ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಮಾಹಿತಿ ಬಹಿರಂಗ

ಅಮೆರಿಕಾ ಮೂಲದ ಜೀಪ್ ಕಂಪನಿಯು ತನ್ನ ಸರಣಿಯಲ್ಲಿರುವ ಜನಪ್ರಿಯ ಎಸ್‍ಯುವಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರೊಂದಿಗೆ ಜೀಪ್ ಕಂಪನಿಯು ತನ್ನ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಕೂಡ ಬಿಡುಗಡೆಗೊಳಿಸಲಿದೆ.

ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಮಾಹಿತಿ ಬಹಿರಂಗ

ಜೀಪ್ ಕಂಪನಿಯು ತನ್ನ ಕಂಪಾಸ್ ಅನ್ನು ಮೊದಲು ಒಟ್ಟು 19 ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಜೀಪ್ ಕಂಪನಿಯು ಕಂಪಾಸ್‌‌ನ 14 ಮಾದರಿಗಳನ್ನು ಸ್ಥಗಿತಗೊಳಿಸಿದೆ. ಇನ್ನು ಮುಂದೆ ಜೀಪ್ ಕಂಪಾಸ್ ಬಿಎಸ್ 6 ಅನ್ನು ಕೇವಲ 5 ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಈ ಎಸ್‌ಯುವಿಯಲ್ಲಿ 1.4 ಲೀಟರ್ ಬಿಎಸ್ 6 ಪೆಟ್ರೋಲ್ ಹಾಗೂ 2.0 ಲೀಟರ್ ಬಿಎಸ್ 6 ಡೀಸೆಲ್ ಎಂಜಿನ್‌ಗಳನ್ನು ಅಳವಡಿಸಲಾಗಿದೆ.

ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಮಾಹಿತಿ ಬಹಿರಂಗ

ಜೀಪ್ ಕಂಪಾಸ್ ಬಿಎಸ್-6ನ ಐದು ಮಾದರಿಗಳಲ್ಲಿ ಸ್ಪೋರ್ಟ್, ಲಾಂಗಿಟ್ಯೂಡ್, ಲಾಂಗಿಟ್ಯೂಡ್ ಪ್ಲಸ್, ಲಿಮಿಟೆಡ್ ಪ್ಲಸ್ ಹಾಗೂ ಲಿಮಿಟೆಡ್ ಪ್ಲಸ್ 4 ಎಕ್ಸ್ 4 ಮಾದರಿಗಳು ಸೇರಿವೆ. ಟ್ರೈಲ್‌ಹಾಕ್ ಶ್ರೇಣಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಮಾಹಿತಿ ಬಹಿರಂಗ

ಹೊಸ ಜೀಪ್ ಕಂಪಾಸ್ ಎಸ್‍ಯುವಿಯ ಇಂಟಿರಿಯರ್ ಬಗ್ಗೆ ಮತ್ತು ಇತರ ಕೆಲವು ಮಾಹಿತಿಗಳು ಬಹಿರಂಗವಾಗಿವೆ. ಜೀಪ್ ಕಂಪಾಸ್ ಬಿಎಸ್ 6 ಎಸ್‌ಯುವಿ 16 ಇಂಚಿನ ಅಲಾಯ್ ವ್ಹೀಲ್‌, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಒಆರ್‌ವಿಎಂ, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ

ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಮಾಹಿತಿ ಬಹಿರಂಗ

ಇದರ ಜೊತೆಗೆ ಜೀಪ್ ಕಂಪಾಸ್ ಬಿಎಸ್ 6 ಟಾಪ್ ವೆರಿಯಂಟ್ ಲಿಮಿಟೆಡ್ ಪ್ಲಸ್ ಎಸ್‌ಯುವಿ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌, ಎಲ್‌ಇಡಿ ಹೆಡ್‌ಲ್ಯಾಂಪ್‌, 18 ಇಂಚಿನ ಅಲಾಯ್ ವ್ಹೀಲ್‌, ಡ್ಯುಯಲ್ ಟೋನ್ ರೂಫ್, ಪನೋರಾಮಿಕ್ ಸನ್‌ರೂಫ್, ರೇನ್ ಸೆನ್ಸಿಂಗ್ ವೈಪರ್ಸ್, ಲೆದರ್ ಸೀಟುಗಳು, ಲೆದರ್ ಸ್ಟೀಯರಿಂಗ್ ವ್ಹೀಲ್‌ಗಳನ್ನು ಹೊಂದಿದೆ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಮಾಹಿತಿ ಬಹಿರಂಗ

ಜೀಪ್ ಕಂಪಾಸ್‌ನಲ್ಲಿ ಅಳವಡಿಸಿರುವ 1.4-ಲೀಟರ್ ಬಿಎಸ್-6 ಪೆಟ್ರೋಲ್ ಎಂಜಿನ್ 160 ಬಿಹೆಚ್‌ಪಿ ಪವರ್ ಹಾಗೂ 260 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 2.0 ಲೀಟರಿನ ಡೀಸೆಲ್ ಎಂಜಿನ್ 173 ಬಿಹೆಚ್‌ಪಿ ಪವರ್ ಹಾಗೂ 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಹಾಗೂ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ಗಳನ್ನು ಅಳವಡಿಸಲಾಗಿದೆ.

ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಮಾಹಿತಿ ಬಹಿರಂಗ

ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ನಾಲ್ಕು ಡಿಸ್ಕ್ ಬ್ರೇಕ್, ರಿವರ್ಸ್ ಪಾರ್ಕ್ ಅಸಿಸ್ಟ್ ಸೆನ್ಸಾರ್, ಟ್ರಾಕ್ಷನ್ ಕಂಟ್ರೋಲ್, ಎಬಿಎಸ್ ಮತ್ತು ಫ್ರಂಟ್ ಏರ್‌ಬ್ಯಾಗ್‌ಗಳನ್ನು ಹೊಂದಿದೆ.

MOST READ: ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯ ವೀಡಿಯೋ ಬಿಡುಗಡೆಗೊಳಿಸಿದ ಟೊಯೊಟಾ

ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಮಾಹಿತಿ ಬಹಿರಂಗ

ಜೀಪ್ ಕಂಪಾಸ್‌ನ 14 ಮಾದರಿಗಳಲ್ಲಿ, 5 ಪೆಟ್ರೋಲ್ ಮಾದರಿಗಳನ್ನು ಹಾಗೂ 9 ಡೀಸೆಲ್ ಮಾದರಿಗಳನ್ನು ಸ್ಥಗಿತಗೊಳಿಸಲಾಗಿದೆ. ಕಂಪನಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನ್ನು ಬಿಡುಗಡೆಗೊಳಿಸುಲಿದೆ.

ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಮಾಹಿತಿ ಬಹಿರಂಗ

ಜೀಪ್ ಕಂಪಾಸ್ ಬ್ರ್ಯಾಂಡ್‍ನ ಹೆಚ್ಚು ಮಾರಾಟವಾಗುವ ಎಸ್‍ಯುವಿಯಾಗಿದೆ. ಮುಂದಿನ ದಿನಗಳಲ್ಲಿ ಇತರ ಹೊಸ ಎಸ್‍ಯುವಿಗಳನ್ನು ಬಿಡುಗಡೆಗೊಳಿಸಿ ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ.

Article Published On: Wednesday, April 29, 2020, 17:08 [IST]
English summary
2021 Jeep Compass Exterior, Interior Details Emerge- Read in Kannada.
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+