ಜನವರಿ 1ರಿಂದ ಹೋಂಡಾ ಕಾರುಗಳ ಬೆಲೆಯಲ್ಲಿ ಹೆಚ್ಚಳ ಖಚಿತ

ಹೊಸ ವರ್ಷದಲ್ಲಿ ಕಾರು ಖರೀದಿಯ ಯೋಜನೆಯಲ್ಲಿದ್ದ ಗ್ರಾಹಕರಿಗೆ ಆಟೋ ಉತ್ಪಾದನಾ ಕಂಪನಿಗಳು ಬೆಲೆ ಏರಿಕೆಯ ಶಾಕ್ ನೀಡಿದ್ದು, 2021ರ ಜನವರಿ 1ರಿಂದ ಹೋಂಡಾ ಸೇರಿದಂತೆ ಬಹುತೇಕ ಕಾರು ಕಂಪನಿಗಳು ಬೆಲೆ ಹೆಚ್ಚಳ ಮಾಡುವುದಾಗಿ ಹೇಳಿಕೊಂಡಿವೆ.

ಜನವರಿ 1ರಿಂದ ಹೋಂಡಾ ಕಾರುಗಳ ಬೆಲೆಯಲ್ಲಿ ಹೆಚ್ಚಳ ಖಚಿತ

ಜನವರಿ 1ರಿಂದ ವಿವಿಧ ವಾಹನ ಉತ್ಪಾದನಾ ಕಂಪನಿಗಳು ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಹೋಂಡಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರುಗಳ ಬೆಲೆಯಲ್ಲಿ ಶೇ.2ರಿಂದ ಶೇ.3ರಷ್ಟು ಹೆಚ್ಚಳಕ್ಕೆ ಮಾಡುವ ಸುಳಿವು ನೀಡಿದೆ. ಬಿಡಿಭಾಗಗಳ ಬೆಲೆ ಹೆಚ್ಚಳದಿಂದಾಗಿ ಹೊಸ ವಾಹನಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿರುವ ಕಾರು ಉತ್ಪಾದನಾ ಕಂಪನಿಗಳು ಜನವರಿ 1ರಿಂದಲೇ ಹೊಸ ದರ ಜಾರಿಗೊಳಿಸಲಿದ್ದು, ಹೊಸ ವರ್ಷದಲ್ಲಿ ಕಾರು ಖರೀದಿಯ ಯೋಜನೆಯಲ್ಲಿದ್ದ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ಜನವರಿ 1ರಿಂದ ಹೋಂಡಾ ಕಾರುಗಳ ಬೆಲೆಯಲ್ಲಿ ಹೆಚ್ಚಳ ಖಚಿತ

ಹೋಂಡಾ ಕಂಪನಿಯು ಬೆಲೆ ಹೆಚ್ಚಳ ನಿರ್ಧಾರಕ್ಕೂ ಮುನ್ನ ಮಾರುತಿ ಸುಜುಕಿ, ಹ್ಯುಂಡೈ, ಮಹೀಂದ್ರಾ, ಕಿಯಾ ಮೋಟಾರ್ಸ್ ಸೇರಿದಂತೆ ಪ್ರಮುಖ ಕಾರು ಕಂಪನಿಗಳು ಬೆಲೆ ಹೆಚ್ಚಳ ಮಾಡುವುದಾಗಿ ಹೇಳಿಕೊಂಡಿದ್ದು, ಯಾವ ಕಾರಿನ ಬೆಲೆಯಲ್ಲಿ ಎಷ್ಟು ಹೆಚ್ಚಳ ಮಾಡಲಾಗುತ್ತಿದೆ ಎನ್ನುವ ಯಾವುದೇ ಮಾಹಿತಿ ನೀಡಿಲ್ಲ.

