Just In
Don't Miss!
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶೀಘ್ರದಲ್ಲೇ ಡೀಲರ್ ಬಳಿ ತಲುಪಲಿವೆ ಬಿಎಸ್-6 ಇಸುಝು ಮಾದರಿಗಳು
ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಇಸುಝು ಮೋಟಾರ್ಸ್ ತನ್ನ ಸರಣಿಯಲ್ಲಿರುವ ವಾಹನಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಇನ್ನು ನವೀಕರಿಸಲಾಗಿಲ್ಲ. ಇದೀಗ ಇಸುಝು ಕಂಪನಿಯು ತನ್ನ ಜನಪ್ರಿಯ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವಲ್ಲಿ ನಿರತರಾಗಿದ್ದರೆ.

ಕೆಲವು ವರದಿಗಳ ಪ್ರಕಾರ ಇಸುಝು ಸರಣಿಯಲ್ಲಿರುವ ಜನಪ್ರಿಯ ಬಿಎಸ್-6 ಮಾದರಿಗಳು ಡೀಲರ್ ಗಳನ್ನು ಮುಂದಿನ ತಿಂಗಳು ತಲುಪುವ ನಿರೀಕ್ಷಿಯಿದೆ. ಅಂದರೆ ಮುಂದಿನ ತಿಂಗಳು ಬಿಎಸ್-6 ಇಸುಝು ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ. ಈ ಹಿಂದೆ ಇಸುಝು ಬಿಎಸ್-6 ಮಾದರಿಗಳು ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು ಎಂದು ವರದಿಗಳು ಪ್ರಕಟವಾಗಿತ್ತು.

ಯಾಕೆಂದರೆ ಕೆಲವು ತಿಂಗಳ ಹಿಂದೆ ಕರೋನಾ ವೈರಸ್ ಭೀತಿಯಿಂದ ದೇಶದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿತ್ತು. ಇನ್ನು ವಾಹನಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಲಾಕ್ ಡೌನ್ ವಿನಾಯಿತಿಯ ಬಳಿಕ ವಾಹನ ಉತ್ಪಾದನೆಗಳನ್ನು ಪ್ರಾರಂಭಿಸಲಾಗಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ವರದಿಯ ಪ್ರಕಾರ ಕೆಲವು ಆಯ್ದ ವಿತರಕರು ಪ್ರಸ್ತುತ ಬಿಎಸ್-4 ವಾಹನಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಮೊದಲೇ ನೋಂದಾಯಿಸಲಾದ ವಾಹನಗಳನ್ನು ಆಯ್ದ ಡೀಲರ್ ಗಳು ಮಾರಾಟ ಮಾಡುತ್ತಿದ್ದಾರೆ.ಖರೀದಿಯ ಬಳಿಕ ಅದನ್ನು ಗ್ರಾಹಕರ ಹೆಸರಿಗೆ ವರ್ಗಾಯಿಸಲಾಗುತ್ತದೆ.

ಪರಿಣಾಮವಾಗಿ, ಗ್ರಾಹಕರು ಒಡೋ ಮೀಟರ್‌ನಲ್ಲಿ ಶೂನ್ಯ ಕಿಲೋಮೀಟರ್ ಹೊಂದಿರುವ ವಾಹನದ ಎರಡನೇ ಮಾಲೀಕರಾಗುತ್ತಾರೆ. ಕಂಪನಿಯ ಡೀಲರ್ ಗಳು ಮೊದಲೇ ನೋಂದಾಯಿತ ಬಿಎಸ್ 4 ವಾಹನಗಳಿಗೆ 1.5 ಲಕ್ಷ ರೂ.ಗಳವರೆಗೆ ಹೆಚ್ಚಿನ ರಿಯಾಯಿತಿ ನೀಡುತ್ತಿದ್ದಾರೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಇದರೊಂದಿಗೆ ಹೆಚ್ಚುವರಿಯಾಗಿ 3 ವರ್ಷ ಅಥವಾ 1 ಲಕ್ಷ ಕಿ.ಮೀ ಮತ್ತು ಎಎಂಸಿ ಒಪ್ಪಂದಗಳಿಗೆ ಉಚಿತ ಸರ್ವಿಸ್ ಪ್ಯಾಕೇಜ್ ನಂತಹ ಆಕರ್ಷಕ ಆಫರ್ ಗಳನ್ನು ನೀಡಲಾಗುತ್ತದೆ. ಹೆಚ್ಚುವರಿ ಮಾಲೀಕತ್ವವನ್ನು ಹೊಂದಿರುವುದರಿಂದ ಭವಿಷ್ಯದಲ್ಲಿ ಇದು ಕಡಿಮೆ ರಿಸೇಲ್ ಮೌಲ್ಯವನ್ನು ಹೊಂದಿರುತ್ತದೆ.

ಇಸುಝು ಕಂಪನಿಯು ಭಾರತದಲ್ಲಿ ಡಿ-ಮ್ಯಾಕ್ಸ್, ವಿ-ಕ್ರಾಸ್ ಮತ್ತು ಎಂಯು-ಎಕ್ಸ್ ಎಂಬ ಮೂರು ಮಾದರಿಗಳನ್ನು ನೀಡಿತು. ಡಿ-ಮ್ಯಾಕ್ಸ್ ವಾಣಿಜ್ಯ ಉದ್ದೇಶದ ಪಿಕ್-ಅಪ್ ಟ್ರಕ್ ಆಗಿದ್ದು, ಇದು ಒಂದೆರಡು ರೂಪಾಂತರಗಳಲ್ಲಿ ಲಭ್ಯವಿದೆ. ವಿ-ಕ್ರಾಸ್ ಖಾಸಗಿ ಬಳಕೆಗಾಗಿ ಮಾರಾಟವಾಗುವ ಪಿಕ್-ಅಪ್ ಟ್ರಕ್ ಮತ್ತು ಉತ್ತಮ ಆಫ್-ರೋಡ್ ಸಾಮರ್ಥ್ಯಗಳನ್ನು ಹೊಂದಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇನ್ನು ಇಸುಝು ಕಂಪನಿಯ ಎಂಯು-ಎಕ್ಸ್ ಉತ್ತಮ ಎಸ್‍ಯುವಿಯಾಗಿದೆ. ಈ ಎಂಯು-ಎಕ್ಸ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್ ಮತ್ತು ಮಹೀಂದ್ರಾ ಅಲ್ತುರಾಸ್ ಜಿ4 ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಇತ್ತೀಚೆಗೆ ಇಸುಝು ಮ್ಯಾಕ್ಸ್ ವಿ-ಕ್ರಾಸ್ ಬಿಎಸ್-6 ಮಾದರಿಯು ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಇಸುಝು ಕಂಪನಿಯ ಬಿಎಸ್-6 ಎಸ್‌ಯುವಿಗಳು ಮತ್ತು ಪಿಕಪ್ ಟ್ರಕ್‌ಗಳ ಸರಣಿಯ ಎಲ್ಲಾ ಮಾದರಿಗಳು ಭಾರತದಲ್ಲಿ ಈಗಗಾಲೇ ಬೇಡುಗಡೆಯಾಗಬೇಕಾಗಿತ್ತು. ಆದರೆ ಕರೋನಾ ಸೋಂಕಿನ ಭೀತಿಯಿಂದ ಬಿಡುಗಡೆಯು ವಿಳಂಬವಾಗಿದೆ.