ಏರ್ ಟಿಕೆಟ್ ಹೊಂದಿದವರಿಗೆ ಬೇಕಿಲ್ಲ ಅಂತರ್‌ರಾಜ್ಯ ಪಾಸ್
ಕರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಜಾರಿಗೊಳಿಸಿರುವ ನಾಲ್ಕನೇ ಹಂತದ ಲಾಕ್‌ಡೌನ್ ಇನ್ನೂ ಮುಂದುವರೆದಿದೆ. ಈ ಲಾಕ್‌ಡೌನ್‌ನಲ್ಲಿ ಹಲವು ರೀತಿಯ ವಿನಾಯಿತಿಗಳನ್ನು ನೀಡಲಾಗಿದ್ದರೂ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಚಲಿಸಲು ಪಾಸ್ ಅಗತ್ಯವಿದೆ. ಈ ಪಾಸ್ ಇಲ್ಲದೆ, ಮತ್ತೊಂದು ರಾಜ್ಯದ ಗಡಿಯನ್ನು ದಾಟುವಂತಿಲ್ಲ.

ಇದೇ ನಿಯಮವನ್ನು ದೆಹಲಿಯಲ್ಲಿಯೂ ಜಾರಿಗೆ ತರಲಾಗಿದೆ. ಗ್ರೇಟರ್ ನೋಯ್ಡಾದಿಂದ ಹೆಚ್ಚಿನ ಸಂಖ್ಯೆಯ ಜನರು ದೆಹಲಿಯನ್ನು ಪ್ರವೇಶಿಸುತ್ತಾರೆ. ಈ ರೀತಿ ಪ್ರವೇಶಿಸುವವರನ್ನು ದೆಹಲಿಯ ಗಡಿಯಲ್ಲಿ ತಡೆದು ನಿಲ್ಲಿಸಲಾಗುತ್ತಿದೆ. ಈಗ ದೆಹಲಿ ಪೊಲೀಸರು ವಿಮಾನಗಳ ಟಿಕೆಟ್ ಹೊಂದಿರುವವರಿಗೆ ಪಾಸ್ ಅಗತ್ಯವಿಲ್ಲವೆಂದು ತಿಳಿಸಿದ್ದಾರೆ.

ದೆಹಲಿಯ ಗೌತಮ್ ಬುದ್ಧ ನಗರ ಪೊಲೀಸರು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ದೇಶಿಯ ವಿಮಾನ ಹಾಗೂ ರೈಲು ಸೇವೆಗಳನ್ನು ಪುನರಾರಂಭಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಸದ್ಯಕ್ಕೆ ದೆಹಲಿ-ನೋಯ್ಡಾ ಗಡಿಯನ್ನು ಬಂದ್ ಮಾಡಲಾಗಿದೆ. ಅಗತ್ಯ ಸೇವೆಗಳನ್ನು ಒದಗಿಸುತ್ತಿರುವವರಿಗೆ ಹಾಗೂ ಸ್ಥಳೀಯ ಆಡಳಿತವು ನೀಡುವ ಪಾಸ್ ಹೊಂದಿರುವವರಿಗೆ ಮಾತ್ರ ಈ ಗಡಿಯನ್ನು ದಾಟಲು ಅನುಮತಿ ನೀಡಲಾಗುತ್ತದೆ.

ಮೇ 25ರಿಂದ ಕೆಲವು ನಗರಗಳ ಮಧ್ಯೆ ದೇಶಿಯ ವಿಮಾನಗಳನ್ನು ಪುನರಾರಂಭಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ. ರೈಲ್ವೆ ಇಲಾಖೆಯು ಜೂನ್ 1ರಿಂದ ರೈಲು ಸಂಚಾರವನ್ನು ಆರಂಭಿಸಲಿದ್ದು, ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್‌ಗಳನ್ನು ಆರಂಭಿಸಲಾಗಿದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಈ ಬಗ್ಗೆ ಮಾತನಾಡಿದ ದೆಹಲಿಯ ಕಾನೂನು ಹಾಗೂ ಸುವ್ಯವಸ್ಥೆ ಹೆಚ್ಚುವರಿ ಜಿಲ್ಲಾಧಿಕಾರಿ ಅಶುತೋಷ್ ದ್ವಿವೇದಿರವರು, ವಿಮಾನ ಟಿಕೆಟ್ ಅಥವಾ ಟಿಕೆಟ್‌ಗಳನ್ನು ಬುಕ್ಕಿಂಗ್ ಮಾಡಿರುವ ಜನರು ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಕ್ಕೆ ಹೋಗಲು ಅನುಮತಿ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಈ ಟಿಕೆಟ್‌ಗಳನ್ನು ಹೊಂದಿರುವವರಿಗೆ ದೆಹಲಿ-ನೋಯ್ಡಾ ಗಡಿ ದಾಟಲು ಯಾವುದೇ ರೀತಿಯ ಪಾಸ್ ಅಗತ್ಯವಿಲ್ಲವೆಂದು ಅವರು ಹೇಳಿದರು. ಕರೋನಾ ವೈರಸ್ ಹರಡದಂತೆ ತಡೆಯಲು ಅಗತ್ಯ ಸೇವೆಗಳನ್ನು ನೀಡುವವರನ್ನು ಹೊರತುಪಡಿಸಿ ಉಳಿದವರಿಗೆ ನೋಯ್ಡಾ-ದೆಹಲಿ ಗಡಿಯನ್ನು ಬಂದ್ ಮಾಡಲಾಗಿದೆ.


Click it and Unblock the Notifications