ಎಂಡೀವರ್ ಎಸ್‍ಯುವಿಯಲ್ಲಿ ಕೆಲವು ಫೀಚರ್‌ಗಳನ್ನು ಕೈಬಿಡಲಿದೆ ಪೋರ್ಡ್
ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಂಡೀವರ್ ಎಸ್‍ಯುವಿಯ ಫೀಚರ್‌ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಿದೆ. ಎಸ್‍ಯುವಿಯ ರೂಪಾಂತರವನ್ನು ಅವಲಂಬಿಸಿ ಕಂಪನಿಯು ಕೆಲವು ಫೀಚರ್‌ಗಳನ್ನು ತೆಗೆದುಹಾಕಲಿದೆ.

2020ರ ಡಿಸೆಂಬರ್‌ನಿಂದ ಉತ್ಪಾದಿಸಲಾದ ಫೋರ್ಡ್ ಎಂಡೀವರ್ ಮಾದರಿಗಳಿಗೆ ಬದಲಾವಣೆಗಳನ್ನು ಮಾಡಲಾಗುವುದು. ಟೀಂ ಬಿಹೆಚ್‍ಪಿ ವರದಿ ಪ್ರಕಾರ, ಫೋರ್ಡ್ ಎಂಡೀವರ್ ಎಲ್ಲಾ ರೂಪಾಂತರಗಳಲ್ಲಿ ಹಿಂಭಾಗದ ಪ್ರಯಾಣಿರಿಗಿದ್ದ ಅಕ್ಸ್ಲರಿ ಹೀಟರ್ ಫೀಚರ್ ಅನ್ನು ಕೈಬಿಡುತ್ತಾರೆ. ಬೇಸ್-ಸ್ಪೆಕ್ 4ಎಕ್ಸ್2 ಟೈಟಾನಿಯಂ ಎಟಿ ರೂಪಾಂತರಗಳು ಇನ್ನೂ ಕೆಲವು ಫೀಚರ್‌ಗಳನ್ನು ಕಳೆದುಕೊಳ್ಳುತ್ತವೆ.

ಎಂಡೀವರ್ ಎಸ್‍ಯುವಿಯ ಬೇಸ್ ಸ್ಪೇಕ್ ಮುಂಭಾಗದ ಡೋರಿನ ಬಳಿ ಇರಿಸಲಾಗಿರುವ ಸ್ಟೀಲ್ ಸ್ಕಫ್ ಪ್ಲೇಟ್‌ಗಳು ಮತ್ತು ಡೌನ್-ಗ್ರೇಡೆಡ್ 8-ಸ್ಪೀಕರ್ ಆಡಿಯೊ ಸಿಸ್ಟಂ ಅನ್ನು ಕೂಡ ತೆಗೆದುಹಾಕಲಿದೆ.

ಈ ಬದಲಾವಣೆಗಳನ್ನು ಜೊತೆಗೆ ಸ್ಪೋರ್ಟ್ ಮಾದರಿಯನ್ನು ಹೊರತುಪಡಿಸಿ ಎಸ್‍ಯುವಿಯ ಎಲ್ಲಾ ರೂಪಾಂತರಗಳಿಂದ ಆಕ್ಟಿವ್ ನಾಯ್ಸ್ ಕಾನ್ಸೆಲೇಷನ್ ಫೀಚರ್ ಅನ್ನು ಕೂಡ ತೆಗೆದುಹಲಾಗುತ್ತದೆ. ಅದರೆ ಎಂಡೀವರ್ ಎಸ್‍ಯುವಿಯಲಿದ್ದ ಉತ್ತಮ ಫೀಚರ್ ಗಳಲ್ಲಿ ಒಂದಾಗಿತ್ತು.

ಆದರೆ ಹೊಸ ಬದಲಾವಣೆಗಳ ಕುರಿತು ಫೋರ್ಡ್ ಕಂಪನಿಯು ಅಧಿಕೃತವಾಗಿ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಫೋರ್ಡ್ ಎಂಡೀವರ್ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.29.99 ಲಕ್ಷಗಳಾಗಿದೆ.

