ಹೋಂಡಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಇಯರ್ ಎಂಡ್ ಆಫರ್

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ವಿವಿಧ ಕಾರು ಮಾದರಿಗಳ ಖರೀದಿಯ ಮೇಲೆ ಗರಿಷ್ಠ ಮಟ್ಟದ ಇಯರ್ ಆಫರ್ ಘೋಷಣೆ ಮಾಡಿದ್ದು, ವರ್ಷಾಂತ್ಯದಲ್ಲಿ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಸುವರ್ಣಾವಕಾಶ ಎನ್ನಬಹುದು.

ಹೋಂಡಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಇಯರ್ ಎಂಡ್ ಆಫರ್

ದಸರಾ ಮತ್ತು ದೀಪಾವಳಿ ಸಂಭ್ರಮದ ವೇಳೆ ಭಾರೀ ಪ್ರಮಾಣದ ಹೊಸ ವಾಹನಗಳನ್ನು ಮಾರಾಟ ಮಾಡಿದ್ದ ಕಾರು ಕಂಪನಿಗಳು ಹಬ್ಬದ ಋುತುವಿನ ನಂತರವೂ ವಿವಿಧ ಆಫರ್‌‌ಗಳನ್ನು ಮುಂದುವರಿಸಿದ್ದು, ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳಾದ ಅಮೆಜ್, ಜಾಝ್, ಸಿಟಿ, ಡಬ್ಲ್ಯುಆರ್‌ವಿ ಮತ್ತು ಸಿವಿಕ್ ಕಾರುಗಳ ಖರೀದಿ ಮೇಲೆ ಗರಿಷ್ಠ ಪ್ರಮಾಣದ ಡಿಸ್ಕೌಂಟ್ ನೀಡುತ್ತಿದೆ.

ಹೋಂಡಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಇಯರ್ ಎಂಡ್ ಆಫರ್

ಇಯರ್ ಎಂಡ್ ಆಫರ್ ಈ ತಿಂಗಳು 31ರ ವರೆಗೆ ಅನ್ವಯಿಸಲಿದ್ದು, ಹೊಸ ಆಫರ್‌ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಡಿಸ್ಕೌಂಟ್, ಎಕ್ಸೆಂಡ್ ವಾರಂಟಿ ಮತ್ತು ಆಯ್ದ ಕಾರು ಮಾದರಿಗಳ ಮೇಲೆ ಹೆಚ್ಚುವರಿ ಕೊಡುಗೆಗಗಳನ್ನು ಪಡೆಯಬಹುದಾಗಿದೆ.

ಹೋಂಡಾ ಕಂಪನಿಯು ಆರಂಭಿಕ ಕಾರು ಮಾದರಿಯಾದ ಅಮೆಜ್ ಕಂಪ್ಯಾಕ್ಟ್ ಸೆಡಾನ್ ಕಾರು ಖರೀದಿಯ ಮೇಲೆ ರೂ. 15 ಸಾವಿರದಿಂದ ಸಿವಿಕ್ ಕಾರು ಖರೀದಿಯ ಮೇಲೆ ರೂ. 2.50 ಲಕ್ಷದ ತನಕ ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಕ್ಲೂಸಿವ್ ಮತ್ತು ಸ್ಪೆಷಲ್ ಎಡಿಷನ್ ಮಾದರಿಗಳು ಸಹ ಸೇರಿವೆ.

ಹೋಂಡಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಇಯರ್ ಎಂಡ್ ಆಫರ್

ಅಮೇಜ್ ಸ್ಟ್ಯಾಂಡರ್ಡ್ ಕಾರು ಖರೀದಿ ಮೇಲೆ ಹೋಂಡಾ ಕಂಪನಿಯು ರೂ. 37 ಸಾವಿರ ಡಿಸ್ಕೌಂಟ್ ನೀಡುತ್ತಿದ್ದು, ರೂ.37 ಸಾವಿರದಲ್ಲಿ ರೂ.12 ಸಾವಿರ ಮೌಲ್ಯದ ವಿಸ್ತರಿತ ವಾರಂಟಿ, ರೂ. 15 ಸಾವಿರ ಕ್ಯಾಶ್‌ಬ್ಯಾಕ್ ಆಫರ್ ಮತ್ತು ರೂ. 10 ಸಾವಿರ ಮೌಲ್ಯದ ಎಕ್ಸ್‌ಚೆಂಜ್ ಆಫರ್ ನೀಡುತ್ತಿದೆ. ಹೊಸ ಆಫರ್ ಅಮೆಜ್ ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಗಳ ಮೇಲೂ ಅನ್ವಯವಾಗಲಿದ್ದು, ಎಕ್ಸ್‌ಕ್ಲೂಸಿವ್ ಮತ್ತು ಸ್ಪೆಷಲ್ ಎಡಿಷನ್ ಮಾದರಿಗಳಿಗೆ ಮಾತ್ರ ಪ್ರತ್ಯೇಕ ಆಫರ್ ನೀಡುತ್ತಿದೆ.

ಹೋಂಡಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಇಯರ್ ಎಂಡ್ ಆಫರ್

ಅಮೇಜ್ ಕಾರಿನ ಎಕ್ಸ್‌ಕ್ಲೂಸಿವ್ ಎಡಿಷನ್ ಕಾರು ಖರೀದಿಯ ಮೇಲೆ ರೂ.27 ಸಾವಿರ ಡಿಸ್ಕೌಂಟ್ ನೀಡಲಾಗುತ್ತಿದ್ದು, ರೂ. 27 ಸಾವಿರದಲ್ಲಿ ರೂ. 12 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 15 ಸಾವಿರ ಎಕ್ಸ್‌ಚೆಂಜ್ ಆಫರ್ ಲಭ್ಯವಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಹೋಂಡಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಇಯರ್ ಎಂಡ್ ಆಫರ್

ಹಾಗೆಯೇ ಅಮೇಜ್ ಕಾರಿನ ಸ್ಪೆಷಲ್ ಎಡಿಷನ್ ಮಾದರಿಯ ಖರೀದಿಯ ಮೇಲೆ ರೂ. 15 ಸಾವಿರ ಡಿಸ್ಕೌಂಟ್ ಲಭ್ಯವಿದ್ದು, ಹೊಸದಾಗಿ ಬಿಡುಗಡೆಯಾಗಿರುವ ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಖರೀದಿಯ ಮೇಲೆ ರೂ. 40 ಸಾವಿರ(ರೂ.25 ಸಾವಿರ ಕ್ಯಾಶ್‌ಬ್ಯಾಕ್ ಆಫರ್, ರೂ.15 ಸಾವಿರ ಎಕ್ಸ್‌ಚೆಂಜ್) ಆಫರ್ ನೀಡುತ್ತಿದೆ.

ಹೋಂಡಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಇಯರ್ ಎಂಡ್ ಆಫರ್

ಡಬ್ಲ್ಯುಆರ್-ವಿ ಸ್ಟ್ಯಾಂಡರ್ಡ್ ಕಾರು ಖರೀದಿಯ ಮೇಲೆ ರೂ. 40 ಸಾವಿರ (ರೂ.25 ಸಾವಿರ ಕ್ಯಾಶ್‌ಬ್ಯಾಕ್ ಆಫರ್, ರೂ.15 ಸಾವಿರ ಎಕ್ಸ್‌ಚೆಂಜ್) ಆಫರ್ ನೀಡುತ್ತಿದ್ದು, ಡಬ್ಲ್ಯುಆರ್-ವಿ ಎಕ್ಸ್‌ಕ್ಲೂಸಿವ್ ಎಡಿಷನ್ ಕಾರು ಖರೀದಿಯ ಮೇಲೆ ರೂ. 25 ಸಾವಿರ(ರೂ.10 ಸಾವಿರ ಕ್ಯಾಶ್‌ಬ್ಯಾಕ್ ಆಫರ್, ರೂ.15 ಸಾವಿರ ಎಕ್ಸ್‌ಚೆಂಜ್) ಆಫರ್ ಪಡೆಯಬಹುದಾಗಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಹೋಂಡಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಇಯರ್ ಎಂಡ್ ಆಫರ್

ಇನ್ನು 5ನೇ ತಲೆಮಾರಿನ ಸಿಟಿ ಸೆಡಾನ್ ಕಾರು ಖರೀದಿಯ ಮೇಲೆ ರೂ.30 ಸಾವಿರ ಎಕ್ಸ್‌ಚೆಂಜ್ ಆಫರ್ ನೀಡುತ್ತಿದ್ದು, ಸಿವಿಕ್ ಸೆಡಾನ್ ಕಾರು ಖರೀದಿಯ ಮೇಲೆ ಗರಿಷ್ಠ ರೂ.2.50 ಲಕ್ಷ ಆಫರ್ ಪಡೆಯಬಹುದಾಗಿದೆ. ಸಿವಿಕ್ ಕಾರು ಖರೀದಿಸುವ ಗ್ರಾಹಕರಿಗೆ ಪೆಟ್ರೋಲ್ ಮಾದರಿಯ ಮೇಲೆ ರೂ. 1 ಲಕ್ಷ ಕ್ಯಾಶ್ ಡಿಸ್ಕೌಂಟ್ ಪಡೆಯಬಹುದಾಗಿದ್ದು, ಡೀಸೆಲ್ ಆವೃತ್ತಿಯ ಮೇಲೆ ರೂ.2.50 ಲಕ್ಷ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ.

Most Read Articles

Kannada
Read more on ಹೋಂಡಾ honda
English summary
Honda Cars Has Announced Special Offers On BS6 Models. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X