ಅನಾವರಣವಾಯ್ತು ಅತಿ ವೇಗದ ಹೈಪರ್ ಕಾರು

ಗ್ರೀಸ್‌ನ ಸ್ಟಾರ್ಟ್ ಅಪ್ ಕಂಪನಿಯೊಂದು ಹೈಪರ್ ಕಾರನ್ನು ಅನಾವರಣಗೊಳಿಸಿದೆ. ಈ ಹೈಪರ್ ಕಾರು ರೇಸ್ ಟ್ರ್ಯಾಕ್‌ನ ಎಲ್ಲಾ ದಾಖಲೆಗಳನ್ನು ಮುರಿಯಬಲ್ಲದು. ಈ ಕಾರನ್ನು ಗ್ರೀಸ್‌ನ ಆಟೋ ಮೊಬೈಲ್ ಎಂಜಿನಿಯರ್ ಸ್ಪಿರಾಸ್ ಪನೋಪೌಲೋಸ್ ಎಂಬುವವರು ವಿನ್ಯಾಸಗೊಳಿಸಿದ್ದಾರೆ.

ಅನಾವರಣವಾಯ್ತು ಅತಿ ವೇಗದ ಹೈಪರ್ ಕಾರು

ಈ ಕಾರನ್ನು ಪ್ರಾಜೆಕ್ಟ್ ಚೋಸ್ ಅಡಿಯಲ್ಲಿ ನಿರ್ಮಿಸಲಾಗಿದೆ. ಪರ್ಫಾಮೆನ್ಸ್ ದೃಷ್ಟಿಯಿಂದ ನೋಡುವುದಾದರೆ ಈ ಕಾರು ಇದುವರೆಗೂ ತಯಾರಾಗಿರುವ ಎಲ್ಲಾ ಹೈಪರ್ ಕಾರುಗಳನ್ನು ಮೀರಿಸುತ್ತದೆ ಎಂದು ಸ್ಪಿರಾಸ್ ಹೇಳಿಕೊಂಡಿದ್ದಾರೆ. ಈ ಕಾರು ಇದುವರೆಗಿನ ಅತ್ಯಂತ ಶಕ್ತಿಶಾಲಿಯಾದ ಹಾಗೂ ವೇಗದ ಹೈಪರ್ ಕಾರ್ ಆಗಿದೆ. ಈ ಕಾರಿನಲ್ಲಿ 4.0 ಲೀಟರಿನ ವಿ 10 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಎರಡು ಟ್ಯೂನ್ ಗಳಲ್ಲಿ 11,000 ಆರ್‌ಪಿಎಂನಲ್ಲಿ 2,000 ಬಿಹೆಚ್‌ಪಿ ಪವರ್ ಹಾಗೂ 12,000 ಆರ್‌ಪಿಎಂನಲ್ಲಿ 3,000 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಅನಾವರಣವಾಯ್ತು ಅತಿ ವೇಗದ ಹೈಪರ್ ಕಾರು

ಎಂಜಿನ್ ಫೀಚರ್ ನಿಂದ ಈ ಕಾರು ಎಷ್ಟು ಬಲಶಾಲಿ ಎಂಬುದನ್ನು ನೋಡಬಹುದು. ಈ ಕಾರಿನಲ್ಲಿರುವ ಎಂಜಿನ್‌ 2 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ 0-100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಅನಾವರಣವಾಯ್ತು ಅತಿ ವೇಗದ ಹೈಪರ್ ಕಾರು

ಕೇವಲ 2.6 ಸೆಕೆಂಡುಗಳಲ್ಲಿ 100-200 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಯಾವುದೇ ಹೈಪರ್ ಕಾರುಗಳು ಈ ಅವಧಿಯಲ್ಲಿ ಇಷ್ಟು ವೇಗವನ್ನು ಆಕ್ಸಲರೇಟ್ ಮಾಡುವುದಿಲ್ಲ. ಇದೇ ವೇಗದಲ್ಲಿ ಈ ಹೈಪರ್ ಕಾರಿನಿಂದ ಮುಂಬೈನಿಂದ ದೆಹಲಿಯನ್ನು ಕೇವಲ 2 ಗಂಟೆಗಳಲ್ಲಿ ತಲುಪಬಹುದು.

