಯ ವೈಪರ್ ನಲ್ಲಿಯು ದೋಷವನ್ನು ಸರಿಪಡಿಸಲು ಸರಿಸುಮಾರು 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದಕ್ಕಾಗಿ ವಾಹನಗಳ ಮಾಲೀಕರಿಗೆ ಯಾವುದೇ ಹೆಚ್ಚುವರಿ ವೆಚ್ಚವನ್ನು ಪಾವತಿಸುವ ಅಗತ್ಯವಿರುವುದಿಲ್ಲ. ಉಚಿತವಾಗಿ ಜೀಪ್ ಕಂಪಾಸ್ ಮಾದರಿಯ ದೋಷವನ್ನು ಸರಿಪಡಿಸಲಾಗುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ದೋಷ ಪೂರಿತ ಕಂಪಾಸ್ ಮಾದರಿಗಳನ್ನು ರಿಕಾಲ್ ಮಾಡಲು ಮುಂದಾದ ಎಫ್‌ಸಿಎ

ಇದರೊಂದಿಗೆ ಎಫ್‌ಸಿಎ ಕಂಪನಿಯು ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಜೀಪ್ ಕಂಪನಿಯು ತನ್ನ 2021ರ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತ್ತು.

ದೋಷ ಪೂರಿತ ಕಂಪಾಸ್ ಮಾದರಿಗಳನ್ನು ರಿಕಾಲ್ ಮಾಡಲು ಮುಂದಾದ ಎಫ್‌ಸಿಎ

2021ರ ಕಂಪಾಸ್ ಫೇಸ್‌ಲಿಫ್ಟ್ ಎಸ್‌ಯುವಿಯಲ್ಲಿ ಹೊಸ ಫೀಚರ್ ಗಳನ್ನು ಅಳವಡಿಸಲಾಗಿದೆ. ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುದಾದರೆ ಕೆಲವು ಸೂಕ್ಷ್ಮ ನವೀಕರಣಗಳನ್ನು ಪಡೆದುಕೊಂಡಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ದೋಷ ಪೂರಿತ ಕಂಪಾಸ್ ಮಾದರಿಗಳನ್ನು ರಿಕಾಲ್ ಮಾಡಲು ಮುಂದಾದ ಎಫ್‌ಸಿಎ

2021ರ ಜೀಪ್ ಕಂಪಾಸ್‌ನಲ್ಲಿ ಹೊಸ ಎಂಜಿನ್ ಆಯ್ಕೆಯನ್ನು ನೀಡಲಾಗಿದೆ. ಹೊಸದಾಗಿ 1.3-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಇನ್ನು ಹಳೆಯ 1.4-ಲೀಟರ್ ಅನ್ನು ಬದಲಾಯಿಸಲಾಗುತ್ತದೆ.

ದೋಷ ಪೂರಿತ ಕಂಪಾಸ್ ಮಾದರಿಗಳನ್ನು ರಿಕಾಲ್ ಮಾಡಲು ಮುಂದಾದ ಎಫ್‌ಸಿಎ

ಎಫ್‌ಸಿಎ ಕಂಪನಿಯು ಕಂಪಾಸ್ ಎಸ್‍ಯುವಿಯ ಉತ್ತಮ ಗುಣಮಟ್ಟನ್ನು ಕಪಾಡಲು ರಿಕಾಲ್ ಮಾಡಲು ಮುಂದಾಗಿದೆ. ಇನ್ನು ಜೀಪ್ ಕಂಪಾಸ್ ಇತರ ಯಾವುದೇ ದೋಷಗಳು ಇಲ್ಲವೆಂದು ಕಂಪನಿ ಸ್ಪಷ್ಟಪಡಿಸಿದೆ.

Most Read Articles

Kannada
Read more on ಜೀಪ್ jeep
English summary
FCA Recalls 547 Units Of MY20 Jeep Compass Models To Address Wiper Brace Nut Fitment. Read In Kannada.
Story first published: Monday, August 3, 2020, 12:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X