ಕರೋನಾ ಸಂಕಷ್ಟ: ಹೊಸ ವಾಹನ ಮಾರಾಟ ಸುಧಾರಿಸಲು ಬೇಕಿದೆ ಇನ್ನೂ ಮೂರ್ನಾಲ್ಕು ವರ್ಷ

ಮಾಹಾಮಾರಿ ಕರೋನಾ ವೈರಸ್‌ ಪರಿಣಾಮ ಬಹುತೇಕ ಆಟೋ ಕಂಪನಿಗಳಿಗೆ ಭಾರೀ ನಷ್ಟ ಉಂಟಾಗಿದ್ದು, ಲಾಕ್‌ಡೌನ್ ವಿನಾಯ್ತಿ ನಂತರವೂ ಹೊಸ ವಾಹನಗಳ ಮಾರಾಟ ಪ್ರಮಾಣದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸುತ್ತಿರುವುದು ಆಟೋ ಕಂಪನಿಗಳಿಗೆ ಭೀತಿ ಉಂಟು ಮಾಡಿದೆ.

ಹೊಸ ವಾಹನ ಮಾರಾಟ ಸುಧಾರಿಸಲು ಬೇಕಿದೆ ಇನ್ನೂ ಮೂರ್ನಾಲ್ಕು ವರ್ಷ

ಸದ್ಯ ವೈರಸ್ ಭೀತಿ ನಡುವೆಯೂ ಹೊಸ ಸುರಕ್ಷಾ ಮಾರ್ಗಸೂಚಿಗಳೊಂದಿಗೆ ವ್ಯಾಪಾರ ವಹಿವಾಟು ಕೈಗೊಂಡಿರುವ ಆಟೋ ಕಂಪನಿಗಳು ಮೇ ಅವಧಿಯಲ್ಲಿ ಕನಿಷ್ಠ ಪ್ರಮಾಣದ ವಾಹನ ಮಾರಾಟ ಪ್ರಮಾಣವನ್ನು ದಾಖಲಿಸಿದ್ದು, ಬಹುತೇಕ ವಾಹನಗಳ ಮಾರಾಟದಲ್ಲಿ ಶೇ.70ರಿಂದ ಶೇ.97ರಷ್ಟು ಕುಸಿತ ಕಂಡುಬಂದಿದೆ. ವೈರಸ್ ಭೀತಿ ಹಿನ್ನಲೆಯಲ್ಲಿ ಹೊಸ ವಾಹನ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದ್ದು, ಮುಂಬರುವ ದಿನಗಳಲ್ಲಿ ಮಾರಾಟ ಮಾರಾಟದಲ್ಲಿ ಚೇತರಿಕೆ ಕಾಣಬಹುದು ಎನ್ನಲಾಗಿದೆ.

ಹೊಸ ವಾಹನ ಮಾರಾಟ ಸುಧಾರಿಸಲು ಬೇಕಿದೆ ಇನ್ನೂ ಮೂರ್ನಾಲ್ಕು ವರ್ಷ

ಕರೋನಾ ಮಹಾಮಾರಿಯಿಂದಾಗಿ ಕೇವಲ ಆಟೋ ಉದ್ಯಮದಲ್ಲಿ ಮಾತ್ರವಲ್ಲ ಎಲ್ಲಾ ವಾಣಿಜ್ಯ ವಹಿವಾಟಿನಲ್ಲೂ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಒಂದು ಹೊಸ ಸವಾಲಾಗಿ ಪರಿಣಮಿಸಿದೆ.

ಹೊಸ ವಾಹನ ಮಾರಾಟ ಸುಧಾರಿಸಲು ಬೇಕಿದೆ ಇನ್ನೂ ಮೂರ್ನಾಲ್ಕು ವರ್ಷ

ಸದ್ಯ ತೀವ್ರ ಕುಸಿತ ಕಂಡಿರುವ ಹೊಸ ವಾಹನ ಮಾರಾಟವು ಮತ್ತೆ ಮೊದಲಿನಂತೆ ಚೇತರಿಸಿಕೊಳ್ಳಲು ತುಸು ಸಮಯಾವಕಾಶ ತೆಗೆದುಕೊಳ್ಳಲಿದ್ದು, ಆಟೋ ತಜ್ಞರ ಪ್ರಕಾರ ವಾಹನ ಮಾರಾಟವು ಮೊದಲಿನ ಸ್ಥಿತಿಗೆ ಬರಲು ಕನಿಷ್ಠ 3 ರಿಂದ 4 ವರ್ಷ ಬೇಕಾಗಬಹುದು ಅಂದಾಜಿಸಿದ್ದಾರೆ.

