ಹೊಸ ಕಾರು ಮಾರಾಟದಲ್ಲಿ ಚೇತರಿಕೆ- ಉತ್ಪಾದನೆ ಹೆಚ್ಚಿಸಿದ ಹ್ಯುಂಡೈ ಇಂಡಿಯಾ

ಲಾಕ್‌ಡೌನ್ ಸಡಿಲಿಕೆ ನಂತರ ಬಹುತೇಕ ವಾಣಿಜ್ಯ ವ್ಯಾಪಾರಗಳು ಚೇತರಿಕೆ ಕಾಣುತ್ತಿದ್ದು, ಭಾರೀ ನಷ್ಟ ಅನುಭವಿಸಿರುವ ಆಟೋ ಉದ್ಯಮ ಕೂಡಾ ತುಸು ಸುಧಾರಣೆ ಕಂಡಿದೆ. ಇದರಿಂದಾಗಿ ಸಂಪೂರ್ಣವಾಗಿ ನೆಲಕಚ್ಚಿದ್ದ ವಾಹನ ಉತ್ಪಾದನಾ ಪ್ರಮಾಣವು ಕೂಡಾ ಏರಿಕೆಯಾಗುತ್ತಿದೆ.

ಹೊಸ ಕಾರು ಮಾರಾಟದಲ್ಲಿ ಚೇತರಿಕೆ- ಉತ್ಪಾದನೆ ಹೆಚ್ಚಿಸಿದ ಹ್ಯುಂಡೈ

ಹ್ಯುಂಡೈ ಇಂಡಿಯಾ ಕಂಪನಿಯ ಕಳೆದ ತಿಂಗಳು ಮೇ 4ರಂದು ಲಾಕ್‌ಡೌನ್ ಸಡಿಲಿಕೆ ನಂತರ 13 ಸಾವಿರ ಕಾರುಗಳನ್ನು ಉತ್ಪಾದನೆ ಮಾಡಿದ್ದು, ಇದೀಗ ಗ್ರಾಹಕರ ಬೇಡಿಕೆ ಹೆಚ್ಚಳದಿಂದಾಗಿ ದಿನಂಪ್ರತಿ 1 ಸಾವಿರ ಕಾರು ಉತ್ಪಾದನೆಯ ಗುರಿಹಾಕಿಕೊಂಡಿದೆ. ನ್ಯೂ ಜನರೇಷನ್ ಕ್ರೆಟಾ, ವೆನ್ಯೂ ಮತ್ತು ವೆರ್ನಾ ಫೇಸ್‌ಲಿಫ್ಟ್ ಕಾರುಗಳಿಗೆ ಹೆಚ್ಚು ಬೇಡಿಕೆ ಹರಿದುಬರುತ್ತಿದ್ದು, ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ಉತ್ಪಾದನಾ ಪ್ರಮಾಣವನ್ನು ದ್ವಿಗುಣಗೊಳಿಸಿದೆ.

ಹೊಸ ಕಾರು ಮಾರಾಟದಲ್ಲಿ ಚೇತರಿಕೆ- ಉತ್ಪಾದನೆ ಹೆಚ್ಚಿಸಿದ ಹ್ಯುಂಡೈ

ಇನ್ನು ಕರೋನಾ ಮಾಹಾಮಾರಿ ಅಟ್ಟಹಾಸವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಆಟೋ ಉದ್ಯಮದಲ್ಲಿ ಸುರಕ್ಷಿತ ವ್ಯಾಪಾರ-ವಹಿವಾಟು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ.

ಹೊಸ ಕಾರು ಮಾರಾಟದಲ್ಲಿ ಚೇತರಿಕೆ- ಉತ್ಪಾದನೆ ಹೆಚ್ಚಿಸಿದ ಹ್ಯುಂಡೈ

ಇದರಿಂದ ಬಹುತೇಕ ಆಟೋ ಕಂಪನಿಗಳು ಆನ್‌ಲೈನ್ ವಹಿವಾಟಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಗ್ರಾಹಕರು ಕೂಡಾ ವೈರಸ್ ಭಯದಿಂದ ಆನ್‌ಲೈನ್ ಪ್ಲ್ಯಾಟ್‌‌‌ಫಾರ್ಮ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಹೊಸ ಕಾರು ಮಾರಾಟದಲ್ಲಿ ಚೇತರಿಕೆ- ಉತ್ಪಾದನೆ ಹೆಚ್ಚಿಸಿದ ಹ್ಯುಂಡೈ

ಲಾಕ್‌ಡೌನ್ ವಿನಾಯ್ತಿ ನಂತರ ವಾಹನ ಮಾರಾಟದಲ್ಲಿ ಹಲವು ಹೊಸ ಬದಲಾಣೆಗಳನ್ನು ಪರಿಚಯಿಸಿರುವ ಆಟೋ ಕಂಪನಿಗಳು ಸುರಕ್ಷಿತ ವ್ಯಾಪಾರ-ವಹಿವಾಟು ನಡೆಸುತ್ತಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲೂ ಹೊಸ ಕಾರುಗಳ ಮಾರಾಟ ಪ್ರಮಾಣದಲ್ಲಿ ತುಸು ಚೇತರಿಕೆ ಕಂಡುಬರುತ್ತಿದೆ.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಹೊಸ ಕಾರು ಮಾರಾಟದಲ್ಲಿ ಚೇತರಿಕೆ- ಉತ್ಪಾದನೆ ಹೆಚ್ಚಿಸಿದ ಹ್ಯುಂಡೈ

