28 ವರ್ಷಗಳ ನಂತರ ಭಾರೀ ಪ್ರಮಾಣದಲ್ಲಿ ಕುಸಿದ ವಾಹನ ಉತ್ಪಾದನೆ

ಭಾರತದ 2020ರ ಆರ್ಥಿಕ ವರ್ಷವು ಆಟೋಮೊಬೈಲ್ ಉದ್ಯಮಕ್ಕೆ ತೀರಾ ಕೆಟ್ಟದಾಗಿದ್ದು, ವಾಹನಗಳ ಮಾರಾಟವು ತೀವ್ರವಾಗಿ ಕುಸಿದಿದೆ. ಗ್ರಾಹಕರ ಕೊರತೆ, ಹೆಚ್ಚಿನ ಜಿಎಸ್‌ಟಿ, ಬಿಎಸ್ 6 ನಿಯಮ ಹಾಗೂ ಹೊಸ ಸುರಕ್ಷತಾ ಮಾನದಂಡ, ಬೆಲೆ ಹೆಚ್ಚಳ ಇವುಗಳು ವಾಹನ ಮಾರಾಟದ ಮೇಲೆ ಸಾಕಷ್ಟು ಪರಿಣಾಮ ಬೀರಿವೆ.

28 ವರ್ಷಗಳ ನಂತರ ಭಾರೀ ಪ್ರಮಾಣದಲ್ಲಿ ಕುಸಿದ ವಾಹನ ಉತ್ಪಾದನೆ

ಕಳೆದ ವರ್ಷ, ಆಟೋಮೊಬೈಲ್ ಉದ್ಯಮವು 18%ನಷ್ಟು ಕುಸಿತವನ್ನು ದಾಖಲಿಸಿತ್ತು. ಬಹುತೇಕ ವಾಹನ ಕಂಪೆನಿಗಳು ಇನ್ನೂ ಬಿಎಸ್ 4 ವಾಹನಗಳನ್ನು ಮಾರಾಟ ಮಾಡಿಲ್ಲ. ಹೊಸ ಮಾಲಿನ್ಯ ನಿಯಮಗಳ ಹಿನ್ನೆಲೆಯಲ್ಲಿ ಆಟೋಮೊಬೈಲ್ ಕಂಪನಿಗಳು ಬಿಎಸ್ 6 ವಾಹನಗಳ ಉತ್ಪಾದನೆಯನ್ನು ಆರಂಭಿಸಿದ್ದವು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವುಗಳ ಉತ್ಪಾದನೆಯನ್ನು ಸಹ ಸ್ಥಗಿತಗೊಳಿಸಲಾಗಿದೆ.

28 ವರ್ಷಗಳ ನಂತರ ಭಾರೀ ಪ್ರಮಾಣದಲ್ಲಿ ಕುಸಿದ ವಾಹನ ಉತ್ಪಾದನೆ

ಇದರಿಂದಾಗಿ ಭಾರತದಲ್ಲಿ ವಾಹನ ಉತ್ಪಾದನೆಯು 28 ವರ್ಷಗಳ ನಂತರ ಕನಿಷ್ಠ ಮಟ್ಟಕ್ಕೆ ಇಳಿದಿದೆ. ವಾಹನಗಳ ಉತ್ಪಾದನೆಯು 14.7%ನಷ್ಟು ಇಳಿಕೆಯಾಗಿದ್ದು, 2,63,62,284 ಯುನಿಟ್‌ಗಳನ್ನು ಉತ್ಪಾದಿಸಲಾಗಿದೆ. 1992ರ ನಂತರ ಇದೇ ಮೊದಲ ಬಾರಿಗೆ ಈ ಪರಿಸ್ಥಿತಿ ಎದುರಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

28 ವರ್ಷಗಳ ನಂತರ ಭಾರೀ ಪ್ರಮಾಣದಲ್ಲಿ ಕುಸಿದ ವಾಹನ ಉತ್ಪಾದನೆ

ಏಪ್ರಿಲ್ 14ರಂದು ಕೊನೆಗೊಳ್ಳಬೇಕಾಗಿದ್ದ ಲಾಕ್‌ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ವಾಹನಗಳ ಉತ್ಪಾದನೆಯು ಇನ್ನೂ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಈ ವರ್ಷವೂ ವಾಹನ ಉತ್ಪಾದನೆಯಲ್ಲಿ ಕುಸಿತ ಉಂಟಾಗಲಿದೆ.

