ಭಾರತಕ್ಕೆ ಕಾಲಿಟ್ಟ ಮೊಟ್ಟ ಮೊದಲ ಎಲೆಕ್ಟ್ರಿಕ್ ಟ್ರಾಕ್ಟರ್

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ವಾಹನಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಇವುಗಳ ನಿರ್ವಹಣಾ ವೆಚ್ಚವು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ವಾಹನಗಳಿಗಿಂತ ಕಡಿಮೆಯಾಗಿರುವುದರಿಂದ, ಜನರು ಎಲೆಕ್ಟ್ರಿಕ್ ವಾಹನಗಳತ್ತ ಗಮನ ಹರಿಸುತ್ತಿದ್ದಾರೆ.

ಭಾರತಕ್ಕೆ ಕಾಲಿಟ್ಟ ಮೊಟ್ಟ ಮೊದಲ ಎಲೆಕ್ಟ್ರಿಕ್ ಟ್ರ್ಯಾಕ್ಟರ್

ಎಲೆಕ್ಟ್ರಿಕ್ ವಾಹನಗಳು ದೇಶಕ್ಕೆ ಮಾತ್ರವಲ್ಲದೇ, ಪರಿಸರಕ್ಕೂ ಹೆಚ್ಚು ಅನುಕೂಲವನ್ನು ಉಂಟುಮಾಡುತ್ತವೆ. ಎಲೆಕ್ಟ್ರಿಕ್ ವಾಹನಗಳಿಂದ ಕಚ್ಚಾ ತೈಲದ ಆಮದು ಕಡಿಮೆಯಾಗಲಿದೆ. ಇದರಿಂದಾಗಿ ದೇಶದ ಆರ್ಥಿಕತೆ ವ್ಯವಸ್ಥೆಯು ಸುಧಾರಿಸಲಿದೆ. ಎಲೆಕ್ಟ್ರಿಕ್ ವಾಹನಗಳು, ಪೆಟ್ರೋಲ್, ಡೀಸೆಲ್ ವಾಹನಗಳಂತೆ ಪರಿಸರವನ್ನು ಕಲುಷಿತಗೊಳಿಸುವುದಿಲ್ಲ.

ಭಾರತಕ್ಕೆ ಕಾಲಿಟ್ಟ ಮೊಟ್ಟ ಮೊದಲ ಎಲೆಕ್ಟ್ರಿಕ್ ಟ್ರ್ಯಾಕ್ಟರ್

ವಾಯುಮಾಲಿನ್ಯದಿಂದ ಸಂಕಷ್ಟವನ್ನು ಎದುರಿಸುತ್ತಿರುವ ಭಾರತಕ್ಕೆ ಎಲೆಕ್ಟ್ರಿಕ್ ವಾಹನಗಳು ವರದಾನವಾಗಿವೆ. ಸದ್ಯಕ್ಕೆ ಸ್ಕೂಟರ್, ಬೈಕ್ ಹಾಗೂ ಕಾರುಗಳನ್ನು ಮಾತ್ರ ಎಲೆಕ್ಟ್ರಿಕ್ ನಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ. ಕೃಷಿಗೆ ಸಂಬಂಧಿಸಿದ ವಾಹನಗಳಲ್ಲಿ ಯಾವುದೇ ಎಲೆಕ್ಟ್ರಿಕ್ ವಾಹನಗಳಿಲ್ಲ.

