ಚೀನಾ ಕಂಪನಿಗಳಿಗೆ ಮತ್ತೊಂದು ಹೊಡೆತ ನೀಡಿದ ಕೇಂದ್ರ ಸರ್ಕಾರ

ಕಳೆದ ತಿಂಗಳು ಭಾರತ-ಚೀನಾ ನಡುವೆ ಗಡಿಯಲ್ಲಿ ಚಕಮಕಿ ನಡೆದ ನಂತರ ಕೇಂದ್ರ ಸರ್ಕಾರವು ಚೀನಾಗೆ ಆರ್ಥಿಕ ಹೊಡೆತವನ್ನು ನೀಡುತ್ತಿದೆ. ಇದರ ಜೊತೆಗೆ ಚೀನಾ ದೇಶದ ಎರಡು ಕಂಪನಿಗಳ ಜೊತೆಗೆ ಮಾಡಿಕೊಂಡಿದ್ದ ಸುಮಾರು ರೂ.800 ಕೋಟಿ ವೆಚ್ಚದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇ ಒಪ್ಪಂದವನ್ನು ರದ್ದುಪಡಿಸಿದೆ.

ಚೀನಾ ಕಂಪನಿಗಳಿಗೆ ಮತ್ತೊಂದು ಹೊಡೆತ ನೀಡಿದ ಕೇಂದ್ರ ಸರ್ಕಾರ

ಚೀನಾ ದೇಶದ ಸರಕು ಹಾಗೂ ಕಂಪನಿಗಳ ಮೇಲಿನ ಅವಲಂಬನೆಯನ್ನು ಕೊನೆಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು ಸ್ವಾವಲಂಬಿ ಭಾರತ ಅಭಿಯಾನವನ್ನು ಘೋಷಿಸಿದ ನಂತರ ದೇಶಾದ್ಯಂತ ಚೀನಾ ಸರಕುಗಳನ್ನು ಬಹಿಷ್ಕರಿಸಲಾಗುತ್ತಿದೆ. ಇದರ ಜೊತೆಗೆ ಚೀನಾದ ಕಂಪನಿಗಳನ್ನು ಭಾರತದಿಂದ ಹೊರಹೋಗುವಂತೆ ಮಾಡಲು ಆ ದೇಶದ ಕಂಪನಿಗಳ ಜೊತೆಗಿನ ಒಪ್ಪಂದಗಳನ್ನು ಒಂದೊಂದಾಗಿ ರದ್ದುಗೊಳಿಸಲಾಗುತ್ತಿದೆ.

ಚೀನಾ ಕಂಪನಿಗಳಿಗೆ ಮತ್ತೊಂದು ಹೊಡೆತ ನೀಡಿದ ಕೇಂದ್ರ ಸರ್ಕಾರ

ಈ ಕಂಪನಿಗಳಿಗೆ ಒಪ್ಪಂದ ಪತ್ರವನ್ನು ನೀಡಲು ಅಧಿಕಾರಿಗಳು ನಿರಾಕರಿಸಿದ್ದು, ಈಗ ಮತ್ತೊಂದು ಕಂಪನಿಗೆ ಕಡಿಮೆ ದರದಲ್ಲಿ ಬಿಡ್ಡಿಂಗ್‌ ನೀಡಲಾಗುವುದು. ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇ ಯೋಜನೆಯ ಎರಡು ಭಾಗಗಳಲ್ಲಿ ಚೀನಾ ಕಂಪನಿಗಳು ಕೆಲಸ ಮಾಡುತ್ತಿದ್ದವು.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಚೀನಾ ಕಂಪನಿಗಳಿಗೆ ಮತ್ತೊಂದು ಹೊಡೆತ ನೀಡಿದ ಕೇಂದ್ರ ಸರ್ಕಾರ

