ಬಸ್ ಪ್ರಯಾಣ ದರವನ್ನು ನಿಗದಿಪಡಿಸಲಿದೆ ಹೊಸ ಸಾಫ್ಟ್‌ವೇರ್

ಡೀಸೆಲ್ ಬೆಲೆ ಏರಿಳಿತಗಳಿಗೆ ಅನುಗುಣವಾಗಿ ಬಸ್ ಶುಲ್ಕವನ್ನು ನಿಗದಿಪಡಿಸುವ ಸಾಫ್ಟ್‌ವೇರ್ ಅನ್ನು ಸಿದ್ಧಪಡಿಸಲಾಗುತ್ತಿದೆ. ಹಿಮಾಚಲ ಪ್ರದೇಶ ಸರ್ಕಾರವು ಈ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲು ಸಾಫ್ಟ್‌ವೇರ್ ಕಂಪನಿಯೊಂದಕ್ಕೆ ಸೂಚನೆ ನೀಡಿದೆ.

ಬಸ್ ಪ್ರಯಾಣ ದರವನ್ನು ನಿಗದಿಪಡಿಸಲಿದೆ ಹೊಸ ಸಾಫ್ಟ್‌ವೇರ್

ಸಾಫ್ಟ್‌ವೇರ್ ಸಿದ್ಧವಾದ ನಂತರ ಅದನ್ನು ಬಳಸಲಾಗುತ್ತದೆ. ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶ ಸರ್ಕಾರವು ತನ್ನ ಸಾರ್ವಜನಿಕ ಸಾರಿಗೆ ಬಸ್ ದರವನ್ನು 25%ನಷ್ಟು ಹೆಚ್ಚಿಸಿದೆ. ಸಾರಿಗೆ ಇಲಾಖೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಅಲ್ಲಿನ ಸಾರಿಗೆ ಸಚಿವರು ಹೇಳಿದ್ದಾರೆ. ಸಾರಿಗೆ ಇಲಾಖೆಯ ಸ್ಥಿತಿ ಹದಗೆಟ್ಟಿದ್ದು ಬೆಲೆ ಏರಿಕೆ ಮೂಲಕ ಅದನ್ನು ಸುಧಾರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಬಸ್ ಪ್ರಯಾಣ ದರವನ್ನು ನಿಗದಿಪಡಿಸಲಿದೆ ಹೊಸ ಸಾಫ್ಟ್‌ವೇರ್

2012-17ರ ನಡುವೆ ಬಸ್ ಖರೀದಿಸಲು ರೂ.275 ಕೋಟಿ ವೆಚ್ಚ ಮಾಡಲಾಗಿದೆ. ಸಾರಿಗೆ ಇಲಾಖೆಯ ಅಭಿವೃದ್ಧಿಗೆ ಸರ್ಕಾರ ಹಾಗೂ ಸಾರ್ವಜನಿಕರು ಒಟ್ಟಾಗಿ ಸಹಕರಿಸಬೇಕೆಂದು ಹೇಳಿದರು. ಮಾರ್ಚ್ ಹಾಗೂ ಏಪ್ರಿಲ್‌ ನಲ್ಲಿ ಲಾಕ್ ಡೌನ್ ಕಾರಣದಿಂದಾಗಿ ಸಾರಿಗೆ ಇಲಾಖೆಗೆ ರೂ.166 ಕೋಟಿ ನಷ್ಟ ಉಂಟಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಬಸ್ ಪ್ರಯಾಣ ದರವನ್ನು ನಿಗದಿಪಡಿಸಲಿದೆ ಹೊಸ ಸಾಫ್ಟ್‌ವೇರ್

ಎಲ್ಲಾ ಸರ್ಕಾರಿ ಬಸ್‌ಗಳ ದರವನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಇಂದು ಪ್ರಸ್ತಾಪವನ್ನಿಟ್ಟಿದೆ. ದರ ಹೆಚ್ಚಳವನ್ನು ರಾಜ್ಯದ ಸಾಮಾನ್ಯ ಜನರೂ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ವಿರೋಧಿಸಿವೆ.

ಬಸ್ ಪ್ರಯಾಣ ದರವನ್ನು ನಿಗದಿಪಡಿಸಲಿದೆ ಹೊಸ ಸಾಫ್ಟ್‌ವೇರ್

ಮೊದಲ 3 ಕಿ.ಮೀಗಳಿಗೆ ಬಸ್ ದರವನ್ನು ರೂ.5 ರಿಂದ ರೂ.7ವರೆಗೆ ಹೆಚ್ಚಿಸಲಾಗಿದೆ. ಕರೋನಾ ವೈರಸ್ ನ ಈ ಸಂಕಷ್ಟದ ಸಂದರ್ಭದಲ್ಲಿ ಸಾರಿಗೆ ಇಲಾಖೆಯು ಬಸ್ ಗಳ ಕಾರ್ಯಾಚರಣೆಯಲ್ಲಿ ಹಲವು ತೊಂದರೆಗಳನ್ನು ಎದುರಿಸುತ್ತಿದೆ ಎಂದು ಸರ್ಕಾರವು ಹೇಳಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಬಸ್ ಪ್ರಯಾಣ ದರವನ್ನು ನಿಗದಿಪಡಿಸಲಿದೆ ಹೊಸ ಸಾಫ್ಟ್‌ವೇರ್

ಸಾರಿಗೆ ಇಲಾಖೆಯ ಆದಾಯವು ಅರ್ಧಕ್ಕಿಂತ ಕಡಿಮೆಯಾಗಿದೆ. ಇಲಾಖೆಯ ಸಿಬ್ಬಂದಿ ಹಾಗೂ ಬಸ್ ಚಾಲಕರ ಸಂಬಳ, ಇತ್ಯಾದಿಗಳನ್ನು ಪಾವತಿಸುವುದಕ್ಕಾಗಿ ದರ ಏರಿಕೆ ಹೊರತುಪಡಿಸಿ ಬೇರೆ ಯಾವುದೇ ಮಾರ್ಗವಿಲ್ಲವೆಂದು ಸಾರಿಗೆ ಇಲಾಖೆ ಹೇಳಿದೆ.

ಬಸ್ ಪ್ರಯಾಣ ದರವನ್ನು ನಿಗದಿಪಡಿಸಲಿದೆ ಹೊಸ ಸಾಫ್ಟ್‌ವೇರ್

ಪಶ್ಚಿಮ ಬಂಗಾಳ, ಪಂಜಾಬ್, ದೆಹಲಿ ಹಾಗೂ ಹರಿಯಾಣ ರಾಜ್ಯಗಳಲ್ಲಿ ಬಸ್ ಹಾಗೂ ಟ್ರಕ್ ಚಾಲಕರ ಸಂಘಗಳು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯನ್ನು ವಿರೋಧಿಸುತ್ತಿವೆ. ಕಳೆದ 30 ದಿನಗಳಲ್ಲಿ ಡೀಸೆಲ್, ಪೆಟ್ರೋಲ್ ಬೆಲೆಯನ್ನು ಹಲವಾರು ಬಾರಿ ಹೆಚ್ಚಿಸಲಾಗಿದೆ. ಕರೋನಾ ಸಂಕಷ್ಟದ ಸಂದರ್ಭದಲ್ಲಿ ತೈಲ ಬೆಲೆ ಹೆಚ್ಚಳವು ಚಾಲಕರ ಸಂಘದ ಆಕ್ರೋಶಕ್ಕೆ ಕಾರಣವಾಗಿದೆ.

Article Published On: Monday, July 27, 2020, 19:42 [IST]
English summary
Himachal Pradesh government developing software to decide bus fare. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+