ಹೊಸ ಏರ್ ಕಂಡಿಷನ್ ಟೆಕ್ನಾಲಜಿ ಹೊಂದಲಿವೆ ಹ್ಯುಂಡೈ ಕಾರುಗಳು

ಹ್ಯುಂಡೈ ತನ್ನ ಕಾರುಗಳಲ್ಲಿ ತಾಜಾ ಗಾಳಿಗಾಗಿ ಏರ್ ಕಂಡಿಷನ್ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸುತ್ತಿದೆ. ಈ ಟೆಕ್ನಾಲಜಿ ಕಾರಿನೊಳಗೆ ತೇವಾಂಶವಿಲ್ಲದ ತಾಜಾ ಗಾಳಿಯನ್ನು ಸೃಷ್ಟಿಸುತ್ತದೆ. ಹ್ಯುಂಡೈ ಕಂಪನಿಯ ಈ ಟೆಕ್ನಾಲಜಿಯು ಹುಂಡೈನ ಹೊಸ ಕಾರುಗಳಲ್ಲಿ ಲಭ್ಯವಿರಲಿದೆ.

ಹೊಸ ಏರ್ ಕಂಡಿಷನ್ ಟೆಕ್ನಾಲಜಿ ಹೊಂದಲಿವೆ ಹ್ಯುಂಡೈ ಕಾರುಗಳು

ಈ ಟೆಕ್ನಾಲಜಿಯ ಮೂಲಕ ಕಾರಿನ ಏರ್ ಕಂಡಿಷನ್ ಪೈಪ್‌ನಲ್ಲಿ ಏರ್ ಡ್ರೈಯರ್ ಇಟ್ಟು ಪೈಪ್‌ನಲ್ಲಿರುವ ತೇವಾಂಶ ಹಾಗೂ ಧೂಳನ್ನು ಸ್ವಚ್ವಗೊಳಿಸಲಾಗುತ್ತದೆ. ಕಾರಿನ ಎಂಜಿನ್ ಆಫ್ ಆದ ತಕ್ಷಣ ಏರ್ ಡ್ರೈಯರ್ ಆಟೋಮ್ಯಾಟಿಕ್ ಆಗಿ ಆನ್ ಆಗುತ್ತದೆ. 10 ನಿಮಿಷಗಳಲ್ಲಿ ಪೈಪ್‌ನಲ್ಲಿ ಸಂಗ್ರಹವಾಗಿರುವ ತೇವಾಂಶವನ್ನು ಹೀರಿಕೊಳ್ಳುತ್ತದೆ.

ಹೊಸ ಏರ್ ಕಂಡಿಷನ್ ಟೆಕ್ನಾಲಜಿ ಹೊಂದಲಿವೆ ಹ್ಯುಂಡೈ ಕಾರುಗಳು

ಈ ಪ್ರಕ್ರಿಯೆಯಲ್ಲಿ, ಡ್ರೈಯರ್ ಹೊರಗಿನಿಂದ ತಾಜಾ ಗಾಳಿಯನ್ನು ಸೆಳೆದು, ಕಾರಿನೊಳಗೆ ಬಿಡುತ್ತದೆ. ಈ ಟೆಕ್ನಾಲಜಿ ಬ್ಯಾಟರಿ ಚಾಲಿತ ಸೆನ್ಸಾರ್ ಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಟೆಕ್ನಾಲಜಿ ಕಾರಿನೊಳಗಿರುವ ಗಾಳಿಯನ್ನು ಫಿಲ್ಟರ್ ಮಾಡುತ್ತದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಹೊಸ ಏರ್ ಕಂಡಿಷನ್ ಟೆಕ್ನಾಲಜಿ ಹೊಂದಲಿವೆ ಹ್ಯುಂಡೈ ಕಾರುಗಳು

ಹ್ಯುಂಡೈ ಕಂಪನಿಯು ಇತ್ತೀಚೆಗಷ್ಟೇ ಟಕ್ಸನ್ ಫೇಸ್‌ಲಿಫ್ಟ್ ಕಾರ್ ಅನ್ನು ಬಿಡುಗಡೆಗೊಳಿಸಿತ್ತು. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.23.30 ಲಕ್ಷಗಳಾಗಿದೆ. ಹ್ಯುಂಡೈ ಟಕ್ಸನ್ ಫೇಸ್‌ಲಿಫ್ಟ್ ಕಾರು ಇಂಟಿರಿಯರ್ ಹಾಗೂ ಎಕ್ಸ್ ಟಿರಿಯರ್ ಅಪ್​ಡೇಟ್ ನೊಂದಿಗೆ ಹಲವಾರು ಹೊಸ ಫೀಚರ್ ಗಳನ್ನು ಹೊಂದಿದೆ.

