ಕಾರುಗಳ ಕಾರ್ಯಕ್ಷಮತೆ ಹೆಚ್ಚಿಸಲು ಹೊಸ ಸರ್ವಿಸ್ ಕ್ಯಾಂಪ್ ಘೋಷಣೆ ಮಾಡಿದ ಹೋಂಡಾ ಕಾರ್ಸ್

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕಾರುಗಳು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ಕಾರುಗಳ ಅಂದಕ್ಕೆ ಮತ್ತಷ್ಟು ಮೆರಗು ನೀಡಲು ಪೇಟಿಂಗ್ ಸರ್ವಿಸ್‌ ಕ್ಯಾಂಪ್ ಘೋಷಣೆ ಮಾಡಿದ್ದು, ನಿಗದಿತ ಅವಧಿಯಲ್ಲಿ ಹೊಸ ಸರ್ವಿಸ್ ಪಡೆಯುವ ಗ್ರಾಹಕರಿಗೆ ಹಲವಾರು ಆಫರ್‌ಗಳನ್ನು ನೀಡಲಾಗುತ್ತಿದೆ.

ಕಾರುಗಳ ಕಾರ್ಯಕ್ಷಮತೆ ಹೆಚ್ಚಿಸಲು ಹೊಸ ಸರ್ವಿಸ್ ಕ್ಯಾಂಪ್ ಘೋಷಣೆ

ಲಾಕ್‌ಡೌನ್‌ ವೇಳೆ ವಾಹನಗಳು ಒಂದೇ ಬದಿಯಲ್ಲಿ ತಿಂಗಳುಗಟ್ಟಲೇ ನಿಲುಗಡೆಯಾಗಿದ್ದರಿಂದ ವಾಹನಗಳ ಕಾರ್ಯಕ್ಷಮತೆಯಲ್ಲಿ ತಗ್ಗುವುದು ಮತ್ತು ಪೆೇಟಿಂಗ್ ಸೌಲಭ್ಯವು ಕಳೆಗುಂದುವುದು ಸಾಮಾನ್ಯ ಸಮಸ್ಯೆಯಾಗಿರುತ್ತದೆ. ಇದರಿಂದ ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಗ್ರಾಹಕರಿಗೆ ವಿಶೇಷ ಸರ್ವಿಸ್ ಕ್ಯಾಂಪ್ ಆಯೋಜಿಸಿದ್ದು, ಇದೇ ತಿಂಗಳು 14ರಿಂದ 26ರ ತನಕ ಹೋಂಡಾ ಸ್ಪೆಷಲ್ ಸರ್ವಿಸ್ ಕ್ಯಾಂಪ್ ಕಾರ್ಯನಿರ್ವಹಿಸಲಿದೆ.

ಕಾರುಗಳ ಕಾರ್ಯಕ್ಷಮತೆ ಹೆಚ್ಚಿಸಲು ಹೊಸ ಸರ್ವಿಸ್ ಕ್ಯಾಂಪ್ ಘೋಷಣೆ

ಸಾಮಾನ್ಯ ದಿನಗಳಲ್ಲಿನ ಸರ್ವಿಸ್‌ಗಳಿಂತಲೂ ಆಕರ್ಷಕ ಬೆಲೆಯಲ್ಲಿ ಹೊಸ ತಾಂತ್ರಿಕ ಸೌಲಭ್ಯಗಳ ಸೇವೆಗಳು ಈ ಕ್ಯಾಂಪ್‌ನಲ್ಲಿ ಲಭ್ಯವಿದ್ದು, ನುರಿತ ಕಾರು ಎಂಜಿನ್ ತಂತ್ರಜ್ಞರಿಂದ ಸೇವೆಗಳನ್ನು ಪಡೆದುಕೊಳ್ಳಬಹುದು.

ಕಾರುಗಳ ಕಾರ್ಯಕ್ಷಮತೆ ಹೆಚ್ಚಿಸಲು ಹೊಸ ಸರ್ವಿಸ್ ಕ್ಯಾಂಪ್ ಘೋಷಣೆ

ಜೊತೆಗೆ ಕಾರುಗಳಿಗೆ ಅಳವಡಿಸಲಾಗುವ ಹೆಚ್ಚುವರಿ ಬಿಡಿಭಾಗಗಳ ಮೇಲೆ ಗರಿಷ್ಠ ರಿಯಾಯ್ತಿ ಪಡೆದುಕೊಳ್ಳಬಹುದಾಗಿದ್ದು, 13 ದಿನಗಳ ಸ್ಪೆಷಲ್ ಸರ್ವಿಸ್ ಕ್ಯಾಂಪ್ ದೇಶಾದ್ಯಂತ ಹರಡಿಕೊಂಡಿರುವ ಹೋಂಡಾ ಕಾರ್ ಡೀಲರ್ಸ್‌ಗಳಲ್ಲಿ ಲಭ್ಯವಿರಲಿದೆ.

