ಕರೋನಾ ವೈರಸ್ ಎಫೆಕ್ಟ್: ಹೋಂ ಡೆಲಿವರಿಯಾಗಲಿವೆ ಪೆಟ್ರೋಲ್, ಸಿಎನ್‌ಜಿ

ಲಾಕ್‌ಡೌನ್ ಇನ್ನೂ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿದ್ದರೂ ಸಹ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸದ ಕಾರಣಕ್ಕೆ ದೇಶದಲ್ಲಿ ಇಂಧನ ಮಾರಾಟ ಪ್ರಮಾಣವು ಗಣನೀಯವಾಗಿ ಕುಸಿದಿದೆ. ಭಾರತದಲ್ಲಿ ಡೀಸೆಲ್ ಅನ್ನು ಹೋಂ ಡೆಲಿವರಿ ಮಾಡಲು ಈಗಾಗಲೇ ಅನುಮತಿ ನೀಡಲಾಗಿದೆ.

ಕರೋನಾ ವೈರಸ್ ಎಫೆಕ್ಟ್: ಹೋಂ ಡೆಲಿವರಿಯಾಗಲಿವೆ ಪೆಟ್ರೋಲ್, ಸಿಎನ್‌ಜಿ

ಪೆಟ್ರೋಲಿಯಂ ಸಚಿವರಾದ ಧರ್ಮೇಂದ್ರ ಪ್ರಧಾನ್‌ರವರು ಶೀಘ್ರದಲ್ಲೇ ಪೆಟ್ರೋಲ್ ಹಾಗೂ ಸಿಎನ್‌ಜಿಗಳ ಹೋಂ ಡೆಲಿವರಿಯನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ದೇಶಾದ್ಯಂತವಿರುವ ತೈಲ ಕಂಪನಿಗಳು ಹೋಂ ಡೆಲಿವರಿಯನ್ನು ಆರಂಭಿಸಲಿವೆ.

ಕರೋನಾ ವೈರಸ್ ಎಫೆಕ್ಟ್: ಹೋಂ ಡೆಲಿವರಿಯಾಗಲಿವೆ ಪೆಟ್ರೋಲ್, ಸಿಎನ್‌ಜಿ

ಭಾರತದ ಆಯ್ದ ನಗರಗಳಲ್ಲಿ 2018ರಿಂದ ಡೀಸೆಲ್ ಅನ್ನು ಹೋಂ ಡೆಲಿವರಿ ಮಾಡಲಾಗುತ್ತಿದೆ. ಲಾಕ್‌ಡೌನ್ ಕಾರಣದಿಂದಾಗಿ ದೇಶಾದ್ಯಂತ ತೈಲ ಮಾರಾಟ ಪ್ರಮಾಣವು 70%ನಷ್ಟು ಕುಸಿದಿದೆ. ಭಾರತವು ವಿಶ್ವದಲ್ಲಿಯೇ ಅತಿ ಹೆಚ್ಚು ತೈಲ ಖರೀದಿಸುವ ಮೂರನೇ ದೊಡ್ಡ ದೇಶವಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್ ಎಫೆಕ್ಟ್: ಹೋಂ ಡೆಲಿವರಿಯಾಗಲಿವೆ ಪೆಟ್ರೋಲ್, ಸಿಎನ್‌ಜಿ

ಪೆಟ್ರೋಲ್ ಹಾಗೂ ಸಿಎನ್‌ಜಿಯನ್ನು ಹೋಂ ಡೆಲಿವರಿ ಮಾಡುವುದು ಅಪಾಯಕಾರಿಯಾಗಿದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಬೆಂಕಿ ಹೊತ್ತಿಕೊಳ್ಳಲಿದೆ. ಸುರಕ್ಷಿತವಾಗಿ ತಲುಪಿಸುವ ಬಗ್ಗೆ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲೇ ಎಲ್ಲಾ ಇಂಧನಗಳನ್ನು ಒಂದೇ ಸ್ಥಳದಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ತರಲಾಗುವುದು.

