Just In
Don't Miss!
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- News
ಕೊಟ್ಟ ಮಾತು ಉಳಿಸಿಕೊಂಡ ಬೈಡನ್, ಸಂಪುಟದಲ್ಲಿ ಭಾರತೀಯರೇ ಮಿಂಚಿಂಗ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ವಿನ್ಯಾಸದಲ್ಲಿ ಅನಾವರಣಗೊಂಡ 2021ರ ಹ್ಯುಂಡೈ ಟ್ಯೂಸಾನ್ ಎಸ್‍ಯುವಿ
ಹ್ಯುಂಡೈ ಕಂಪನಿಯು ತನ್ನ ಬಹುನಿರೀಕ್ಷಿತ 2021ರ ಟ್ಯೂಸಾನ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಇತ್ತೀಚೆಗೆ ಹ್ಯುಂಡೈ ಕಂಪನಿಯು ಟ್ಯೂಸಾನ್ ಎಸ್‍ಯುವಿಯ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿತ್ತು.

ಅನಾವರಣಗೊಂಡ 2021ರ ಟ್ಯೂಸಾನ್ ಎಸ್‍ಯುವಿಯ ಮುಂಭಾಗ ಆಕರ್ಷಕ ಲುಕ್ ಅನ್ನು ಹೊಂದಿದ, ಈ ಹೊಸ ಎಸ್‍ಯುವಿಯು ಸ್ಪೋರ್ಟಿ ಲುಕ್ ನಲ್ಲಿ ಕಾಣುವಂತೆ ಅಗ್ರೇಸಿವ್ ವಿನ್ಯಾಸವನ್ನು ಹೊಂದಿದೆ. ಈ ಹೂಸ ಟ್ಯೂಸಾನ ಹೆಡ್‌ಲ್ಯಾಂಪ್ ಯುನಿಟ್ ಆಕರ್ಷಕವಾಗಿದೆ. ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯಲ್ಲಿ ಕ್ರೋಮ್ ಸ್ಟ್ರಿಪ್ ಹೊಂದಿದೆ. ಈ ಎಸ್‍ಯುವಿಯ ಕೊನೆಯಲ್ಲಿ ವಿಶಿಷ್ಟವಾದ ಸಿ-ಪಿಲ್ಲರ್ ಆಕಾರವನ್ನು ರೂಪಿಸಿದೆ. ಈ ಹೊಸ ಎಸ್‍ಯುವಿಯ ಹಿಂದಿನ ಪ್ರೊಫೈಲ್‌ನಲ್ಲಿ ಉದ್ದವಾದ ಬೆಲ್ಟ್‌ಲೈನ್ಗಳಿವೆ.

ಈ ಎಸ್‍ಯುವಿಯಲ್ಲಿ 19 ಇಂಚಿನ ವ್ಹೀಲ್ಸ್ ಅನ್ನು ಅಳವಡಿಸಿದೆ. ಈ ವ್ಹೀಲ್ ಗಳು ವಿಭಿನ್ನವಾದ ವಿನ್ಯಾಸದಿಂದ ಕೂಡಿದೆ. ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿ ಶಾರ್ಕ್ ಫಿನ್ ಆಂಟೆನಾ, ಬಾಡಿ ಕಲರ್‌ನಲ್ಲಿ ರೂಫ್-ರೈಲ್ ಮತ್ತು ಫ್ಲೋಟಿಂಗ್ ರೂಫ್‌ಲೈನ್ ಹೊಂದಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹಿಂಭಾಗದಲ್ಲಿ ಅಗಲವಾಗಿ ಉದ್ದಕೂ ರೆಡ್ ಎಲ್ಇಡಿ ಲೈಟ್ ಅನ್ನು ಅಳವಡಿಸಿದೆ. ಇದು ಟೈಲ್-ಲ್ಯಾಂಪ್‌ಗಳನ್ನು ಕನೆಕ್ಟ್ ಆಗಿದೆ. ಇನ್ನು ಟ್ಯೂಸನ್ ಎಸ್‍ಯುವಿಯಲಿರುವ ಟೈಲ್-ಲೈಟ್ ಕ್ರೆಟಾದ ಟೈಲ್-ಲ್ಯಾಂಪ್‌ನ ವಿಕಾಸಗೊಂಡ ಆವೃತ್ತಿಯಂತೆ ಕಾಣುತ್ತದೆ.

