ಲಾಕ್‌ಡೌನ್ ಮುಂದುವರಿಕೆ: ಆನ್‌ಲೈನ್ ಕಾರು ಮಾರಾಟ ಆರಂಭಿಸಿದ ಜೀಪ್ ಇಂಡಿಯಾ

ಕರೋನಾ ವೈರಸ್ ಅಟ್ಟಹಾಸದಿಂದಾಗಿ ಇಡೀ ವಿಶ್ವವೇ ಆತಂಕದಲ್ಲಿದ್ದು, ವೈರಸ್ ಹತೋಟಿಗಾಗಿ ಎಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರಿಂದ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ಆಟೋ ಉದ್ಯಮದಕ್ಕೂ ಕೂಡಾ ಭಾರೀ ಪ್ರಮಾಣದ ನಷ್ಟ ಉಂಟುಮಾಡುತ್ತಿದೆ.

ಲಾಕ್‌ಡೌನ್ ಮುಂದುವರಿಕೆ: ಆನ್‌ಲೈನ್ ಕಾರು ಮಾರಾಟ ಆರಂಭಿಸಿದ ಜೀಪ್ ಇಂಡಿಯಾ

ಸದ್ಯ ವೈರಸ್ ಹೊಡೆದೊಡಿಸಲು ವಿಧಿಸಲಾಗಿರುವ ಲಾಕ್‌‌ಡೌನ್ ಅನ್ನು ಪರಿಸ್ಥಿತಿಗೆ ಅನುಗುಣವಾಗಿ ತೆರವುಗೊಳಿಸಲಾಗುತ್ತಿದ್ದು, ಹಸಿರು ವಲಯದಲ್ಲಿನ ವಾಣಿಜ್ಯ ಚಟುವಟಿಕೆಗಳಿಗೆ ಷರತ್ತುಬದ್ದ ಅವಕಾಶ ನೀಡಲಾಗಿದೆ. ಇದರಿಂದ ಕೆಲವು ಸುರಕ್ಷಾ ಕ್ರಮಗಳೊಂದಿಗೆ ವಾಣಿಜ್ಯ ವ್ಯಾಪಾರವನ್ನು ಪುನಾರಂಭಿಸುತ್ತಿರುವ ಉದ್ಯಮ ಸಂಸ್ಥೆಗಳು ರೋಗ ಹರಡದಂತೆ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದು, ಜೀಪ್ ಇಂಡಿಯಾ ಕೂಡಾ ಕಾರು ಮಾರಾಟ ಪುನಾಂಭಿಸಲು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಶುರುಮಾಡಿದೆ.

ಲಾಕ್‌ಡೌನ್ ಮುಂದುವರಿಕೆ: ಆನ್‌ಲೈನ್ ಕಾರು ಮಾರಾಟ ಆರಂಭಿಸಿದ ಜೀಪ್ ಇಂಡಿಯಾ

ಕೇಂದ್ರ ಸರ್ಕಾರವು 3ನೇ ಹಂತದ ಲಾಕ್‌ಡೌನ್ ವಿಧಿಸುವುರೊಂದಿಗೆ ಹಸಿರು ವಲಯಗಳಿಗೆ ಹಲವು ವಿನಾಯ್ತಿಗಳನ್ನು ನೀಡಿದ್ದು, ರೆಡ್ ಅಲರ್ಟ್ ಪ್ರದೇಶಗಳಲ್ಲಿನ ವಾಣಿಜ್ಯ ಚಟುವಟಿಕೆಗಳಿಗೆ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿದೆ.

MOST READ: ಲಾಕ್‌ಡೌನ್ ಎಫೆಕ್ಟ್- ವಿನಾಯ್ತಿ ಸಿಕ್ಕರೂ ವಾಹನ ಉತ್ಪಾದನೆಗೆ ಮುಂದಾಗದ ಆಟೋ ಕಂಪನಿಗಳು

ಲಾಕ್‌ಡೌನ್ ಮುಂದುವರಿಕೆ: ಆನ್‌ಲೈನ್ ಕಾರು ಮಾರಾಟ ಆರಂಭಿಸಿದ ಜೀಪ್ ಇಂಡಿಯಾ

ಹೀಗಾಗಿ ಮೇ 3ರ ನಂತರ ನೇರ ವಾಹನ ಮಾರಾಟವನ್ನು ಪುನಾರಂಭಿಸುವ ತವಕದಲ್ಲಿದ್ದ ಆಟೋ ಕಂಪನಿಗಳಿಗೆ ಇದು ಹಿನ್ನಡೆ ಉಂಟಾಗಿದ್ದು, ಗ್ರಾಹಕರ ಸುರಕ್ಷತೆಯ ದೃಷ್ಠಿಯಿಂದ ಆನ್‌ಲೈನ್ ವಹಿವಾಟು ಆರಂಭಿಸಿವೆ.

