ವೆನ್ಯೂ ಸ್ಪೆಷಲ್ ಮಾಡೆಲ್ ಅನಾವರಣಗೊಳಿಸಿದ ಹ್ಯುಂಡೈ

ದಕ್ಷಿಣ ಕೊರಿಯಾದ ಕಾರು ಉತ್ಪಾದನಾ ಕಂಪನಿ ಹ್ಯುಂಡೈ ತನ್ನ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ವೆನ್ಯೂ ಕಾರಿನಲ್ಲಿ ವಿಶೇಷ ವಿನ್ಯಾಸವುಳ್ಳ ಫ್ಲಕ್ಸ್ ಮಾಡೆಲ್ ಅನಾವರಣಗೊಳಿಸಿದ್ದು, ಹೊಸ ಕಾರು ವಿಶೇಷವಾಗಿ ದಕ್ಷಿಣ ಕೊರಿಯಾದಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದೆ.

ವೆನ್ಯೂ ಸ್ಪೆಷಲ್ ಮಾಡೆಲ್ ಅನಾವರಣಗೊಳಿಸಿದ ಹ್ಯುಂಡೈ

ಹೊಸ ಫ್ಲಕ್ಸ್ ಮಾಡೆಲ್ ಕಾರು ಸಾಮಾನ್ಯ ವೆನ್ಯೂ ಮಾದರಿಯಲ್ಲೇ ಬಹುತೇಕ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಕಾರಿನ ವಿನ್ಯಾಸದಲ್ಲಿ ತುಸು ಬದಲಾವಣೆಗಳನ್ನು ಪಡೆದುಕೊಂಡಿದೆ. ಐಷಾರಾಮಿ ಕಾರುಗಳ ಮಾದರಿಯಲ್ಲಿ ಹಾಟ್ ರೆಡಿಯೆಟರ್ ಗ್ರಿಲ್, ಸ್ಪೋರ್ಟಿ ಲುಕ್ ಹೆಚ್ಚಿಸಲು ಕಾಂಟ್ರಾಸ್ಟ್ ಕಲರ್ ಮತ್ತು ಫ್ಲಕ್ಸ್ ಬ್ಯಾಡ್ಜ್ ನೀಡಲಾಗಿದ್ದು, ಇದು ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಲಿದೆ.

ವೆನ್ಯೂ ಸ್ಪೆಷಲ್ ಮಾಡೆಲ್ ಅನಾವರಣಗೊಳಿಸಿದ ಹ್ಯುಂಡೈ

ಇದಲ್ಲದೆ ಕಾರಿನ ಒಳಭಾಗವು ಕೂಡಾ ಹೊರಭಾಗದಂತೆ ವಿಶೇಷ ಬಣ್ಣದ ಆಯ್ಕೆ ಹೊಂದಿದ್ದು, ಡ್ರೈವ್ ಮೋಡ್ ಡಯಲ್, ಕ್ಲೈಮೆಟ್ ಕಂಟ್ರೋಲ್ ಡಯಲ್ ಮತ್ತು ಏರ್ ವೆಂಟ್ ಅಡ್ಜೆಸ್ಟ್ ಮೇಲೆ ಕಂಟ್ರಾಸ್ಟ್ ಕಲರ್ ನೀಡಲಾಗಿದೆ.

ವೆನ್ಯೂ ಸ್ಪೆಷಲ್ ಮಾಡೆಲ್ ಅನಾವರಣಗೊಳಿಸಿದ ಹ್ಯುಂಡೈ

ಇದರ ಹೊರತಾಗಿ ದಕ್ಷಿಣ ಕೊರಿಯಾದಲ್ಲಿ ಮಾರಾಟವಾಗುವ ವೆನ್ಯೂ ಕಾರು 1.6-ಲೀಟರ್ ಸ್ಮಾರ್ಟ್‌ಸ್ಟ್ರೀಮ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 123-ಬಿಎಚ್‌ಪಿ ಮತ್ತು 153-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ವೆನ್ಯೂ ಸ್ಪೆಷಲ್ ಮಾಡೆಲ್ ಅನಾವರಣಗೊಳಿಸಿದ ಹ್ಯುಂಡೈ

ಫ್ಲಕ್ಸ್ ಮಾಡೆಲ್ ಕಾರು ಸ್ಟ್ಯಾಂಡರ್ಡ್ ವೆನ್ಯೂ ಮಾದರಿಗಿಂತಲೂ ತುಸು ದುಬಾರಿ ಹೊಂದಿದ್ದು, ದಕ್ಷಿಣ ಕೊರಿಯಾದಲ್ಲಿ ಖರೀದಿಗೆ ಲಭ್ಯವಾಗಲಿರುವ ಹೊಸ ಕಾರು ಭಾರತೀಯ ರೂಪಾಯಿ ಮೌಲ್ಯದಲ್ಲಿ ರೂ. 13.56 ಲಕ್ಷ ಬೆಲೆ ಹೊಂದಿರಲಿದೆ.

