'ಸ್ಮಾರ್ಟ್ ಕೇರ್ ಕ್ಲಿನಿಕ್' ಕಾರ್ ಸರ್ವಿಸ್ ಅಭಿಯಾನ ಆರಂಭಿಸಿದ ಹ್ಯುಂಡೈ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಗ್ರಾಹಕರಿಗೆ ವಿವಿಧ ಅಭಿಯಾನಗಳಡಿ ಋುತುಮಾನಗಳ ತಕ್ಕಂತೆ ಹಲವಾರು ಕಾರ್ ಸರ್ವಿಸ್ ಕ್ಯಾಂಪ್‌ಗಳನ್ನು ಆಯೋಜನೆ ಮಾಡುತ್ತಲೇ ಇರುತ್ತದೆ. ಇದೀಗ ಸ್ಮಾರ್ಟ್ ಕೇರ್ ಕ್ಲಿನಿಕ್ ಕ್ಯಾಂಪ್ ಆಯೋಜಿಸಿದ್ದು, ನಿಗದಿತ ಅವಧಿಯ ಸರ್ವಿಸ್ ಪಡೆಯುವ ಗ್ರಾಹಕರಿಗೆ ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿದೆ.

ಹ್ಯುಂಡೈ 'ಸ್ಮಾರ್ಟ್ ಕೇರ್ ಕ್ಲಿನಿಕ್' ಕಾರ್ ಸರ್ವಿಸ್ ಅಭಿಯಾನ ಆರಂಭ

ಸ್ಮಾರ್ಟ್ ಕೇರ್ ಕ್ಲಿನಿಕ್ ಕ್ಯಾಂಪ್ ಅನ್ನು ಇದೇ ತಿಂಗಳು ಡಿಸೆಂಬರ್ 14ರಿಂದ 23ರ ತನಕ ಆಯೋಜಿಸಿದ್ದು, 10 ದಿನಗಳ ಕಾಲ ನಡೆಯುವ ಸ್ಪೆಷಲ್ ಕೇರ್ ಕಾರ್ ಕ್ಯಾಂಪ್‌ನಲ್ಲಿ ಗ್ರಾಹಕರು ಹಲವಾರು ಆಫರ್‌ಗಳನ್ನು ಪಡೆದುಕೊಳ್ಳಬಹುದು. ಒಂದೇ ಸೂರಿನಡಿ ಗ್ರಾಹಕರಿಗೆ ವಿವಿಧ ಕಾರ್ ಸರ್ವಿಸ್‌ಗಳನ್ನು ಒದಗಿಸುವ ಹ್ಯುಂಡೈ ಕಂಪನಿಯು ನುರಿತ ಕಾರ್ ಮೆಕ್ಯಾನಿಕ್‌ಗಳಿಂದ ಗುಣಮಟ್ಟದ ಸೇವೆ ನೀಡಲಿದ್ದು, ಬಿಡಿಭಾಗಳ ಮೇಲೆ ಶೇ.10ರಷ್ಟು ಮತ್ತು ಲೇಬರ್ ಚಾರ್ಜ್‌ಗಳ ಮೇಲೆ ಶೇ.20ರಷ್ಟು ಡಿಸ್ಕೌಂಟ್ ನೀಡಲಿದೆ.

ಹ್ಯುಂಡೈ 'ಸ್ಮಾರ್ಟ್ ಕೇರ್ ಕ್ಲಿನಿಕ್' ಕಾರ್ ಸರ್ವಿಸ್ ಅಭಿಯಾನ ಆರಂಭ

ಜೊತೆಗೆ 50 ವೆಹಿಕಲ್ ಪಾಯಿಂಟ್ ಚೆಕ್ ಅಪ್ ಸೇವೆಯನ್ನು ಉಚಿತವಾಗಿ ಒದಗಿಸಲಿದ್ದು, ದೇಶಾದ್ಯಂತ ಹರಡಿಕೊಂಡಿರುವ 1288 ಹ್ಯುಂಡೈ ಸರ್ವಿಸ್ ಪಾಯಿಂಟ್‌ಗಳಲ್ಲಿ ಸ್ಮಾರ್ಟ್ ಕೇರ್ ಕ್ಲಿನಿಕ್ ಕಾರ್ ಸರ್ವಿಸ್ ಲಭ್ಯವಿರಲಿದೆ.

