ಟಿಟಾನಿಯಂ ಆಟೋಮ್ಯಾಟಿಕ್ ಮಾದರಿ ಬಿಡುಗಡೆಗೊಳಿಸಿದ ಫೋರ್ಡ್

ಅಮೆರಿಕದ ಕಾರು ತಯಾರಕ ಕಂಪನಿಯಾದ ಫೋರ್ಡ್ ತನ್ನ ಇಕೋಸ್ಪೋರ್ಟ್ ಟಿಟಾನಿಯಂನ ಆಟೋಮ್ಯಾಟಿಕ್ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.10.66 ಲಕ್ಷಗಳಾಗಿದೆ.

ಟಿಟಾನಿಯಂ ಆಟೋಮ್ಯಾಟಿಕ್ ಮಾದರಿ ಬಿಡುಗಡೆಗೊಳಿಸಿದ ಫೋರ್ಡ್

ಈ ಹೊಸ ಕಾರು ಕಂಪನಿಯ ಸಬ್ -4-ಮೀಟರ್ ಎಸ್‌ಯುವಿ ಪೋರ್ಟ್ ಫೋಲಿಯೊದಲ್ಲಿ ಟಿಟಾನಿಯಂ ಪ್ಲಸ್ ಮ್ಯಾನುವಲ್ ಮಾದರಿಯ ಕೆಳಗಿನ ಸ್ಥಾನದಲ್ಲಿರಲಿದೆ. ಫೋರ್ಡ್ ಇಕೋಸ್ಪೋರ್ಟ್ ಟಿಟಾನಿಯಂ ಆಟೋಮ್ಯಾಟಿಕ್ ಮಾದರಿಯು 1.5-ಲೀಟರಿನ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಟಿಟಾನಿಯಂ ಆಟೋಮ್ಯಾಟಿಕ್ ಮಾದರಿ ಬಿಡುಗಡೆಗೊಳಿಸಿದ ಫೋರ್ಡ್

ಈ ಎಂಜಿನ್ 121 ಬಿಹೆಚ್‌ಪಿ ಪವರ್ ಹಾಗೂ 149 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನಲ್ಲಿ 6-ಸ್ಪೀಡಿನ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಅಳವಡಿಸಲಾಗಿದೆ. ಫೋರ್ಡ್ ಕಂಪನಿಯು ಇಕೋಸ್ಪೋರ್ಟ್ ಟಿಟಾನಿಯಂ ಆಟೋಮ್ಯಾಟಿಕ್ ಮಾದರಿಯಲ್ಲಿ ಹಲವಾರು ಫೀಚರ್ ಗಳನ್ನು ನೀಡಿದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಟಿಟಾನಿಯಂ ಆಟೋಮ್ಯಾಟಿಕ್ ಮಾದರಿ ಬಿಡುಗಡೆಗೊಳಿಸಿದ ಫೋರ್ಡ್

ಈ ಫೀಚರ್ ಗಳಲ್ಲಿ ಪ್ಯಾಡಲ್ ಶಿಫ್ಟರ್, ಕ್ರೂಸ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್ / ಸ್ಟಾಪ್, ಡ್ಯುಯಲ್ ಏರ್‌ಬ್ಯಾಗ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಹಾಗೂ ಹಿಲ್ ಅಸಿಟ್‌ಗಳು ಸೇರಿವೆ.

ಟಿಟಾನಿಯಂ ಆಟೋಮ್ಯಾಟಿಕ್ ಮಾದರಿ ಬಿಡುಗಡೆಗೊಳಿಸಿದ ಫೋರ್ಡ್

ಹೊಸ ಕಾರಿನ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಫೋರ್ಡ್ ಇಂಡಿಯಾದ ಮಾರ್ಕೆಟಿಂಗ್- ಸೇಲ್ಸ್ ಹಾಗೂ ಸರ್ವಿಸ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ವಿನಯ್ ರೈನಾರವರು ಹೊಸ ಟಿಟಾನಿಯಂ ಮಾದರಿಯ ಬಿಡುಗಡೆಯೊಂದಿಗೆ ಇನ್ನೂ ಹೆಚ್ಚಿನ ಗ್ರಾಹಕರನ್ನು ಸೆಳೆಯಬೇಕೆಂದಿದ್ದೇವೆ ಎಂದು ಹೇಳಿದರು.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಟಿಟಾನಿಯಂ ಆಟೋಮ್ಯಾಟಿಕ್ ಮಾದರಿ ಬಿಡುಗಡೆಗೊಳಿಸಿದ ಫೋರ್ಡ್

ಫೋರ್ಡ್ ಇಕೋಸ್ಪೋರ್ಟ್ ದೇಶಿಯ ಮಾರುಕಟ್ಟೆಯಲ್ಲಿ 7 ವರ್ಷಗಳನ್ನು ಪೂರೈಸಿದೆ. ಈ ಕಾರನ್ನು ಮೊದಲ ಬಾರಿಗೆ 2012ರ ಆಟೋ ಎಕ್ಸ್‌ಪೋದಲ್ಲಿ ಕಾನ್ಸೆಪ್ಟ್‌ ಕಾರ್ ಆಗಿ ಪರಿಚಯಿಸಲಾಯಿತು. ಒಂದು ವರ್ಷದ ನಂತರ 2013ರಲ್ಲಿ ಈ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು.

ಟಿಟಾನಿಯಂ ಆಟೋಮ್ಯಾಟಿಕ್ ಮಾದರಿ ಬಿಡುಗಡೆಗೊಳಿಸಿದ ಫೋರ್ಡ್

ಮಾಹಿತಿಯ ಪ್ರಕಾರ, ಫೋರ್ಡ್ ಕಂಪನಿಯು 2021ರಲ್ಲಿ ಹೊಸ ಇಕೋಸ್ಪೋರ್ಟ್ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಈ ಕಾರಿನಲ್ಲಿ ಮಹೀಂದ್ರಾ ಎಕ್ಸ್‌ಯುವಿ 300ನಲ್ಲಿರುವ ಎಂಜಿನ್ ಬಳಸಲಾಗುವುದು. ಎಕ್ಸ್‌ಯುವಿ 300ನಲ್ಲಿ 1.2-ಲೀಟರಿನ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 108.5 ಬಿಹೆಚ್‌ಪಿ ಪವರ್ ಹಾಗೂ 200 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

More from DriveSpark

Article Published On: Wednesday, July 15, 2020, 18:04 [IST]
English summary
Ford's Ecosport Titanium automatic variant launched in Indian market. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+