Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೈಬ್ರಿಡ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಜೀಪ್ ವ್ರಾಂಗ್ಲರ್
ಫಿಯೆಟ್ ಕ್ರಿಸ್ಲರ್ ಆಟೋ ಜೀಪ್‌ನ ಎಲ್ಲಾ ಎಸ್‌ಯುವಿಗಳನ್ನು ಹೈಬ್ರಿಡ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸುತ್ತಿದೆ. ಜೀಪ್ ಕಂಪಾಸ್ 4x4 ಹಾಗೂ ರೆನೆಗೇಡ್ 4x4 ನಂತರ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿಯಾದ ವ್ರಾಂಗ್ಲರ್ ಅನ್ನು ಎಲೆಕ್ಟ್ರಿಕ್ ಹೈಬ್ರಿಡ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ.

ವ್ರಾಂಗ್ಲರ್ ಹೈಬ್ರಿಡ್ ಅನ್ನು ಈ ವರ್ಷದ ಡಿಸೆಂಬರ್‌ನಲ್ಲಿ ಜಾಗತಿಕವಾಗಿ ಬಿಡುಗಡೆಗೊಳಿಸಲಾಗುವುದೆಂದು ಹೇಳಲಾಗಿದೆ. ಮೊದಲಿಗೆ ಈ ಎಸ್‌ಯುವಿಯನ್ನು ಅಮೆರಿಕಾ ಹಾಗೂ ಯುರೋಪಿನ ಹಲವು ದೇಶಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ನಂತರದ ದಿನಗಳಲ್ಲಿ ಬಹಿರಂಗಪಡಿಸಲಾಗುವುದು. ವ್ರಾಂಗ್ಲರ್ ಹೈಬ್ರಿಡ್ ಮಾರುಕಟ್ಟೆಯಲ್ಲಿರುವ ಮಾದರಿಯ ವಿನ್ಯಾಸವನ್ನು ಹೊಂದಿದೆ. ಆದರೆ ಕೆಲವು ಹೈಬ್ರಿಡ್ ಬ್ಯಾಡ್ಜಿಂಗ್ ಗಳನ್ನು ಹೊಂದಲಿದೆ.

ಹಳೆಯ ಎಸ್‌ಯುವಿಯಲ್ಲಿರುವ ಎಲ್ಲಾ ಫೀಚರ್ ಗಳು ಹೊಸ ಮಾದರಿಯಲ್ಲಿ ಮುಂದುವರೆಯಲಿವೆ. ಈ ಎಸ್‌ಯುವಿಯಲ್ಲಿ ಪಿಹೆಚ್‌ಇವಿ ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾಗಿರುವ 3.6 ಲೀಟರಿನ ವಿ 6 ಎಂಜಿನ್ ಅಳವಡಿಸಲಾಗುವುದು. ಭಾರತದಲ್ಲಿ 2.0-ಲೀಟರಿನ ಹೈಬ್ರಿಡ್ ಎಂಜಿನ್ ನೀಡುವ ಸಾಧ್ಯತೆಗಳಿವೆ. ಕಂಪನಿಯು ಸದ್ಯಕ್ಕೆ ಭಾರತದಲ್ಲಿ ವ್ರಾಂಗ್ಲರ್ ರೂಬಿಕಾನ್ ಕಾರನ್ನು ಮಾರಾಟ ಮಾಡುತ್ತಿದೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಜೀಪ್ ಕಂಪನಿಯು ಇತ್ತೀಚೆಗಷ್ಟೇ ತನ್ನ ಜನಪ್ರಿಯ ಎಸ್‌ಯುವಿಯಾದ ಕಂಪಾಸ್‌ನ ನೈಟ್ ಎಡಿಷನ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಅದರ ವಿತರಣೆಯನ್ನು ಆರಂಭಿಸಿದೆ. ಈ ಎಸ್‌ಯುವಿಯನ್ನು ಕೆಲವೇ ಕೆಲವು ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಫಿಯೆಟ್ ಕ್ರಿಸ್ಲರ್ ಕಂಪನಿಯು ತಾಂತ್ರಿಕ ದೋಷ ಉಂಟಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಜೀಪ್ ಕಂಪಾಸ್‌ನ 547 ಯುನಿಟ್ ಗಳನ್ನು ರಿಕಾಲ್ ಮಾಡಿದೆ. ಈ ವರ್ಷ ಬಿಡುಗಡೆಯಾದ ಈ ಕಾರುಗಳ ವೈಪರ್ ಯುನಿಟ್ ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಇವುಗಳನ್ನು ರಿಕಾಲ್ ಮಾಡಲಾಗಿದೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಈ ವರ್ಷದ ಜೂನ್ ತಿಂಗಳಿನಲ್ಲಿ ಕಂಪನಿಯು 95,000 ಯುನಿಟ್ ಜೀಪ್ ಚಿರೋಕಿಗಳನ್ನು ವಿಶ್ವದಾದ್ಯಂತ ರಿಕಾಲ್ ಮಾಡಿತ್ತು. ಈ ಕಾರುಗಳ ಗೇರ್‌ಬಾಕ್ಸ್‌ನಲ್ಲಿ ದೋಷ ಕಂಡುಬಂದಿದ್ದು, ಚಾಲನೆಯಲಿದ್ದಾಗ ದಾರಿ ಮಧ್ಯದಲ್ಲಿ ಈ ಕಾರುಗಳು ನಿಲ್ಲುತ್ತಿವೆ.

ಭಾರತದಲ್ಲಿ ಉಪಯೋಗಿಸಿದ ಕಾರುಗಳನ್ನು ಮಾರಾಟ ಮಾಡಲು ಜೀಪ್ ಕಂಪನಿಯು ಹೊಸ ಪ್ಲಾಟ್‌ಫಾರಂ ಅನ್ನು ಆರಂಭಿಸಿದೆ. ಇದರಡಿಯಲ್ಲಿ ಗ್ರಾಹಕರು ಹಳೆಯ ಜೀಪ್ ಕಂಪಾಸ್ ಎಸ್‌ಯುವಿಗಳನ್ನು ಕಂಪನಿಯ ಶೋ ರೂಂನಿಂದ ಖರೀದಿಸಬಹುದು. ಲಾಕ್‌ಡೌನ್ ಕಾರಣದಿಂದ ಹೊಸ ಕಾರು ಖರೀದಿಸುವ ಯೋಜನೆಯನ್ನು ಕೈಬಿಟ್ಟಿರುವ ಜನರು ಕೈಗೆಟುಕುವ ದರದಲ್ಲಿ ಸೆಕೆಂಡ್ ಹ್ಯಾಂಡ್ ಜೀಪ್ ಕಾರನ್ನು ಖರೀದಿಸಬಹುದು.