ಕರೋನಾ ಭೀತಿ ನಡುವೆಯೂ ನ್ಯೂ ಜನರೇಷನ್ ಕ್ರೆಟಾ ಖರೀದಿಗಾಗಿ ಭರ್ಜರಿ ಬುಕ್ಕಿಂಗ್
ದೇಶಾದ್ಯಂತ ಕಳೆದ ಒಂದೂವರೆ ತಿಂಗಳಿನಿಂದ ಕರೋನಾ ವೈರಸ್ ಹೊಡೆದೊಡಿಸಲು ಲಾಕ್‌ಡೌನ್ ವಿಧಿಸಲಾಗಿದ್ದು, ಇದೀಗ ಮತ್ತೆ ಮೂರನೇ ಹಂತದ ಲಾಕ್‌ಡೌನ್ ಅನ್ನು ಕೂಡಾ ಜಾರಿಗೆ ತರಲಾಗಿದೆ. ಹೀಗಿರುವಾಗ ಬಹುತೇಕ ವಾಣಿಜ್ಯ ವ್ಯಾಪಾರಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಈ ನಡುವೆ ಹ್ಯುಂಡೈ ನಿರ್ಮಾಣದ ನ್ಯೂ ಜನರೇಷನ್ ಕಾರು ಖರೀದಿಗೆ ದಾಖಲಾಗಿರುವ ಬುಕ್ಕಿಂಗ್ ಪ್ರಮಾಣವು ಅಚ್ಚರಿಗೆ ಕಾರಣವಾಗಿದೆ.

ಹೌದು, ಸದ್ಯ ವಾಹನಗಳ ಮಾರಾಟ ಪ್ರಕ್ರಿಯೆಗೆ ಅವಕಾಶವಿಲ್ಲವಾದರೂ ಬುಕ್ಕಿಂಗ್ ಪ್ರಕ್ರಿಯೆಯನ್ನು ಮುಂದುವರಿಸಿರುವ ಆಟೋ ಕಂಪನಿಗಳು ಲಾಕ್‌ಡೌನ್ ಮುಗಿದ ನಂತರವಷ್ಟೇ ವಾಹನ ವಿತರಣೆ ಮಾಡುವುದಾಗಿ ಭರವಸೆ ನೀಡುತ್ತಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ಕೂಡಾ ತನ್ನ ಹೊಸ ತಲೆಮಾರಿನ ಕ್ರೆಟಾ ಎಸ್‌ಯುವಿ ಕಾರಿನ ಬುಕ್ಕಿಂಗ್ ಪ್ರಮಾಣದಲ್ಲಿ ಭಾರೀ ಬೇಡಿಕೆಪಡೆದುಕೊಂಡಿರುವುದು ಇದೀಗ ಬಹಿರಂಗವಾಗಿದೆ.

ಕಳೆದ ಮಾರ್ಚ್ 16ರಂದು ಬಿಡುಗಡೆಯಾಗಿದ್ದ ನ್ಯೂ ಜನರೇಷನ್ ಕ್ರೆಟಾ ಕಾರು ಇದುವರೆಗೆ 20 ಸಾವಿರ ಯುನಿಟ್ ಖರೀದಿಗಾಗಿ ಬುಕ್ಕಿಂಗ್ ಪಡೆದುಕೊಂಡಿದ್ದು, ಬುಕ್ಕಿಂಗ್ ಮಾಡಲಾದ ಗ್ರಾಹಕರಿಗೆ ಶೀಘ್ರದಲ್ಲೇ ಕಾರು ವಿತರಣೆ ಮಾಡುವುದಾಗಿ ಹೇಳಿಕೊಂಡಿದೆ.

ಹೊಸ ಕ್ರೆಟಾ ಕಾರಿನ ವಿತರಣೆ ಆರಂಭವಾದ ಎರಡನೇ ದಿನಕ್ಕೆ ಲಾಕ್‌ಡೌನ್ ವಿಧಿಸಲಾಗಿತ್ತು. ತದನಂತರ ಲಾಕ್‌ಡೌನ್ ವಿಸ್ತರಣೆ ಮಾಡುತ್ತಲೇ ಇರುವ ಕೇಂದ್ರ ಸರ್ಕಾರವು ವೈರಸ್ ಅನ್ನು ಹತೋಟಿ ತರುವ ಪ್ರಯತ್ನದಲ್ಲಿದ್ದು, ಕುಸಿದಿರುವ ಆರ್ಥಿಕ ವ್ಯವಹಾರಗಳು ಪುನಾರಂಭಿಸಲು ಮೇ 3ರಿಂದ ಕೆಲವು ವಿನಾಯ್ತಿಗಳನ್ನು ನೀಡಲಾಗುತ್ತಿದೆ.
MOST READ: ಲಾಕ್‌ಡೌನ್ ಎಫೆಕ್ಟ್- ವಿನಾಯ್ತಿ ಸಿಕ್ಕರೂ ವಾಹನ ಉತ್ಪಾದನೆಗೆ ಮುಂದಾಗದ ಆಟೋ ಕಂಪನಿಗಳು