ಲಾಕ್‌ಡೌನ್ ಮುಂದುವರಿಕೆ: ಆನ್‌ಲೈನ್ ಕಾರು ಮಾರಾಟ ಆರಂಭಿಸಿದ ಜೀಪ್ ಇಂಡಿಯಾ

ಡಿಜಿಟಲ್ ಪ್ಲ್ಯಾಟ್‌‌ಫಾರ್ಮ್ ಮೂಲಕವೇ ಕಾರು ಮಾರಾಟ ಪ್ರಕ್ರಿಯೆಗಳನ್ನು ಕೈಗೊಳ್ಳಲಿರುವ ಜೀಪ್ ಇಂಡಿಯಾ ಕಂಪನಿಯು ಗ್ರಾಹಕರ ಮನೆ ಬಾಗಿಲಿಗೆ ಕಾರು ಉತ್ಪನ್ನಗಳನ್ನು ತಲುಪಿಸಲಿದ್ದು, ಈ ವೇಳೆ ಗರಿಷ್ಠ ಸುರಕ್ಷಾ ಕ್ರಮಗಳನ್ನು ತೆಗದುಕೊಳ್ಳಲಿದೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಲಾಕ್‌ಡೌನ್ ಮುಂದುವರಿಕೆ: ಆನ್‌ಲೈನ್ ಕಾರು ಮಾರಾಟ ಆರಂಭಿಸಿದ ಜೀಪ್ ಇಂಡಿಯಾ

ಹೊಸ ಸುರಕ್ಷಾ ನಿಯಮದಡಿ ಗ್ರಾಹಕರಿಗೆ ಹೆಚ್ಚಿನ ಸುರಕ್ಷತೆಯೊಂದಿಗೆ ಉತ್ಪನ್ನಗಳನ್ನು ತಲುಪಿಸುವುದರ ಜೊತೆಗೆ ಉದ್ಯೋಗಿಗಳಿಗೂ ಗರಿಷ್ಠ ಸುರಕ್ಷತೆ ಒದಗಿಸಲಿರುವ ಜೀಪ್ ಕಂಪನಿಯು ಆರ್ಥಿಕ ಸಂಕಷ್ಟದಿಂದ ಹೊರಬರಲು ಹಲವಾರು ಹೊಸ ಯೋಜನೆಗಳನ್ನು ರೂಪಿಸಿದೆ.

ಲಾಕ್‌ಡೌನ್ ಮುಂದುವರಿಕೆ: ಆನ್‌ಲೈನ್ ಕಾರು ಮಾರಾಟ ಆರಂಭಿಸಿದ ಜೀಪ್ ಇಂಡಿಯಾ

ಇನ್ನು ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲೂ ಭಾಗಿಯಾಗಿರುವ ಜೀಪ್ ಇಂಡಿಯಾ ಕಂಪನಿಯು ವಿವಿಧ ಮಾದರಿಯ ವೈದ್ಯಕೀಯ ಉಪಕರಣಗಳನ್ನು ಅಗತ್ಯವಿರುವ ರಾಜ್ಯ ಸರ್ಕಾರಗಳಿಗೆ ಒದಗಿಸಿದ್ದು, ಗ್ರಾಹಕರಿಗೆ ಎರಡು ತಿಂಗಳ ಹೆಚ್ಚುವರಿ ವಾರಂಟಿಯನ್ನು ಘೋಷಣೆ ಮಾಡಿದೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಲಾಕ್‌ಡೌನ್ ಮುಂದುವರಿಕೆ: ಆನ್‌ಲೈನ್ ಕಾರು ಮಾರಾಟ ಆರಂಭಿಸಿದ ಜೀಪ್ ಇಂಡಿಯಾ

ಇದಲ್ಲದೆ ಮಾಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸ್ಪಂದಿಸಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಧನಸಹಾಯದ ಜೊತೆಗೆ ವೈದ್ಯಕೀಯ ಉಪಕರಣಗಳನ್ನು ಉತ್ಪಾದನೆ ಮಾಡಿ ವಿವಿಧ ರಾಜ್ಯ ಸರ್ಕಾರಗಳಿಗೆ ವಿತರಣೆ ಮಾಡುತ್ತಿವೆ.

ಲಾಕ್‌ಡೌನ್ ಮುಂದುವರಿಕೆ: ಆನ್‌ಲೈನ್ ಕಾರು ಮಾರಾಟ ಆರಂಭಿಸಿದ ಜೀಪ್ ಇಂಡಿಯಾ

ಲಾಕ್‌ಡೌನ್ ವೇಳೆ ಆಟೋ ಉತ್ಪಾದನಾ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದ್ದರಿಂದ ವೈದ್ಯಕೀಯ ಉಪಕರಣಗಳ ಉತ್ಪಾದನೆ ಹೆಚ್ಚಿನ ಒತ್ತುನೀಡಿರುವ ಆಟೋ ಉತ್ಪಾದನಾ ಕಂಪನಿಗಳು ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್, ಪ್ರೋಟೆಕ್ವಿಟ್ ಕ್ಲಾಥ್, ರ‍್ಯಾಪಿಡ್ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಉತ್ಪಾದನೆ ಮಾಡುತ್ತಿವೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಲಾಕ್‌ಡೌನ್ ಮುಂದುವರಿಕೆ: ಆನ್‌ಲೈನ್ ಕಾರು ಮಾರಾಟ ಆರಂಭಿಸಿದ ಜೀಪ್ ಇಂಡಿಯಾ

ವೈರಸ್ ತಡೆಗಾಗಿ ಈಗಾಗಲೇ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದು, ವೈದ್ಯಕೀಯ ಉಪಕರಣಗಳ ಕೊರತೆಯು ಸೋಂಕಿತರ ಸಾವಿನ ಪ್ರಮಾಣ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಸದ್ಯ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಆಟೋ ಉತ್ಪಾದನಾ ಘಟಕಗಳಲ್ಲೇ ಅಗತ್ಯ ವೈದಕೀಯ ಉಪಕರಣಗಳ ಉತ್ಪಾದನೆಗೆ ಚಾಲನೆ ನೀಡಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಗರಿಷ್ಠ ಸಹಾಯ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಕಾರಣವಾಗಿದೆ.

Most Read Articles

Kannada
Read more on ಜೀಪ್ jeep
English summary
Jeep online sales retail strategy introduced in India details, Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X