ಕಾರು ಮಾರಾಟದಲ್ಲಿ ಎರಡನೇ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿರುವ ಹ್ಯುಂಡೈ ಕೂಡಾ ಇದೀಗ ಕಾರುಗಳ ಮಾರಾಟದಲ್ಲಿ ಗಮನಸೆಳೆಯುತ್ತಿದ್ದು, ಮೇ 4 ರಿಂದ ಇದುವರೆಗೆ ಸುಮಾರು 18 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಕ್ಲಿಕ್ ಟು ಬೈ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಪಡೆದುಕೊಂಡಿರುವುದು ಆನ್‌ಲೈನ್ ಕಾರು ಮಾರಾಟಕ್ಕೆ ಗ್ರಾಹಕರ ಹೆಚ್ಚು ಆದ್ಯತೆ ನೀಡುತ್ತಿರುವುದು ಕಂಡುಬಂದಿದೆ.

ಹೊಸ ಕಾರು ಮಾರಾಟದಲ್ಲಿ ಚೇತರಿಕೆ- ಉತ್ಪಾದನೆ ಹೆಚ್ಚಿಸಿದ ಹ್ಯುಂಡೈ

ಮೇ 4ರಂದು ಘೋಷಣೆಯಾದ ಲಾಕ್‌ಡೌನ್ ವಿನಾಯ್ತಿ ನಂತರ ಮೇ 31ರ ತನಕ ಬರೋಬ್ಬರಿ 12,583 ಕಾರುಗಳನ್ನು ಮಾರಾಟ ಮಾಡಿರುವ ಹ್ಯುಂಡೈ ಕಂಪನಿಯು ದೇಶಿಯ ಮಾರುಕಟ್ಟೆ ಮಾತ್ರವಲ್ಲದೇ ವಿದೇಶಿ ಮಾರುಕಟ್ಟೆಗೂ ರಫ್ತು ಮಾಡುವಲ್ಲಿ ಮುಂಚೂಣಿಯಲ್ಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹೊಸ ಕಾರು ಮಾರಾಟದಲ್ಲಿ ಚೇತರಿಕೆ- ಉತ್ಪಾದನೆ ಹೆಚ್ಚಿಸಿದ ಹ್ಯುಂಡೈ

12,583 ಯುನಿಟ್ನಲ್ಲಿ 6,883 ಯುನಿಟ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಲ್ಲಿ 5,700 ಯುನಿಟ್ ಅನ್ನು ವಿದೇಶಿ ಮಾರುಕಟ್ಟೆಗೂ ರಫ್ತುಗೊಳಿಸಿದ್ದು, ಒಟ್ಟು ಕಾರುಗಳ ಮಾರಾಟದಲ್ಲಿ ನ್ಯೂ ಜನರೇಷನ್ ಕ್ರೆಟಾ ನಂ.1 ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಹೊಸ ಕಾರು ಮಾರಾಟದಲ್ಲಿ ಚೇತರಿಕೆ- ಉತ್ಪಾದನೆ ಹೆಚ್ಚಿಸಿದ ಹ್ಯುಂಡೈ

ಮೇ ಅವಧಿಯಲ್ಲಿ 3,212 ಯುನಿಟ್ ಮಾರಾಟದೊಂದಿಗೆ ನಂ.1 ಕಾರು ಮಾದರಿಯಾಗಿ ಹೊರಹೊಮ್ಮಿರುವ ನ್ಯೂ ಜನರೇಷನ್ ಕ್ರೆಟಾ ಕಾರು ಟಾಪ್ 10 ಕಾರು ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಮಾರುತಿ ಸುಜುಕಿ ಕಾರುಗಳನ್ನು ಹಿಂದಿಕ್ಕಿ ಮೇ ಅವಧಿಯ ಬೆಸ್ಟ್ ಸೆಲ್ಲಿಂಗ್ ಕಾರು ಮಾದರಿಯಾಗಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಹೊಸ ಕಾರು ಮಾರಾಟದಲ್ಲಿ ಚೇತರಿಕೆ- ಉತ್ಪಾದನೆ ಹೆಚ್ಚಿಸಿದ ಹ್ಯುಂಡೈ

ಹಾಗೆಯೇ ವೆನ್ಯೂ, ವೆರ್ನಾ ಫೇಸ್‌ಲಿಫ್ಟ್, ಗ್ರಾಂಡ್ ಐ10 ನಿಯೋಸ್ ಕಾರುಗಳು ಸಹ ಹ್ಯುಂಡೈ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದು, ಜೂನ್ ಅವಧಿಯ ಕಾರು ಮಾರಾಟ ಪಟ್ಟಿಯಲ್ಲಿ ಮತ್ತಷ್ಟು ಬೆಳವಣಿಗೆ ಸಾಧಿಸುವ ಯೋಜನೆಯಲ್ಲಿದೆ.

Article Published On: Wednesday, June 10, 2020, 19:24 [IST]
English summary
Hyundai Increases Production Numbers In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+