2021ರ ಹ್ಯುಂಡೈ ಟ್ಯೂಸಾನ್ ಎಸ್‍ಯುವಿ ಟೀಸರ್ ಬಿಡುಗಡೆ
ಹ್ಯುಂಡೈ ಕಂಪನಿಯು ತನ್ನ ಬಹುನಿರೀಕ್ಷಿತ 2021ರ ಟ್ಯೂಸಾನ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಹ್ಯುಂಡೈ ಕಂಪನಿಯು ಹೊಸ ಟ್ಯುಸಾನ್ ಎಸ್‍ಯುವಿಯ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಟೀಸರ್ ನಲ್ಲಿ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯ ವಿನ್ಯಾಸದಲ್ಲಿ ಬದಲಾವಣೆಗಳಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. 2021ರ ಟ್ಯೂಸಾನ್ ಎಸ್‍ಯುವಿಯ ಮುಂಭಾಗ ಆಕರ್ಷಕ ಲುಕ್ ಅನ್ನು ಹೊಂದಿದೆ, ಈ ಹೂಸ ಟ್ಯೂಸಾನ ಹೆಡ್‌ಲ್ಯಾಂಪ್ ಯುನಿಟ್ ಆಕರ್ಷಕವಾಗಿದೆ. ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯಲ್ಲಿ ಕ್ರೋಮ್ ಸ್ಟ್ರಿಪ್ ಹೊಂದಿದೆ. ಈ ಎಸ್‍ಯುವಿಯ ಕೊನೆಯಲ್ಲಿ ವಿಶಿಷ್ಟವಾದ ಸಿ-ಪಿಲ್ಲರ್ ಆಕಾರವನ್ನು ರೂಪಿಸಿದೆ.

ಈ ಹೊಸ ಎಸ್‍ಯುವಿಯ ಹಿಂದಿನ ಪ್ರೊಫೈಲ್‌ನಲ್ಲಿ ಉದ್ದವಾದ ಬೆಲ್ಟ್‌ಲೈನ್ಗಳಿವೆ. ಈ ಎಸ್‍ಯುವಿಯಲ್ಲಿ 19 ಇಂಚಿನ ವ್ಹೀಲ್ಸ್ ಅನ್ನು ಅಳವಡಿಸಿದೆ. ಈ ವ್ಹೀಲ್ ಗಳು ವಿಭಿನ್ನವಾದ ವಿನ್ಯಾಸದಿಂದ ಕೂಡಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿ ಶಾರ್ಕ್ ಫಿನ್ ಆಂಟೆನಾ, ಬಾಡಿ ಕಲರ್‌ನಲ್ಲಿ ರೂಫ್-ರೈಲ್ ಮತ್ತು ಫ್ಲೋಟಿಂಗ್ ರೂಫ್‌ಲೈನ್ ಹೊಂದಿದೆ. ಹಿಂಭಾಗದಲ್ಲಿ ಅಗಲವಾಗಿ ಉದ್ದಕೂ ರೆಡ್ ಎಲ್ಇಡಿ ಲೈಟ್ ಅನ್ನು ಅಳವಡಿಸಿದೆ. ಇದು ಟೈಲ್-ಲ್ಯಾಂಪ್‌ಗಳನ್ನು ಕನೆಕ್ಟ್ ಆಗಿದೆ.

ಇನ್ನು ಟ್ಯೂಸನ್ ಎಸ್‍ಯುವಿಯಲಿರುವ ಟೈಲ್-ಲೈಟ್ ಕ್ರೆಟಾದ ಟೈಲ್-ಲ್ಯಾಂಪ್‌ನ ವಿಕಾಸಗೊಂಡ ಆವೃತ್ತಿಯಂತೆ ಕಾಣುತ್ತದೆ. ಹಿಂಭಾಗದ ವಿಂಡೋ ವೈಪರ್ ಟೀಸರ್ ವೀಡಿಯೋದಲ್ಲಿ ಕಂಡುಬಂದಿಲ್ಲ. ಇದು ಹ್ಯುಂಡೈ ವಿನ್ಯಾಸಕರು ಕ್ಲೀನರ್ ವಿನ್ಯಾಸವನ್ನು ರಚಿಸಲು ವೈಪರಿನ ಸ್ಥಳವನ್ನು ಬದಲಾಯಿಸರಬಹುದು ಎಂದು ನಿರೀಕ್ಷಿಸುತ್ತೇವೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಈ ಎಸ್‍ಯುವಿ ಕೆಳಗಿನ ಬಂಪರ್ ಸಿಲ್ವರ್ ಸ್ಕಿಡ್ ಪ್ಲೇಟ್, ಸ್ಟಾಪ್ ಲ್ಯಾಂಪ್‌ಗಳು ಮತ್ತು ಏರ್ ವೆಂಟ್ಸ್ ಗಳನ್ನು ಹೊಂದಿರುತ್ತದೆ. ಇದು ಇಂಟಿಗ್ರೇಟೆಡ್ ಬ್ರೇಕ್ ಲೈಟ್ ಗಳೊಂದಿಗೆ ರೂಫ್ ಸ್ಪಾಯ್ಲರ್ ಅನ್ನು ಹೊಂದಿರಲಿದೆ.
2021ರ ಹ್ಯುಂಡೈ ಟ್ಯೂಸಾನ್ ಚೀನಾ, ಅಮೆರಿಕಾ ಮತ್ತು ಭಾರತದಂತಹ ಮಾರುಕಟ್ಟೆಗಳಿಗೆ ಲಾಂಗ್-ವ್ಹೀಲ್ ಬೇಸ್ ಆವೃತ್ತಿಯಲ್ಲಿಯು ಬಿಡುಗಡೆಗೊಳಿಸಲಿದೆ. ಸ್ಟ್ಯಾಂಡರ್ಡ್ ಆವೃತ್ತಿಯನ್ನು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ.
MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯ ಇಂಟಿರಿಯರ್ ರೆಂಡರಿಂಗ್ ಚಿತ್ರವನ್ನು ಬಿಡುಗಡೆಗೊಳಿಸಿದೆ. ಈ ರೆಂಡರಿಂಗ್ ಚಿತ್ರದಲ್ಲಿ ಇಂಟಿರಿಯರ್ ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಇದರೊಂದಿಗೆ ಎಸಿ ಮತ್ತು ಇತರ ಕಂಟ್ರೋಲ್ ಗಳಿಗಾಗಿ ಟಚ್-ಪ್ಯಾನೆಲ್‌ಗಳು, ಅನನ್ಯವಾಗಿ ವಿನ್ಯಾಸಗೊಳಿಸಲಾದ ಮಲ್ಟಿ-ಫಂಕ್ಷನಲ್ ಸ್ಟೀಯರಿಂಗ್ ವ್ಹೀಲ್, ಗೇರ್‌ಬಾಕ್ಸ್, ಪಾರ್ಕಿಂಗ್ ಬ್ರೇಕ್ ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿರಲಿದೆ. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಇದೇ ತಿಂಗಳ 15ರಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣವಾಗಲಿದೆ.


Click it and Unblock the Notifications