ಹ್ಯುಂಡೈ 'ಸ್ಮಾರ್ಟ್ ಕೇರ್ ಕ್ಲಿನಿಕ್' ಕಾರ್ ಸರ್ವಿಸ್ ಅಭಿಯಾನ ಆರಂಭ

ಸ್ಮಾರ್ಟ್ ಕೇರ್ ಕ್ಲಿನಿಕ್ ಕಾರ್ ಸರ್ವಿಸ್ ಕ್ಯಾಂಪ್‌ನಲ್ಲಿ ಸೇವೆ ಪಡೆದುಕೊಳ್ಳುವ 200 ಲಕ್ಕಿ ಗ್ರಾಹಕರಿಗೆ 1 ವರ್ಷದ ವಿಸ್ತರಿತ ವಾರಂಟಿ ಸೌಲಭ್ಯವು ಉಚಿತವಾಗಿ ಸಿಗಲಿದ್ದು, 1 ಸಾವಿರ ಗ್ರಾಹಕರಿಗೆ ರೂ. 2 ಸಾವಿರ ಮೌಲ್ಯದ ಅಮೆಜಾನ್ ಅಥವಾ ಫ್ಯೂಲ್ ವೋಚರ್ ಪಡೆದುಕೊಳ್ಳಬಹುದಾಗಿದೆ.

ಹ್ಯುಂಡೈ 'ಸ್ಮಾರ್ಟ್ ಕೇರ್ ಕ್ಲಿನಿಕ್' ಕಾರ್ ಸರ್ವಿಸ್ ಅಭಿಯಾನ ಆರಂಭ

ಇದರೊಂದಿಗೆ ಹ್ಯುಂಡೈ ಕಂಪನಿಯು ನೆಚ್ಚಿನ ಗ್ರಾಹಕರಿಗೆ ಮೊಬಿಲಿಟಿ ಮೆಂಬರ್‌ಶಿಷ್ ಅಭಿಯಾನದ ಒಂದೇ ಸೂರಿನಡಿಯಲ್ಲಿ ವಿವಿಧ ಸೇವೆಗಳನ್ನು ಹೊಸ ಆಫರ್‌ಗಳ ಅಡಿ ನೀಡುತ್ತಿದ್ದು, ಮುಕ್ತಾಯ ಹಂತದಲ್ಲಿದ್ದ ಹೊಸ ಮೊಲಿಬಿಟಿ ಸದಸ್ಯತ್ವದ ಸಮಯಾವಕಾಶವನ್ನು ಮತ್ತಷ್ಟು ವಿಸ್ತರಣೆ ಮಾಡಿದೆ. ಆಟೋಮೊಬೈಲ್‌ಗೆ ಸಂಬಂಧಿಸಿದ ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ಒದಗಿಸಲಿರುವ ಹ್ಯುಂಡೈ ಕಂಪನಿಯು ಉಚಿತವಾಗಿ ಮೊಲಿಬಿಟಿ ಸದಸ್ಯತ್ವವನ್ನು ನೀಡುತ್ತಿದೆ.

ಹ್ಯುಂಡೈ 'ಸ್ಮಾರ್ಟ್ ಕೇರ್ ಕ್ಲಿನಿಕ್' ಕಾರ್ ಸರ್ವಿಸ್ ಅಭಿಯಾನ ಆರಂಭ

ಹ್ಯುಂಡೈ ಗ್ರಾಹಕರು ಹೊಸ ಸದಸ್ಯತ್ವದ ಮೂಲಕ ವಿವಿಧ ಆಟೋ ಸೇವೆಗಳು ರಿಯಾಯ್ತಿ ದರದಲ್ಲಿ ಪಡೆದುಕೊಳ್ಳಬಹುದಾಗಿದ್ದು, ಈ ಹಿಂದೆ ಹೊಸ ಸದಸ್ಯತ್ವವನ್ನು ಹೊಸ ವಾಹನ ಮಾಲೀಕರಿಗೆ ಮಾತ್ರ ನೀಡುತ್ತಿದ್ದ ಕಂಪನಿಯು ಇದೀಗ ಎಲ್ಲಾ ಗ್ರಾಹಕರಿಗೆ ವಿಸ್ತರಣೆ ಮಾಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹ್ಯುಂಡೈ 'ಸ್ಮಾರ್ಟ್ ಕೇರ್ ಕ್ಲಿನಿಕ್' ಕಾರ್ ಸರ್ವಿಸ್ ಅಭಿಯಾನ ಆರಂಭ

