ಅನಾವರಣವಾಯ್ತು ವಿಶ್ವದ ಅತಿ ವೇಗದ ಉತ್ಪಾದನಾ ಕಾರು

ಹೆನೆಸ್ಸಿ ಪರ್ಫಾರ್ಮೆನ್ಸ್ ಕಂಪನಿಯು ತನ್ನ ಹೊಸ ವೆನಮ್ ಎಫ್ 5 ಹೈಪರ್ ಕಾರಿನ ಉತ್ಪಾದನಾ ಆವೃತ್ತಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ವೆನಮ್ ಎಫ್ 5 ಹೆನೆಸ್ಸಿ ಕಂಪನಿಯ ಇತರ ಮಾದರಿಗಳಂತೆ ಅಪರೂಪದ ಸೂಪರ್ ಕಾರ್ ಆಗಿರಲಿದೆ.

ಅನಾವರಣವಾಯ್ತು ವಿಶ್ವದ ಅತಿ ವೇಗದ ಉತ್ಪಾದನಾ ಕಾರು

ವಿಶ್ವಾದ್ಯಂತ ಈ ಹೈಪರ್ ಕಾರಿನ ಕೇವಲ 24 ಯೂನಿಟ್ ಗಳನ್ನು ಮಾರಾಟ ಮಾಡಲಾಗುವುದು. ಹೆನೆಸ್ಸಿ ವೆನಮ್ ಎಫ್ 5 ಕಾರಿನ ಬೆಲೆ 2.1 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ಸುಮಾರು ರೂ.15.4 ಕೋಟಿಗಳಾಗಿದೆ. ಹೊಸ ವೆನಮ್ ಎಫ್ 5 ಹೈಪರ್ ಕಾರನ್ನು ಭೂಮಿಯ ಮೇಲಿನ ಅತಿ ವೇಗದ ಕಾರು ಎಂದು ವಿನ್ಯಾಸಗೊಳಿಸಲಾಗಿದೆ.

ಅನಾವರಣವಾಯ್ತು ವಿಶ್ವದ ಅತಿ ವೇಗದ ಉತ್ಪಾದನಾ ಕಾರು

ಈ ಕಾರು ಬುಗಾಟ್ಟಿ ಚಿರೋನ್ ಸ್ಪೋರ್ಟ್‌ ಕಾರಿಗಿಂತ ವೇಗವಾಗಿರಲಿದೆ ಎಂದು ಕಂಪನಿ ಹೇಳಿ ಕೊಂಡಿದೆ. ಇದುವರೆಗಿನ ಅತಿ ವೇಗದ ಉತ್ಪಾದನಾ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದ ಬುಗಾಟ್ಟಿ ಚಿರೋನ್ ಕಾರಿನ ವೇಗ 304 ಎಂಪಿಹೆಚ್ ಗಳಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಅನಾವರಣವಾಯ್ತು ವಿಶ್ವದ ಅತಿ ವೇಗದ ಉತ್ಪಾದನಾ ಕಾರು

2021ರಲ್ಲಿ ವೆನಮ್ ಎಫ್ 5 ಸೂಪರ್ ಕಾರಿನ ವಿತರಣೆಯನ್ನು ಆರಂಭಿಸಲಾಗುವುದು ಎಂದು ಹೆನೆಸ್ಸಿ ಕಂಪನಿ ಹೇಳಿದೆ. 2021ಕ್ಕೆ ಕಂಪನಿಯು ಶುರುವಾಗಿ 30 ವರ್ಷಗಳಾಗುತ್ತವೆ. ಜನಪ್ರಿಯ ರೇಸರ್ ಜಾನ್ ಹೆನ್ರಿಕ್ ಅವರ ಮಾರ್ಗದರ್ಶನದಲ್ಲಿ ಹೆನೆಸ್ಸಿ ವೆನಮ್ ಎಫ್ 5 ಕಾರನ್ನು ಅಭಿವೃದ್ಧಿಪಡಿಸಲಾಗಿದೆ.

ಅನಾವರಣವಾಯ್ತು ವಿಶ್ವದ ಅತಿ ವೇಗದ ಉತ್ಪಾದನಾ ಕಾರು

ಈ ಕಾರಿನಲ್ಲಿ ಹೆನೆಸ್ಸಿ ಕಂಪನಿಯ 6.6-ಲೀಟರಿನ ಟ್ವಿನ್-ಟರ್ಬೋಚಾರ್ಜ್ಡ್ ವಿ 8 ಎಂಜಿನ್ ಅಳವಡಿಸಲಾಗಿದೆ. ಕಂಪನಿಯು ಈ ಎಂಜಿನ್ನಿಗೆ ಫ್ಯೂರಿ ಎಂಬ ಹೆಸರನ್ನಿಟ್ಟಿದೆ. 6,555 ಸಿಸಿಯ ಈ ಎಂಜಿನ್ 8,000 ಆರ್‌ಪಿಎಂನಲ್ಲಿ 1,815 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಅನಾವರಣವಾಯ್ತು ವಿಶ್ವದ ಅತಿ ವೇಗದ ಉತ್ಪಾದನಾ ಕಾರು

ಇದರ ಜೊತೆಗೆ ಈ ಎಂಜಿನ್ 5,000 ಆರ್‌ಪಿಎಂನಲ್ಲಿ 1,617 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೆನೆಸ್ಸಿ ಕಂಪನಿಯು ಈ ಎಂಜಿನ್‌ನೊಂದಿಗೆ ಸಿಂಗಲ್-ಕ್ಲಚ್ ಪ್ಯಾಡಲ್‌ ಚಾಲಿತ ಏಳು-ಸ್ಪೀಡಿನ ಗೇರ್‌ಬಾಕ್ಸ್ ಅನ್ನು ಅಳವಡಿಸಿದೆ.

