ತಗ್ಗಿದ ಕಾರು ಮಾರಾಟ- ಹೊಸ ಆಫರ್‌ಗಳನ್ನು ಘೋಷಿಸಿದ ಹೋಂಡಾ

ಆಟೋ ಉದ್ಯಮ ಸೇರಿದಂತೆ ಎಲ್ಲಾ ವಲಯದಲ್ಲೂ ಕರೋನಾ ವೈರಸ್ ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಸದ್ಯಕ್ಕೆ ಆಟೋ ಉದ್ಯಮಕ್ಕೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದ್ದರೂ ಸಹ ವಾಹನ ಖರೀದಿದಾರರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ತಗ್ಗಿದ ಕಾರು ಮಾರಾಟ- ಹೊಸ ಆಫರ್‌ಗಳನ್ನು ಘೋಷಿಸಿದ ಹೋಂಡಾ

ಲಾಕ್‌ಡೌನ್‌ನಿಂದಾಗಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗದ ಅಭದ್ರತೆ ಇದೀಗ ಅತಿ ದೊಡ್ಡ ಸಮಸ್ಯೆಯಾಗಿ ಕಾಡತೋಡಗಿದೆ. ಹೀಗಿರುವಾಗ ಹೊಸ ವಾಹನಗಳ ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುತ್ತಿವೆ. ಹೋಂಡಾ ಇಂಡಿಯಾ ಕೂಡಾ ವಿವಿಧ ಕಾರು ಮಾದರಿಗಳ ಮೇಲೆ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿದೆ.

ತಗ್ಗಿದ ಕಾರು ಮಾರಾಟ- ಹೊಸ ಆಫರ್‌ಗಳನ್ನು ಘೋಷಿಸಿದ ಹೋಂಡಾ

ಲಾಕ್‌ಡೌನ್‌ಗೂ ಮೊದಲು ಬುಕ್ಕಿಂಗ್ ಮಾಡಿ ಹೊಸ ವಾಹನಗಳ ಖರೀದಿಯ ಸಂಭ್ರಮದಲ್ಲಿದ್ದ ಗ್ರಾಹಕರು ಇದೀಗ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿರುವುದು ಆಟೋ ಕಂಪನಿಗಳನ್ನು ಚಿಂತೆಗೀಡು ಮಾಡಿದೆ.

ತಗ್ಗಿದ ಕಾರು ಮಾರಾಟ- ಹೊಸ ಆಫರ್‌ಗಳನ್ನು ಘೋಷಿಸಿದ ಹೋಂಡಾ

ಮಾರ್ಚ್ 15ಕ್ಕೂ ಮುನ್ನ ದೇಶಾದ್ಯಂತ ಹೊಸ ವಾಹನಗಳಿಗೆ ಬುಕ್ಕಿಂಗ್ ಮಾಡಿದ್ದ ಗ್ರಾಹಕರಲ್ಲಿ ಸುಮಾರು ಶೇ.60ರಿಂದ ಶೇ.70ರಷ್ಟು ಜನ ಹೊಸ ವಾಹನ ಖರೀದಿಯಿಂದ ಹಿಂದೆ ಸರಿದಿದ್ದು, ಉದ್ಯೋಗದ ಅಭದ್ರತೆ ಮತ್ತು ಆದಾಯಕ್ಕಿಂತ ಖರ್ಚು ಹೆಚ್ಚುತ್ತಿರುವುದರಿಂದ ಹೊಸ ವಾಹನಗಳ ಖರೀದಿಯ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಿದೆ.

ತಗ್ಗಿದ ಕಾರು ಮಾರಾಟ- ಹೊಸ ಆಫರ್‌ಗಳನ್ನು ಘೋಷಿಸಿದ ಹೋಂಡಾ

ಇದರಿಂದ ಗ್ರಾಹಕರನ್ನು ಸೆಳೆಯಲು ಆಟೋ ಕಂಪನಿಗಳು ಅತಿ ಸುಲಭವಾದ ಸಾಲಸೌಲಭ್ಯ ಸೇರಿದಂತೆ ಹಲವಾರು ಹೊಸ ಆಫರ್ ನೀಡುತ್ತಿದ್ದು, ಹೋಂಡಾ ಕೂಡಾ ತನ್ನ ಜನಪ್ರಿಯ ಕಾರುಗಳ ಮೇಲೆ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿ ಗ್ರಾಹಕರ ಸೆಳೆಯುವ ಯತ್ನಯಲ್ಲಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ತಗ್ಗಿದ ಕಾರು ಮಾರಾಟ- ಹೊಸ ಆಫರ್‌ಗಳನ್ನು ಘೋಷಿಸಿದ ಹೋಂಡಾ

ತನ್ನ ಜನಪ್ರಿಯ ಸೆಡಾನ್ ಮಾದರಿಯಾದ ಸಿಟಿ ಮತ್ತು ಕಂಪ್ಯಾಕ್ಟ್ ಸೆಡಾನ್ ಮಾದರಿಯ ಅಮೇಜ್ ಕಾರಿನ ಮೇಲೆ ಸೀಮಿತ ಅವಧಿಗಾಗಿ ಆಫರ್‌ಗಳನ್ನು ಘೋಷಿಸಿದ್ದು, ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಬೋನಸ್ ಮತ್ತು ವಾರಂಟಿ ಅವಧಿ ವಿಸ್ತರಣೆಯ ಆಫರ್ ನೀಡುತ್ತಿದೆ.

ತಗ್ಗಿದ ಕಾರು ಮಾರಾಟ- ಹೊಸ ಆಫರ್‌ಗಳನ್ನು ಘೋಷಿಸಿದ ಹೋಂಡಾ

ಅಮೇಜ್ ಕಾರು ಮಾದರಿಯ ಖರೀದಿಯ ಮೇಲೆ ರೂ.32 ಸಾವಿರ ತನಕ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದ್ದು, ಹೆಚ್ಚುವರಿಯಾಗಿ ಎರಡು ವರ್ಷಗಳ ಕಾಲ ವಾರಂಟಿ ಅವಧಿಯನ್ನು ಸಹ ವಿಸ್ತರಣೆ ಮಾಡಲಾಗುತ್ತಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ತಗ್ಗಿದ ಕಾರು ಮಾರಾಟ- ಹೊಸ ಆಫರ್‌ಗಳನ್ನು ಘೋಷಿಸಿದ ಹೋಂಡಾ

ಹಾಗೆಯೇ ಸಿಟಿ ಸೆಡಾನ್ ಮಾದರಿಯ ಖರೀದಿಯ ಮೇಲೆ ರೂ.1 ಲಕ್ಷದ ತನಕ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದ್ದು, ವಿ ಸಿವಿಟಿ ವೆರಿಯೆಂಟ್ ಖರೀದಿ ಮೇಲೆ ರೂ.25 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು 20 ಸಾವಿರ ಎಕ್ಸ್‌ಚೆಂಜ್ ಆಫರ್ ನೀಡಲಾಗುತ್ತದೆ.

Article Published On: Wednesday, June 3, 2020, 19:58 [IST]
English summary
Honda is offering huge discounts and special offers on the City and Amaze models in June 2020. Read in Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+