ಭಾರತಕ್ಕೆ ಕಾಲಿಟ್ಟ ಮೊಟ್ಟ ಮೊದಲ ಎಲೆಕ್ಟ್ರಿಕ್ ಟ್ರ್ಯಾಕ್ಟರ್

ಈಗ ಆ ಕೊರತೆಯನ್ನು ನಿವಾರಿಸಲಾಗಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಟ್ರಾಕ್ಟರ್ ಅನ್ನು ಇದೀಗ ಬಿಡುಗಡೆಗೊಳಿಸಲಾಗಿದೆ. ಈ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಅನ್ನು ಹೈದರಾಬಾದ್ ಮೂಲದ ಸ್ಟಾರ್ಟ್ ಅಪ್ ಕಂಪನಿಯಾದ ಸೆಲೆಸ್ಟಿಯಲ್ ಇ-ಮೊಬಿಲಿಟಿ ಬಿಡುಗಡೆಗೊಳಿಸಿದೆ. ಪರಿಸರ ಸ್ನೇಹಿಯಾಗಿರುವ ಈ ಎಲೆಕ್ಟ್ರಿಕ್ ವಾಹನವು, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.

ಭಾರತಕ್ಕೆ ಕಾಲಿಟ್ಟ ಮೊಟ್ಟ ಮೊದಲ ಎಲೆಕ್ಟ್ರಿಕ್ ಟ್ರ್ಯಾಕ್ಟರ್

ಈ 6 ಹೆಚ್‌ಪಿ ಎಲೆಕ್ಟ್ರಿಕ್ ಟ್ರಾಕ್ಟರ್, 21 ಹೆಚ್‌ಪಿ ಡೀಸೆಲ್ ಎಂಜಿನ್ ಟ್ರಾಕ್ಟರಿಗೆ ಸಮನಾಗಿದೆ. ಈ ಎಲೆಕ್ಟ್ರಿಕ್ ಟ್ರಾಕ್ಟರ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ, 75 ಕಿಲೋಮೀಟರ್ ಗಳವರೆಗೆ ಚಲಿಸುತ್ತದೆ. ಈ ಎಲೆಕ್ಟ್ರಿಕ್ ಟ್ರಾಕ್ಟರ್ 18 ಬಿಹೆಚ್ ಪಿ ಪವರ್ ಹಾಗೂ 53 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಟ್ರಾಕ್ಟರ್ ಇನ್ನೂ ಹಲವಾರು ಫೀಚರ್ ಗಳನ್ನು ಹೊಂದಿದೆ.

ಭಾರತಕ್ಕೆ ಕಾಲಿಟ್ಟ ಮೊಟ್ಟ ಮೊದಲ ಎಲೆಕ್ಟ್ರಿಕ್ ಟ್ರ್ಯಾಕ್ಟರ್

ಈ ಟ್ರ್ಯಾಕ್ಟರ್ ಅನ್ನು ಪವರ್ ಸಾಕೆಟ್ ನಲ್ಲಿ ಚಾರ್ಜ್ ಮಾಡಬಹುದಾಗಿದ್ದು, ಬ್ಯಾಟರಿ ವಿನಿಮಯ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಬ್ಯಾಟರಿಯಲ್ಲಿ ಚಾರ್ಜ್ ಖಾಲಿಯಾದರೆ, ಈಗಾಗಲೇ ಚಾರ್ಜ್ ಮಾಡಲಾದ ಮತ್ತೊಂದು ಬ್ಯಾಟರಿಯನ್ನು ಅಳವಡಿಸುವ ಮೂಲಕ ಟ್ರ್ಯಾಕ್ಟರ್ ಅನ್ನು ನಿರ್ವಹಿಸಬಹುದು. ಇದರಿಂದ ಬ್ಯಾಟರಿ ರೀಚಾರ್ಜ್ ಆಗುವವರೆಗೂ ಕಾಯುವುದು ತಪ್ಪುತ್ತದೆ.