ಅನಾವರಣವಾಯ್ತು ವಿಶ್ವದ ಅತಿ ವೇಗದ ಉತ್ಪಾದನಾ ಕಾರು

ವೆನಮ್ ಎಫ್ 5 ಕಾರ್ಬನ್ ಫೈಬರ್ ಟಬ್ ಚಾಸಿಸ್'ನೊಂದಿಗೆ 1,360 ಕೆಜಿ ತೂಕವನ್ನು ಹೊಂದಿದೆ. ಈ ಹೈಪರ್ ಕಾರಿನಲ್ಲಿರುವ ಟಬ್ ಚಾಸಿಸ್'ನ ತೂಕ ಕೇವಲ 86 ಕೆಜಿಗಳಾಗಿದೆ. 1,298 ಹೆಚ್‌ಪಿ / ಟನ್‌ನ ಗರಿಷ್ಠ ಎಲೆಕ್ಟ್ರಿಕ್ -ತೂಕದ ಅನುಪಾತವನ್ನು ಸಾಧಿಸಲು ಈ ಕಾರನ್ನು ಭಾರೀ ಶಕ್ತಿಯ ಅಲ್ಟ್ರಾ-ಲೈಟ್‌ವೈಟ್ ಬಾಡಿಯೊಂದಿಗೆ ಸಂಯೋಜಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಅನಾವರಣವಾಯ್ತು ವಿಶ್ವದ ಅತಿ ವೇಗದ ಉತ್ಪಾದನಾ ಕಾರು

ಈ ಎಲ್ಲಾ ಅಂಕಿಅಂಶಗಳು ಹೆನೆಸ್ಸಿ ವೆನಮ್ ಎಫ್ 5 ಕಾರನ್ನು ವಿಶ್ವದ ಅತಿ ವೇಗದ ಉತ್ಪಾದನಾ ಕಾರನ್ನಾಗಿ ಮಾಡುತ್ತವೆ. ಈ ಹೈಪರ್ ಕಾರು ಕೇವಲ 2.6 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಅನಾವರಣವಾಯ್ತು ವಿಶ್ವದ ಅತಿ ವೇಗದ ಉತ್ಪಾದನಾ ಕಾರು

ಇದರ ಜೊತೆಗೆ ಈ ಕಾರು 4.7 ಸೆಕೆಂಡುಗಳಲ್ಲಿ 200 ಕಿ.ಮೀ ವೇಗವನ್ನು, 8.4 ಸೆಕೆಂಡುಗಳಲ್ಲಿ 300 ಕಿ.ಮೀ ವೇಗವನ್ನು ಹಾಗೂ 15.5 ಸೆಕೆಂಡುಗಳಲ್ಲಿ 400 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ ಎಂದು ಕಂಪನಿ ಹೇಳಿ ಕೊಂಡಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಅನಾವರಣವಾಯ್ತು ವಿಶ್ವದ ಅತಿ ವೇಗದ ಉತ್ಪಾದನಾ ಕಾರು

400 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡಿದ ನಂತರ ವೆನಮ್ ಎಫ್ 5 ಕಾರು ತನ್ನ ವೇಗವನ್ನು ಹೆಚ್ಚಿಸಿಕೊಳ್ಳಲಿದೆ. ಇದರಿಂದ ಈ ಕಾರು 500 ಕಿ.ಮೀ ವೇಗವನ್ನು ತಲುಪಲಿದೆ ಎಂದು ಕಂಪನಿ ಹೇಳಿದೆ.

ಅನಾವರಣವಾಯ್ತು ವಿಶ್ವದ ಅತಿ ವೇಗದ ಉತ್ಪಾದನಾ ಕಾರು

ಮಾಹಿತಿಯ ಪ್ರಕಾರ ಫ್ಲೋರಿಡಾದಲ್ಲಿರುವ ನಾಸಾ ಶಟಲ್ ಲ್ಯಾಂಡಿಂಗ್ ಫೆಸಿಲಿಟಿಯಲ್ಲಿ 2021ರ ಮೊದಲ ಭಾಗದಲ್ಲಿ ವೆನಮ್ ಎಫ್ 5 ಕಾರಿನ ವೇಗವನ್ನು ಪರೀಕ್ಷಿಸಲಾಗುವುದು. ವೆನಮ್ ಎಫ್ 5 ಯೋಜನೆಯನ್ನು ಕಂಪನಿಯ ಸ್ಥಾಪಕ ಹಾಗೂ ಸಿಇಒ ಆದ ಜಾನ್ ಹೆನೆಸ್ಸಿ ನೋಡಿಕೊಳ್ಳುತ್ತಿದ್ದಾರೆ.

Most Read Articles

Kannada
English summary
Hennessey unveils worlds fastest production hypercar. Read in Kannada.
Story first published: Monday, December 21, 2020, 15:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X