ಹೊಸ ಏರ್ ಕಂಡಿಷನ್ ಟೆಕ್ನಾಲಜಿ ಹೊಂದಲಿವೆ ಹ್ಯುಂಡೈ ಕಾರುಗಳು

ಹ್ಯುಂಡೈ ಕಂಪನಿಯು 2020-21ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ. ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಲಾಭವು 75%ನಷ್ಟು ಕಡಿಮೆಯಾಗಿದೆ ಎಂದು ಕಂಪನಿಯು ತನ್ನ ವರದಿಯಲ್ಲಿ ತಿಳಿಸಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಹೊಸ ಏರ್ ಕಂಡಿಷನ್ ಟೆಕ್ನಾಲಜಿ ಹೊಂದಲಿವೆ ಹ್ಯುಂಡೈ ಕಾರುಗಳು

ಈ ಕುಸಿತವು ಕಳೆದ 7 ವರ್ಷಗಳಲ್ಲಿ ಅತಿ ಹೆಚ್ಚು ಎಂದು ಕಂಪನಿ ಹೇಳಿದೆ. ದಕ್ಷಿಣ ಕೊರಿಯಾದ ಮಾರುಕಟ್ಟೆಯಲ್ಲಿಯೂ ಸಹ ಕಾರುಗಳ ಮಾರಾಟವೂ ಕುಸಿದಿದೆ ಎಂದು ಕಂಪನಿ ಹೇಳಿದೆ. ಕಂಪನಿಯ ಹೈ ಎಂಡ್ ಹಾಗೂ ಪ್ರೀಮಿಯಂ ಕಾರುಗಳ ಬೇಡಿಕೆಯೂ ತೀವ್ರವಾಗಿ ಕುಸಿದಿದೆ ಎಂದು ಮಾರಾಟ ವರದಿ ಬಹಿರಂಗಪಡಿಸಿದೆ.

ಹೊಸ ಏರ್ ಕಂಡಿಷನ್ ಟೆಕ್ನಾಲಜಿ ಹೊಂದಲಿವೆ ಹ್ಯುಂಡೈ ಕಾರುಗಳು

ಕಂಪನಿಯ ಜಾಗತಿಕ ರಿಟೇಲ್ ಮಾರಾಟವು ಎರಡನೇ ತ್ರೈಮಾಸಿಕದಲ್ಲಿ 33%ನಷ್ಟು ಕುಸಿದಿದೆ. ಇದೇ ವೇಳೆ ಹ್ಯುಂಡೈ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 2 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. ಜೂನ್ ತಿಂಗಳಿಗೆ ಹೋಲಿಸಿದರೆ ಈ ಪ್ರಮಾಣವು 12%ನಷ್ಟು ಹೆಚ್ಚಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಹೊಸ ಏರ್ ಕಂಡಿಷನ್ ಟೆಕ್ನಾಲಜಿ ಹೊಂದಲಿವೆ ಹ್ಯುಂಡೈ ಕಾರುಗಳು

ಹ್ಯುಂಡೈ ಕಂಪನಿಯು ತನ್ನ ವೆನ್ಯೂ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಐಎಂಟಿ (ಇಂಟೆಲಿಜೆಂಟ್ ಮ್ಯಾನುಯಲ್ ಟ್ರಾನ್ಸ್‌ಮಿಷನ್) ಗೇರ್‌ಬಾಕ್ಸ್‌ನೊಂದಿಗೆ ಬಿಡುಗಡೆಗೊಳಿಸಿದೆ. ಹೊಸ ವೆನ್ಯೂ ಕಾಂಪ್ಯಾಕ್ಟ್ ಎಸ್‌ಯುವಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.9.99 ಲಕ್ಷಗಳಾಗಿದೆ.

ಹೊಸ ಏರ್ ಕಂಡಿಷನ್ ಟೆಕ್ನಾಲಜಿ ಹೊಂದಲಿವೆ ಹ್ಯುಂಡೈ ಕಾರುಗಳು

ಹೊಸ ಹ್ಯುಂಡೈ ವೆನ್ಯೂ ಐಎಂಟಿ ಎಸ್‌ಯುವಿಯಲ್ಲಿ 1.0-ಲೀಟರಿನ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 118 ಬಿಹೆಚ್‌ಪಿ ಪವರ್ ಹಾಗೂ 172 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಜೊತೆಗೆ ಕಂಪನಿಯು ವೆನ್ಯೂವಿನ ಸ್ಪೋರ್ಟ್ ಮಾದರಿಯನ್ನು ಸಹ ಬಿಡುಗಡೆಗೊಳಿಸಿದೆ.

Most Read Articles

Kannada
English summary
Hyundai developing new air conditioning technology for its upcoming cars. Read in Kannada.
Story first published: Tuesday, July 28, 2020, 12:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X