Just In
Don't Miss!
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜನವರಿಯಿಂದ ದುಬಾರಿಯಾಗಲಿವೆ ಫೋರ್ಡ್ ಕಾರುಗಳು
ಭಾರತದಲ್ಲಿ ಕರೋನಾ ಸೋಂಕಿನ ಆರ್ಭಟ ಇಳಿಮುಖವಾಗುತ್ತಿರುವಾಗ ಕಾರುಗಳ ಮಾರಾಟದಲ್ಲಿ ಹಲವು ತಿಂಗಳು ಬಳಿಕ ಚೇತರಿಕೆಯನ್ನು ಕಾಣುತ್ತಿದೆ. ವರ್ಷಾಂತ್ಯದಲ್ಲಿ ಹಲವು ವಾಹನ ಕಂಪನಿಗಳು ತಮ್ಮ ಕಾರುಗಳ ಮೇಲೆ ಆಫರ್ ನೀಡುವ ಮೂಲಕ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.

ಆದರೆ ವೆಚ್ಚ ನಿರ್ವಹಣೆಗಾಗಿ ಹಲವು ಕಾರು ತಯಾರಕ ಕಂಪನಿಗಳು ತಮ್ಮ ಸರಣಿಯಲ್ಲಿರುವ ವಿವಿಧ ಮಾದರಿಗಳ ಬೆಲೆಯನ್ನು ಹೆಚ್ಚಿಸಲು ಮುಂದಾಗಿದೆ. ಇದರ ನಡುವೆ ಕಚ್ಚಾ ವಸ್ತುಗಳ ಬೆಲೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದನ್ನು ಸರಿದೂಗಿಸಲು ಜನವರಿ 1 ರಿಂದ ತನ್ನ ಸರಣಿಯಲ್ಲಿರುವ ಎಲ್ಲಾ ಮಾದರಿಗಳ ಬೆಲೆಯನ್ನು ಶೇ.3 ರಷ್ಟು ಹೆಚ್ಚಿಸುವುದಾಗಿ ಫೋರ್ಡ್ ಇಂಡಿಯಾ ಹೇಳಿದೆ.

ಮಾದರಿಯನ್ನು ಅವಲಂಬಿಸಿ ಸುಮಾರು ರೂ.5,000 ದಿಂದ ರೂ.35,000 ಗಳವರೆಗೆ ಹೆಚ್ಚಾಗುತ್ತದೆ ಎಂದು ಫೋರ್ಡ್ ಇಂಡಿಯಾದ ಮಾರ್ಕೆಟಿಂಗ್ ಸೇಲ್ಸ್ ಅಂಡ್ ಸರ್ವಿಸ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ವಿನಯ್ ರೈನಾ ಹೇಳಿದ್ದಾರೆ.
MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಅವರು ಮಾತನ್ನು ಮುಂದುವರೆಸಿ, ಕಚ್ಚಾ ವಸ್ತುಗಳ ಬೆಲೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಾರುಗಳ ಬೆಲೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಪೋರ್ಡ್ ಕಾರುಗಳ ಬೆಲೆಯು ಹೆಚ್ಚಳವಾಗಲಿದೆ ಎಂದು ಹೇಳಿದರು.

ಇದಲ್ಲದೇ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಕಂಪನಿಯು ಕೂಡ ಇನ್‌ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ತನ್ನ ಸರಣಿಯ ಕಾರುಗಳ ಬೆಲೆಯನ್ನು ಮುಂದಿನ ವರ್ಷದಿಂದ ಹೆಚ್ಚಿಸಲಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಫೋರ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪರ್ಫಾಮೆನ್ಸ್ ಆಧಾರಿತ ರೇಂಜರ್ ರಾಪ್ಟರ್ ಪಿಕ್ ಅಪ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಕೆಲವು ವರದಿಗಳ ಪ್ರಕಾರ, ಈ ಹೊಸ ಫೋರ್ಡ್ ರೇಂಜರ್ ರಾಪ್ಟರ್ ಪಿಕ್ ಅಪ್ ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಭಾರತದಲ್ಲಿ ಬಿಡುಗೆಯಾಗಲಿದೆ.

ಈಗಗಾಲೇ ಈ ಫೋರ್ಡ್ ರೇಂಜರ್ ರಾಪ್ಟರ್ ಪಿಕ್ ಅಪ್ ಯುನಿಟ್ ಗಳು ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡಿದೆ. ಫೋರ್ಡ್ ಕಂಪನಿಯು ರೇಂಜರ್ ರಾಪ್ಟರ್ ಮಾದರಿಯನ್ನು ಭಾರತಕ್ಕೆ ಸರ್ಕಾರದ ನಿಯಮದಡಿಯಲ್ಲಿ ಸಿಬಿಯು (ಕಂಪ್ಲೀಟ್ ಬಿಲ್ಟ್ ಅಪ್)ಯುನಿಟ್ ಆಗಿ ಆಮದು ಮಾಡಿಕೊಳ್ಳಲಾಗುವುದು, ವಾರ್ಷಿಕವಾಗಿ ಕಾರು ತಯಾರಕ ಕಂಪನಿಗಳು 2,500 ಯುನಿಟ್‌ಗಳನ್ನು ಆಮದು ಮಾಡಿಕೊಳ್ಳಬಹುದು.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಇನ್ನು ಭಾರತಕ್ಕೆ ಫೋರ್ಡ್ ಎಂಡೀವರ್ ಎಸ್‍ಯುವಿಯನ್ನು ಥೈಲ್ಯಾಂಡ್‌ನಿಂದ ಸಂಪೂರ್ಣವಾಗಿ ನಾಕ್ ಡೌನ್ (ಸಿಕೆಡಿ) ಯುನಿಟ್ ಆಗಿ ಭಾರತಕ್ಕೆ ತರಲಾಗುತ್ತದೆ. ಇನ್ನು ಥೈಲ್ಯಾಂಡ್‌ನಲ್ಲಿ ಎಂಡೀವರ್ ಎಸ್‍ಯುವಿಯನ್ನು ಎವರೆಸ್ಟ್ ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದೆ. ಥೈಲ್ಯಾಂಡ್‌ನಲ್ಲಿ ಎಂಡೀವರ್ ಹೊಸ ಮೈಲ್ಡ್ ನಿಪ್ ಟಕ್ ಅನ್ನು ಪಡೆದುಕೊಂಡಿದೆ.

ಫೋರ್ಡ್ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಫೀಗೋ, ಫ್ರೀಸ್ಟೈಲ್, ಆಸ್ಪೈರ್, ಇಕೋಸ್ಪೋರ್ಟ್, ಎಂಡೀವರ್ ಮತ್ತು ಮಸ್ಟಾಂಗ್ ಪರ್ಫಾರ್ಮೆನ್ಸ್ ಸ್ಪೋರ್ಟ್ಸ್ ಅನ್ನು ಮಾರಾಟ ಮಾಡುತ್ತಿದ್ದಾರೆ.