ಕಾರು ಮಾಲೀಕರೇ ಗಮನಿಸಿ, ಇನ್ಮುಂದೆ ವಿಂಡ್‌ಶೀಲ್ಡ್ ಮೇಲೆ ಐಎಸ್‌ಐ ಮಾರ್ಕ್ ಕಡ್ಡಾಯ

ಪ್ರಯಾಣಿಕ ಸುರಕ್ಷತೆಗಾಗಿ ಈಗಾಗಲೇ ಹೊಸ ವಾಹನಗಳಲ್ಲಿ ಹಲಾವರು ಹೊಸ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಇದೀಗ ಮತ್ತಷ್ಟು ಹೊಸ ಸುರಕ್ಷಾ ಕ್ರಮಗಳೊಂದಿಗೆ ಸುರಕ್ಷಿತ ವಾಹನ ಸವಾರಿಗೆ ಆದ್ಯತೆ ನೀಡಲಾಗುತ್ತಿದೆ.

ಇನ್ಮುಂದೆ ವಿಂಡ್‌ಶೀಲ್ಡ್ ಮೇಲೆ ಐಎಸ್‌ಐ ಮಾರ್ಕ್ ಕಡ್ಡಾಯ

ಕಳೆದ ಒಂದು ದಶಕದ ಅವಧಿಯಲ್ಲಿ ಕಾರು ಉತ್ಪಾದನೆ ಮತ್ತು ಗ್ರಾಹಕರ ಸುರಕ್ಷತೆಯಲ್ಲಿ ಮಹತ್ವದ ಬದಲಾವಣೆ ಪರಿಚಸಿಯಿಸಿರುವ ಕೇಂದ್ರ ಸರ್ಕಾರವು ಇದೀಗ ಮತ್ತೊಂದು ಬದಲಾವಣೆಗೆ ಸಜ್ಜಾಗಿದ್ದು, ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಕಾರಿನ ವಿಂಡ್‌ಶೀಲ್ಡ್ ಹಾಗೂ ವಿಂಡೋ ಪೇನ್‌ಗಳ ಮೇಲೆ ಐಎಸ್‌ಐ ಗುರುತುಗಳಿರುವುದನ್ನು ಕಡ್ಡಾಯಗೊಳಿಸುವ ಮೂಲಕ ಮಹತ್ವದ ಕ್ರಮ ಕೈಗೊಂಡಿದೆ.

ಇನ್ಮುಂದೆ ವಿಂಡ್‌ಶೀಲ್ಡ್ ಮೇಲೆ ಐಎಸ್‌ಐ ಮಾರ್ಕ್ ಕಡ್ಡಾಯ

ಹೊಸ ನಿಯಮದಿಂದಾಗಿ ಇನ್ಮುಂದೆ ಭಾರತದಲ್ಲಿ ಮಾರಾಟವಾಗುವ ಪ್ರತಿಯೊಂದು ಹೊಸ ಕಾರುಗಳು ಐಎಸ್‌ಐ ಗುರುತು ಹೊಂದಿರುವ ವಿಂಡ್‌ಶೀಲ್ಡ್ ಗಳನ್ನು ಹೊಂದುವುದು ಕಡ್ಡಾಯವಾಗಲಿದೆ.

ಇನ್ಮುಂದೆ ವಿಂಡ್‌ಶೀಲ್ಡ್ ಮೇಲೆ ಐಎಸ್‌ಐ ಮಾರ್ಕ್ ಕಡ್ಡಾಯ

ಆದರೆ ಹೊಸ ನಿಯಮವು ಆಮದು ಮಾಡಿಕೊಳ್ಳಲಾಗುವ ಕಾರು ಮಾದರಿಗಳಿಗೆ ಅನ್ವಯಿಸುವುದಿಲ್ಲವಾದರೂ ವಿದೇಶಿ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳುವ ಕಾರುಗಳು ಬಹುತೇಕ ಸುರಕ್ಷಾ ಮಾನದಂಡಗಳನ್ನು ಪಾಲನೆ ಮಾಡಿದ ನಂತರವೇ ಆಮದಿಗೆ ಅವಕಾಶ ನೀಡಲಾಗಿರುತ್ತದೆ ಎನ್ನುವುದು ಗಮನಿಸಬೇಕಾದ ಅಂಶ.