ಈ ಎಸ್‍ಯುವಿ ಕೆಳಗಿನ ಬಂಪರ್ ಸಿಲ್ವರ್ ಸ್ಕಿಡ್ ಪ್ಲೇಟ್, ಸ್ಟಾಪ್ ಲ್ಯಾಂಪ್‌ಗಳು ಮತ್ತು ಏರ್ ವೆಂಟ್ಸ್ ಗಳನ್ನು ಹೊಂದಿರುತ್ತದೆ. ಇದು ಇಂಟಿಗ್ರೇಟೆಡ್ ಬ್ರೇಕ್ ಲೈಟ್ ಗಳೊಂದಿಗೆ ರೂಫ್ ಸ್ಪಾಯ್ಲರ್ ಅನ್ನು ಹೊಂದಿದೆ.
MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಇದರೊಂದಿಗೆ ಎಸಿ ಮತ್ತು ಇತರ ಕಂಟ್ರೋಲ್ ಗಳಿಗಾಗಿ ಟಚ್-ಪ್ಯಾನೆಲ್‌ಗಳು, ಅನನ್ಯವಾಗಿ ವಿನ್ಯಾಸಗೊಳಿಸಲಾದ ಮಲ್ಟಿ-ಫಂಕ್ಷನಲ್ ಸ್ಟೀಯರಿಂಗ್ ವ್ಹೀಲ್, ಗೇರ್‌ಬಾಕ್ಸ್, ಪಾರ್ಕಿಂಗ್ ಬ್ರೇಕ್ ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇದರೊಂದಿಗೆ ವೈರ್‌ಲೆಸ್ ಚಾರ್ಜಿಂಗ್ ಮತ್ತು ನೂತನ ಕನೆಕ್ಟಿವಿಟಿ ಫೀಚರ್ ಗಳನ್ನು ಹೊಂದಿರಲಿದೆ. ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯಲ್ಲಿ ಎರಡನೇ ಸಾಲಿನ ಸೀಟುಗಳ ಫ್ಲಾಟ್ ಫೋಲ್ಡಿಂಗ್ ಸಕ್ರಿಯಗೊಳಿಸಿದಾಗ 1,095 ಲೀಟರ್ ಸ್ಪೇಸ್ ಲಭ್ಯವಿರುತ್ತದೆ.

2021ರ ಟ್ಯೂಸಾನ್ ಎಸ್‍ಯುವಿಯಲ್ಲಿ 2.5-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 187 ಬಿಹೆಚ್‍ಪಿ ಪವರ್ ಮತ್ತು 247 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಎಂಜಿನ್ ನೊಂದಿಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇದರೊಂದಿಗೆ ಈ ಹೊಸ ಎಸ್‍ಯುವಿಯಲ್ಲಿ 1.6-ಲೀಟರ್ ಟರ್ಬೊ ಹೈಬ್ರಿಡ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 227 ಬಿಹೆಚ್‍ಪಿ ಪವರ್ ಮತ್ತು 350 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು ಟ್ಯೂಸಾನ್ ಪೇಸ್ ಲಿಫ್ಟ್ ಅನ್ನು ಕೆಲವೇ ತಿಂಗಳುಗಳ ಹಿಂದೆ ಬಿಡುಗಡೆಗೊಳಿಸಿರುವುದರಿಂದ ಈ ಹೊಸ ತಲೆಮಾರಿನ ಟ್ಯೂಸಾನ್ ಎಸ್‍ಯುವಿಯನ್ನು 2022ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.