ಚೀನಾದ ಕಂಪನಿಗಳನ್ನು ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್ ಹೈವೇ ಯೋಜನೆಗಳಿಂದ ದೂರವಿಡಲಾಗುವುದೆಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ಘೋಷಿಸಿದ್ದಾರೆ. ಇದರ ಜೊತೆಗೆ ಚೀನಾ ಕಂಪನಿಗಳು ಜಂಟಿ ಸಹಭಾಗಿತ್ವದಲ್ಲಿಯೂ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಚೀನಾ ಕಂಪನಿಗಳಿಗೆ ಮತ್ತೊಂದು ಹೊಡೆತ ನೀಡಿದ ಕೇಂದ್ರ ಸರ್ಕಾರ

ಕೆಲ ದಿನಗಳ ಹಿಂದಷ್ಟೇ ಚೀನಾದ ಕಂಪನಿಯೊಂದಕ್ಕೆ ನೀಡಲಾದ ರೈಲ್ವೆ ಟ್ರ್ಯಾಕ್ ಸಿಗ್ನಲಿಂಗ್ ಒಪ್ಪಂದವನ್ನು ಸಹ ರದ್ದುಪಡಿಸಲಾಗಿತ್ತು. ಬೀಜಿಂಗ್ ನ ನ್ಯಾಷನಲ್ ರೈಲ್ವೆ ರಿಸರ್ಚ್ ಹಾಗೂ ಡಿಸೈನ್ ಇನ್ಸ್ಟಿ ಟ್ಯೂಟ್ ಅಂಡ್ ಟೆಲಿಕಮ್ಯೂನಿಕೇಷನ್ ನೆಟ್ ವರ್ಕ್ ಜೊತೆಗೆ ಮಾಡಿಕೊಂಡಿದ್ದ ಈ ಒಪ್ಪಂದದ ಮೌಲ್ಯ ರೂ.471 ಕೋಟಿಗಳಾಗಿತ್ತು.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಚೀನಾ ಕಂಪನಿಗಳಿಗೆ ಮತ್ತೊಂದು ಹೊಡೆತ ನೀಡಿದ ಕೇಂದ್ರ ಸರ್ಕಾರ

ಈ ಕಂಪನಿಯು ಕಾನ್ಪುರದಿಂದ ದೀನ ದಯಾಳ್ ಉಪಾಧ್ಯಾಯನಗರದ ನಡುವಿನ 417 ಕಿ.ಮೀ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸುತ್ತಿತ್ತು. ಕಂಪನಿಯು ಈಗಾಗಲೇ 20%ನಷ್ಟು ಕೆಲಸವನ್ನು ಪೂರ್ಣಗೊಳಿಸಿದೆ.

ಚೀನಾ ಕಂಪನಿಗಳಿಗೆ ಮತ್ತೊಂದು ಹೊಡೆತ ನೀಡಿದ ಕೇಂದ್ರ ಸರ್ಕಾರ

ದೇಶದ ಭದ್ರತೆ ಹಾಗೂ ಗೌಪ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಚೀನಾದ ಜನಪ್ರಿಯ ಆ್ಯಪ್ ಗಳಾದ ಟಿಕ್ ಟಾಕ್, ಶೇರ್‌ ಇಟ್ ಹಾಗೂ ವೀಚಾಟ್ ಸೇರಿದಂತೆ ಒಟ್ಟು 59 ಚೀನೀ ಆ್ಯಪ್‌ಗಳನ್ನು ನಿಷೇಧಿಸಿದೆ. ಇದರಿಂದ ಈ ಕಂಪನಿಗಳಿಗೆ ಭಾರಿ ಪ್ರಮಾಣದ ನಷ್ಟವಾಗಿದೆ. ಈ ಅಪ್ಲಿಕೇಶನ್‌ಗಳಿಂದಾಗಿ ಭಾರತದಲ್ಲಿ ಶತಕೋಟಿ ಡಾಲರ್ ಗಳ ವ್ಯವಹಾರ ನಡೆಯುತ್ತದೆ. ಈ ಆ್ಯಪ್‌ಗಳು ಹೆಚ್ಚಾಗಿ ಭಾರತದಲ್ಲಿಯೇ ಡೌನ್‌ಲೋಡ್‌ ಆಗುತ್ತವೆ.

Article Published On: Friday, July 17, 2020, 19:18 [IST]
English summary
Government cancels Delhi Mumbai highway project agreement with chinese companies. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+