ಮೊದಲ ವಿಶ್ವ ಎಲೆಕ್ಟ್ರಿಕ್ ವಾಹನ ದಿನಾಚರಣೆ ಹಿನ್ನೆಲೆ, ಹೊಸ ಪ್ಲಾಟ್ ಫಾರಂ ಬಿಡುಗಡೆಗೊಳಿಸಿದ ಮಹೀಂದ್ರಾ

ಇಂದು ಮೊದಲ ಬಾರಿಗೆ ವಿಶ್ವ ಎಲೆಕ್ಟ್ರಿಕ್ ವಾಹನ ದಿನವನ್ನು ಆಚರಿಸಲಾಗುತ್ತಿದೆ. ಈ ವಿಶೇಷ ದಿನದ ಸಂದರ್ಭದಲ್ಲಿ ಮಹೀಂದ್ರಾ ಕಂಪನಿಯು ಸಣ್ಣ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಗಾಗಿ ತನ್ನ ವಿಶಿಷ್ಟ ಸಂರಚನಾ ನೀತಿಯ ಬಗೆಗಿನ ಮಾಹಿತಿಯನ್ನು ಬಿಡುಗಡೆಗೊಳಿಸಿದೆ.

ಮೊದಲ ವಿಶ್ವ ಎಲೆಕ್ಟ್ರಿಕ್ ವಾಹನ ದಿನಾಚರಣೆ ಹಿನ್ನೆಲೆ, ಹೊಸ ಪ್ಲಾಟ್ ಫಾರಂ ಬಿಡುಗಡೆಗೊಳಿಸಿದ ಮಹೀಂದ್ರಾ

ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಮಹೀಂದ್ರಾ ಕಂಪನಿಯು ಮುಂಚೂಣಿಯಲ್ಲಿದೆ. ಮೂರು ಚಕ್ರಗಳ ಎಲೆಕ್ಟ್ರಿಕ್ ವಾಹನ ಹಾಗೂ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಪರಿಣತಿ ಪಡೆದಿರುವ ಕಂಪನಿಯು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವತ್ತ ಹೆಚ್ಚು ಗಮನ ಹರಿಸುತ್ತಿದೆ. ಇದರ ಜೊತೆಗೆ ಮಹೀಂದ್ರಾ ಎಲೆಕ್ಟ್ರಿಕ್ ಸ್ಕೇಲೆಬಲ್ ಮಾಡ್ಯುಲರ್ ಆರ್ಕಿಟೆಕ್ಚರ್ (ಮೆಸ್ಮಾ) ವಿಶ್ವದ ಪ್ರಮುಖ ಹಗುರ ಎಲೆಕ್ಟ್ರಿಕ್ ವಾಹನಗಳ ತಯಾರಕ ಕಂಪನಿಯಾಗಿದೆ.

ಮೊದಲ ವಿಶ್ವ ಎಲೆಕ್ಟ್ರಿಕ್ ವಾಹನ ದಿನಾಚರಣೆ ಹಿನ್ನೆಲೆ, ಹೊಸ ಪ್ಲಾಟ್ ಫಾರಂ ಬಿಡುಗಡೆಗೊಳಿಸಿದ ಮಹೀಂದ್ರಾ

ಈ ಹಗುರವಾದ ರಚನೆಯನ್ನು ಬಳಸಿ ತಯಾರಿಸಿದ ಎಲೆಕ್ಟ್ರಿಕ್ ವಾಹನಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ಇದರಡಿಯಲ್ಲಿ ಮಹೀಂದ್ರಾ ಕಂಪನಿಯು ಇದುವರೆಗೂ 11,000 ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿ ಮಾರಾಟ ಮಾಡಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಮೊದಲ ವಿಶ್ವ ಎಲೆಕ್ಟ್ರಿಕ್ ವಾಹನ ದಿನಾಚರಣೆ ಹಿನ್ನೆಲೆ, ಹೊಸ ಪ್ಲಾಟ್ ಫಾರಂ ಬಿಡುಗಡೆಗೊಳಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯ ಹಗುರ ಎಲೆಕ್ಟ್ರಿಕ್ ವಾಹನ ಸಂರಚನಾ ನೀತಿಯಡಿಯಲ್ಲಿ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನ, ಕ್ವಾಡ್ರೈಸಿಕಲ್ ಎಲೆಕ್ಟ್ರಿಕ್ ವಾಹನಗಳು ಹಾಗೂ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸಬಹುದು.

