ಹೊಸ ಅಪ್ಡೇಟ್ಗಳನ್ನು ಪಡೆದುಕೊಂಡ ಫೋರ್ಡ್ ಎಂಡೀವರ್ ಎಸ್‍ಯುವಿ
ಫೋರ್ಡ್ ಇಂಡಿಯಾ ಕಂಪನಿಯ ಎಂಡೀವರ್ ಭಾರತೀಯ ಮಾರುಕಟ್ಟೆಯ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಫೋರ್ಡ್ ಕಂಪನಿಯು ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಎಂಡೀವರ್ ಎಸ್‍ಯುವಿಯನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಿತ್ತು.

ಭಾರತೀಯ ಮಾರುಕಟ್ಟೆಯಲ್ಲಿ ಫೋರ್ಡ್ ಎಂಡೀವರ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.29.99 ಲಕ್ಷಗಳಾಗಿದೆ. ಭಾರತಕ್ಕೆ ಫೋರ್ಡ್ ಎಂಡೀವರ್ ಎಸ್‍ಯುವಿಯನ್ನು ಥೈಲ್ಯಾಂಡ್‌ನಿಂದ ಸಂಪೂರ್ಣವಾಗಿ ನಾಕ್ ಡೌನ್ (ಸಿಕೆಡಿ) ಯುನಿಟ್ ಆಗಿ ಭಾರತಕ್ಕೆ ತರಲಾಗುತ್ತದೆ. ಇನ್ನು ಥೈಲ್ಯಾಂಡ್‌ನಲ್ಲಿ ಎಂಡೀವರ್ ಎಸ್‍ಯುವಿಯನ್ನು ಎವರೆಸ್ಟ್ ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದೆ. ಥೈಲ್ಯಾಂಡ್‌ನಲ್ಲಿ ಎಂಡೀವರ್ ಹೊಸ ಮೈಲ್ಡ್ ನಿಪ್ ಟಕ್ ಅನ್ನು ಪಡೆದುಕೊಂಡಿದೆ.

ಥೈಲ್ಯಾಂಡ್‌ನಿಂದ ಎಂಡೀವರ್ ಎಸ್‍ಯುವಿ ಭಾರತಕ್ಕೆ ಬರುವುದರಿಂದ, ಭಾರತದಲ್ಲಿರುವ ಹೊಸ ಅಪ್ಡೇಟ್ಗಳನ್ನು ಪಡೆದುಕೊಂಡ ಫೋರ್ಡ್ ಎಂಡೀವರ್ ಎಸ್‍ಯುವಿಯನ್ನು ಪರಿಚಯಿಸಬಹುದು ಎಂದು ನಿರೀಕ್ಷಿಸುತೇವೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಫೋರ್ಡ್ ಎಂಡೀವರ್ ಎಸ್‍ಯುವಿ ಮುಂಭಾಗದಲ್ಲಿ ಕ್ರೋಮ್ ಫಿನಿಶ್‌ನಲ್ಲಿದ್ದರೂ ಸ್ಪೋರ್ಟ್‌ಗೆ ಹೋಲುವ ಹನಿಕಾಂಬ್ ಮೆಶ್ ಗ್ರಿಲ್ ಅನ್ನು ಪಡೆಯುತ್ತದೆ. ಗ್ರಾಹಕರು ಸ್ಪೋರ್ಟ್ ವೆರಿಯೆಂಟ್ ಹಾನಿಕಾಬ್ ಗ್ರಿಲ್ ಅನ್ನು ಕ್ರೋಮ್ ಸ್ಲ್ಯಾಟೆಡ್ ಯುನಿಟ್ಗೆ ಆದ್ಯತೆ ನೀಡುತ್ತಿರುವುದರಿಂದ ಇದನ್ನು ನವೀಕರಿಸಲಾಗಿದೆ ಎಂದು ಫೋರ್ಡ್ ಹೇಳಿದೆ.

ಥೈಲ್ಯಾಂಡ್‌ನಿಂದ ಎಂಡೀವರ್ ಎಸ್‍ಯುವಿ ಹುಡ್ ಮತ್ತು ಬೋಲ್ಡ್ ಎವರೆಸ್ಟ್ ಬ್ಯಾಡ್ಜ್ ಅನ್ನು ಒಆರ್ವಿಎಂ ಮತ್ತು ಡೋರ್ ಹ್ಯಾಂಡಲ್‌ಗಳಲ್ಲಿ ಪಡೆಯುತ್ತದೆ. ಇನ್ನು ಈ ಎಸ್‍ಯುವಿಯ ಎಂಜಿನ್ ಮತ್ತು ಇಂಟಿರಿಯರ್ ನಲ್ಲಿ ಯಾವುದೇ ಬದಲಾವಣೆಗಳನ್ನು ನಡೆಸಿಲ್ಲ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಭಾರತದಲ್ಲಿ ಬಿಡುಗಡೆಗೊಳಿಸಿದ ಬಿಎಸ್-6 ಎಂಡೀವರ್ ಎಸ್‍ಯುವಿಯಲ್ಲಿ ಮಾತ್ರ ಸಿಂಗಲ್ ಟರ್ಬೂ ಎಂಜಿನ್ ಅನ್ನು ಹೊಂದಿದೆ. ವಿದೇಶಿ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ ಎಂಡೀವರ್ ನಲ್ಲಿ ಟ್ವಿನ್-ಟರ್ಬೊ ಎಂಜಿನ್ ಅನ್ನು ಹೊಂದಿದೆ.

ಈ ಎಸ್‍ಯುವಿಯಲ್ಲಿ 2.0 ಲೀಟರ್ ಇಕೋಬ್ಲೂ ಟರ್ಬೊ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಿದೆ. ಈ ಎಂಜಿನ್ 168 ಬಿಹೆಚ್‍ಪಿ ಪವರ್ ಮತ್ತು 420 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನೊಂದಿಗೆ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಈ ಎಸ್‍ಯುವಿ ಇಂಟಿರಿಯರ್‍ನಲ್ಲಿ ಸ್ಟೀಯರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್, ಪನರೋಮಿಕ್ ಸನ್‌ರೂಫ್, ಡ್ಯುಯಲ್-ಜೋನ್ ಕ್ಲೈಮೆಟ್ ಕಂಟ್ರೋಲ್, 8.0-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೇನ್‌ಮೆಂಟ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ ಮತ್ತು 10-ಸ್ಪಿಕರ್ಸ್ ಸೌಂಡ್ ಸಿಸ್ಟಂ ಹೊಂದಿದೆ.

ಫೋರ್ಡ್ ಎಂಡೀವರ್ ಎಸ್‍ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಏಳು ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಪಾರ್ಕಿಂಗ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಈ ಎಸ್‍ಯುವಿಯಲ್ಲಿ 4x4 ಡ್ರೈವ್ ಟೆಕ್ನಾಲಜಿ ಸೌಲಭ್ಯ ಹೊಂದಿದೆ. ಬಿಎಸ್-6 ಫೋರ್ಡ್ ಎಂಡೀವರ್ ಎಸ್‍ಯುವಿ ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಅಲ್ಟುರಾಸ್ ಜಿ4, ಎಂಜಿ ಗ್ಲೋಸ್ಟರ್ ಮತ್ತು ಇಸುಝು ಎಂಯು-ಎಕ್ಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಫೋರ್ಡ್ ಎಂಡೀವರ್ ಸಮರ್ಥ ಆನ್ ರೋಡ್ ಮತ್ತು ಆಪ್ ರೋಡ್ ಎಸ್‍ಯುವಿಯಾಗಿದೆ


Click it and Unblock the Notifications