ಭಾರತಕ್ಕೆ ಫೋರ್ಡ್ ಎಂಡೀವರ್ ಎಸ್‍ಯುವಿಯನ್ನು ಥೈಲ್ಯಾಂಡ್‌ನಿಂದ ಸಂಪೂರ್ಣವಾಗಿ ನಾಕ್ ಡೌನ್ (ಸಿಕೆಡಿ) ಯುನಿಟ್ ಆಗಿ ಭಾರತಕ್ಕೆ ತರಲಾಗುತ್ತದೆ. ಇನ್ನು ಥೈಲ್ಯಾಂಡ್‌ನಲ್ಲಿ ಎಂಡೀವರ್ ಎಸ್‍ಯುವಿಯನ್ನು ಎವರೆಸ್ಟ್ ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದೆ. ಥೈಲ್ಯಾಂಡ್‌ನಲ್ಲಿ ಎಂಡೀವರ್ ಇತ್ತೀಚೆಗೆ ಹೊಸ ಮೈಲ್ಡ್ ನಿಪ್ ಟಕ್ ಅನ್ನು ಪಡೆದುಕೊಂಡಿದೆ.

ಭಾರತದಲ್ಲಿ ಮಾರಾಟ ಮಾಡುವ ಬಿಎಸ್-6 ಎಂಡೀವರ್ ಎಸ್‍ಯುವಿಯಲ್ಲಿ ಮಾತ್ರ ಸಿಂಗಲ್ ಟರ್ಬೂ ಎಂಜಿನ್ ಅನ್ನು ಹೊಂದಿದೆ. ವಿದೇಶಿ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ ಎಂಡೀವರ್ ನಲ್ಲಿ ಟ್ವಿನ್-ಟರ್ಬೊ ಎಂಜಿನ್ ಅನ್ನು ಹೊಂದಿದೆ.

ಭಾರತದಲ್ಲಿ ಮರಾಟವಗುತ್ತಿರುವ ಎಂಡೀವರ್ ಎಸ್‍ಯುವಿಯಲ್ಲಿ 2.0 ಲೀಟರ್ ಇಕೋಬ್ಲೂ ಟರ್ಬೊ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಿದೆ. ಈ ಎಂಜಿನ್ 168 ಬಿಹೆಚ್‍ಪಿ ಪವರ್ ಮತ್ತು 420 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನೊಂದಿಗೆ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಿದೆ.

ಈ ಎಸ್‍ಯುವಿ ಇಂಟಿರಿಯರ್‍ನಲ್ಲಿ ಸ್ಟೀಯರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್, ಪನರೋಮಿಕ್ ಸನ್‌ರೂಫ್, ಡ್ಯುಯಲ್-ಜೋನ್ ಕ್ಲೈಮೆಟ್ ಕಂಟ್ರೋಲ್, 8.0-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೇನ್‌ಮೆಂಟ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ ಮತ್ತು 10-ಸ್ಪಿಕರ್ಸ್ ಸೌಂಡ್ ಸಿಸ್ಟಂ ಹೊಂದಿದೆ.

ಫೋರ್ಡ್ ಎಂಡೀವರ್ ಎಸ್‍ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಏಳು ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಪಾರ್ಕಿಂಗ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಈ ಎಸ್‍ಯುವಿಯಲ್ಲಿ 4x4 ಡ್ರೈವ್ ಟೆಕ್ನಾಲಜಿ ಸೌಲಭ್ಯ ಹೊಂದಿದೆ. ಫೋರ್ಡ್ ಎಂಡೀವರ್ ಸಮರ್ಥ ಆನ್ ರೋಡ್ ಮತ್ತು ಆಪ್ ರೋಡ್ ಎಸ್‍ಯುವಿಯಾಗಿದೆ. ಅಫ್-ರೋಡ್ ವಿಭಾಗದಲ್ಲಿಯು ಫೋರ್ಡ್ ಎಂಡೀವರ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ ಎಸ್‍ಯುವಿಯಾಗಿದೆ. ಫೋರ್ಡ್ ಎಂಡೀವರ್ ಎಸ್‍ಯುವಿ ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಅಲ್ಟುರಾಸ್ ಜಿ4, ಎಂಜಿ ಗ್ಲೋಸ್ಟರ್ ಮತ್ತು ಇಸುಝು ಎಂಯು-ಎಕ್ಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