ಕರೋನಾ ವೈರಸ್ ಎಫೆಕ್ಟ್: ಹೋಂ ಡೆಲಿವರಿಯಾಗಲಿವೆ ಪೆಟ್ರೋಲ್, ಸಿಎನ್‌ಜಿ

ಪೆಟ್ರೋಲ್, ಡೀಸೆಲ್, ಸಿಎನ್‌ಜಿ, ಎಲ್‌ಪಿಜಿ, ಎಲ್‌ಎನ್‌ಜಿ ಮುಂತಾದ ಇಂಧನಗಳನ್ನು ಒಂದೇ ಸ್ಥಳದಲ್ಲಿ ಗ್ರಾಹಕರಿಗೆ ಮಾರಾಟ ಮಾಡಲಾಗುವುದೆಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ದೇಶಾದ್ಯಂತ 11 ರಾಜ್ಯಗಳಲ್ಲಿ 56 ಹೊಸ ಸಿಎನ್‌ಜಿ ಕೇಂದ್ರಗಳನ್ನು ಆರಂಭಿಸಿದ ನಂತರ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ಹೋಂ ಡೆಲಿವರಿಯಾಗಲಿವೆ ಪೆಟ್ರೋಲ್, ಸಿಎನ್‌ಜಿ

ರೆಪೋಸ್ ಎನರ್ಜಿ ಜನರಿಗೆ ಇಂಧನವನ್ನು ಹೋಂ ಡೆಲಿವರಿ ಮಾಡಲು ಮೊಬೈಲ್ ಪೆಟ್ರೋಲ್ ಪಂಪ್‌ಗಳನ್ನು ಬಳಸುತ್ತಿದೆ. ಈ ಹಣಕಾಸು ವರ್ಷದಲ್ಲಿ ಈ ರೀತಿಯ 3200 ಮೊಬೈಲ್ ಪೆಟ್ರೋಲ್ ಪಂಪ್‌ಗಳನ್ನು ನಿರ್ಮಿಸುವ ಗುರಿ ಹೊಂದಿರುವುದಾಗಿ ಪುಣೆ ಮೂಲದ ರೆಪೋಸ್ ಎನರ್ಜಿ ತಿಳಿಸಿದೆ.

ಕರೋನಾ ವೈರಸ್ ಎಫೆಕ್ಟ್: ಹೋಂ ಡೆಲಿವರಿಯಾಗಲಿವೆ ಪೆಟ್ರೋಲ್, ಸಿಎನ್‌ಜಿ

ದೇಶಾದ್ಯಂತ ಲಾಕ್‌ಡೌನ್‌ನಿಂದಾಗಿ ಪೆಟ್ರೋಲ್ ಬಂಕ್‌ಗಳ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಲಾಕ್‌ಡೌನ್ ಸಡಿಲಿಸಿದ ನಂತರ ಇಂಧನ ಮಾರಾಟವು ಚೇತರಿಸಿಕೊಳ್ಳುತ್ತಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿ ಕೆಲಸ ಮಾಡಲಾಗುತ್ತಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್ ಎಫೆಕ್ಟ್: ಹೋಂ ಡೆಲಿವರಿಯಾಗಲಿವೆ ಪೆಟ್ರೋಲ್, ಸಿಎನ್‌ಜಿ

ದೇಶಾದ್ಯಂತ ಪೆಟ್ರೋಲ್ ಡೀಸೆಲ್ ಮಾರಾಟ ಪ್ರಮಾಣವು ಕುಸಿದಿರುವುದರಿಂದ ಆದಾಯದಲ್ಲಿಯೂ ಕುಸಿತವಾಗಿದೆ. ಈ ಕಾರಣಕ್ಕೆ ಪೆಟ್ರೋಲ್ ಅನ್ನು ಹೋಂ ಡೆಲಿವರಿ ಮಾಡುವ ಕಾರ್ಯಕ್ಕೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಇಂಧನಗಳನ್ನು ಹೋಂ ಡೆಲಿವರಿ ಮಾಡುವ ಸಾಧ್ಯತೆಗಳಿವೆ.

Article Published On: Monday, June 1, 2020, 19:08 [IST]
English summary
Home delivery of petrol cng could soon become reality says government. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+