ಪೂರ್ತಿಯಾಗಿ ಚಾರ್ಜ್ ಆದ ನಂತರ 409 ಕಿ.ಮೀ ಚಲಿಸಿದ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಹ್ಯುಂಡೈ ಕಂಪನಿಯು ಕೋನಾ ಎಲೆಕ್ಟ್ರಿಕ್ ಕಾರ್ ಅನ್ನು ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಕೋನಾ ಭಾರತದಲ್ಲಿರುವ ಅತ್ಯುನ್ನತ ಶ್ರೇಣಿಯ ಎಲೆಕ್ಟ್ರಿಕ್ ಕಾರ್ ಆಗಿದೆ. ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಎಂಜಿ ಝಡ್ಎಸ್ ಇವಿ ಹಾಗೂ ಟಾಟಾ ನೆಕ್ಸಾನ್ ಇವಿಗಳಿಗೆ ಪೈಪೋಟಿ ನೀಡುತ್ತದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 409 ಕಿ.ಮೀ ಚಲಿಸಿದ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಎಆರ್ ಎಐ ಪ್ರಮಾಣಿತ ಶ್ರೇಣಿಯ ಪ್ರಕಾರ ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ ಕೋನಾ ಎಲೆಕ್ಟ್ರಿಕ್ ಕಾರು 452 ಕಿ.ಮೀಗಳವರೆಗೆ ಚಲಿಸುತ್ತದೆ. ಆದರೆ ವಾಸ್ತವವಾಗಿ ಈ ಕಾರು ಪೂರ್ತಿಯಾಗಿ ಚಾರ್ಜ್ ಆದ ನಂತರ, ಸುಮಾರು 400 ಕಿ.ಮೀಗಳವರೆಗೆ ಚಲಿಸುತ್ತದೆ. ಕೋನಾ ಎಲೆಕ್ಟ್ರಿಕ್ ಕಾರು ಕೇರಳದ ರಾಜಧಾನಿ ತಿರುವನಂತಪುರದಿಂದ 400 ಕಿ.ಮೀಗಳವರೆಗೆ ಚಲಿಸಿರುವ ವೀಡಿಯೊವೊಂದು ಹೊರ ಬಂದಿದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 409 ಕಿ.ಮೀ ಚಲಿಸಿದ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಈ ಕಾರಿನ ಮಾಲೀಕ ತಿರುವನಂತಪುರದಲ್ಲಿರುವ ಹ್ಯುಂಡೈ ಮಾರಾಟಗಾರರ ಬಳಿ ತೆರಳಿ, ಕ್ಯಾಲಿಕಟ್‌ನಲ್ಲಿರುವ ಹ್ಯುಂಡೈ ಮಾರಾಟಗಾರರ ಬಳಿಗೆ ತೆರಳುವುದಾಗಿ ತಿಳಿಸುತ್ತಾರೆ. ಕಾರಿನಲ್ಲಿರುವ ಕ್ಲಸ್ಟರ್ ಈ ಎರಡೂ ನಗರಗಳ ನಡುವಿನ ಅಂತರವನ್ನು 409 ಕಿ.ಮೀಗಳೆಂದು ತೋರಿಸುತ್ತದೆ. ಈ ಚಿತ್ರಗಳನ್ನು ಕೋನಾ ಕೇರಳ ಬಿಡುಗಡೆಗೊಳಿಸಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಪೂರ್ತಿಯಾಗಿ ಚಾರ್ಜ್ ಆದ ನಂತರ 409 ಕಿ.ಮೀ ಚಲಿಸಿದ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

100%ನಷ್ಟು ಚಾರ್ಜ್ ಆದ ನಂತರ ಕಾರು ಮಾಲೀಕರು ಅಲ್ಲಿಂದ ಚಲಿಸುತ್ತಾರೆ. 69 ಕಿ.ಮೀ ಚಲಿಸಿದ ನಂತರ ಬೈಪಾಸ್ ರಸ್ತೆಗೆ ಬರುತ್ತಾರೆ. ಹ್ಯುಂಡೈ ಕೋನಾ ವಿಶೇಷ ಫೀಚರ್ ಒಂದನ್ನು ಹೊಂದಿದೆ. ಈ ಫೀಚರ್ ಚಾಲಕನು ಒಂಟಿಯಾಗಿದ್ದರೆ, ಚಾಲಕನ ಕಡೆಗಿರುವ ಎಸಿಯನ್ನು ಮಾತ್ರ ಸ್ಟಾರ್ಟ್ ಮಾಡುತ್ತದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 409 ಕಿ.ಮೀ ಚಲಿಸಿದ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

