ದೇಶದ ಮೊದಲ ಸಾರ್ವಜನಿಕ ಡಿಸಿ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗೆ ಸಿಕ್ತು ಗ್ರೀನ್ ಸಿಗ್ನಲ್

ದೇಶಾದ್ಯಂತ ತೈಲ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚದಲ್ಲಿ ಭಾರೀ ಏರಿಕೆಯಾಗಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದ್ದು, ತೈಲ ಬೆಲೆಗಳ ಏರಿಕೆಯಿಂದ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲೂ ನಿಧಾನವಾಗಿ ಚೇತರಿಕೆ ಕಾಣುತ್ತಿದೆ.

ದೇಶದ ಮೊದಲ ಸಾರ್ವಜನಿಕ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗೆ ಸಿಕ್ತು ಗ್ರೀನ್ ಸಿಗ್ನಲ್

ಆದರೆ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಇವಿ ವಾಹನಗಳ ಬ್ಯಾಟರಿ ರೇಂಜ್ ಸಾಮಾರ್ಥ್ಯವು ಹೊಸ ಇವಿ ವಾಹನಗಳ ಖರೀದಿಗೆ ಹಿಂದೇಟು ಹಾಕುವಂತೆ ಮಾಡಿದ್ದು, ಬ್ಯಾಟರಿ ರೇಂಜ್ ಸಮಸ್ಯೆ ಬಗೆಹರಿಸಲು ತ್ವರಿತಗತಿಯ ಪಬ್ಲಿಕ್ ಚಾರ್ಜಿಂಗ್ ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣವು ಕಾರ್ಯವು ಅತಿಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಹೊಸ ಯೋಜನೆಗೆ ಚಾಲನೆ ನೀಡಿರುವ ಎಬಿಬಿ ಕಂಪನಿಯು ಭಾರತದಲ್ಲಿ ತನ್ನ ಮೊದಲ ತ್ವರಿತಗತಿಯ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ಸ್ಟೆಷನ್‌ಗೆ ಚಾಲನೆ ನೀಡಿದೆ.

ದೇಶದ ಮೊದಲ ಸಾರ್ವಜನಿಕ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗೆ ಸಿಕ್ತು ಗ್ರೀನ್ ಸಿಗ್ನಲ್

ಸ್ವಿಜರ್ಲ್ಯಾಂಡ್ ಮೂಲದ ಎಬಿಬಿ ಕಂಪನಿಯು ಬಿಎಸ್ಇಎಸ್ ಯಮುನಾ ಪವರ್ ಲಿಮಿಟೆಡ್ ಮತ್ತು ಇವಿ ಮೋಟಾರ್ಸ್ ಪ್ರೈ.ಲೀ ಕಂಪನಿ ಜೊತೆಗೂಡಿ ಡಿಸಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಕ್ಕೆ ಚಾಲನೆ ನೀಡಿದ್ದು, ದೆಹಲಿಯ ಪ್ರತಾಪ್‌ಗಂಜ್‌ನಲ್ಲಿ ಹೊಸ ಚಾರ್ಜಿಂಗ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ.

ದೇಶದ ಮೊದಲ ಸಾರ್ವಜನಿಕ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗೆ ಸಿಕ್ತು ಗ್ರೀನ್ ಸಿಗ್ನಲ್

ಡಿಸಿ ಫಾಸ್ಟ್ ಚಾರ್ಜಿಂಗ್ ಮೂಲಕ ವಿವಿಧ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ರೇಂಜ್‌ಗೆ ಅನುಗುಣವಾಗಿ 45ರಿಂದ 90 ನಿಮಿಷದಲ್ಲಿ ಪೂರ್ಣಪ್ರಮಾಣ ಚಾರ್ಜಿಂಗ್ ಒದಗಿಸಲಿದ್ದು, ಚಾರ್ಜಿಂಗ್ ನಿಲ್ಲಾಣದಲ್ಲಿ 50kW ಮತ್ತು 30kW ಸಾಮರ್ಥ್ಯದ ಎರಡು ಬೂತ್‌ಗಳನ್ನು ಜೋಡಿಸಲಾಗಿದೆ.