ಮೊಬಿಲಿಟಿ ಸದಸ್ಯತ್ವದಡಿ ಗ್ರಾಹಕರಿಗೆ ಅಂಕಗಳನ್ನು ನೀಡುವ ಹ್ಯುಂಡೈ ಕಂಪನಿಯು ಅಂಕಗಳ ಆಧಾರದ ಮೇಲೆ ವಿವಿಧ ಆಟೋಮೊಬೈಲ್ ಸೇವೆಗಳ ಮೇಲೆ ರಿಯಾಯ್ತಿ ಪಡೆದುಕೊಳ್ಳುವ ಅವಕಾಶ ನೀಡಲಿದ್ದು, ಹೊಸ ಸದಸ್ಯತ್ವಕ್ಕೆ ಯಾವುದೇ ಹೆಚ್ಚುವರಿ ಶುಲ್ಕಪಾವತಿ ಮಾಡಬೇಕಿಲ್ಲ.

ಹ್ಯುಂಡೈ 'ಸ್ಮಾರ್ಟ್ ಕೇರ್ ಕ್ಲಿನಿಕ್' ಕಾರ್ ಸರ್ವಿಸ್ ಅಭಿಯಾನ ಆರಂಭ

ಹೀಗಾಗಿ ವಾಹನದ ಪರಿಕರಗಳು, ಇಂಧನ, ಲೂಬ್ರಿಕಂಟ್ ಮತ್ತು ಟೈರ್‌ಗಳಿಗೆ ಸಂಬಂಧಿಸಿದ ಸೇವೆಗಳನ್ನು ರಿಯಾಯ್ತಿ ದರದಲ್ಲಿ ಪಡೆದುಕೊಳ್ಳಬಹುದಾಗಿದ್ದು, ಇದು ವಾಹನ ಚಂದಾದಾರಿಕೆಯ ಪ್ರಕ್ರಿಯೆಯನ್ನು ಸಹ ಸರಳಗೊಳಿಸುತ್ತದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹ್ಯುಂಡೈ 'ಸ್ಮಾರ್ಟ್ ಕೇರ್ ಕ್ಲಿನಿಕ್' ಕಾರ್ ಸರ್ವಿಸ್ ಅಭಿಯಾನ ಆರಂಭ

ಹಾಗೆಯೇ ಒಂದು ನೀವು ಬಾಡಿಗೆ ವಾಹನಗಳನ್ನು ನೇರವಾಗಿ ಆಯಾ ಕಂಪನಿಗಳ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದಕ್ಕಿಂತ ಹ್ಯುಂಡೈ ಮೊಲಿಬಿಟಿ ಆ್ಯಪ್ ಮೂಲಕ ನೋಂದಣಿ ಮಾಡಿದ್ದಲ್ಲಿ ಹಲವಾರು ಆಫರ್‌ಗಳ ಲಭ್ಯವಾಗಲಿದ್ದು, ಕ್ಯಾಶ್‌ಬ್ಯಾಕ್ ಆಫರ್ ಜೊತೆಗೆ ಅಂಕಗಳು ಕೂಡಾ ಹೆಚ್ಚಳವಾಗುವುದರೊಂದಿಗೆ ಆಫರ್ ಪಡೆದುಕೊಳ್ಳಬಹುದಾಗಿದೆ.

Most Read Articles

Kannada
English summary
Hyundai Announces ‘Smart Car Clinic’ Nationwide Service Camp. Read in Kannada.
Story first published: Friday, December 11, 2020, 20:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X