2021ರ ಹ್ಯುಂಡೈ ಕೊನಾ ಮತ್ತು ಕೊನಾ ಎನ್ ಲೈನ್ ಕಾರು ಮಾದರಿ ಅನಾವರಣ

ಜಗತ್ತಿನ ಎಂಟನೇ ಅತಿ ದೊಡ್ಡ ಕಾರು ಮಾರಾಟ ಮಾರಾಟ ಕಂಪನಿಯಾಗಿ ಹೊರಹೊಮ್ಮಿರುವ ಹ್ಯುಂಡೈ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ಯುರೋಪಿನ್ ಮಾರುಕಟ್ಟೆಗಳಿಗಾಗಿ ಹಲವು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, 2021ರ ಕೊನಾ ಮತ್ತು ಕೊನಾ ಎನ್ ಲೈನ್ ಕಾರು ಮಾದರಿಗಳನ್ನು ಅನಾವರಣಗೊಳಿಸಿದೆ.

2021ರ ಹ್ಯುಂಡೈ ಕೊನಾ ಮತ್ತು ಕೊನಾ ಎನ್ ಲೈನ್ ಕಾರು ಮಾದರಿ ಅನಾವರಣ

ಭಾರತದಲ್ಲೂ ವಿವಿಧ ಮಾದರಿಯ ಕಾರು ಮಾದರಿಗಳ ಮಾರಾಟದೊಂದಿಗೆ ಎರಡನೇ ಅತಿ ದೊಡ್ಡ ಕಾರು ಮಾರಾಟ ಕಂಪನಿಯಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವಾರು ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಗೂ ಹಲವು ಹೊಸ ಕಾರು ಮಾದರಿಗಳನ್ನು ಪರಿಚಯಿಸುವ ಯೋಜನೆಯಲ್ಲಿದ್ದು, ಇದೀಗ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿರುವ 2021ರ ಕೊನಾ ಮತ್ತು ಕೊನಾ ಎನ್ ಲೈನ್ ಆವೃತ್ತಿಗಳ ಉತ್ಪಾದನಾ ಮಾದರಿಗಳನ್ನು ಅನಾವರಣಗೊಳಿಸಲಾಗಿದೆ.

2021ರ ಹ್ಯುಂಡೈ ಕೊನಾ ಮತ್ತು ಕೊನಾ ಎನ್ ಲೈನ್ ಕಾರು ಮಾದರಿ ಅನಾವರಣ

ಕೊನಾ ಎಸ್‌ಯುವಿ ಕಾರು ಮಾದರಿಯು ಹ್ಯುಂಡೈ ನಿರ್ಮಾಣ ಪ್ರಮುಖ ಕಾರು ಮಾದರಿಗಳಲ್ಲಿ ಒಂದಾಗಿದ್ದು, ಕೊನಾ ಕಾರು ಈಗಾಗಲೇ ವಿವಿಧ ದೇಶಗಳಲ್ಲಿ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಮಾರಾಟವಾಗುತ್ತಿದೆ.

2021ರ ಹ್ಯುಂಡೈ ಕೊನಾ ಮತ್ತು ಕೊನಾ ಎನ್ ಲೈನ್ ಕಾರು ಮಾದರಿ ಅನಾವರಣ

ಇದೀಗ ಅನಾವರಣಗೊಂಡಿರುವ ಕಾರು ಮಾದರಿಯಲ್ಲಿ ಸ್ಟ್ಯಾಂಡರ್ಡ್ ಮಾದರಿಯು ಸೇರಿದಂತೆ ಪರ್ಫಾಮೆನ್ಸ್ ಆವೃತ್ತಿಯಾದ ಕೊನಾ ಎನ್ ಲೈನ್ ಕೂಡಾ ಬಿಡುಗಡೆಯಾಗುತ್ತಿದ್ದು, ಹೊಸ ಕಾರುಗಳು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿವೆ.

2021ರ ಹ್ಯುಂಡೈ ಕೊನಾ ಮತ್ತು ಕೊನಾ ಎನ್ ಲೈನ್ ಕಾರು ಮಾದರಿ ಅನಾವರಣ

ಕೊನಾ ಎನ್ ಲೈನ್ ಕಾರು ಮಾದರಿಯು ಐಷಾರಾಮಿ ಫೀಚರ್ಸ್‌ಗಳೊಂದಿಗೆ 2.0-ಲೀಟರ್ ಟರ್ಬೋ ಚಾರ್ಜ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, 8-ಸ್ಪೀಡ್ ಡಿಸಿಟಿ ಆಟೋ ಗೇರ್‌ಬಾಕ್ಸ್‌ನೊಂದಿಗೆ 275-ಬಿಎಚ್‌ಪಿ ಮತ್ತು 353-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