ಮೊದಲ ವಿಶ್ವ ಎಲೆಕ್ಟ್ರಿಕ್ ವಾಹನ ದಿನಾಚರಣೆ ಹಿನ್ನೆಲೆ, ಹೊಸ ಪ್ಲಾಟ್ ಫಾರಂ ಬಿಡುಗಡೆಗೊಳಿಸಿದ ಮಹೀಂದ್ರಾ

ಈ ಎಲೆಕ್ಟ್ರಿಕ್ ವಾಹನ ಸಂರಚನಾ ನಿಯಮಾವು ಎಲೆಕ್ಟ್ರಿಕ್ ವಾಹನಗಳ ಪ್ರಯಾಣದ ಪರ್ಫಾಮೆನ್ಸ್ ಹಾಗೂ ವ್ಯಾಪ್ತಿಗೆ ಸಂಬಂಧಿಸಿದೆ. ಈ ಹಗುರವಾದ ಸಂರಚನಾ ನಿಯಮದಡಿಯಲ್ಲಿ 44 ವೋಲ್ಟ್ ನಿಂದ 96 ವೋಲ್ಟ್ ವರೆಗಿನ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಬಹುದು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಮೊದಲ ವಿಶ್ವ ಎಲೆಕ್ಟ್ರಿಕ್ ವಾಹನ ದಿನಾಚರಣೆ ಹಿನ್ನೆಲೆ, ಹೊಸ ಪ್ಲಾಟ್ ಫಾರಂ ಬಿಡುಗಡೆಗೊಳಿಸಿದ ಮಹೀಂದ್ರಾ

ಈ ಲಘು ಎಲೆಕ್ಟ್ರಿಕ್ ವಾಹನಗಳು, ಪೆಟ್ರೋಲ್ - ಡೀಸೆಲ್ ವಾಹನಗಳನ್ನು ಹಿಂದಿಕ್ಕಲಿವೆ ಎಂದು ಮಹೀಂದ್ರಾ ಕಂಪನಿ ಹೇಳಿದೆ. ಈ ಎಲೆಕ್ಟ್ರಿಕ್ ವಾಹನಗಳನ್ನು ಈ ಕಾನ್ಫಿಗರೇಶನ್ ನಿಯಮದ ಲಿಕ್ವಿಡ್ ಕೂಲಿಂಗ್ ಹಾಗೂ ಏರ್ ಕೂಲಿಂಗ್ ಟೆಕ್ನಾಲಜಿ ಬಿಡಿ ಭಾಗಗಳೊಂದಿಗೆ ನಿರ್ಮಿಸಲಾಗಿದೆ.

ಮೊದಲ ವಿಶ್ವ ಎಲೆಕ್ಟ್ರಿಕ್ ವಾಹನ ದಿನಾಚರಣೆ ಹಿನ್ನೆಲೆ, ಹೊಸ ಪ್ಲಾಟ್ ಫಾರಂ ಬಿಡುಗಡೆಗೊಳಿಸಿದ ಮಹೀಂದ್ರಾ

ಈ ಎಲೆಕ್ಟ್ರಿಕ್ ವಾಹನ ಕಾನ್ಫಿಗರೇಶನ್ ನಿಯಮದಡಿಯಲ್ಲಿ ನಿರ್ಮಿಸಲಾದ ವಾಹನಗಳು ಗಂಟೆಗೆ 80 ಕಿ.ಮೀ ವೇಗವನ್ನು ಹೊಂದಿರುತ್ತವೆ. ಲೋಡ್ ಆಟೋ ಹಾಗೂ ಸಣ್ಣ ಪ್ರಯಾಣಿಕ ವಾಹನಗಳಿಗೆ ಈ ವೇಗವು ಸೂಕ್ತವಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಮೊದಲ ವಿಶ್ವ ಎಲೆಕ್ಟ್ರಿಕ್ ವಾಹನ ದಿನಾಚರಣೆ ಹಿನ್ನೆಲೆ, ಹೊಸ ಪ್ಲಾಟ್ ಫಾರಂ ಬಿಡುಗಡೆಗೊಳಿಸಿದ ಮಹೀಂದ್ರಾ