ಭಾರತಕ್ಕೆ ಕಾಲಿಟ್ಟ ಮೊಟ್ಟ ಮೊದಲ ಎಲೆಕ್ಟ್ರಿಕ್ ಟ್ರ್ಯಾಕ್ಟರ್

ಈ ಟ್ರ್ಯಾಕ್ಟರ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳಾದ ರೀ-ಜನರೇಟಿಂಗ್ ಬ್ರೇಕ್ ಹಾಗೂ ಫಾಸ್ಟ್ ಚಾರ್ಜಿಂಗ್ ಗಳನ್ನು ಅಳವಡಿಸಲಾಗಿದೆ. ಸೆಲೆಸ್ಟಿಯಲ್ ಇ-ಮೊಬಿಲಿಟಿ ಈ ಎಲೆಕ್ಟ್ರಿಕ್ ಟ್ರಾಕ್ಟರ್ ಅನ್ನು ಮುಂದಿನ ಮೂರರಿಂದ ಆರು ತಿಂಗಳಲ್ಲಿ ಮಾರಾಟ ಮಾಡುವ ಯೋಜನೆಯನ್ನು ಹೊಂದಿದೆ.

ಭಾರತಕ್ಕೆ ಕಾಲಿಟ್ಟ ಮೊಟ್ಟ ಮೊದಲ ಎಲೆಕ್ಟ್ರಿಕ್ ಟ್ರ್ಯಾಕ್ಟರ್

ಸೆಲೆಸ್ಟಿಯಲ್ ಇ-ಮೊಬಿಲಿಟಿ ಕಂಪನಿಯು ಈ ಎಲೆಕ್ಟ್ರಿಕ್ ಟ್ರಾಕ್ಟರ್‌ನ ಬೆಲೆಯನ್ನು ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಯೋಜನೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳಿಗೆ ಹೋಲಿಸಿದರೆ, ಎಲೆಕ್ಟ್ರಿಕ್ ವಾಹನಗಳು ದುಬಾರಿಯಾಗಿರುತ್ತವೆ.

ಭಾರತಕ್ಕೆ ಕಾಲಿಟ್ಟ ಮೊಟ್ಟ ಮೊದಲ ಎಲೆಕ್ಟ್ರಿಕ್ ಟ್ರ್ಯಾಕ್ಟರ್

ಈ ಟ್ರ್ಯಾಕ್ಟರ್ ಅನ್ನು ರೂ. 5 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದರೆ, ರೈತರಲ್ಲಿ ಜನಪ್ರಿಯವಾಗುವ ಸಾಧ್ಯತೆಗಳಿವೆ. ಇದರಿಂದಾಗಿ ದೇಶದ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯುಂಟಾಗಲಿದೆ.

ಭಾರತಕ್ಕೆ ಕಾಲಿಟ್ಟ ಮೊಟ್ಟ ಮೊದಲ ಎಲೆಕ್ಟ್ರಿಕ್ ಟ್ರ್ಯಾಕ್ಟರ್

ಸೆಲೆಸ್ಟಿಯಲ್ ಇ-ಮೊಬಿಲಿಟಿ ಬಿಡುಗಡೆಗೊಳಿಸಿರುವ ಈ ಎಲೆಕ್ಟ್ರಿಕ್ ಟ್ರಾಕ್ಟರಿನ ನಿರ್ವಹಣ ವೆಚ್ಚವು ಗಂಟೆಗೆ ರೂ. 20 ರಿಂದ ರೂ.35ಗಳಾಗಲಿದೆ. ಈ ಎಲೆಕ್ಟ್ರಿಕ್ ಟ್ರಾಕ್ಟರಿನ ನಿರ್ವಹಣ ವೆಚ್ಚ ಡೀಸೆಲ್ ಟ್ರಾಕ್ಟರುಗಳಿಗಿಂತ ಕಡಿಮೆಯಾಗಿರಲಿದೆ ಎಂದು ಸಹ ಹೇಳಲಾಗುಟ್ಟಿದ್ದು, ರೈತರಿಗೆ ಅನುಕೂಲವಾಗಲಿದೆ.

ಮೂಲ: ಕೃಷಿ ಜಾಗರಣ್

More from DriveSpark

Article Published On: Sunday, March 15, 2020, 11:00 [IST]
English summary
India gets its first ever electric tractor. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+