ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ನೀಡಲಿವೆ ಈ ಹಾರುವ ಕಾರುಗಳು
ಕಾಮಿಕ್ಸ್ ಹಾಗೂ ಸಿನಿಮಾಗಳಲ್ಲಿ ಮಾತ್ರವೇ ಕಂಡುಬರುತ್ತಿದ್ದ ಹಾರುವ ಕಾರುಗಳು ಇನ್ನು ಮುಂದೆ ಜನಸಾಮಾನ್ಯರಿಗೂ ದೊರೆಯಲಿವೆ. ಅನೇಕ ಕಂಪನಿಗಳು ಹಾರುವ ಕಾರುಗಳನ್ನು ಜನ ಸಾಮಾನ್ಯರ ಕೈಗೆಟುಕುವಂತೆ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿವೆ.

ಇಸ್ರೇಲಿನ ಏರೋನಾಟಿಕ್ಸ್ ಕಂಪನಿಯಾದ ಅರ್ಬನ್ ಏರೋನಾಟಿಕ್ಸ್ ಹಾರುವ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಕಂಪನಿಯು ಈ ಹಾರುವ ಕಾರುಗಳಿಗೆ ಸಿಟಿ ಹಾಕ್ ಇವಿಟೋಲ್ ಎಂಬ ಹೆಸರನ್ನಿಟ್ಟಿದ್ದು, ಅದರ ಮೂಲಮಾದರಿಯನ್ನು ಸಿದ್ಧಪಡಿಸಿದೆ. ವಿಶೇಷವೆಂದರೆ ಈ ಹಾರುವ ಕಾರುಗಳಲ್ಲಿ ರೆಕ್ಕೆಗಳಾಗಲಿ, ರೋಟರ್ ಗಳಾಗಲಿ ಇಲ್ಲ. ಇದರಿಂದ ಯಾವುದೇ ತೊಂದರೆಯಿಲ್ಲದೆ ಈ ಹಾರುವ ಕಾರುಗಳನ್ನು ಎಲ್ಲಿಂದ ಬೇಕಾದರೂ ಹಾರಿಸಬಹುದು. ತುಂಬಾ ಚಿಕ್ಕ ಗಾತ್ರವನ್ನು ಹೊಂದಿರುವ ಈ ಕಾರು 6 ಸೀಟುಗಳನ್ನು ಹೊಂದಿದೆ.

ಈ ಕಾರುಗಳಿಂದ ತುರ್ತು ಸೇವೆ ಹಾಗೂ ನಗರ ಸಾರಿಗೆಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಾರುವ ಕಾರುಗಳನ್ನು ಏರ್ ಟ್ಯಾಕ್ಸಿಯಾಗಿ ಆರಂಭಿಸಲು ಕಂಪನಿಯು ಬಯಸಿದೆ. ಇದರಲ್ಲಿರುವ ಹೈಡ್ರೋಜನ್ ಫ್ಯೂಯಲ್ ಸೆಲ್, ಸಿಟಿ ಹಾಕ್ ಹಾರುವ ಕಾರಿಗೆ ಪವರ್ ನೀಡುತ್ತದೆ.
MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಹೈಡ್ರೋಜನ್ ಫ್ಯೂಯಲ್ ಸೆಲ್ ಅನ್ನು ಗ್ರೀನ್ ಟೆಕ್ನಾಲಜಿಯ ಆಧಾರದ ಮೇಲೆ ತಯಾರಿಸಲಾಗಿದೆ. ಈ ಟೆಕ್ನಾಲಜಿಯಲ್ಲಿ ಹೈಡ್ರೋಜನ್ ಅನ್ನು ಇಂಧನವಾಗಿ ಬಳಸಲಾಗುತ್ತದೆ. ಈ ಹೈಡ್ರೋಜನ್ ನಿಂದ ಯಾವುದೇ ರೀತಿಯ ವಾಯು ಮಾಲಿನ್ಯ ಉಂಟಾಗುವುದಿಲ್ಲ.

ಸಿಟಿ ಹಾಕ್ ಹಾರುವ ಕಾರುಗಳು ಇತ್ತೀಚಿನ ಏರೋಡೈನಾಮಿಕ್ ಟೆಕ್ನಾಲಜಿಯನ್ನು ಬಳಸುತ್ತವೆ. ಈ ಟೆಕ್ನಾಲಜಿಯು ಹೆಚ್ಚಿನ ವೇಗ, ಕಡಿಮೆ ಶಬ್ದ, ಸ್ಟಾಬಿಲಿಟಿ ಹಾಗೂ ಸರಿಯಾದ ಕಂಟ್ರೋಲ್ ಅನ್ನು ನೀಡುತ್ತದೆ.
MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ವಿಮಾನ ತಯಾರಕ ಕಂಪನಿಯಾದ ಅರ್ಬನ್ ಏರೋನಾಟಿಕ್ಸ್ 15 ವರ್ಷಗಳ ಸಂಶೋಧನೆ ಹಾಗೂ ಅಭಿವೃದ್ಧಿಯ ನಂತರ ಈ ಕಾರನ್ನು ಅಂತಿಮಗೊಳಿಸಿದೆ. ಕಂಪನಿಯ ಎಂಜಿನಿಯರ್‌ಗಳು ವ್ಯಾಪಕ ಸಂಶೋಧನೆಯ ನಂತರ ಇಂಟರ್ ನಲ್ ಪ್ರೊಪೆಲ್ಲರ್ ಸಿಸ್ಟಂಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಸಿಸ್ಟಂ ಹಾರುವ ಕಾರುಗಳನ್ನು ಸುರಕ್ಷಿತವಾಗಿಸುತ್ತದೆ. ಈ ಕಾರನ್ನು ವಿವಿಧ ಸನ್ನಿವೇಶಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ಪರೀಕ್ಷೆ ಯಶಸ್ವಿಯಾದ ನಂತರ ಈ ಕಾರನ್ನು ನಗರಗಳಲ್ಲಿ ಫ್ಲೈಯಿಂಗ್ ಟ್ಯಾಕ್ಸಿಯಾಗಿ ಬಳಸಬಹುದು.


Click it and Unblock the Notifications