ಬಿಎಸ್ 6 ಎಂಜಿನ್‍ನಲ್ಲಿ ಬಿಡುಗಡೆಯಾದ ಫೋರ್ಡ್ ಕಾರುಗಳು
ಬಿಎಸ್ 4 ಎಂಜಿನ್ ವಾಹನಗಳಿಂದ ಹೆಚ್ಚು ವಾಯು ಮಾಲಿನ್ಯ ಉಂಟಾಗುತ್ತಿರುವ ಕಾರಣಕ್ಕೆ ಕೇಂದ್ರ ಸರ್ಕಾರವು ಬಿಎಸ್ 4 ಎಂಜಿನ್‍ಗಳ ಉತ್ಪಾದನೆಯನ್ನು ಹಾಗೂ ಮಾರಾಟವನ್ನು ಸ್ಥಗಿತಗೊಳಿಸುವಂತೆ ವಾಹನ ತಯಾರಕ ಕಂಪನಿಗಳಿಗೆ ಸೂಚಿಸಿದೆ.

ಹೊಸ ಬಿಎಸ್ 6 ಮಾಲಿನ್ಯ ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕಂಪನಿಗಳು ತಮ್ಮ ವಾಹನಗಳನ್ನು ಬಿಎಸ್ 6 ಎಂಜಿನ್‍ನೊಂದಿಗೆ ಅಪ್‍ಡೇಟ್‍ಗೊಳಿಸುತ್ತಿವೆ. ಫೋರ್ಡ್ ಕಂಪನಿಯು ಸಹ ತನ್ನ ಸರಣಿಯಲ್ಲಿರುವ ಕಾರುಗಳನ್ನು ಬಿಎಸ್ 6 ಎಂಜಿನ್‍ನೊಂದಿಗೆ ಬಿಡುಗಡೆಗೊಳಿಸುತ್ತಿದೆ.

ಈಗ ಫೋರ್ಡ್ ಕಂಪನಿಯು ತನ್ನ ಫಿಗೊ, ಫ್ರೀಸ್ಟೈಲ್ ಹಾಗೂ ಆಸ್ಪೈರ್ ಕಾರುಗಳನ್ನು ಬಿಎಸ್ 6 ಎಂಜಿನ್‍ನಲ್ಲಿ ಬಿಡುಗಡೆಗೊಳಿಸಿದೆ. ಹೊಸ ಫೋರ್ಡ್ ಫಿಗೊ ಕಾರಿನ ಬೆಲೆಯು ರೂ.5.39 ಲಕ್ಷಗಳಾದರೆ, ಫ್ರೀಸ್ಟೈಲ್ ಕಾರಿನ ಬೆಲೆ ರೂ.5.89 ಲಕ್ಷ ಹಾಗೂ ಆಸ್ಪೈರ್ ಕಾರಿನ ಬೆಲೆ ರೂ.5.99 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ದರಗಳಾಗಿವೆ.

ಫೋರ್ಡ್ ಕಂಪನಿಯು ಈ ಎಲ್ಲಾ ಮೂರು ಕಾರುಗಳ ಮೇಲೆ ಮೂರು ವರ್ಷಗಳ ಅಥವಾ ಒಂದು ಲಕ್ಷ ಕಿ.ಮೀಗಳ ವಾರಂಟಿಯನ್ನು ನೀಡಲಿದೆ. ಈ ವಾರಂಟಿಯನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಈ ಕಾರುಗಳಲ್ಲಿ ಫೋರ್ಡ್ ಪಾಸ್ ಕನೆಕ್ಟಿವಿಟಿಯನ್ನು ನೀಡಲಾಗುತ್ತದೆ.

ಇದು ಕ್ಲೌಡ್ ಕನೆಕ್ಟೆಡ್ ಡಿವೈಸ್ ಆಗಿದ್ದು, ಕಾರಿನ ಮಾಲೀಕರು ರಿಯಲ್ ಟೈಂ ಫೋರ್ಡ್ ಪಾಸ್ ಸ್ಮಾರ್ಟ್‍ಫೋನ್ ಅಪ್ಲಿಕೇಶನ್‍ನೊಂದಿಗೆ ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ. ಫೋರ್ಡ್ ಕಂಪನಿಯು ಈ ಫೀಚರ್ ಅನ್ನು ತನ್ನ ಸರಣಿಯಲ್ಲಿರುವ ಎಲ್ಲಾ ಬಿಎಸ್ 6 ವಾಹನಗಳಲ್ಲಿ ನೀಡಲಿದೆ.

ಈ ಫೀಚರ್‍ನಿಂದಾಗಿ ಕಾರುಗಳ ಲಾಕಿಂಗ್, ಅನ್‍ಲಾಕಿಂಗ್, ಫ್ಯೂಯಲ್ ಲೆವೆಲ್, ಡಿಸ್ಟನ್ಸ್ ಟು ಎಂಪ್ಟಿ, ಕಾರು ಇರುವ ಲೊಕೇಷನ್ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಇದರ ಜೊತೆಗೆ ಹತ್ತಿರದಲ್ಲಿರುವ ಡೀಲರ್ ಹಾಗೂ ಹಿಂದಿನ ಸರ್ವಿಸ್‍ಗಳ ಬಗೆಗಿನ ಮಾಹಿತಿಯನ್ನು ಸಹ ಪಡೆಯಬಹುದು.

ಈ ಕಾರುಗಳ ಬಿಡುಗಡೆಯ ವೇಳೆಯಲ್ಲಿ ಮಾತನಾಡಿದ ಫೋರ್ಡ್ ಕಂಪನಿಯ ಅಧ್ಯಕ್ಷರಾದ ಅನುರಾಗ್ ಮೆಹ್ರೊತ್ರಾರವರು ನಾವು ನಮ್ಮ ಕಂಪನಿಯ ಕಾರುಗಳನ್ನು ಕೈಗೆಟಕುವ ದರದಲ್ಲಿ ನೀಡಲಿದ್ದೇವೆ. ಇದರ ಜೊತೆಗೆ ಸರ್ವಿಸ್ ಅನ್ನು ಸಹ ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡಲಿದ್ದೇವೆ ಎಂದು ಹೇಳಿದರು.

ಕಾರುಗಳನ್ನು ಭಾರತದಲ್ಲಿಯೇ ತಯಾರಿಸುತ್ತಿರುವ ಕಾರಣಕ್ಕೆ ಕಾರುಗಳ ಬೆಲೆಯಲ್ಲಿ ಏರಿಕೆಯಾಗುತ್ತಿಲ್ಲವೆಂದು ಅವರು ಹೇಳಿದರು. ಈ ಕಾರು ಹಾಗೂ ಈ ಕಾರುಗಳಲ್ಲಿರುವ ಬಿಡಿಭಾಗಗಳನ್ನು ಭಾರತದಲ್ಲಿ ತಯಾರಿಸುತ್ತಿರುವುದರಿಂದ ಬಿಎಸ್ 6 ಎಂಜಿನ್ ಹೊಂದಿದ್ದರೂ ಕಾರುಗಳ ಬೆಲೆ ಹೆಚ್ಚಾಗಿ ಏರಿಕೆಯಾಗಿಲ್ಲ.


Click it and Unblock the Notifications








