ಮತ್ತಷ್ಟು ಹೆಚ್ಚಿನ ಸಾಮರ್ಥ್ಯ ಹೊಂದಲಿವೆ ಭಾರೀ ಗಾತ್ರದ ವಾಹನಗಳು
ಬಸ್ ಹಾಗೂ ಟ್ರಕ್‌ಗಳಂತಹ ವಾಹನಗಳ ಉದ್ದ ಹಾಗೂ ಎತ್ತರವನ್ನು ಹೆಚ್ಚಿಸಲು ಸಾರಿಗೆ ಇಲಾಖೆಯು ವಾಹನ ತಯಾರಕ ಕಂಪನಿಗಳಿಗೆ ಅನುಮತಿ ನೀಡಿದೆ. ಈ ನಿಯಮವು ಹಲವಾರು ವರ್ಗದಲ್ಲಿರುವ ಭಾರೀ ಗಾತ್ರದ ವಾಹನಗಳಿಗೆ ಅನ್ವಯಿಸಲಿದೆ.

ವರದಿಗಳ ಪ್ರಕಾರ ಪ್ಯಾಸೆಂಜರ್ ಹಾಗೂ ಗೂಡ್ಸ್ ವಾಹನಗಳ ಸಾಮರ್ಥ್ಯವನ್ನು ಹೆಚ್ಚಿಸಿ, ಆದಾಯವನ್ನು ಹೆಚ್ಚಿಸಲು ಈ ಅನುಮತಿಯನ್ನು ನೀಡಲಾಗಿದೆ. ವಾಹನ ಕಂಪನಿಗಳ ಬೇಡಿಕೆಗೆ ಅನುಸಾರವಾಗಿ ಸಾರಿಗೆ ಇಲಾಖೆಯು ಟ್ರಕ್‌ಗಳ ಹೊರೆ ಸಾಗಿಸುವ ಸಾಮರ್ಥ್ಯವನ್ನು 25%ನಷ್ಟು ಹೆಚ್ಚಿಸಿದೆ. ಹೊಸ ಅಧಿಸೂಚನೆಯ ಪ್ರಕಾರ, ಈ ಹಿಂದೆ 12 ಮೀಟರ್ ಇದ್ದ ಬಸ್ಸುಗಳ ಉದ್ದವು ಇನ್ನು ಮುಂದೆ 13.5 ಮೀಟರ್‌ಗಳಾಗಲಿದೆ.

ಇದರಿಂದ ಸೀಟುಗಳ ಸಾಮರ್ಥ್ಯವು 10%-15% ಹೆಚ್ಚಾಗಲಿದ್ದು, ಅಂತರರಾಜ್ಯ ಸಂಚಾರಕ್ಕೆ ಅನುಕೂಲವಾಗಲಿದೆ. ಹೊಸ ನಿಯಮದ ಪ್ರಕಾರ, ಕಂಟೇನರ್ ಹಾಗೂ ಕ್ಲೋಸ್ ಕಂಟೇನರ್ ಟ್ರಕ್‌ಗಳ ಗರಿಷ್ಠ ಎತ್ತರವು 4.52 ಮೀಟರ್‌ಗಳಾಗಲಿದೆ. ಟಾಪ್ ಓಪನ್ ಟ್ರಕ್‌ಗಳ ಎತ್ತರವು 4 ಮೀಟರ್ ಗಳಾಗಲಿದೆ. ಈ ಹಿಂದೆ ಇವುಗಳ ಎತ್ತರ 3.8 ಮೀಟರ್‌ಗಳಾಗಿತ್ತು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಜಾನುವಾರು ಹಾಗೂ ನಿರ್ಮಾಣ ಸಲಕರಣೆಗಳ ವಾಹನಗಳ ಗರಿಷ್ಠ ಎತ್ತರವನ್ನು 4.75 ಮೀಟರ್‌ಗಳಿಗೆ ನಿಗದಿಪಡಿಸಲಾಗಿದೆ. ಇವುಗಳ ಜೊತೆಗೆ ಸಾರಿಗೆ ಇಲಾಖೆಯು ಟ್ರಕ್ ಹಾಗೂ ಟ್ರ್ಯಾಕ್ಟರ್ ಟ್ರೇಲರ್‌ಗಳಿಗೆ ಒಂದೇ ಎತ್ತರವನ್ನು ನಿಗದಿಪಡಿಸಿದೆ.

ಕ್ಲೋಸ್ ಕಂಟೇನರ್ ಗಳಲ್ಲಿ ಮೋಟಾರು ವಾಹನ, ನಿರ್ಮಾಣ ಸಲಕರಣೆ, ಜಾನುವಾರು ಹಾಗೂ ಬಿಳಿ ವಸ್ತುಗಳನ್ನು ಸಾಗಿಸುವ ಎಲ್ಲಾ ವಾಹನಗಳಿಗೆ ಹೊಸ ನಿಯಮಗಳು ಅನ್ವಯಿಸುತ್ತವೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸಾರಿಗೆ ವ್ಯವಸ್ಥೆಯನ್ನು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ರೂಪಿಸಲು ಸರ್ಕಾರ ಬಯಸಿದೆ ಎಂದು ಸಾರಿಗೆ ಇಲಾಖೆ ಹೇಳಿದೆ. ಜಾಗತಿಕ ಮಾನದಂಡಗಳಿಗೆ ತಕ್ಕಂತೆ ಬಿಎಸ್ 6 ಮಾಲಿನ್ಯ ನಿಯಮಗಳನ್ನು ಸಹ ಜಾರಿಗೆ ತರಲಾಗಿದೆ ಎಂದು ಇಲಾಖೆ ಹೇಳಿದೆ.

ಸಾರಿಗೆ ಇಲಾಖೆಯು ಅಭಿವೃದ್ಧಿಯ ಜೊತೆಗೆ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ಹೇಳಿದೆ. ಕಾರ್ಬನ್ ಡೈ ಆಕ್ಸೈಡ್ ನಿಯಮಗಳನ್ನು ನಿಯಂತ್ರಿಸಲು ಬಿಎಸ್ 6 ವಾಹನಗಳು ನೆರವಾಗಲಿವೆ.


Click it and Unblock the Notifications