Just In
Don't Miss!
- Movies
ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ
- News
ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರುತಿ ಸುಜುಕಿ, ಕಿಯಾ ಮೋಟಾರ್ಸ್ ನಂತರ ಹ್ಯುಂಡೈ ಕಾರುಗಳ ಬೆಲೆಯಲ್ಲೂ ಹೆಚ್ಚಳ
ಹೊಸ ವಾಹನಗಳ ಉತ್ಪಾದನಾ ವೆಚ್ಚ ನಿರ್ವಹಣೆಗಾಗಿ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ತಮ್ಮ ವಿವಿಧ ವಾಹನ ಮಾದರಿಗಳ ಬೆಲೆಯನ್ನು ಹೆಚ್ಚಿಸುತ್ತಿದ್ದು, ಹೊಸ ದರ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಿದ್ದತೆಯಲ್ಲಿವೆ.

ಹೊಸ ವಾಹನಗಳ ಬಿಡಿಭಾಗಗಳ ಬೆಲೆಯಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ 2021ರ ಜನವರಿ 1ರಿಂದಲೇ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಬೆಲೆ ಹೆಚ್ಚಳಕ್ಕಾಗಿ ನಿರ್ಧರಿಸಿದ್ದು, ಹ್ಯುಂಡೈ ಮೋಟಾರ್ಸ್ ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡುತ್ತಿರುವುದಾಗಿ ಅಧಿಕೃತವಾಗಿ ಹೇಳಿಕೊಂಡಿದೆ. ಆದರೆ ಹೊಸ ದರಪಟ್ಟಿಯನ್ನು ಜನವರಿ 1ರಂದೇ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಶೇ.2ರಿಂದ ಶೇ.3ರಷ್ಟು ಬೆಲೆ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಹ್ಯುಂಡೈ ಕಂಪನಿಯು ಬೆಲೆ ಹೆಚ್ಚಳ ನಿರ್ಧಾರಕ್ಕೂ ಮುನ್ನ ಮಾರುತಿ ಸುಜುಕಿ ಮತ್ತು ಕಿಯಾ ಮೋಟಾರ್ಸ್ ಸೇರಿದಂತೆ ಪ್ರಮುಖ ಕಾರು ಕಂಪನಿಗಳು ಬೆಲೆ ಹೆಚ್ಚಳ ಮಾಡುವುದಾಗಿ ಹೇಳಿಕೊಂಡಿದ್ದು, ಮಾರುಕಟ್ಟೆಯಲ್ಲಿರುವ ವಾಹನ ಮಾದರಿಗಳು ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

ಹೊಸ ವಾಹನಗಳ ಬೆಲೆಯು ವೆರಿಯೆಂಟ್ ಮತ್ತು ಮಾದರಿಗಳಿಗೆ ಅನುಗುಣವಾಗಿ ಹೆಚ್ಚಳ ಮಾಡಲಿರುವ ಆಟೋ ಕಂಪನಿಗಳು ಜನವರಿ 1ರಂದೇ ಹೊಸ ದರ ಪಟ್ಟಿಯು ಬಿಡುಗಡೆ ಮಾಡಲಿವೆ. ಕಳೆದ ಅಗಸ್ಟ್‌ನಲ್ಲಿ ವಿವಿಧ ವಾಹನ ಮಾದರಿಗಳ ಬೆಲೆ ಹೆಚ್ಚಳ ಮಾಡಿದ್ದ ಬಹುತೇಕ ಆಟೋ ಕಂಪನಿಗಳು ಇದೀಗ ಮತ್ತೆ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಹ್ಯುಂಡೈ ಕಾರುಗಳ ಬೆಲೆಯು ರೂ.10 ಸಾವಿರದಿಂದ ರೂ. 40 ಸಾವಿರ ತನಕ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಇನ್ನು ಕರೋನಾ ವೈರಸ್ ಪರಿಣಾಮ ಆರಂಭ ದಿನಗಳಲ್ಲಿ ಕುಸಿತ ಕಂಡಿದ್ದ ಹೊಸ ವಾಹನಗಳ ಮಾರಾಟವು ತದನಂತರದ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಹ್ಯುಂಡೈ ಕೂಡಾ ಹೊಸ ಕಾರು ಮಾರಾಟದಲ್ಲಿ ಭರ್ಜರಿಯಾಗಿ ಮುನ್ನಡೆ ಕಾಯ್ದುಕೊಳ್ಳುತ್ತಿದೆ. ಲಾಕ್‌ಡೌನ್ ನಂತರ ಏಪ್ರಿಲ್ ಮತ್ತು ಮೇ ತಿಂಗಳಿನ ಹೊಸ ವಾಹನ ಮಾರಾಟದಲ್ಲಿ ಸಾಕಷ್ಟು ಇಳಿಕೆಯಾಗಿದ್ದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಕಂಪನಿಗಳು ನಂತರದ ದಿನಗಳಲ್ಲಿ ಹಲವಾರು ಆಫರ್‌ಗಳನ್ನು ನೀಡುವ ಮೂಲಕ ವಾಹನ ಮಾರಾಟದಲ್ಲಿ ಹಂತ ಹಂತವಾಗಿ ಚೇತರಿಕೆ ಕಂಡಿದ್ದವು.