ದೇಶದ ಮೊದಲ ಸಾರ್ವಜನಿಕ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗೆ ಸಿಕ್ತು ಗ್ರೀನ್ ಸಿಗ್ನಲ್

50kW ಸಾಮರ್ಥ್ಯದ ಚಾರ್ಜಿಂಗ್ ಬೂತ್‌ನಲ್ಲಿ ಒಟ್ಟು ಮೂರು ಚಾರ್ಜಿಂಗ್ ಗನ್‌ಗಳಿದ್ದು, 30kW ಸಾಮರ್ಥ್ಯದ ಚಾರ್ಜಿಂಗ್ ಬೂತ್‌ನಲ್ಲಿ ಎರಡು ಚಾರ್ಜಿಂಗ್ ಗನ್‌‌ಗಳಿವೆ. ಎರಡೂ ಬೂತ್‌ನಲ್ಲೂ ತಲಾ ಒಂದು ಚಾರ್ಜಿಂಗ್ ಗನ್ ಅನ್ನು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗಾಗಿ ಮೀಸಲಿಡಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ದೇಶದ ಮೊದಲ ಸಾರ್ವಜನಿಕ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗೆ ಸಿಕ್ತು ಗ್ರೀನ್ ಸಿಗ್ನಲ್

ಜೊತೆಗೆ ಒಂದು ಮೊಬೈಲ್ ಡಿಸಿ ಫಾಸ್ಟ್ ಚಾರ್ಜಿಂಗ್ ಅನ್ನು ಗ್ರಾಹಕರ ಬೇಡಿಕೆ ಮೇರೆಗೆ ಮನೆ ಬಾಗಿಲಿಗೆ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಿದ್ದು, ಚಾರ್ಜಿಂಗ್ ನಿಲ್ದಾಣದಲ್ಲಿ ಪ್ರತಿ ದಿನಕ್ಕೆ 15ರಿಂದ 20 ಕಾರುಗಳನ್ನು ಚಾರ್ಜ್ ಮಾಡಬಹುದಾಗಿದೆ.

ದೇಶದ ಮೊದಲ ಸಾರ್ವಜನಿಕ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗೆ ಸಿಕ್ತು ಗ್ರೀನ್ ಸಿಗ್ನಲ್

ಸದ್ಯಕ್ಕೆ ರಾಜಧಾನಿ ದೆಹಲಿಯಲ್ಲಿ ಪ್ರಾಯೋಗಿಕವಾಗಿ ಮೊದಲ ಡಿಸಿ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗೆ ಚಾಲನೆ ನೀಡಿರುವ ಎಬಿಬಿ ಕಂಪನಿಯು ಶೀಘ್ರದಲ್ಲೇ ದೇಶದ ಪ್ರಮುಖ ಮೆಟ್ರೋ ನಗರಗಳಲ್ಲೂ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ದೇಶದ ಮೊದಲ ಸಾರ್ವಜನಿಕ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗೆ ಸಿಕ್ತು ಗ್ರೀನ್ ಸಿಗ್ನಲ್

ಎಬಿಬಿ ಕಂಪನಿಯು ತೆರೆದಿರುವ ಹೊಸ ಡಿಸಿ ಫಾಸ್ಟ್ ಚಾರ್ಜಿಂಗ್ ನಿಲ್ಲಾಣದ ವಿಶೇಷತೆ ಅಂದ್ರೆ ಗ್ರಾಹಕರು ತಮ್ಮ ಇವಿ ವಾಹನಗಳ ಚಾರ್ಜ್ ಮಾಡುವ ಮುನ್ನ ನಿಲ್ದಾಣ ಸ್ಥಳ ಲಭ್ಯತೆ, ಮುಂಗಡ ಕಾಯ್ದಿರಿಸುವಿಕೆ ಪ್ರತ್ಯೇಕ ಆ್ಯಪ್ ಮೂಲಕ ಗ್ರಾಹಕರಿಗೆ ಸರಳವಾಗಿ ಮಾಹಿತಿ ಒದಗಿಸುತ್ತದೆ.

Most Read Articles

Kannada
English summary
First Public DC Fast Charger Installed In Delhi With Smartphone Integration. Read in Kannada.
Story first published: Monday, July 20, 2020, 13:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X