ಜನವರಿ 1ರಿಂದ ಹೋಂಡಾ ಕಾರುಗಳ ಬೆಲೆಯಲ್ಲಿ ಹೆಚ್ಚಳ ಖಚಿತ

ಕಳೆದ ಅಗಸ್ಟ್‌ನಲ್ಲಿ ವಿವಿಧ ವಾಹನ ಮಾದರಿಗಳ ಬೆಲೆ ಹೆಚ್ಚಳ ಮಾಡಿದ್ದ ಬಹುತೇಕ ಆಟೋ ಕಂಪನಿಗಳು ಇದೀಗ ಮತ್ತೆ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಹೋಂಡಾ ಕಾರುಗಳ ಬೆಲೆಯಲ್ಲಿ ರೂ.20 ಸಾವಿರದಿಂದ ರೂ.60 ಸಾವಿರ ತನಕ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಜನವರಿ 1ರಿಂದ ಹೋಂಡಾ ಕಾರುಗಳ ಬೆಲೆಯಲ್ಲಿ ಹೆಚ್ಚಳ ಖಚಿತ

ಇನ್ನು ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಬೆಲೆ ಹೆಚ್ಚಳಕ್ಕೂ ಮುನ್ನ ತನ್ನ ವಿವಿಧ ಕಾರು ಮಾದರಿಗಳ ಖರೀದಿಯ ಮೇಲೆ ಗರಿಷ್ಠ ಮಟ್ಟದ ಇಯರ್ ಆಫರ್ ಘೋಷಣೆ ಮಾಡಿದ್ದು, ವರ್ಷಾಂತ್ಯದಲ್ಲಿ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಸುವರ್ಣಾವಕಾಶ ಎನ್ನಬಹುದು. ದಸರಾ ಮತ್ತು ದೀಪಾವಳಿ ಸಂಭ್ರಮದ ವೇಳೆ ಭಾರೀ ಪ್ರಮಾಣದ ಹೊಸ ವಾಹನಗಳನ್ನು ಮಾರಾಟ ಮಾಡಿದ್ದ ಕಾರು ಕಂಪನಿಗಳು ಹಬ್ಬದ ಋುತುವಿನ ನಂತರವೂ ವಿವಿಧ ಆಫರ್‌‌ಗಳನ್ನು ಮುಂದುವರಿಸಿವೆ.

ಜನವರಿ 1ರಿಂದ ಹೋಂಡಾ ಕಾರುಗಳ ಬೆಲೆಯಲ್ಲಿ ಹೆಚ್ಚಳ ಖಚಿತ

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳಾದ ಅಮೆಜ್, ಜಾಝ್, ಸಿಟಿ, ಡಬ್ಲ್ಯುಆರ್‌ವಿ ಮತ್ತು ಸಿವಿಕ್ ಕಾರುಗಳ ಖರೀದಿ ಮೇಲೆ ಗರಿಷ್ಠ ಪ್ರಮಾಣದ ಡಿಸ್ಕೌಂಟ್ ನೀಡುತ್ತಿದೆ.

ಜನವರಿ 1ರಿಂದ ಹೋಂಡಾ ಕಾರುಗಳ ಬೆಲೆಯಲ್ಲಿ ಹೆಚ್ಚಳ ಖಚಿತ

ಇಯರ್ ಎಂಡ್ ಆಫರ್ ಈ ತಿಂಗಳು 31ರ ವರೆಗೆ ಅನ್ವಯಿಸಲಿದ್ದು, ಜನವರಿ 1ರಿಂದ ಹೊಸ ದರದೊಂದಿಗೆ ಮತ್ತಷ್ಟು ದುಬಾರಿಯಾಗಲಿವೆ. ಹೊಸ ಆಫರ್‌ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಡಿಸ್ಕೌಂಟ್, ಎಕ್ಸೆಂಡ್ ವಾರಂಟಿ ಮತ್ತು ಆಯ್ದ ಕಾರು ಮಾದರಿಗಳ ಮೇಲೆ ಹೆಚ್ಚುವರಿ ಕೊಡುಗೆಗಗಳನ್ನು ಪಡೆಯಬಹುದಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಜನವರಿ 1ರಿಂದ ಹೋಂಡಾ ಕಾರುಗಳ ಬೆಲೆಯಲ್ಲಿ ಹೆಚ್ಚಳ ಖಚಿತ