ಈ ಎಲೆಕ್ಟ್ರಿಕ್ ವಾಹನಗಳಲ್ಲಿ 6 ಕಿ.ವ್ಯಾನಿಂದ 40 ಕಿ.ವ್ಯಾವರೆಗಿನ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟರ್‌ಗಳನ್ನು ಅಳವಡಿಸಲಾಗುತ್ತದೆ. ಈ ಎಲೆಕ್ಟ್ರಿಕ್ ಮೋಟರ್ ಗಳು 40 ಎನ್‌ಎಂ ನಿಂದ 120 ಎನ್‌ಎಂ ವರೆಗೆ ಟಾರ್ಕ್ ಉತ್ಪಾದಿಸುತ್ತವೆ. ಈ ವಾಹನಗಳು ಮೂರು ವಿಭಿನ್ನ ಗೇರ್‌ಬಾಕ್ಸ್ ರೇಶಿಯೊಗಳಲ್ಲಿ ಲಭ್ಯವಿರಲಿವೆ.

ಮೊದಲ ವಿಶ್ವ ಎಲೆಕ್ಟ್ರಿಕ್ ವಾಹನ ದಿನಾಚರಣೆ ಹಿನ್ನೆಲೆ, ಹೊಸ ಪ್ಲಾಟ್ ಫಾರಂ ಬಿಡುಗಡೆಗೊಳಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಬ್ಯಾಟರಿ, ಎಲೆಕ್ಟ್ರಾನಿಕ್ ಕಂಟ್ರೋಲ್ ಡಿವೈಸ್, ಎಲೆಕ್ಟ್ರಿಕ್ ಮೋಟರ್, ಸಾಫ್ಟ್‌ವೇರ್, ವಾಹನ ಭಾಗಗಳು ಹಾಗೂ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಅಗತ್ಯವಾದ ಟೆಸ್ಟ್ ಡ್ರೈವ್ ಸೆಂಟರ್ ಗಳನ್ನು ಹೊಂದಿರುವ ಕಾರಣ ಈ ರಚನೆಯನ್ನು ಬಳಸಿಕೊಂಡು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಶೀಘ್ರವಾಗಿ ನಿರ್ಮಿಸಲಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮೊದಲ ವಿಶ್ವ ಎಲೆಕ್ಟ್ರಿಕ್ ವಾಹನ ದಿನಾಚರಣೆ ಹಿನ್ನೆಲೆ, ಹೊಸ ಪ್ಲಾಟ್ ಫಾರಂ ಬಿಡುಗಡೆಗೊಳಿಸಿದ ಮಹೀಂದ್ರಾ

ತನ್ನ ಎಲೆಕ್ಟ್ರಿಕ್ ವಾಹನಗಳು ಇದುವರೆಗೂ 234 ದಶಲಕ್ಷ ಕಿ.ಮೀ ಸಂಚರಿಸಿವೆ. 600 ಸಿಬ್ಬಂದಿಗಳಿರುವ ಎಲೆಕ್ಟ್ರಿಕ್ ವಿಭಾಗದ ಮೂಲಕ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಕೆಲಸ ನಡೆಯುತ್ತಿದೆ ಎಂದು ಮಹೀಂದ್ರಾ ಕಂಪನಿ ಹೇಳಿಕೊಂಡಿದೆ. ಮಹೀಂದ್ರಾ ಕಂಪನಿಯು ಇದುವರೆಗೂ ಎಲೆಕ್ಟ್ರಿಕ್ ವಾಹನಗಳಿಗಾಗಿ ಜಾಗತಿಕವಾಗಿ50ಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಪಡೆದುಕೊಂಡಿದೆ.

Most Read Articles

Kannada
English summary
First world electric vehicle day Mahindra Electric launches Mesma 48 platform for electric vehicles. Read in Kannada.
Story first published: Wednesday, September 9, 2020, 18:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X