ವೆನ್ಯೂ ಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯ ಸರಣಿಯಲ್ಲಿ ಜನಪ್ರಿಯ ಮಾದರಿಗಳಲ್ಲಿ ವೆನ್ಯೂ ಕೂಡ ಒಂದಾಗಿದೆ. ಈ ಹ್ಯುಂಡೈ ವೆನ್ಯೂ ಕಾಂಪ್ಯಾಕ್ಟ್ ಎಸ್‍ಯುವಿಯು ಅದೇ ಸೆಗ್ಮೆಂಟ್‍ನ ಮಾರುತಿ ವಿಟಾರಾ ಬ್ರೇಝಾ ಮಾದರಿಯನ್ನು ಕೆಲವು ತಿಂಗಳುಗಳಿಂದ ಮಾರಾಟದಲ್ಲಿ ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ.

ವೆನ್ಯೂ ಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಹ್ಯುಂಡೈ

ಇದೀಗ ಹ್ಯುಂಡೈ ವೆನ್ಯೂ ತನ್ನ ಸೋದರಸಂಬಂಧಿ ಎಂದೇ ಹೇಳುವ ಕಿಯಾ ಸೊನೆಟ್ ಎಸ್‍ಯುವಿಗೆ ಪೈಪೋಟಿಯನ್ನು ನೀಡಲು ಸಜ್ಜಾಗುತ್ತಿದೆ. ಮುಂದಿನ ತಿಂಗಳು ಕಿಯಾ ಸೊನೆಟ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ದಕ್ಷಿಣ ಕೊರಿಯಾದ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವೆನ್ಯೂ ಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಟಿವಿಸಿಯನ್ನು ಬಿಡುಗಡೆಗೊಳಿಸಿದೆ.

ವೆನ್ಯೂ ಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ತನ್ನ ವೆನ್ಯೂ ಎಸ್‍ಯುವಿಯ ಸ್ಪೋರ್ಟ್ ಮಾದರಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಹ್ಯುಂಡೈ ವೆನ್ಯೂ ಸ್ಪೋರ್ಟ್ ಎಸ್‍ಯುವಿಯು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ವೆನ್ಯೂ ಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಹ್ಯುಂಡೈ

ವೆನ್ಯೂ ಸ್ಪೋರ್ಟ್ ಎಸ್‍ಯುವಿಯನ್ನು ಎಸ್ಎಕ್ಸ್, ಎಸ್ಎಕ್ಸ್ (ಒ) ಹಾಗೂ ಎಸ್ಎಕ್ಸ್ ಪ್ಲಸ್ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಪೆಟ್ರೋಲ್ ಮಾದರಿಯಲ್ಲಿ 1.0 ಲೀಟರಿನ ಟರ್ಬೊ ಎಂಜಿನ್ ಅಳವಡಿಸಲಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ವೆನ್ಯೂ ಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಹ್ಯುಂಡೈ

ಟಾಪ್ ಎಂಡ್ ಮಾದರಿಯಾದ ಎಸ್‌ಎಕ್ಸ್ ಪ್ಲಸ್ ಕಾರಿನಲ್ಲಿ ಹೊಸ ಪ್ಯಾಡಲ್ ಶಿಫ್ಟರ್‌ನೊಂದಿಗೆ 7 ಸ್ಪೀಡಿನ ಡಿಸಿಟಿ ಗೇರ್‌ಬಾಕ್ಸ್ ನೀಡಲಾಗಿದೆ. ಹೊಸ ಎಸ್‌ಎಂಟಿ ಗೇರ್‌ಬಾಕ್ಸ್ ಅನ್ನು ಎಸ್‌ಎಕ್ಸ್, ಎಸ್‌ಎಕ್ಸ್ (ಒ) ಮಾದರಿಗಳಲ್ಲಿ ಅಳವಡಿಸಲಾಗಿದೆ.