ವೆನ್ಯೂ ಸ್ಪೆಷಲ್ ಮಾಡೆಲ್ ಅನಾವರಣಗೊಳಿಸಿದ ಹ್ಯುಂಡೈ

ಇನ್ನು ವೆನ್ಯೂ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 5 ವೆರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.70 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.11.50 ಲಕ್ಷ ಬೆಲೆ ಪಡೆದುಕೊಂಡಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ವೆನ್ಯೂ ಸ್ಪೆಷಲ್ ಮಾಡೆಲ್ ಅನಾವರಣಗೊಳಿಸಿದ ಹ್ಯುಂಡೈ

ವೆನ್ಯೂ ಕಾರಿನಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆದುಕೊಂಡಿದ್ದರೆ ಡಿಸೇಲ್ ಎಂಜಿನ್‌ನಲ್ಲಿ ಒಂದು ಆಯ್ಕೆಯನ್ನು ನೀಡಲಾಗಿದ್ದು, ಇ, ಎಸ್, ಎಸ್ಎಕ್ಸ್, ಎಸ್ಎಕ್ಸ್(0) ಮತ್ತು ಎಸ್ಎಕ್ಸ್ ಪ್ಲಸ್ ವೆರಿಯೆಂಟ್‌ಗಳಲ್ಲಿ ಹೊಸ ವೆನ್ಯೂ ಕಾರು ಖರೀದಿಗೆ ಲಭ್ಯವಿದೆ.

ವೆನ್ಯೂ ಸ್ಪೆಷಲ್ ಮಾಡೆಲ್ ಅನಾವರಣಗೊಳಿಸಿದ ಹ್ಯುಂಡೈ

ಮೊದಲ ಬಾರಿಗೆ ಬಿಡುಗಡೆಯಾದ ಸಂದರ್ಭದಲ್ಲಿ ಬಿಎಸ್-4 ಎಂಜಿನ್ ಹೊಂದಿದ್ದ ವೆನ್ಯೂ ಕಾರು ಇದೀಗ ಹೊಸ ಎಮಿಷನ್ ನಿಯಮದಂತೆ ಬಿಎಸ್-6 ಎಂಜಿನ್ ಆಯ್ಕೆ ಹೊಂದಿದ್ದು, 1.2-ಲೀಟರ್ ಕಪ್ಪಾ ಪೆಟ್ರೋಲ್, 1.5-ಲೀಟರ್ ಡೀಸೆಲ್ ಎಂಜಿನ್ ಮತ್ತು 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯನ್ನು ಜೋಡಣೆ ಮಾಡಲಾಗಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ವೆನ್ಯೂ ಸ್ಪೆಷಲ್ ಮಾಡೆಲ್ ಅನಾವರಣಗೊಳಿಸಿದ ಹ್ಯುಂಡೈ

ಬಿಎಸ್-4 ಎಂಜಿನ್ ಆಯ್ಕೆಯಲ್ಲಿ 1.2-ಲೀಟರ್ ಪೆಟ್ರೋಲ್, 1.4-ಲೀಟರ್ ಡೀಸೆಲ್ ಮತ್ತು 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದ ವೆನ್ಯೂ ಕಾರಿನಲ್ಲಿ ಬಿಎಸ್-6 ಎಮಿಷನ್ ಕಡ್ಡಾಯ ನಂತರ 1.4-ಲೀಟರ್ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಹೊಸದಾಗಿ ಅಭಿವೃದ್ದಿಪಡಿಸಲಾಗಿದ್ದ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಯ್ತು.

Most Read Articles

Kannada
English summary
Hyundai Venue FLUX Special Model Unveiled. Read in Kannada.
Story first published: Saturday, June 13, 2020, 12:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X