ಬಿಎಸ್-6 ಜೀಪ್ ಕಂಪಾಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿ

ಜೀಪ್ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಕಂಪಾಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡಿದ್ದಾರೆ. ಜೀಪ್ ಕಂಪಾಸ್ ಎಸ್‍ಯುವಿಯ ಆಯ್ದ ವೆರಿಯೆಂಟ್ ಗಳಿಗೆ ಅವಲಂಬಿಸಿ ರೂ.2 ಲಕ್ಷ ಗಳವರೆಗೆ ರಿಯಾಯಿತಿಯನ್ನು ನೀಡಿದೆ.

ಬಿಎಸ್-6 ಜೀಪ್ ಕಂಪಾಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿ

ವರದಿ ಪ್ರಕಾರ, ಆಫ್-ರೋಡ್-ಫೋಕಸ್ಡ್ ಕಂಪಾಸ್ ಟ್ರೈಲ್‌ಹಾಕ್ ಮಾದರಿಗೆ ರೂ.2 ಲಕ್ಷ ಗಳವರೆಗೆ ರಿಯಾಯಿತಿಯನ್ನು ನೀಡಲಾಗುತ್ತದೆ. ಆದರೆ ಕಂಪಾಸ್ ಎಸ್‍ಯುವಿಯ ಸಾಮಾನ್ಯ ವೆರಿಯೆಂಟ್ ಗಳಿಗೆ ರೂ.80,000 ಗಳವರೆಗೆ ರಿಯಾಯಿಯನ್ನು ನೀಡಲಾಗುತ್ತದೆ. ರಿಯಾಯಿತಿಗಳು ಸ್ಥಳ ಮತ್ತು ಮಾರಾಟಗಾರರ ಆಧಾರದ ಮೇಲೆ ಬದಲಾಗಬಹುದು. ಕಾರು ತಯಾರಕರು ಹೆಚ್ಚುವರಿಯಾಗಿ ಎಸ್ಯುವಿಯನ್ನು ಸುಲಭವಾದ ಮಾಲೀಕತ್ವಕ್ಕಾಗಿ ವಿವಿಧ ಹಣಕಾಸು ಯೋಜನೆಗಳೊಂದಿಗೆ ನೀಡುತ್ತಿದ್ದಾರೆ.

ಬಿಎಸ್-6 ಜೀಪ್ ಕಂಪಾಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿ

ಈ ರಿಯಾಯಿತಿಗಳು ಸ್ಥಳ ಮತ್ತು ಡೀಲರುಗಳ ಆಧಾರದ ಮೇಲೆ ಬದಲಾಗಬಹುದು. ಇನ್ನು ಹೆಚ್ಚುವರಿಯಾಗಿ ಜೀಪ್ ಕಂಪಾಸ್ ಮೇಲೆ ಹಲವಾರು ಸುಲಭವಾಗಿ ಮಾಲೀಕತ್ವ ಪಡೆಯಲು ವಿವಿಧ ಹಣಕಾಸು ಪ್ರಯೋಜನೆಗಳನ್ನು ನೀಡುತ್ತಿದ್ದಾರೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಬಿಎಸ್-6 ಜೀಪ್ ಕಂಪಾಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿ

ಆರಂಭಿಕ ಡೌನ್ ಪೇಮೆಂಟ್ ಮಾಡಿದರೆ ಗಾಹಕರು ಶೇ.100 ರಷ್ಟು ಆನ್-ರೋಡ್ ಹಣಕಾಸು ರಿಯಾಯಿತಿಯನ್ನು ಪಡೆಯಬಹುದು. ಇದರೊಂದಿಗೆ ಒಂದು ವರ್ಷದಲ್ಲಿ ಸತತ ಮೂರು ತಿಂಗಳು ಶೇ.50 ಕಡಿಮೆ ಇಎಂಐ ಪಾವತಿಸುವ ಅವಕಾಶವಿದೆ. ಇದರೊಂದಿಗೆ ಆಯ್ದ ಡೀಲರುಗಳನ್ನು ಅವಲಂಭಿಸಿ ಇನ್ನು ಕೆಲವು ಇಎಂಐ ಆಫರ್ ಗಳಿವೆ.

ಬಿಎಸ್-6 ಜೀಪ್ ಕಂಪಾಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿ

ಜೀಪ್ ಕಂಪಾಸ್ ಎಸ್‍‍ಯುವಿಯಲ್ಲಿ ಕ್ರೂಸ್ ಕಂಟ್ರೋಲ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಅಲ್ಲದೇ ಎಂಜಿನ್ ಸ್ಟಾರ್ಟ್/ಸ್ಟಾಪ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಜೀಪ್ ಕಂಪಾಸ್ ಪೆಟ್ರೋಲ್ ಆವೃತ್ತಿಯು1.4 ಲೀಟರ್ ಟರ್ಬೊ ಎಂಜಿನ್ ಅನ್ನು ಹೊಂದಿದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಬಿಎಸ್-6 ಜೀಪ್ ಕಂಪಾಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿ

ಈ ಪೆಟ್ರೋಲ್ ಎಂಜಿನ್ 161 ಬಿ‍‍ಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಮತ್ತು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಿಎಸ್-6 ಜೀಪ್ ಕಂಪಾಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿ

ಜೀಪ್ ಕಂಪಾಸ್‍ನ ಲಾಂಗಿಟ್ಯೂಡ್ ಮತ್ತು ಲಿಮಿಟೆಡ್ ಪ್ಲಸ್ ರೂಪಾಂತದಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 173 ಬಿ‍‍ಹೆಚ್‍‍ಪಿ ಪವರ್ ಮತ್ತು 350 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಬಿಎಸ್-6 ಜೀಪ್ ಕಂಪಾಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿ

ಎಂಜಿನ್‍‍ನೊಂದಿಗೆ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಹೊಸ ಎಂಜಿನ್ ಆಯ್ಕೆಯ ಹೊರತಾಗಿ ಜೀಪ್ ಕಂಪಾಸ್‍ನ ಲಾಂಗಿಟ್ಯೂಡ್ ಮತ್ತು ಲಿಮಿಟೆಡ್ ಪ್ಲಸ್ ಎರಡೂ ರೂಪಾಂತರಗಳು ಬಹುತೇಕ ಒಂದೇ ರೀತಿಯಲ್ಲಿವೆ.

ಬಿಎಸ್-6 ಜೀಪ್ ಕಂಪಾಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿ

ಹೊಸ ಬಿಎಸ್-6 ಜೀಪ್ ಕಂಪಾಸ್ ಭಾರತದಲ್ಲಿ ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್, ಟಾಟಾ ಹ್ಯಾರಿಯರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 500 ಎಸ್‍‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Article Published On: Friday, September 4, 2020, 19:24 [IST]
English summary
Jeep Compass Available With Benefits Of Up To Rs 2 Lakh. Read In Kannada.
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+