ವೆನ್ಯೂ ಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಹ್ಯುಂಡೈ

ಡೀಸೆಲ್ ಎಂಜಿನ್ ಅನ್ನು 6 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಎಸ್ಎಕ್ಸ್ ಹಾಗೂ ಎಸ್ಎಕ್ಸ್ (ಒ) ಮಾದರಿಗಳಲ್ಲಿ ಅಳವಡಿಸಲಾಗಿದೆ. 1.5-ಲೀಟರಿನ ಡೀಸೆಲ್ ಎಂಜಿನ್, 98.4 ಬಿಹೆಚ್‌ಪಿ ಪವರ್ ಹಾಗೂ 240 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಹ್ಯುಂಡೈ ವೆನ್ಯೂ ಸ್ಪೋರ್ಟ್ ಕಾಂಪ್ಯಕ್ಟ್ ಎಸ್‍ಯುವಿಯಲ್ಲಿ ಗ್ರಿಲ್, ವ್ಹೀಲ್ ಆರ್ಕ್, ರೂಫ್ ರೇಲ್, ಸ್ಪೋರ್ಟ್ ಬ್ಯಾಡ್ಜ್‌, ರೆಡ್ ಬ್ರೇಕ್ ಕ್ಯಾಲಿಪರ್‌, ಹೊಸ ಗ್ರೇ ಬಂಪರ್ ಗಾರ್ನಿಷ್ ಗಳನ್ನು ಹೊಂದಿದೆ. ಇದರ ಜೊತೆಗೆ ಹ್ಯುಂಡೈ ಕಂಪನಿಯು ಹೊಸ ಡ್ಯುಯಲ್ ಟೋನ್ ಟೈಟಾನ್ ಗ್ರೇ, ಫ್ಯಾಂಟಮ್ ಬ್ಲ್ಯಾಕ್ ರೂಫ್ ಗಳನ್ನು ನೀಡಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ವೆನ್ಯೂ ಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಹ್ಯುಂಡೈ

ಇನ್ನು ಇಂಟಿರಿಯರ್ ನಲ್ಲಿ ಹೊಸ ಫ್ಲಾಟ್ ಬಾಟಮ್ ಸ್ಟೀಯರಿಂಗ್ ವ್ಹೀಲ್, ರೆಡ್ ಸ್ಟಿಚಿಂಗ್, ಹೊಸ ಮೆಟಲ್ ಫೂಟ್ ಪೆಡಲ್, ಡಾರ್ಕ್ ಗ್ರೇ ಅಪ್ ಹೊಲೆಸ್ಟರಿ, ಕ್ನಾಬ್ ಮೇಲೆ ರೆಡ್ ಅಸೆಂಟ್ ಡೋರ್ ಟ್ರಿಮ್ ಮೇಲೆ ರೆಡ್ ಅಸೆಂಟ್ ಗಳಿದ್ದು ಇತರ ಮಾದರಿಗಳಿಗಿಂತ ಭಿನ್ನವಾಗಿ ಹಾಗೂ ಸ್ಪೋರ್ಟಿಯಾಗಿಸಿದೆ. ಐಎಂಟಿ ಒಂದು ಮ್ಯಾನುವಲ್ ಗೇರ್‌ಬಾಕ್ಸ್ ಆಗಿದ್ದು, ಡ್ರೈವರ್‌ ಕ್ಲಚ್ ಬದಲಿಸುವ ಅಗತ್ಯವಿಲ್ಲದ ರೀತಿಯಲ್ಲಿ ಮಾಡಿಫೈಗೊಳಿಸಲಾಗಿದೆ.

ವೆನ್ಯೂ ಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಹ್ಯುಂಡೈ

ಈ ಟೆಕ್ನಾಲಜಿಯು ಗೇರ್ ಲಿವರ್‌ನೊಂದಿಗೆ ಇಂಟೆನ್ಸಿಟಿ ಸೆನ್ಸಾರ್ ಬಳಸುತ್ತದೆಂದು ಕಂಪನಿ ಹೇಳಿದೆ. ಈ ಸೆನ್ಸಾರ್ ಡ್ರೈವರ್ ಗೇರ್‌ ಬದಲಿಸುವಾಗ ಟ್ರಾನ್ಸ್ ಮಿಷನ್ ಕಂಟ್ರೋಲ್ ಯುನಿಟ್ ಗೆ ಸೂಚನೆ ನೀಡುತ್ತದೆ. ಇದರಿಂದಾಗಿ ಕ್ಲಚ್ ಅನ್ನು ಮ್ಯಾನುವಲ್ ಆಗಿ ನಿರ್ವಹಿಸುವ ಅಗತ್ಯವಿಲ್ಲ.

Most Read Articles

Kannada
English summary
Hyundai Venue Sport Trim TVC Goes Online Details. Read In Kannada.
Story first published: Saturday, August 22, 2020, 12:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X