ಹೊಸ ವಾಹನ ಮಾರಾಟ ಸುಧಾರಿಸಲು ಬೇಕಿದೆ ಇನ್ನೂ ಮೂರ್ನಾಲ್ಕು ವರ್ಷ

ಭಾರತೀಯ ಆಟೋ ಮೊಬೈಲ್ ಉದ್ಯಮದ ನಿರ್ವಹಣೆ ಮಾಡುತ್ತಿರುವ SIAM(ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಟರರ್ಸ್) ಸಂಘವು ಕೂಡಾ ಇದೇ ಅಂಶದ ಮೇಲೆ ಕಳವಳ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಸುಧಾರಣೆಗೆ ಕೇಂದ್ರ ಸರ್ಕಾರದಿಂದ ಗರಿಷ್ಠ ವಿನಾಯ್ತಿಗಳಿಗೆ ಬೇಡಿಕೆಯಿಡುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಹೊಸ ವಾಹನ ಮಾರಾಟ ಸುಧಾರಿಸಲು ಬೇಕಿದೆ ಇನ್ನೂ ಮೂರ್ನಾಲ್ಕು ವರ್ಷ

ಹೊಸ ವಾಹನ ಮಾರಾಟವನ್ನು ಸುಧಾರಿಸುವತ್ತ ಸರ್ಕಾರ ಕೈಗೊಳ್ಳಬಹುದಾದ ಸಲಹೆಗಳ ಪಟ್ಟಿ ಮಾಡಿರುವ ಸೈಮಾ ಸಂಘವು ಕೇಂದ್ರ ಸರ್ಕಾರಕ್ಕೆ ಶೀಘ್ರದಲ್ಲೇ ಪ್ರಾಸ್ತಾಪಿಸುವ ಸಾಧ್ಯತೆಗಳಿದ್ದು, ಜಿಎಸ್‌ಟಿ ಇಳಿಕೆ ಸೇರಿದಂತೆ ಹಲವು ವಿನಾಯ್ತಿಗಳನ್ನು ಕೋರುವ ಸಾಧ್ಯತೆಗಳಿವೆ.

ಹೊಸ ವಾಹನ ಮಾರಾಟ ಸುಧಾರಿಸಲು ಬೇಕಿದೆ ಇನ್ನೂ ಮೂರ್ನಾಲ್ಕು ವರ್ಷ

ಇನ್ನು ಎಪ್ರಿಲ್‌ ಅವಧಿಯ ವಾಹನಗಳ ಮಾರಾಟದಲ್ಲಿ ಸೊನ್ನೆ ಸುತ್ತಿರುವ ಬಹುತೇಕ ಆಟೋ ಕಂಪನಿಗಳು ಮೇ ಅವಧಿಯಲ್ಲಿ ಶೇ.85ರಷ್ಟು ವಾಹನ ಮಾರಾಟ ಇಳಿಕೆ ಕಂಡಿದ್ದು, ಈಗಲೂ ಕೂಡಾ ಹಲವು ಕಂಪನಿಗಳು ಕನಿಷ್ಠ ಪ್ರಮಾಣದ ವಾಹನ ಮಾರಾಟಕ್ಕೂ ಪರಿತಪಿಸುತ್ತಿವೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹೊಸ ವಾಹನ ಮಾರಾಟ ಸುಧಾರಿಸಲು ಬೇಕಿದೆ ಇನ್ನೂ ಮೂರ್ನಾಲ್ಕು ವರ್ಷ

ಸದ್ಯಕ್ಕೆ ಆಟೋ ಉದ್ಯಮಕ್ಕೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದ್ದರೂ ಕೂಡಾ ವಾಹನ ಖರೀದಿದಾರರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದ್ದು, ಹೊಸ ವಾಹನಗಳ ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುವ ಮೂಲಕ ವಿವಿಧ ಮಾದರಿಯ ಡಿಸ್ಕೌಂಟ್ ನೀಡಿ ಗ್ರಾಹಕರನ್ನು ಸೆಳೆಯುತ್ತಿವೆ.

Article Published On: Sunday, July 19, 2020, 8:45 [IST]
English summary
ndian Auto industry sales recovery to take 3 to 4 years says SIAM details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+