ಅನಾವರಣವಾಯ್ತು ಅತಿ ವೇಗದ ಹೈಪರ್ ಕಾರು

ಈ ಹೈಪರ್ ಕಾರಿನ ಕೆಲವು ಚಿತ್ರಗಳು ಇಂಟರ್ ನೆಟ್ ನಲ್ಲಿ ವೈರಲ್ ಆಗಿವೆ. ಇಂಟರ್ ನೆಟ್ ನಲ್ಲಿರುವ ಚಿತ್ರಗಳಲ್ಲಿ ಕಾರಿನ ಟೇಲ್ ಲೈಟ್ ಅನ್ನು ಕಾಣಬಹುದು. ಈ ಕಾರಿನಲ್ಲಿರುವ ಕೆಲವು ಭಾಗಗಳನ್ನು 3-ಡಿ ಪ್ರಿಂಟಿಂಗ್ ಟೆಕ್ನಾಲಜಿಯಿಂದ ತಯಾರಿಸಲಾಗಿದೆ ಎಂದು ಹೇಳಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಅನಾವರಣವಾಯ್ತು ಅತಿ ವೇಗದ ಹೈಪರ್ ಕಾರು

ಕಾರಿನ ತೂಕವನ್ನು ಕಡಿಮೆಗೊಳಿಸಲು ಈ ಕಾರನ್ನು ಕಾರ್ಬನ್ ಫೈಬರ್‌ನಿಂದ ತಯಾರಿಸಲಾಗಿದೆ. ಈ ಕಾರಿನಲ್ಲಿ ಮೊನೊಕೊಕ್ ಚಾಸಿಸ್ ಮೇಲೆ ಅಳವಡಿಸಲಾಗಿದೆ. ಈ ಚಾಸಿಸ್ ಸಾಮಾನ್ಯ ಚಾಸಿಸ್ ಗಳಿಗಿಂತ ಬಲವಾಗಿರುತ್ತದೆ ಎಂದು ಹೇಳಲಾಗಿದೆ. 2020ರ ಜಿನೀವಾ ಮೋಟಾರ್ ಶೋನಲ್ಲಿ ಕಂಪನಿಯು ಈ ಕಾರನ್ನು ಪ್ರದರ್ಶಿಸಲು ನಿರ್ಧರಿಸಿತ್ತು. ಆದರೆ ಕರೋನಾ ವೈರಸ್ ಕಾರಣದಿಂದಾಗಿ ಈ ವರ್ಷದ ಶೋವನ್ನು ರದ್ದುಪಡಿಸಲಾಯಿತು.

ಅನಾವರಣವಾಯ್ತು ಅತಿ ವೇಗದ ಹೈಪರ್ ಕಾರು

ಈ ಕಾರನ್ನು ರೇಸಿಂಗ್ ಟ್ರ್ಯಾಕ್‌ನಲ್ಲಿ ಚಾಲನೆ ಮಾಡುವುದರ ಜೊತೆಗೆ, ಸಾಮಾನ್ಯ ರಸ್ತೆಗಳಲ್ಲಿಯೂ ಚಾಲನೆ ಮಾಡಬಹುದೆಂದು ಕಂಪನಿ ಹೇಳಿದೆ. ಈ ಕಾರನ್ನು ಪ್ಯಾಸೆಂಜರ್ ಕಾರಾಗಿಯೂ ಬಳಸಬಹುದು. ಈ ಕಾರನ್ನು ನಗರಗಳಲ್ಲಿ ಸುಲಭವಾಗಿ ಚಾಲನೆ ಮಾಡಬಹುದು. 22 ಎಂಜಿನಿಯರ್‌ಗಳ ತಂಡವು ಈ ಕಾರನ್ನು ಉತ್ಪಾದಿಸುತ್ತಿದೆ.

Most Read Articles

Kannada
English summary
Hyper car unveiled by startup company in Greece. Read in Kannada.
Story first published: Saturday, July 18, 2020, 18:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X