ಟಾಟಾ ಮೋಟಾರ್ಸ್ ಕಂಪನಿಗೆ ಟಾಂಗ್ ಕೊಟ್ಟ ಹ್ಯುಂಡೈ ಇಂಡಿಯಾ

ಈ ಆಧುನಿಕ ಜಗತ್ತಿನಲ್ಲಿ ಯಾವುದೇ ವಸ್ತುಗಳನ್ನಾಗಲಿ ಅಥವಾ ವಾಹನವನ್ನಾಗಲಿ ಮಾರಾಟ ಮಾಡುವಲ್ಲಿ ಜಾಹೀರಾತುಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಕಾರಣಕ್ಕೆ ಕಂಪನಿಗಳು ನಾನಾ ರೀತಿಯ ಜಾಹೀರಾತುಗಳನ್ನು ನೀಡುತ್ತವೆ.

ಟಾಟಾ ಮೋಟಾರ್ಸ್ ಕಂಪನಿಗೆ ಟಾಂಗ್ ಕೊಟ್ಟ ಹ್ಯುಂಡೈ ಇಂಡಿಯಾ

ಜಾಹೀರಾತುಗಳನ್ನು ನೀಡುವಲ್ಲಿ ಪ್ರಮುಖ ವಾಹನ ತಯಾರಕರ ಕಂಪನಿಗಳು ಸಹ ಹಿಂದೆ ಬಿದ್ದಿಲ್ಲ. ತಮ್ಮ ಹೊಸ ವಾಹನಗಳ ಮಾರಾಟಕ್ಕಾಗಿ ವಾಹನ ತಯಾರಕ ಕಂಪನಿಗಳು ವಿವಿಧ ರೀತಿಯ ಜಾಹೀರಾತುಗಳನ್ನು ನೀಡುತ್ತವೆ. ಈ ಹಿಂದೆ ಕೆಲವು ಜರ್ಮನಿ ಮೂಲದ ಕಾರು ತಯಾರಕ ಕಂಪನಿಗಳು ಜಾಹೀರಾತುಗಳ ವಿಷಯದಲ್ಲಿ ಪರಸ್ಪರ ವ್ಯಂಗ್ಯವಾಡುವುದನ್ನು ನೋಡಿದ್ದೇವು.

ಟಾಟಾ ಮೋಟಾರ್ಸ್ ಕಂಪನಿಗೆ ಟಾಂಗ್ ಕೊಟ್ಟ ಹ್ಯುಂಡೈ ಇಂಡಿಯಾ

ಈ ಹಿಂದೆ ತನ್ನ ಡೊಮಿನಾರ್ 400 ಬೈಕಿಗಾಗಿ ಬಜಾಜ್ ಕಂಪನಿಯು ಹಾಥಿ ಮತ್ ಪಾಲೊ ಎಂಬ ಜಾಹೀರಾತನ್ನು ನೀಡಿತ್ತು. ರಾಯಲ್ ಎನ್‌ಫೀಲ್ಡ್ ಕಂಪನಿಯ ಬೈಕುಗಳಿಗೆ ಟಾಂಗ್ ನೀಡಲು ಬಜಾಜ್ ಕಂಪನಿಯು ಈ ಜಾಹೀರಾತನ್ನು ನೀಡಿತ್ತು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಟಾಟಾ ಮೋಟಾರ್ಸ್ ಕಂಪನಿಗೆ ಟಾಂಗ್ ಕೊಟ್ಟ ಹ್ಯುಂಡೈ ಇಂಡಿಯಾ

ಹ್ಯುಂಡೈ ಕಂಪನಿಯು ತನ್ನ ಹೊಸ ಐ 20 ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಈ ಕಾರಿನ ಜಾಹೀರಾತುಗಳನ್ನು ಪ್ರಸಾರ ಮಾಡುತ್ತಿದೆ. ಟಾಟಾ ಕಂಪನಿಯು ಸಹ ತನ್ನ ಆಲ್ಟ್ರೋಜ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಟಾಟಾ ಮೋಟಾರ್ಸ್ ಕಂಪನಿಗೆ ಟಾಂಗ್ ಕೊಟ್ಟ ಹ್ಯುಂಡೈ ಇಂಡಿಯಾ