ಆದರೆ ಎರಡು ತಿಂಗಳ ಅವಧಿಯಲ್ಲಿ ಹೊಸ ವಾಹನಗಳ ಬೇಡಿಕೆಯು ಇದ್ದಕ್ಕಿಂತಕ್ಕೆ ದುಪ್ಪಟ್ಟು ಹೆಚ್ಚಳಗೊಂಡಿದ್ದು, ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿನ ಹ್ಯುಂಡೈ ಕಾರು ಮಾರಾಟವು ಕಳೆದ ವರ್ಷಕ್ಕಿಂತಲೂ ಸಾಕಷ್ಟು ಹೆಚ್ಚಳಗೊಂಡಿದೆ.

ಕಳೆದ 2019ರ ನವೆಂಬರ್ ಅವಧಿಯಲ್ಲಿನ ಕಾರು ಮಾರಾಟಕ್ಕಿಂತಲೂ ಈ ವರ್ಷದ ನವೆಂಬರ್ ಅವಧಿಯಲ್ಲಿ ಶೇ.9ರಷ್ಟು ಕಾರು ಮಾರಾ ಬೆಳವಣಿಗೆ ಸಾಧಿಸಿರುವ ಹ್ಯುಂಡೈ ಕಂಪನಿಯು ಒಟ್ಟು 48,800 ಯುನಿಟ್ ಮಾರಾಟ ಮಾಡಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕಳೆದ ವರ್ಷದ ನವೆಂಬರ್‌ನಲ್ಲಿ 44,600 ಯುನಿಟ್ ಮಾಡಿದ್ದ ಹ್ಯುಂಡೈ ಕಂಪನಿಯು ಈ ಬಾರಿ ಕರೋನಾ ವೈರಸ್‌ನಿಂದಾಗಿರುವ ಆರ್ಥಿಕ ಸಂಕಷ್ಟದಲ್ಲೂ ಶೇ. 9 ರಷ್ಟು ಹೆಚ್ಚುವರಿ ಕಾರು ಮಾರಾಟ ಮಾಡಿದ್ದು, ಹ್ಯುಂಡೈ ನಿರ್ಮಾಣದ ಬಹುತೇಕ ಕಾರುಗಳು ನಿರೀಕ್ಷೆಗೂ ಮೀರಿ ಬೇಡಿಕೆ ಪಡೆದುಕೊಂಡಿವೆ.

ಮತ್ತೊಂದು ವಿಶೇಷತೆ ಅಂದರೆ ಹ್ಯುಂಡೈ ಕಂಪನಿಯ ಕಾರು ಮಾರಾಟವು ಇದೇ ಮೊದಲ ಬಾರಿಗೆ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಈ ಹಿಂದೆ 52,000 ಯನಿಟ್ ಮಾರಾಟವೇ ಅತಿ ಹೆಚ್ಚು ಬೇಡಿಕೆಯಾಗಿತ್ತು. ಇದೀಗ ಅಕ್ಟೋಬರ್‌ನಲ್ಲಿ 56,605 ಮತ್ತು ನವೆಂಬರ್‌ನಲ್ಲಿ 48,800 ಯನಿಟ್ ಕಾರು ಮಾರಾಟ ಮಾಡುವ ಹೊಸ ನೀರಿಕ್ಷೆ ಹುಟ್ಟುಹಾಕಿದ್ದು, ವರ್ಷಾಂತ್ಯದ ಆಫರ್‌ಗಳಿಂದಾಗಿ ಹ್ಯುಂಡೈ ಕಾರುಗಳ ಬೇಡಿಕೆಯು ಇನ್ನಷ್ಟು ಹೆಚ್ಚಳವಾಗುವ ನೀರಿಕ್ಷೆಗಳಿವೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಡಿಸೆಂಬರ್ ಅವಧಿಯಲ್ಲಿನ ಕಾರು ಮಾರಾಟ ಸಂಖ್ಯೆಯು ತಿಂಗಳ ಕೊನೆಯಲ್ಲಿ ಪ್ರಕಟವಾಗಲಿದ್ದು, ಹ್ಯುಂಡೈ ಕಾರು ಮಾರಾಟದಲ್ಲಿ ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯೇ ಅಗ್ರಸ್ಥಾನದಲ್ಲಿದೆ.