ಕಾರುಗಳ ಕಾರ್ಯಕ್ಷಮತೆ ಹೆಚ್ಚಿಸಲು ಹೊಸ ಸರ್ವಿಸ್ ಕ್ಯಾಂಪ್ ಘೋಷಣೆ

ಜೊತೆಗೆ ಕಾರ್ಸ್ ಬಾಡಿ ಪೇಟಿಂಗ್ಸ್, ಬಂಪರ್ಸ್, ವಿಂಡ್‌ಶೀಲ್ಡ್ ಮತ್ತು ಮಿರರ್‌ಗಳ ಜೋಡಣೆಗಾಗಿ ಗರಿಷ್ಠ ರಿಯಾಯ್ತಿ ನೀಡಲಾಗುತ್ತಿದ್ದು, ಕರೋನಾ ವೈರಸ್ ಪರಿಣಾಮ ಹೊಸ ಸುರಕ್ಷಾ ಮಾರ್ಗಸೂಚಿ ಅಡಿಯಲ್ಲೇ ಗ್ರಾಹಕ ಸೇವೆಗಳನ್ನು ನೀಡಲಾಗುತ್ತಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಕಾರುಗಳ ಕಾರ್ಯಕ್ಷಮತೆ ಹೆಚ್ಚಿಸಲು ಹೊಸ ಸರ್ವಿಸ್ ಕ್ಯಾಂಪ್ ಘೋಷಣೆ

ಕಾರ್ಸ್ ಸರ್ವಿಸ್ ನಂತರ ಸ್ಯಾನಿಟೈಜ್ ಸೌಲಭ್ಯವನ್ನು ಕೂಡಾ ಒದಗಿಸಲಿರುವ ಹೋಂಡಾ ಕಾರ್ಸ್ ಕಂಪನಿಯು ಕಾರುಗಳನ್ನು ಹೊಸತರಂತೆ ಕಾಣಲು ಅತಿ ಕಡಿಮೆ ದರಗಳಲ್ಲಿ ಹೊಸ ಸರ್ವಿಸ್‌ಗಳನ್ನು ಒದಗಿಸುತ್ತಿದ್ದು, ಆಸಕ್ತ ಗ್ರಾಹಕರು ಹತ್ತಿರದ ಹೋಂಡಾ ಕಾರ್ಸ್ ಡೀಲರ್ಸ್‌ಗಳಲ್ಲಿ ಸರ್ವಿಸ್ ಕ್ಯಾಂಪ್‌ಗಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಕಾರುಗಳ ಕಾರ್ಯಕ್ಷಮತೆ ಹೆಚ್ಚಿಸಲು ಹೊಸ ಸರ್ವಿಸ್ ಕ್ಯಾಂಪ್ ಘೋಷಣೆ

ಇನ್ನು ಹೋಂಡಾ ಕಂಪನಿಯು ತನ್ನ ಜನಪ್ರಿಯ ಮಾದರಿಗಳಾದ ಅಮೇಜ್, ಡಬ್ಲ್ಯುಆರ್-ವಿ ಮತ್ತು ಸಿವಿಕ್ ಮಾದರಿಗಳಿಗೆ ರಿಯಾಯಿತಿಯನ್ನು ಘೋಷಿಸಿದೆ. ಮಾದರಿ ಮತ್ತು ರೂಪಾಂತರವನ್ನು ಅವಲಂಬಿಸಿ ಗರಿಷ್ಠ ರೂ.2.5 ಲಕ್ಷಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಕಾರುಗಳ ಕಾರ್ಯಕ್ಷಮತೆ ಹೆಚ್ಚಿಸಲು ಹೊಸ ಸರ್ವಿಸ್ ಕ್ಯಾಂಪ್ ಘೋಷಣೆ

ಗ್ರಾಹಕರು ಆನ್‌ಲೈನ್‌ನಲ್ಲಿ ಅಥವಾ ಭಾರತದಾದ್ಯಂತದ ಯಾವುದೇ ಅಧಿಕೃತ ಡೀಲರುಗಳ ಬಳಿಯಿಂದ ಖರೀದಿಸುವಾಗ ಈ ರಿಯಾಯಿತಿಗಳು ಲಭ್ಯವಿರಲಿದ್ದು, ಹೊಸ ಆಫರ್‌ಗಳು ಈ ತಿಂಗಳು ಅಂತ್ಯದವರೆಗೆ ಲಭ್ಯವಿರಲಿದೆ.

Most Read Articles

Kannada
Read more on ಹೋಂಡಾ honda
English summary
Honda Announces Body & Paint Service Camp For Cars In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X