103 ಕಿ.ಮೀ ಪ್ರಯಾಣಿಸಿದ ನಂತರ ಬ್ಯಾಟರಿ 20%ನಷ್ಟು ಕಡಿಮೆಯಾಗುತ್ತದೆ. 161 ಕಿ.ಮೀ ಪ್ರಯಾಣಿಸಿದ ನಂತರ ಕಾರಿನ ಮಾಲೀಕರು ವಿಶ್ರಾಂತಿ ಪಡೆಯುತ್ತಾರೆ. ಈ ವೇಳೆಗೆ ಕಾರಿನ ಬ್ಯಾಟರಿಯು 34%ನಷ್ಟು ಕಡಿಮೆಯಾಗಿರುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಪೂರ್ತಿಯಾಗಿ ಚಾರ್ಜ್ ಆದ ನಂತರ 409 ಕಿ.ಮೀ ಚಲಿಸಿದ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಕಾರು ಕೊಚ್ಚಿ ನಗರಕ್ಕೆ ಪ್ರವೇಶಿದ ನಂತರ ಹೆಚ್ಚಿನ ದಟ್ಟಣೆಯನ್ನು ಎದುರಿಸಬೇಕಾಗುತ್ತದೆ. ಈ ದಟ್ಟಣೆಯು ಕಾರಿನ ವ್ಯಾಪ್ತಿಯ ಮೇಲೆ ಯಾವುದೇ ಪರಿಣಾಮವನ್ನು ಉಂಟು ಮಾಡುವುದಿಲ್ಲ. ಕೋನಾ ಎಲೆಕ್ಟ್ರಿಕ್ ಕಾರು 233 ಕಿ.ಮೀ ಚಲಿಸಿದ ನಂತರ ಬ್ಯಾಟರಿಯು 50%ನಷ್ಟು ಕಡಿಮೆಯಾಗುತ್ತದೆ.

ಹ್ಯುಂಡೈ ಕೋನಾ ಕಾರು ಮಾಲೀಕರು ರಾತ್ರಿಯಲ್ಲೂ ಪ್ರಯಾಣಿಸಿ ಅಂತಿಮವಾಗಿ ಕ್ಯಾಲಿಕಟ್ ನಲ್ಲಿರುವ ಹ್ಯುಂಡೈ ಮಾರಾಟಗಾರರನ್ನು ತಲುಪುತ್ತಾರೆ. 409 ಕಿ.ಮೀ ಚಲಿಸಿದ ನಂತರವೂ ಬ್ಯಾಟರಿಯಲ್ಲಿ 7%ನಷ್ಟು ಚಾರ್ಜ್ ಉಳಿದಿರುತ್ತದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಪೂರ್ತಿಯಾಗಿ ಚಾರ್ಜ್ ಆದ ನಂತರ 409 ಕಿ.ಮೀ ಚಲಿಸಿದ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಈ ಪ್ರಯಾಣದಾದ್ಯಂತ ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ ಅತ್ಯುತ್ತಮವಾದ ಕಾರ್ಯಕ್ಷಮತೆಯನ್ನು ನೀಡಿದೆ. ಹೆಚ್ಚು ದೂರ ಚಲಿಸಲು ಕಾರು ಚಾಲಕ ಇಕೋ ಮೋಡ್‌ನಲ್ಲಿ ಕಾರು ಚಾಲನೆ ಮಾಡಿದ್ದಾರೆ. ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಪೂರ್ತಿಯಾಗಿ ಚಾರ್ಜ್ ಆದ ನಂತರ ವಾಸ್ತವದಲ್ಲಿ 400 ಕಿ.ಮೀ ಚಲಿಸುತ್ತದೆ ಎಂದು ಇದರಿಂದ ಸಾಬೀತಾಗಿದೆ.

Most Read Articles

Kannada
English summary
Hyundai Kona electric travels 409 kms after full charge. Read in Kannada.
Story first published: Wednesday, August 26, 2020, 12:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X