ರಿಕಾಲ್ ಆಗುತ್ತಿದೆ ಫೋರ್ಡ್ ಇಕೋಸ್ಪೋರ್ಟ್ ಕಾರು
ಅಮೇರಿಕಾ ಮೂಲದ ಕಾರು ತಯಾರಕ ಕಂಪನಿಯಾದ ಫೋರ್ಡ್ ತನ್ನ ಇಕೋಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಎಸ್-6 ಆವೃತ್ತಿಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಫೋರ್ಡ್ ಕಂಪನಿಯ ಕಾರುಗಳ ಸರಣಿಯಲ್ಲಿ ಬಿಡುಗಡೆಯಾದ ಮೊದಲ ಬಿಎಸ್-6 ಕಾರು ಇದಾಗಿದೆ.

ಈ ಇಕೋಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಗೊಳಿಸಿದ್ದರು. ಆದರೆ ಈ ಕಾರಿನಲ್ಲಿ ಕೆಲವು ತಾಂತ್ರಿಕ ದೋಷಗಳು ಕಂಡು ಬಂದ ಹಿನ್ನಲೆಯಲ್ಲಿ ಫೋರ್ಡ್ ಕಂಪನಿಯು ಈ ಮಾದರಿಯನ್ನು ರಿಕಾಲ್ ಮಾಡಲು ಮುಂದಾಗಿದೆ. ಈ ಕಾರಿನ ಬಲಭಾಗದ ಡೋರಿನ ಚೈಲ್ಡ್ ಲಾಕ್ ನಲ್ಲಿ ತೊಂದರೆ ಕಂಡುಬಂದಿದೆ. ಚೈಲ್ಡ್ ಲಾಕ್ ಇದ್ದರೂ ಕೂಡ ಒಳಗಿನಿಂದ ಕಾರು ಡೋರ್ ತೆಗಿಯಬಹುದಾಗಿತ್ತು. ಇದರಿಂದ ಸುರಕ್ಷತಾ ದೃಷ್ಟಿಯಿಂದ ಇಕೋಸ್ಪೋರ್ಟ್ ಕಾರನ್ನು ರಿಕಾಲ್ ಮಾಡುತ್ತಿದೆ.

ಬಹುತೇಕ ಎಲ್ಲಾ ಕಾರುಗಳ ಹಿಂದಿನ ಡೋರಿನ ಲಾಕ್ ಆಗುವ ಜಾಗದಲ್ಲಿ ಒಂದು ಸಣ್ಣ ಬಟನ್ ಇರುತ್ತದೆ. ಅದನ್ನ ಲಾಕ್ ಮಾಡಿದರೆ ಹಿಂದಿನ ಸೀಟಿನಲ್ಲಿ ಕುಳಿತವರು ಡೋರ್ ಓಪನ್ ಮಾಡಲು ಆಗುವುದಿಲ್ಲ. ಕಾರಿನ ಹಿಂಭಾಗದಲ್ಲಿ ಕುಳಿತ ಮಕ್ಕಳು ಅಥವಾ ವೃದ್ಧರು ಇದ್ದಕ್ಕಿಂದ್ದಂತೆ ಬಾಗಿಲು ತೆಗೆಯುವುದನ್ನು ತಪ್ಪಿಸಲು ಚೈಲ್ಡ್ ಲಾಕ್ ಮಾಡಲಾಗುತ್ತದೆ. ಇದರಿಂದ ಅಪಘಾತಗಳು ಅಥವಾ ಅನಾಹುತವಾಗುವುದನ್ನು ತಪ್ಪಿಸಬಹುದು.
MOST READ: ಸದ್ಯಕ್ಕಿಲ್ಲ ಬಿಎಸ್-6 ಫೋರ್ಡ್ ಎಂಡೀವರ್ ಎಸ್‍ಯುವಿಯ ಬೆಲೆ ಏರಿಕೆ

ಈ ತಿಂಗಳ ಆರಂಭದಲ್ಲಿ ಈ ತಾಂತ್ರಿಕ ದೋಷವಿರುವ ಕಾರುಗಳನ್ನು ತಮ್ಮ ಹತ್ತಿರದ ಅಧಿಕೃತ ಸೇವಾ ಕೇಂದ್ರಕ್ಕೆ ಕರೆದೊಯ್ಯುವಂತೆ ಫೋರ್ಡ್ ಕಂಪನಿ ಗ್ರಾಹಕರಿಗೆ ಇಮೇಲ್ ಕಳುಹಿಸಲು ಪ್ರಾರಂಭಿಸಿದೆ. ಇದನ್ನು ಸರಿಪಡಿಸಲು ಸರಿ ಸುಮಾರು 45 ನಿಮಿಷ ಸಮಯವಕಾಶವನ್ನು ತೆಗೆದುಕೊಳ್ಳಬಹುದು.

