ಹೆದ್ದಾರಿಗಳಲ್ಲಿ ಆಹಾರ ಮಳಿಗೆ ತೆರೆಯಲು ಮುಂದಾದ ಎನ್‌ಹೆಚ್‌ಎ‌ಐ

ಮಹಾಮಾರಿ ಕರೋನಾ ವೈರಸ್ ತಡೆಗಟ್ಟಲು ದೇಶಾದ್ಯಂತ ಲಾಕ್‌ಡೌನ್ ವಿಧಿಸಲಾಗಿದ್ದು, ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಕೂಡಾ ಒಂದಿಲ್ಲಾ ಒಂದು ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕುವಂತಾಗಿದೆ.

ಹೆದ್ದಾರಿಗಳಲ್ಲಿ ಆಹಾರ ಮಳಿಗೆ ತೆರೆಯಲು ಮುಂದಾದ ಎನ್‌ಹೆಚ್‌ಎ‌ಐ

ಟ್ರಕ್ ಹಾಗೂ ಲಾರಿ ಚಾಲಕರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್‌ಡೌನ್ ಕಾರಣಕ್ಕೆ ಹೋಟೆಲ್, ಫುಡ್ ಸ್ಟಾಲ್‌ ಹಾಗೂ ಡಾಬಾಗಳನ್ನು ಮುಚ್ಚಲಾಗಿದೆ, ಈ ಕಾರಣದಿಂದಾಗಿ ಟ್ರಕ್ ಚಾಲಕರು ತುತ್ತು ಅನ್ನಕ್ಕಾಗಿ ಪರದಾಡಿ ತೊಂದರೆಯನ್ನು ಎದುರಿಸುವಂತಾಗಿದೆ.

ಹೆದ್ದಾರಿಗಳಲ್ಲಿ ಆಹಾರ ಮಳಿಗೆ ತೆರೆಯಲು ಮುಂದಾದ ಎನ್‌ಹೆಚ್‌ಎ‌ಐ

ಈ ಪರಿಸ್ಥಿತಿಯನ್ನು ಗಮನಿಸಿರುವ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಹೆಚ್‌ಎಐ) ಹೆದ್ದಾರಿಗಳಲ್ಲಿರುವ 1700 ಫ್ಯೂಯಲ್ ಸ್ಟೇಷನ್ ಹಾಗೂ ಇತರ 148 ಸ್ಥಳಗಳಲ್ಲಿ ಟ್ರಕ್ ಚಾಲಕರಿಗೆಊಟದ ವ್ಯವಸ್ಥೆ ಮಾಡಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಹೆದ್ದಾರಿಗಳಲ್ಲಿ ಆಹಾರ ಮಳಿಗೆ ತೆರೆಯಲು ಮುಂದಾದ ಎನ್‌ಹೆಚ್‌ಎ‌ಐ

ವರದಿಗಳ ಪ್ರಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಸ್ಥಳಗಳಲ್ಲಿ ತಾತ್ಕಾಲಿಕ ಆಹಾರ ಮಳಿಗೆಗಳು ಅಥವಾ ಹೋಟೆಲ್‌ಗಳನ್ನು ತೆರೆಯಲಿದೆ. ಈ ಸ್ಥಳಗಳಲ್ಲಿ ಟ್ರಕ್ ಚಾಲಕರು ಹಾಗೂ ಅವರ ಸಹಾಯಕರಿಗೆ ಕೈಗೆಟುಕುವ ಬೆಲೆಯಲ್ಲಿ ಆಹಾರ ಮಾರಾಟ ಮಾಡಲಾಗುವುದು.

ಹೆದ್ದಾರಿಗಳಲ್ಲಿ ಆಹಾರ ಮಳಿಗೆ ತೆರೆಯಲು ಮುಂದಾದ ಎನ್‌ಹೆಚ್‌ಎ‌ಐ

ಈ ಬಗ್ಗೆ ಕೇಂದ್ರ ಸಾರಿಗೆ ಇಲಾಖೆಯು ಬಿಪಿಸಿಎಲ್, ಐಒಸಿ ಹಾಗೂ ಹೆಚ್‌ಪಿಸಿಎಲ್ ಕಂಪನಿಗಳು ನಡೆಸುತ್ತಿರುವ ಫ್ಯೂಯಲ್ ಸ್ಟೇಷನ್‌ಗಳ ಪಟ್ಟಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಹೆದ್ದಾರಿಗಳಲ್ಲಿ ಆಹಾರ ಮಳಿಗೆ ತೆರೆಯಲು ಮುಂದಾದ ಎನ್‌ಹೆಚ್‌ಎ‌ಐ

ಉತ್ತರ ಪ್ರದೇಶ ಹಾಗೂ ಅಸ್ಸಾಂ ಸೇರಿದಂತೆ ಕೆಲವು ರಾಜ್ಯ ಸರ್ಕಾರಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಡಾಬಾ ಹಾಗೂ ವಾಹನ ರಿಪೇರಿ ಮಾಡುವ ಅಂಗಡಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿವೆ. ಇದರಿಂದ ಚಾಲಕರಿಗೆ ಮತ್ತಷ್ಟು ಅನುಕೂಲವಾಗಲಿದೆ.

ಹೆದ್ದಾರಿಗಳಲ್ಲಿ ಆಹಾರ ಮಳಿಗೆ ತೆರೆಯಲು ಮುಂದಾದ ಎನ್‌ಹೆಚ್‌ಎ‌ಐ

ಎಲ್ಲಾ ಸೌಲಭ್ಯಗಳ ಪಟ್ಟಿಯನ್ನು ಸಾರಿಗೆ ಇಲಾಖೆಯು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. ಇದರ ಜೊತೆಗೆ ಸಂಬಂಧಪಟ್ಟ ವ್ಯಕ್ತಿಯ ಹೆಸರು, ವಿಳಾಸ ಹಾಗೂ ಅವರ ಮೊಬೈಲ್ ಸಂಖ್ಯೆಯನ್ನು ನೀಡಿದೆ. ಎಲ್ಲಾ ಸಾರಿಗೆ ಕಂಪನಿಗಳು ತಮ್ಮ ಟ್ರಕ್ ಚಾಲಕರಿಗೆ ಈ ಮಾಹಿತಿಯನ್ನು ನೀಡಬೇಕೆಂದು ಸಾರಿಗೆ ಇಲಾಖೆಯು ಸೂಚಿಸಿದೆ.

Article Published On: Sunday, April 19, 2020, 10:50 [IST]
English summary
Highway Petrol Bunks to make food available for stranded truck drivers amidst Covid 19 lockdown. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+