2021ರ ಹ್ಯುಂಡೈ ಕೊನಾ ಮತ್ತು ಕೊನಾ ಎನ್ ಲೈನ್ ಕಾರು ಮಾದರಿ ಅನಾವರಣ

ಹಾಗೆಯೇ ಹೊಸ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಹೊರಭಾಗದ ವಿನ್ಯಾಸದೊಂದಿಗೆ ಆಲ್-ವೀಲ್ಹ್ ಡ್ರೈವ್ ಜೋಡಣೆ ಮಾಡಿರುವುದರಿಂದ ಹೊಸ ಕಾರು ಬಿಎಂಡಬ್ಲ್ಯು ಎಕ್ಸ್1 ಎಸ್‌ಯುವಿ ಕಾರಿಗಿಂತಲೂ ಹೆಚ್ಚು ಬಲಿಷ್ಠ ಮತ್ತು ಅತಿ ಹೆಚ್ಚು ಪರ್ಫಾಮೆನ್ಸ್ ನೀಡಬಲ್ಲ ಎಸ್‌ಯುವಿ ಮಾದರಿಯಾಗಿದ್ದು, 19-ಇಂಚಿನ ಎನ್-ಬ್ರಾಂಡ್ ಚಕ್ರಗಳು ಆಕರ್ಷಕವಾಗಿವೆ.

2021ರ ಹ್ಯುಂಡೈ ಕೊನಾ ಮತ್ತು ಕೊನಾ ಎನ್ ಲೈನ್ ಕಾರು ಮಾದರಿ ಅನಾವರಣ

ಇದೇ ಕಾರಿನ ಬಹುತೇಕ ತಾಂತ್ರಿಕ ಅಂಶಗಳನ್ನು ಐ30 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಲ್ಲೂ ಕಾಣಬಹುದಾಗಿದ್ದು, ಭಾರತದಲ್ಲಿರುವ ಬಿಡುಗಡೆಗಾಗಿ ಉದ್ದೇಶಿಸಿರುವ ಐ30 ಮಾದರಿಯು ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಹೊಂದಲಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

2021ರ ಹ್ಯುಂಡೈ ಕೊನಾ ಮತ್ತು ಕೊನಾ ಎನ್ ಲೈನ್ ಕಾರು ಮಾದರಿ ಅನಾವರಣ

ಆದರೆ ವಿದೇಶಿ ಮಾರುಕಟ್ಟೆಯಲ್ಲಿರುವ ಬಹುತೇಕ ಕಾರು ಮಾದರಿಗಳು ದುಬಾರಿ ಬೆಲೆಯೊಂದಿಗೆ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುತೇಕ ಕಾರು ಮಾದರಿಗಳು ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿ ಅಭಿವೃದ್ದಿಗೊಳಿಸಲಾಗುತ್ತದೆ.

2021ರ ಹ್ಯುಂಡೈ ಕೊನಾ ಮತ್ತು ಕೊನಾ ಎನ್ ಲೈನ್ ಕಾರು ಮಾದರಿ ಅನಾವರಣ

ಇದರಿಂದ ಕಾರು ಕಂಪನಿಗಳು ಸಾಮಾನ್ಯವಾಗಿ ಭಾರತದಲ್ಲಿ ಅದೇ ಕಾರುಗಳನ್ನು ಬಿಡುಗಡೆ ಮಾಡುವಾಗ ಬೆಲೆ ಗಮನದಲ್ಲಿಟ್ಟುಕೊಂಡು ಪ್ರೀಮಿಯಂ ಫೀಚರ್ಸ್‌ಗಳನ್ನು ಅಳವಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಮಾಡುತ್ತವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

2021ರ ಹ್ಯುಂಡೈ ಕೊನಾ ಮತ್ತು ಕೊನಾ ಎನ್ ಲೈನ್ ಕಾರು ಮಾದರಿ ಅನಾವರಣ

ಇದೀಗ ಬಿಡುಗಡೆಯಾಗುತ್ತಿರುವ ಕೊನಾ ಮತ್ತು ಕೊನಾ ಎನ್ ಲೈನ್ ಕಾರು ಕೂಡಾ ಮಧ್ಯಮ ಗಾತ್ರದ ಐಷಾರಾಮಿ ಎಸ್‌ಯುವಿ ವಿಭಾಗದಲ್ಲಿ ಸ್ಥಾನಪಡೆದುಕೊಳ್ಳಲಿದ್ದು, 2021ರ ಆರಂಭದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳು ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ರೂ. 25 ಲಕ್ಷದಿಂದ ರೂ. 35 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗಲಿದೆ.

Most Read Articles

Kannada
English summary
Hyundai Unveiled The New Kona With Major Design Upgrades. Read in Kannada.
Story first published: Wednesday, September 2, 2020, 22:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X