ಇನ್ಮುಂದೆ ವಿಂಡ್‌ಶೀಲ್ಡ್ ಮೇಲೆ ಐಎಸ್‌ಐ ಮಾರ್ಕ್ ಕಡ್ಡಾಯ

ಇನ್ನು ಹೊಸ ನಿಯಮದನ್ವಯ ಭಾರತದಲ್ಲಿ ಮಾರಾಟವಾಗುವ ಎಲ್ಲಾ ರೀತಿಯ ವಿಂಡ್‌ಶೀಲ್ಡ್‌ಗಳಿಗೂ ಐಎಸ್‌ಐ ಗುರುತು ಕಡ್ಡಾಯವಾಗಲಿದ್ದು, ಕಾರುಗಳಲ್ಲಿ ಗುಣಮಟ್ಟದ ವಿಂಡ್‌ಶೀಲ್ಡ್ ಗಳನ್ನು ಅಳವಡಿಸಲು ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಹೇಳಿದೆ.

ಇನ್ಮುಂದೆ ವಿಂಡ್‌ಶೀಲ್ಡ್ ಮೇಲೆ ಐಎಸ್‌ಐ ಮಾರ್ಕ್ ಕಡ್ಡಾಯ

ಹೊಸ ಕಾರುಗಳ ಬೆಲೆ ಇಳಿಕೆಗಾಗಿ ಬಹುತೇಕ ಕಂಪನಿಗಳು ಕಳಪೆ ಗುಣಮಟ್ಟದ ವಿಂಡ್‌ಸ್ಕ್ರೀನ್‌ಗಳನ್ನು ಅಳವಡಿಸುತ್ತಿರುವುದು ಹಲವಾರು ಬಾರಿ ಅಪಘಾತಗಳ ಸಂದರ್ಭದಲ್ಲಿ ಬಹಿರಂಗವಾಗಿದ್ದು, ಈ ಹಿನ್ನಲೆ ಕಳಪೆ ಗುಣಮಟ್ಟದ ವಿಂಡ್‌ಸ್ಕ್ರೀನ್ ಗಳ ಬಳಕೆಗೆ ಬ್ರೇಕ್ ಹಾಕಲು ಇದು ಸಹಕಾರಿಯಾಗುತ್ತದೆ.

ಇನ್ಮುಂದೆ ವಿಂಡ್‌ಶೀಲ್ಡ್ ಮೇಲೆ ಐಎಸ್‌ಐ ಮಾರ್ಕ್ ಕಡ್ಡಾಯ

ಕಳಪೆ ಗುಣಮಟ್ಟದ ವಿಂಡ್‌ಸ್ಕ್ರೀನ್‌ಗಳಿಂದಾಗಿ ಅಪಘಾತ ಸಂದರ್ಧದಲ್ಲಿ ಒಡೆದು ಚಾಲಕನ ಕಣ್ಣು ಹಾಗೂ ಮುಖದ ಭಾಗಕ್ಕೆ ಗಂಭೀರ ಗಾಯಗಳಾಗುವ ಸಾಧ್ಯತೆ ಹೆಚ್ಚಿದ್ದು, ಇದು ಕೆಲವೊಮ್ಮೆ ಕಾರು ಚಾಲಕನ ಸಾವಿಗೂ ಸಹ ಕಾರಣವಾಗಬಹುದು.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಇನ್ಮುಂದೆ ವಿಂಡ್‌ಶೀಲ್ಡ್ ಮೇಲೆ ಐಎಸ್‌ಐ ಮಾರ್ಕ್ ಕಡ್ಡಾಯ

ಹೀಗಾಗಿ ಐಎಸ್ಐ ಗುರುತನ್ನು ಹೊಂದಿಲ್ಲದ ವಿಂಡ್‌ಶೀಲ್ಡ್ ಗಳ ಆಮದನ್ನು ಸಹ ನಿಷೇಧಿಸಲಾಗಿದ್ದು, ವಿಂಡ್‌ಸ್ಕ್ರೀನ್ ಆಮದು ಮಾಡಿಕೊಳ್ಳುವುದಾದರೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಪರಿಶೀಲನಾ ಪ್ರಕ್ರಿಯೆಯ ಮೂಲಕ ಹೋಗಬೇಕಾಗುತ್ತದೆ.