ಫೋರ್ಡ್ ಇಕೋಸ್ಪೋರ್ಟ್ ಭಾರತದಲ್ಲಿ 2013ರಲ್ಲಿ ಮೊದಲ ಬಾರಿ ಬಿಡುಗಡೆಯಾಗಿತ್ತು. ಇಕೋಸ್ಪೋರ್ಟ್ ಈ ಸೆಗ್‍ಮೆಂಟಿನಲ್ಲಿರುವ ಹಳೆಯ ಮಾದರಿಗಳಲ್ಲಿ ಒಂದಾಗಿದೆ.
MOST READ: ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೂಪರ್ ಕ್ಯಾರಿ ಬಿಎಸ್-6 ಎಸ್-ಸಿಎನ್‌ಜಿ ಮಾದರಿ

ಹೊಸ ಫೋರ್ಡ್ ಇಕೋಸ್ಪೋರ್ಟ್ ಕಾರಿನಲ್ಲಿ 1.5 ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 101 ಬಿಹೆಚ್‍ಪಿ ಪವರ್ ಮತ್ತು 215 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 1.5 ಲೀಟರ್ ಟಿಐ-ವಿಸಿಟಿ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 122 ಬಿಹೆಚ್‍ಪಿ ಪವರ್ ಮತ್ತು 149 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್‍ಯುವಿಯ ಇಂಟಿರಿಯರ್‍ನಲ್ಲಿ ಹಲವಾರು ಫೀಚರ್ಸ್‍ಗಳನ್ನು ಅಳವಡಿಸಿದ್ದಾರೆ. ಇದರಲ್ಲಿ ಎಸ್‍ವೈಎನ್‍ಸಿ 3 ಇನ್ಫೋಟೇನ್‍ಮೆಂಟ್ ಸಿಸ್ಟಂ, 8 ಇಂಚಿನ ಟಚ್‍ಸ್ಕ್ರೀನ್ ಮತ್ತು ಟಾಪ್ ವೆರಿಯೆಂಟ್ ಆದ ಇಕೋಸ್ಪೋರ್ಟ್ ಎಸ್ ರೂಪಾಂತರದಲ್ಲಿ ಆ್ಯಪಲ್ ಕಾರ್‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಅಳವಡಿಸಲಾಗಿದೆ.ಸುರಕ್ಷತೆಗಾಗಿ ಈ ಎಸ್‍ಯುವಿಯಲ್ಲಿ 6 ಏರ್‍ಬ್ಯಾಗ್‍ಗಳನ್ನು ಅಳವಡಿಸಲಾಗಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಹೊಸ ಫೋರ್ಡ್ ಇಕೋಸ್ಪೋರ್ಟ್ ರೂಪಾಂತರವನ್ನು ಅವಲಂಬಿಸಿ 9 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಮತ್ತು ಎಂಬೆಡಡ್ ನ್ಯಾವಿಗೇಷನ್ ಅಳವಡಿಸಲಾಗಿದೆ.

ಫೋರ್ಡ್ ಕಂಪನಿಯು ತನ್ನ ವಾರಂಟಿ ಮತ್ತು ಉಚಿತ ಸರ್ವಿಸ್ ಅವಧಿಗಳನ್ನು ವಿಸ್ತರಿಸಿದೆ. ಫೋರ್ಡ್ ಕಂಪನಿಯು ತನ್ನ ನೌಕರ ಸುರಕ್ಷತೆ ಮತ್ತು ಇತರ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಉತ್ಪಾದನೆ ಮತ್ತು ಮಾರಾಟವನ್ನು ಪುನಾರಂಭಿಸುತ್ತಿದೆ.


Click it and Unblock the Notifications