ಹೋಂಡಾ ಕಂಪನಿಯು ಆರಂಭಿಕ ಕಾರು ಮಾದರಿಯಾದ ಅಮೆಜ್ ಕಂಪ್ಯಾಕ್ಟ್ ಸೆಡಾನ್ ಕಾರು ಖರೀದಿಯ ಮೇಲೆ ರೂ. 15 ಸಾವಿರದಿಂದ ಸಿವಿಕ್ ಕಾರು ಖರೀದಿಯ ಮೇಲೆ ರೂ. 2.50 ಲಕ್ಷದ ತನಕ ಆಫರ್ ನೀಡುತ್ತಿದ್ದು, ಅಮೇಜ್ ಸ್ಟ್ಯಾಂಡರ್ಡ್ ಕಾರು ಖರೀದಿ ಮೇಲೆ ಹೋಂಡಾ ಕಂಪನಿಯು ರೂ. 37 ಸಾವಿರ ಡಿಸ್ಕೌಂಟ್ ನೀಡುತ್ತಿದೆ. ರೂ.37 ಸಾವಿರದಲ್ಲಿ ರೂ.12 ಸಾವಿರ ಮೌಲ್ಯದ ವಿಸ್ತರಿತ ವಾರಂಟಿ, ರೂ. 15 ಸಾವಿರ ಕ್ಯಾಶ್‌ಬ್ಯಾಕ್ ಆಫರ್ ಮತ್ತು ರೂ. 10 ಸಾವಿರ ಮೌಲ್ಯದ ಎಕ್ಸ್‌ಚೆಂಜ್ ಆಫರ್ ನೀಡುತ್ತಿದೆ.

ಜನವರಿ 1ರಿಂದ ಹೋಂಡಾ ಕಾರುಗಳ ಬೆಲೆಯಲ್ಲಿ ಹೆಚ್ಚಳ ಖಚಿತ

ಅಮೇಜ್ ಕಾರಿನ ಎಕ್ಸ್‌ಕ್ಲೂಸಿವ್ ಎಡಿಷನ್ ಕಾರು ಖರೀದಿಯ ಮೇಲೆ ರೂ.27 ಸಾವಿರ ಡಿಸ್ಕೌಂಟ್ ನೀಡಲಾಗುತ್ತಿದ್ದು, ರೂ. 27 ಸಾವಿರದಲ್ಲಿ ರೂ. 12 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 15 ಸಾವಿರ ಎಕ್ಸ್‌ಚೆಂಜ್ ಆಫರ್ ಲಭ್ಯವಿದೆ. ಹೊಸದಾಗಿ ಬಿಡುಗಡೆಯಾಗಿರುವ ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಖರೀದಿಯ ಮೇಲೆ ರೂ. 40 ಸಾವಿರ(ರೂ.25 ಸಾವಿರ ಕ್ಯಾಶ್‌ಬ್ಯಾಕ್ ಆಫರ್, ರೂ.15 ಸಾವಿರ ಎಕ್ಸ್‌ಚೆಂಜ್) ಆಫರ್ ನೀಡುತ್ತಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಜನವರಿ 1ರಿಂದ ಹೋಂಡಾ ಕಾರುಗಳ ಬೆಲೆಯಲ್ಲಿ ಹೆಚ್ಚಳ ಖಚಿತ

ಡಬ್ಲ್ಯುಆರ್-ವಿ ಸ್ಟ್ಯಾಂಡರ್ಡ್ ಕಾರು ಖರೀದಿಯ ಮೇಲೆ ರೂ. 40 ಸಾವಿರ, 5ನೇ ತಲೆಮಾರಿನ ಸಿಟಿ ಸೆಡಾನ್ ಕಾರು ಖರೀದಿಯ ಮೇಲೆ ರೂ.30 ಸಾವಿರ ಎಕ್ಸ್‌ಚೆಂಜ್ ಆಫರ್ ನೀಡುತ್ತಿದ್ದು, ಸಿವಿಕ್ ಸೆಡಾನ್ ಕಾರು ಖರೀದಿಯ ಮೇಲೆ ಗರಿಷ್ಠ ರೂ.2.50 ಲಕ್ಷ ಆಫರ್ ಪಡೆಯಬಹುದಾಗಿದೆ.

Article Published On: Monday, December 21, 2020, 20:57 [IST]
English summary
Honda Cars To Hike Price From January 2021. Read in Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+