ಇನ್ಮುಂದೆ ವಿಂಡ್‌ಶೀಲ್ಡ್ ಮೇಲೆ ಐಎಸ್‌ಐ ಮಾರ್ಕ್ ಕಡ್ಡಾಯ

ಆಗ ಮಾತ್ರ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಸಂಸ್ಥೆಯು ಅವುಗಳನ್ನು ಮಾರಾಟ ಮಾಡಲು ಅನುಮತಿ ನೀಡಲಿದ್ದು, ಕಾರು ಕಂಪನಿಗಳಿಗೆ ಐಎಸ್‌ಐ ಗುರುತನ್ನು ಕಾರಿನ ವಿಂಡ್‌ಸ್ಕ್ರೀನ್ ಹಾಗೂ ವಿಂಡೋಗಳ ಮೂಲೆಯಲ್ಲಿರಿಸುವಂತೆ ಆದೇಶ ನೀಡಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಇನ್ಮುಂದೆ ವಿಂಡ್‌ಶೀಲ್ಡ್ ಮೇಲೆ ಐಎಸ್‌ಐ ಮಾರ್ಕ್ ಕಡ್ಡಾಯ

ಗ್ಲಾಸುಗಳ ಸುರಕ್ಷತಾ ತಪಾಸಣೆಗಾಗಿ ಹಾಗೂ ಪ್ರೂಫ್ ಗಳನ್ನು ಪಡೆಯುವುದಕ್ಕಾಗಿ ಬಿಐಎಸ್ 6 ತಿಂಗಳ ಕಾಲಾವಕಾಶ ನೀಡಿದ್ದು, ಈ ನಿಯಮವನ್ನು 2021ರ ಏಪ್ರಿಲ್ 1ರಿಂದ ದೇಶಾದ್ಯಂತ ಜಾರಿಗೆ ತರಲಾಗುವುದು.

ಇನ್ಮುಂದೆ ವಿಂಡ್‌ಶೀಲ್ಡ್ ಮೇಲೆ ಐಎಸ್‌ಐ ಮಾರ್ಕ್ ಕಡ್ಡಾಯ

ಇದಕ್ಕೂ ಮುನ್ನ ಅಗತ್ಯವಿರುವ ಎಲ್ಲಾ ಸರ್ಟಿಫಿಕೇಟ್ ಗಳನ್ನು ಪಡೆಯುವಂತೆ ಕಾರು ಕಂಪನಿಗಳಿಗೆ ಆದೇಶ ನೀಡಲಾಗಿದ್ದು, ಐಎಸ್ಐ ಮುದ್ರಿತ ವಿಂಡ್‌ಶೀಲ್ಡ್ ಕಡ್ಡಾಯಕ್ಕೂ ಮೊದಲು ಬಿಐಎಸ್ ಮತ್ತು ಐಎಸ್ಐ ಗುರುತು ಹೊಂದಿಲ್ಲದ ಹೆಲ್ಮೆಟ್‌ಗಳ ಬಳಕೆಯನ್ನು ನಿಷೇಧಿಸಿತ್ತು.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಇನ್ಮುಂದೆ ವಿಂಡ್‌ಶೀಲ್ಡ್ ಮೇಲೆ ಐಎಸ್‌ಐ ಮಾರ್ಕ್ ಕಡ್ಡಾಯ

ಐಎಸ್ಐ ಗುರುತು ಹೊಂದಿಲ್ಲದ ಹೆಲ್ಮೆಟ್‌ಗಳು ಅಪಘಾತದ ಸಮಯದಲ್ಲಿ ಚಾಲಕನ ತಲೆಯನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ಮಾರಾಟದ ಮೇಲೆ ನಿಷೇಧ ಹೇರಿದ್ದು, ಇದೀಗ ಮತ್ತೊಂದು ಐತಿಹಾಸಿಕ ಕ್ರಮ ಜರುಗಿಸಿದೆ.

Most Read Articles

Kannada
English summary
ISI mark compulsory on car windshields says Bureau of Indian standards. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X