ಆದರೆ ಹೊಸ ವಿನಾಯ್ತಿಯಲ್ಲೂ ಆಟೋ ಕಂಪನಿಗಳಿಗೆ ವಾಹನ ಮಾರಾಟ ಮಾಡಲು ಅವಕಾಶ ಇಲ್ಲದಿರುವುದು ಆಟೋ ಕಂಪನಿಗಳು ಮತ್ತಷ್ಟು ಸಿಲುಕುವಂತೆ ಮಾಡಿದ್ದು, ಈ ಹಿನ್ನಲೆಯಲ್ಲಿ ಅಗತ್ಯ ಸುರಕ್ಷಾ ಕ್ರಮಗಳೊಂದಿಗೆ ಆನ್‌ಲೈನ್ ಕಾರು ಮಾರಾಟ ಮಾಡಲು ಆಟೋ ಕಂಪನಿಗಳು ಸಿದ್ದತೆ ನಡೆಸಿವೆ.

ಇನ್ನು ಹೊಸ ಕ್ರೆಟಾ ಕಾರು ಗ್ರಾಹಕರ ಬೇಡಿಕೆಯೆಂತೆ ಒಟ್ಟು 5 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.
MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಹೊಸ ಕ್ರೆಟಾ ಕಾರು ದೆಹಲಿ ಎಕ್ಸ್‌ಶೋರೂಂ ಆರಂಭಿಕವಾಗಿ ರೂ. 9.99 ಲಕ್ಷ ಬೆಲೆ ಪಡೆದುಕೊಂಡಿದ್ದು, ಟಾಪ್ ಎಂಡ್ ಮಾದರಿಯು ರೂ. 17.20 ಲಕ್ಷ ಬೆಲೆ ಪಡೆದುಕೊಳ್ಳುವ ಮೂಲಕ ಕಿಯಾ ಸೆಲ್ಟೊಸ್‌ಗೆ ಸರಿಸಮನಾಗಿ ಮಾರುಕಟ್ಟೆ ಪ್ರವೇಶಿಸಿದೆ.

ಹೊಸ ಎಂಜಿನ್ ಆಯ್ಕೆಯನ್ನು ಸಹೋದರ ಸಂಸ್ಥೆಯಾದ ಕಿಯಾ ಮೋಟಾರ್ಸ್‌ನಿಂದ ಎರವಲು ಪಡೆಯಲಾಗಿದ್ದು, ಸೆಲ್ಟೊಸ್ ಕಾರಿನಂತೆಯೇ ಕ್ರೆಟಾ ಬಲಿಷ್ಠ ಎಂಜಿನ್ ಹೊಂದಿರುವ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಯಾಗಿದೆ.
MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಇದರಿಂದ ಕ್ರೆಟಾ ಆವೃತ್ತಿಯಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 1.6-ಲೀಟರ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಅನ್ನು ತೆಗೆದುಹಾಕಲಾಗಿದ್ದು, ಸಾಮಾನ್ಯ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಖರೀದಿಸಬಹುದಾಗಿದೆ.

1.5-ಲೀಟರ್ ಪೆಟ್ರೋಲ್ ಆವೃತ್ತಿಯು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.5-ಲೀಟರ್ ಡೀಸೆಲ್ ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಇದರಲ್ಲಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯು 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ನೊಂದಿಗೆ 140-ಬಿಎಚ್‌ಪಿ ಉತ್ಪಾದನೆ ಮಾಡಲಿದ್ದು, ಕ್ರೆಟಾ ಆವೃತ್ತಿಯಲ್ಲೇ ಇದು ಹೈ ಎಂಡ್ ಆವೃತ್ತಿಯಾಗಿ ಮಾರಾಟಗೊಳ್ಳಲಿದೆ. ಹಾಗೆಯೇ ಹೊಸ ಕಾರಿನಲ್ಲಿ ಹಲವಾರು ಐಷಾರಾಮಿ ಫೀಚರ್ಸ್‌ಗಳ ಜೊತೆಗೆ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.


Click it and Unblock the Notifications