ಈ ಹಿನ್ನೆಲೆಯಲ್ಲಿ ಎರಡೂ ಕಂಪನಿಗಳ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. ಟಾಟಾ ಮೋಟಾರ್ಸ್ ಇತ್ತೀಚೆಗೆ ತನ್ನ ಹೊಸ ಕಾರಿಗೆ ಸಂಬಂಧಿಸಿದ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿತ್ತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಟಾಟಾ ಮೋಟಾರ್ಸ್ ಕಂಪನಿಗೆ ಟಾಂಗ್ ಕೊಟ್ಟ ಹ್ಯುಂಡೈ ಇಂಡಿಯಾ

ಈ ಪೋಸ್ಟ್ ನಲ್ಲಿ ಭಾರತದ ಖ್ಯಾತ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್, ನೀವು 20 ಬಾರಿ ಟ್ರಿಕ್ ಮಾಡಬಹುದು. ಆದರೆ ಅದು ನೀವು ಬೀಳುವ ಟ್ರೀಟ್ ಆಗಿರುತ್ತದೆ ಎಂದು ಹೇಳಿದೆ. ಇದು ಟ್ರಿಕ್ ಭಾಗವನ್ನು ಸೂಚಿಸುತ್ತದೆ.

ಟಾಟಾ ಮೋಟಾರ್ಸ್ ಕಂಪನಿಗೆ ಟಾಂಗ್ ಕೊಟ್ಟ ಹ್ಯುಂಡೈ ಇಂಡಿಯಾ

ಟಾಟಾ ಮೋಟಾರ್ಸ್ ತನ್ನ ಆಲ್ಟ್ರೋಜ್ ಕಾರನ್ನು ಟ್ರಿಕ್ ಎಂದು ಪರಿಗಣಿಸುತ್ತಿದೆ. ಈ ಕಾರು ಜಾಗತಿಕ ಎನ್‌ಸಿಎಪಿ ಕ್ರ್ಯಾಶ್ ಪರೀಕ್ಷೆಯಲ್ಲಿ 5-ಸ್ಟಾರ್ ರೇಟಿಂಗ್ ಪಡೆದ ಭಾರತದ ಕಾರು ಎಂಬುದನ್ನು ಗಮನಿಸಬೇಕು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಟಾಟಾ ಮೋಟಾರ್ಸ್ ಕಂಪನಿಗೆ ಟಾಂಗ್ ಕೊಟ್ಟ ಹ್ಯುಂಡೈ ಇಂಡಿಯಾ

ಆಲ್ಟ್ರೋಜ್, ಟಾಟಾ ನೆಕ್ಸಾನ್ ನಂತರ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ಟಾಟಾ ಮೋಟಾರ್ಸ್ ಕಂಪನಿಯ ಎರಡನೇ ಕಾರು. ಟಾಟಾ ಮೋಟಾರ್ಸ್ ಕಂಪನಿಯ ಈ ಪೋಸ್ಟ್ ಗೆ ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದೆ.

ಟಾಟಾ ಮೋಟಾರ್ಸ್ ಕಂಪನಿಗೆ ಟಾಂಗ್ ಕೊಟ್ಟ ಹ್ಯುಂಡೈ ಇಂಡಿಯಾ

ಈ ಪೋಸ್ಟ್ ನಲ್ಲಿ ಹ್ಯುಂಡೈ ಕಂಪನಿಯು ಕತ್ತಲೆಯು ಹೊಸ ಟ್ರೀಟ್ ಅನ್ನು ಕಂಡುಹಿಡಿದಿದೆ. ಇದು ಯಾವುದೇ ಟ್ರಿಕ್ ಅಲ್ಲ. ಹೊಸ ಐ 20 ನಿಮಗೆ ತನ್ನ ಶೈಲಿ ಹಾಗೂ ರೋಮಾಂಚಕ ಪರ್ಫಾರ್ಮೆನ್ಸ್ ನೀಡಲು ಸಜ್ಜಾಗಿದೆ ಎಂದು ಹೇಳಿದೆ. ಹೊಸ ತಲೆಮಾರಿನ ಐ 20 ಕಾರನ್ನು ನವೆಂಬರ್ 5ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು.

Most Read Articles

Kannada
English summary
Hyundai India taunts Tata Motors post on social media. Read in Kannada.
Story first published: Tuesday, November 3, 2020, 10:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X