ಕರೋನಾ ಭೀತಿ: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಹ್ಯುಂಡೈ ಮೋಟಾರ್

ಕರೋನಾ ವೈರಸ್ ಹರಡುವುದನ್ನ ಪರಿಣಾಮಕಾರಿ ತಡೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆಕೊಟ್ಟಿದ್ದ ಜನತಾ ಕರ್ಫ್ಯೂ‌ನಿಂದ ನಿನ್ನೆ ಇಡಿ ದೇಶವೇ ಸ್ತಬ್ಧವಾಗಿತ್ತು. ಆದರೂ ಮುಂಜಾಗ್ರತವಾಗಿ ದೇಶದ ಕೆಲವು ಸೋಂಕು ಪೀಡಿತ ಕೆಲವು ಕಠಿಣ ಕ್ರಮಗಳನ್ನು ಮುಂದುವರಿಸಲಾಗಿದ್ದು, ಮುಂದಿನ ಹತ್ತು ದಿನಗಳ ಕಾಲ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲು ತೀರ್ಮಾನಿಸಲಾಗಿದೆ.

ಕರೋನಾ ಭೀತಿ: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಹ್ಯುಂಡೈ ಮೋಟಾರ್

ಲಾಕ್ ಡೌನ್ ಹಿನ್ನಲೆಯಲ್ಲಿ ಕೈಗಾರಿಕಾ ವಲಯವು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಆಟೋ ಉದ್ಯಮವು ಸಹ ಇದಕ್ಕೆ ಹೊರತಾಗಿಲ್ಲ. ವೈರಸ್ ಹರಡದಂತೆ ಎಲ್ಲಾ ಮುಂಜಾಗ್ರತಗಳನ್ನು ಕೈಗೊಳ್ಳುತ್ತಿರುವ ವಾಹನ ಉತ್ಪಾದನಾ ಸಂಸ್ಥೆಗಳು ಸರ್ಕಾರ ಆದೇಶಕ್ಕೆ ತಲೆಬಾಗಿದ್ದು, ಮುಂದಿನ ಆದೇಶದ ತನಕ ಯಾವುದೇ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳದಿರಲು ತೀರ್ಮಾನಿಸಿವೆ. ಇದರಲ್ಲಿ ಹ್ಯುಂಡೈ ಕೂಡಾ ಚೆನ್ನೈ ಹೊರವಲಯದಲ್ಲಿರುವ ತನ್ನ ಕಾರು ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿದ್ದು, ಮುಂದಿನ ಕೆಲವು ದಿನಗಳ ತನಕ ಹೊಸ ಕಾರು ಮಾರಾಟದಲ್ಲಿ ಗಣನೀಯ ಇಳಿಕೆ ಕಂಡುಬರಲಿದೆ.

ಕರೋನಾ ಭೀತಿ: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಹ್ಯುಂಡೈ ಮೋಟಾರ್

ದಕ್ಷಿಣ ಕೊರಿಯಾದ ಹ್ಯುಂಡೈ ಕಂಪನಿಯು ಚೀನಾದಲ್ಲೂ ಕೂಡಾ ಈಗಾಗಲೇ ಹೊಸ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು, ಇದೀಗ ಭಾರತದಲ್ಲೂ ವೈರಸ್ ಹರಡುವಿಕೆ ಹೆಚ್ಚಿದಂತೆ ಮುನ್ನಚ್ಚೆರಿಕೆ ಕ್ರಮವಾಗಿ ಕಾರು ಉತ್ಪಾದನಾ ಘಟಕವನ್ನು ಬಂದ್ ಮಾಡಿದೆ.

ಕರೋನಾ ಭೀತಿ: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಹ್ಯುಂಡೈ ಮೋಟಾರ್

ಮಾರ್ಚ್ 31ರ ತನಕವು ಯಾವುದೇ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳದಿರಲು ನಿರ್ಧರಿಸಲಾಗಿದ್ದು, ಮಾರ್ಚ್ 31ರ ನಂತರದ ಪರಿಸ್ಥಿತಿಗೆ ಅನುಗುಣವಾಗಿ ಉತ್ಪಾದನಾ ಚಟುವಟಿಕೆ ಮುಂದುವರಿಸಬೇಕೆ? ಅಥವಾ ಬೇಡ ಎಂಬುವುದನ್ನು ನಿರ್ಧರಿಸಲಿದೆ.

