ಕ್ರ್ಯಾಶ್ ಟೆಸ್ಟ್‌ನಲ್ಲಿ 2 ಸ್ಟಾರ್ ರೇಟಿಂಗ್ ಪಡೆದ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್

ಹ್ಯುಂಡೈ ಕಂಪನಿಯ ಗ್ರ್ಯಾಂಡ್ ಐ10 ನಿಯೋಸ್ ಹ್ಯಾಚ್‌ಬ್ಯಾಕ್ ಇತ್ತೀಚೆಗೆ ಕ್ರ್ಯಾಶ್ ಟೆಸ್ಟ್‌ನಲ್ಲಿ ಒಳಗಾಗಿದೆ. ಹ್ಯುಂಡೈ ಕಂಪನಿಯ ಸರಣಿಯಲ್ಲಿ ಗ್ರ್ಯಾಂಡ್ ಐ10 ನಿಯೋಸ್ ಹ್ಯಾಚ್‌ಬ್ಯಾಕ್ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 2 ಸ್ಟಾರ್ ರೇಟಿಂಗ್ ಪಡೆದ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್

ಗ್ಲೋಬಲ್ ಎನ್‌ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟ್‌ನಲ್ಲಿ ವಯಸ್ಕರ ಮತ್ತು ಮಕ್ಕಳ ರಕ್ಷಣೆಗೆ ಎರಡು-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳ ಪ್ರಕಾರ, ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ವಯಸ್ಕರ ರಕ್ಷಣೆಗಾಗಿ 17 ಪಾಯಿಂಟ್‌ಗಳಲ್ಲಿ 7.05 ಅಂಕಗಳನ್ನು ಗಳಿಸಿದೆ. ಇನ್ನು ಈ ಹ್ಯಾಚ್‌ಬ್ಯಾಕ್ ಮಕ್ಕಳ ರಕ್ಷಣೆಗಾಗಿ 49 ಪಾಯಿಂಟ್‌ಗಳಲ್ಲಿ 15 ಅನ್ನು ಪಡೆದುಕೊಂಡಿದೆ

ಕ್ರ್ಯಾಶ್ ಟೆಸ್ಟ್‌ನಲ್ಲಿ 2 ಸ್ಟಾರ್ ರೇಟಿಂಗ್ ಪಡೆದ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ, ಈ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಹ್ಯಾಚ್‌ಬ್ಯಾಕ್ ಅನ್ನು ಗಂಟೆಗೆ 64 ಕಿ.ಮೀ ವೇಗದಲ್ಲಿ ಮುಂಭಾಗದ ಆಫ್‌ಸೆಟ್ ಪರೀಕ್ಷೆಗೆ ಒಳಪಡಿಸಲಾಯಿತು. ಇನ್ನು ಈ ಕಾರು ಪ್ರಯಾಣಿಕರ ಸುರಕ್ಷತೆಗಾಗಿ ಒಟ್ಟಾರೆ ಎರಡು-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.

MOST READ: ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಕ್ರ್ಯಾಶ್ ಟೆಸ್ಟ್‌ನಲ್ಲಿ 2 ಸ್ಟಾರ್ ರೇಟಿಂಗ್ ಪಡೆದ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್

ಫಲಿತಾಂಶ ನೋಡಿದಂತೆ, ಹ್ಯುಂಡೈ ಗ್ರ್ಯಾಂಡ್ ಐ10 ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಮತ್ತು ಸೀಟ್‌ಬೆಲ್ಟ್ ಪ್ರಿಟೆನ್ಷನರ್‌ಗಳನ್ನು ಒಳಗೊಂಡಿದೆ. ಇದು ಸ್ವಲ್ಪ ಮಟ್ಟದ ರಕ್ಷಣೆಯನ್ನು ನೀಡುತ್ತದೆ. ಆದರೆ ತಲೆ ಮತ್ತು ಕತ್ತಿನ ರಕ್ಷಣೆ ಉತ್ತಮವಾಗಿದ್ದರೆ, ಎದೆ ಭಾಗದ ರಕ್ಷಣೆಯು ದುರ್ಬಲ ವಾಗಿದೆ ಎಂದು ತಿಳಿದುಬಂದಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 2 ಸ್ಟಾರ್ ರೇಟಿಂಗ್ ಪಡೆದ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್

ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಬಾಡಿ ಶೆಲ್ ಮತ್ತು ಫ್ರಂಟ್ ಫುಟ್‌ವೆಲ್ ಪ್ರದೇಶವನ್ನು ಗ್ಲೋಬಲ್ ಎನ್‌ಸಿಎಪಿ ಅಸ್ಥಿರವೆಂದು ಪರಿಗಣಿಸಿದೆ. ಡಮ್ಮಿಗಳನ್ನು ಇರಿಸಿ ನಡೆಸಿದ ಕ್ರ್ಯಾಶ್ ಟೆಸ್ಟ್ ವೇಳೆ ದೇಹದ ಕೆಳಭಾಗಕ್ಕೆ ಪೆಟ್ಟು ಬೀಳುತ್ತದೆ ಎಂಬ ಮಾಹಿತಿ ಬಹಿರಂಗವಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಕ್ರ್ಯಾಶ್ ಟೆಸ್ಟ್‌ನಲ್ಲಿ 2 ಸ್ಟಾರ್ ರೇಟಿಂಗ್ ಪಡೆದ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್

ಅಪಘಾತದ ಸಮಯದಲ್ಲಿ ಅತಿಯಾದ ಫಾರ್ವರ್ಡ್ ನಿಂದ 3 ವರ್ಷದ ಮಗುವಿನ ಡಮ್ಮಿ ತಲೆಗೆ ಗಂಭೀರ ಗಾಯಗಳಾಗಿದ್ದು, ತಲೆಗೆ ಕೇವಲ ಸೀಮಿತ ರಕ್ಷಣೆ ನೀಡಲಾಗಿದೆ ಎಂದು ಫಲಿತಾಂಶವು ತಿಳಿಸಿದೆ. ಆದರೆ 18 ತಿಂಗಳ ಮಕ್ಕಳ ಡಮ್ಮಿ ಉತ್ತಮ ರಕ್ಷಣೆ ಹೊಂದಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 2 ಸ್ಟಾರ್ ರೇಟಿಂಗ್ ಪಡೆದ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್

ಗ್ಲೋಬಲ್ ಎನ್‌ಸಿಎಪಿ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಎಲ್ಲಾ ಪ್ರಯಾಣಿಕರಿಗೆ ಮೂರು-ಪಾಯಿಂಟ್ ಸೀಟ್‌ಬೆಲ್ಟ್ ನೀಡುವುದಿಲ್ಲ ಎಂದು ಹೇಳಿದೆ. ಅಲ್ಲದೇ ಕಾರು ತಯಾರಕರು ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸಬೇಕು ಎಂದು ಹೇಳಿದರು.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಇನ್ನು ಹ್ಯುಂಡೈ ಹಬ್ಬದ ಸೀಸನ್‌ನಲ್ಲಿ ಮಾರಾಟವನ್ನು ಹೆಚ್ಚಿಸಲು ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಇದು ಮ್ಯಾಗ್ನಾ ವೆರಿಯೆಂಟ್ ಅನ್ನು ಆಧರಿಸಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 2 ಸ್ಟಾರ್ ರೇಟಿಂಗ್ ಪಡೆದ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್

ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್ ಗಳ ಒಂದಾಗಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಕೊರಿಯನ್ ಕಾರು ತಯಾರಕರಿಗೆ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ.

Most Read Articles

Kannada
English summary
Hyundai Grand i10 NIOS Secures Two-Star Rating At Global NCAP Crash Test. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X