28 ವರ್ಷಗಳ ನಂತರ ಭಾರೀ ಪ್ರಮಾಣದಲ್ಲಿ ಕುಸಿದ ವಾಹನ ಉತ್ಪಾದನೆ

ಕಳೆದ ಮೂರು ದಶಕಗಳಲ್ಲಿ ಭಾರತದ ವಾಹನ ಉತ್ಪಾದನೆಯಲ್ಲಿ ಭಾರಿ ಬದಲಾವಣೆಗಳಾಗಿವೆ. ಕಳೆದ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ, 34,34,015 ಯುನಿಟ್ ಪ್ಯಾಸೆಂಜರ್ ವಾಹನಗಳನ್ನು ಉತ್ಪಾದಿಸಲಾಗಿದ್ದು, 14.7%ನಷ್ಟು ಕುಸಿತ ಉಂಟಾಗಿದೆ. ಈ ಸೆಗ್‌ಮೆಂಟ್‌ನಲ್ಲಿಯೂ ಭಾರೀ ನಷ್ಟವುಂಟಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

28 ವರ್ಷಗಳ ನಂತರ ಭಾರೀ ಪ್ರಮಾಣದಲ್ಲಿ ಕುಸಿದ ವಾಹನ ಉತ್ಪಾದನೆ

ಲಾಕ್‌ಡೌನ್ ತೆಗೆದು ಹಾಕಿದ ನಂತರ ಆಟೋಮೊಬೈಲ್ ಕಂಪೆನಿಗಳು ಉತ್ಪಾದನೆಯನ್ನು ಪುನ ಆರಂಭಿಸುವುದು ಸವಾಲಿನ ಕೆಲಸವಾಗಿರಲಿದೆ. ವಾಹನಗಳ ಉತ್ಪಾದನೆಗೆ ಸರಬರಾಜು, ಭದ್ರತೆ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಲಿದೆ.

28 ವರ್ಷಗಳ ನಂತರ ಭಾರೀ ಪ್ರಮಾಣದಲ್ಲಿ ಕುಸಿದ ವಾಹನ ಉತ್ಪಾದನೆ

ವಾಹನ ತಯಾರಕ ಕಂಪನಿಗಳು ಮತ್ತೆ ವಾಹನಗಳ ಉತ್ಪಾದನೆಯನ್ನು ಆರಂಭಿಸುವ ಕೆಲಸವನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ. ಟೊಯೊಟಾ ಕಂಪನಿಯು ರಿಸ್ಟಾರ್ಟ್ ಮ್ಯಾನುವಲ್ ಅನ್ನು ಬಿಡುಗಡೆಗೊಳಿಸಿದೆ. ಇದರಿಂದ ಲಾಕ್‌ಡೌನ್ ನಂತರ ಟೊಯೊಟಾ ಕಂಪನಿಯು ತನ್ನ ಉತ್ಪಾದನಾ ಘಟಕವನ್ನು ತೆರೆಯುವುದು ಖಚಿತವಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

28 ವರ್ಷಗಳ ನಂತರ ಭಾರೀ ಪ್ರಮಾಣದಲ್ಲಿ ಕುಸಿದ ವಾಹನ ಉತ್ಪಾದನೆ

ಭಾರತದ ಹಣಕಾಸು ವ್ಯವಸ್ಥೆಯು ಈ ವರ್ಷವೂ ಸಹ ಆರ್ಥಿಕ ಹಿಂಜರಿತಕ್ಕೆ ಒಳಗಾಗಲಿದೆ. ಈ ವರ್ಷವೂ ಸಹ ಗ್ರಾಹಕರ ದುರ್ಬಲ ಬೇಡಿಕೆಯಿಂದಾಗಿ, ಮಾರಾಟದಲ್ಲಿ ಭಾರಿ ಇಳಿಕೆಯಾಗಬಹುದು. ಇದರಿಂದ ಆಟೋಮೊಬೈಲ್ ಕಂಪನಿಗಳು ಚೇತರಿಸಿಕೊಳ್ಳಲು ಹಲವಾರು ತಿಂಗಳುಗಳು ಬೇಕಾಗುತ್ತವೆ.

Article Published On: Tuesday, April 21, 2020, 16:22 [IST]
English summary
Indian auto industry production declines to 28 year low. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+