ಕರೋನಾ ಭೀತಿ: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಹ್ಯುಂಡೈ ಮೋಟಾರ್

ಇದಲ್ಲದೇ ಟಾಟಾ ಮೋಟಾರ್ಸ್ ಕೂಡಾ ಪುಣೆಯಲ್ಲಿರುವ ತನ್ನ ಕಾರು ಉತ್ಪಾದನಾ ಘಟಕದಲ್ಲಿನ ಉತ್ಪಾದನಾ ಪ್ರಕ್ರಿಯೆಯನ್ನು ಗಣನೀಯವಾಗಿ ಇಳಿಕೆ ಮಾಡಿದ್ದು, ಕಾರು ಮಾರಾಟ ಸಮಯದಲ್ಲೂ ಸಹ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತಿದೆ. ಕಾರು ಮಾರಾಟ ವೇಳೆ ಸೋಂಕಿನಿಂದ ರಕ್ಷಿಸಿಕೊಳ್ಳಲು ಹಲವಾರು ಮುಂಜಾಗ್ರತ ಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಹೊಸ ಕಾರುಗಳ ಕುರಿತಾದ ಹೊರಭಾಗದ ಪ್ರಚಾರ, ಗ್ರಾಹಕರ ಜೊತೆಗಿನ ಮುಖಾಮುಖಿ ಚೆರ್ಚೆ ಬದಲಿಗೆ ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ಗಳನ್ನು ಹೆಚ್ಚು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಕರೋನಾ ಭೀತಿ: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಹ್ಯುಂಡೈ ಮೋಟಾರ್

ಅಂತಿಮ ಹಂತದ ಗ್ರಾಹಕರ ಸೇವೆಗಳಿಗಾಗಿ ಮಾತ್ರವೇ ಭೇಟಿಗೆ ಆದ್ಯತೆ ನೀಡಲಾಗುತ್ತಿದ್ದು, ಈ ವೇಳೆಯು ಗ್ರಾಹಕರು ಮತ್ತು ಸಿಬ್ಬಂದಿಯು ಸೋಂಕಿಗೆ ಒಳಗಾಗದಂತೆ ಹಲವಾರು ಮುನ್ನೆಚ್ಚೆರಿಕೆ ಕ್ರಮಗಳನ್ನು ಜಾರಿಗೆ ತರಲಾಗಿದೆ.

ಕರೋನಾ ಭೀತಿ: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಹ್ಯುಂಡೈ ಮೋಟಾರ್

ಇನ್ನು ಕರೋನಾ ವೈರಸ್ ಅಟ್ಟಹಾಸದಿಂದ ಚೀನಾದಲ್ಲಿ ಈಗಾಗಲೇ ಬಹುತೇಕ ಆಟೋ ಕಂಪನಿಗಳು ತಮ್ಮ ಉತ್ಪಾದನಾ ಘಟಕವನ್ನು ಕಳೆದ 1 ತಿಂಗಳಿನಿಂದಲೇ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಯುರೋಪಿನಲ್ಲಿಯೂ ಸಹ ಹಲವಾರು ಆಟೋ ಕಂಪನಿಗಳು ತಮ್ಮ ಪ್ರಮುಖ ಕಾರು ಉತ್ಪಾದನಾ ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.

ಕರೋನಾ ಭೀತಿ: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಹ್ಯುಂಡೈ ಮೋಟಾರ್

ಯುರೋಪ್ ರಾಷ್ಟ್ರಗಳಲ್ಲಿ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳಾದ ಫೋಕ್ಸ್‌ವ್ಯಾಗನ್, ನಿಸ್ಸಾನ್, ಆಡಿ, ಮರ್ಸಿಡಿಸ್ ಬೆಂಝ್, ಟೊಯೊಟಾ, ಸುಜುಕಿ, ಫಿಯೆಟ್ ಕ್ಲೈಸರ್, ರೆನಾಲ್ಟ್, ಬೆಂಟ್ಲಿ, ಡುಕಾಟಿ, ಪಿಎಸ್ಎ ಗ್ರೂಪ್‌ಗೆ ಸೇರಿದ 40ಕ್ಕೂ ಹೆಚ್ಚು ವಾಹನ ಉತ್ಪಾದನಾ ಘಟಕಗಳನ್ನು ಮುಂದಿನ ಕೆಲ ದಿನಗಳ ಕಾಲ ಬಂದ್ ಮಾಡಲಾಗಿದೆ.

Most Read Articles

Kannada
English summary
Hyundai Motor India has announced suspending operations March 23 onwards. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X