ಟಯರ್‌ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಜೆಕೆ ಟಯರ್

ಖ್ಯಾತ ಟಯರ್ ತಯಾರಕ ಕಂಪನಿಯಾದ ಜೆಕೆ ಟಯರ್ ಮಹತ್ವದ ಸಾಧನೆ ಮಾಡಿದೆ. ಇದುವರೆಗೆ ಟ್ರಕ್ ಹಾಗೂ ಬಸ್‌ಗಳಿಗಾಗಿ 20 ಮಿಲಿಯನ್ ಟಯರ್‌ಗಳನ್ನು ಉತ್ಪಾದಿಸಲಾಗಿದೆ ಎಂದು ಜೆಕೆ ಟಯರ್ ಹೇಳಿದೆ. ಈ ಮೊದಲು 2016ರಲ್ಲಿ ಜೆಕೆ ಟಯರ್ ಕಂಪನಿಯು 10 ಮಿಲಿಯನ್ ಟಯರ್‌ಗಳನ್ನು ಉತ್ಪಾದಿಸಿತ್ತು.

ಟಯರ್‌ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಜೆಕೆ ಟಯರ್

ಕೇವಲ ನಾಲ್ಕು ವರ್ಷಗಳಲ್ಲಿ ಕಂಪನಿಯು 20 ಮಿಲಿಯನ್ ಗಡಿ ದಾಟಿದೆ. ಗಮನಿಸಬೇಕಾದ ಸಂಗತಿಯೆಂದರೆ ಜೆಕೆ ಟಯರ್, ಭಾರತದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಟಯರ್‌ಗಳನ್ನು ಉತ್ಪಾದಿಸಿದ ಮೊದಲ ಹಾಗೂ ಏಕೈಕ ಟಯರ್ ಕಂಪನಿಯಾಗಿದೆ. ಜೆಕೆ ಟಯರ್ ಕಂಪನಿಯು ಭಾರತದಲ್ಲಿ 9 ಟಯರ್ ಉತ್ಪಾದನಾ ಘಟಕಗಳನ್ನು ಹೊಂದಿದೆ.

ಟಯರ್‌ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಜೆಕೆ ಟಯರ್

ಕಂಪನಿಯ 3 ಉತ್ಪಾದನಾ ಘಟಕಗಳು ಮೆಕ್ಸಿಕೊದಲ್ಲಿವೆ. ಜೆಕೆ ಟಯರ್ ಈ ಉತ್ಪಾದನಾ ಘಟಕಗಳಿಂದ ಪ್ರತಿವರ್ಷ ಸುಮಾರು 35 ಮಿಲಿಯನ್ ಟಯರ್‌ಗಳನ್ನು ಉತ್ಪಾದಿಸುತ್ತದೆ. ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ.ರಘುಪತಿ ಸಿಂಘಾನಿಯಾರವರು ಕಂಪನಿಯ ಈ ಸಾಧನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಟಯರ್‌ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಜೆಕೆ ಟಯರ್

ಈ ಬಗ್ಗೆ ಮಾತನಾಡಿರುವ ಅವರು, ಇದು ಜೆಕೆ ಟಯರ್‌ ಕಂಪನಿಗೆ ಮಾತ್ರವಲ್ಲದೇ ಕಂಪನಿಯೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಬ್ಬರಿಗೂ ಒಂದು ಮಹತ್ವದ ಸಾಧನೆಯಾಗಿದೆ. ನಮ್ಮ ಎಂಜಿನಿಯರಿಂಗ್ ಕೌಶಲ್ಯ ಹಾಗೂ ತಾಂತ್ರಿಕ ಸಾಮರ್ಥ್ಯದಲ್ಲಿ ನಂಬಿಕೆ ಇರಿಸಿದ ಗ್ರಾಹಕರಿಗೂ ಮಹತ್ವದ ಸಾಧನೆಯಾಗಿದೆ.

ಟಯರ್‌ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಜೆಕೆ ಟಯರ್

ಮಾರುಕಟ್ಟೆಯ ನಾಯಕರಾಗಿ, ನಾವು ಹೊಸ ಹೊಸ ಚಾಲನಾ ಆವಿಷ್ಕಾರಗಳಿಗೆ ಬದ್ಧರಾಗಿದ್ದೇವೆ. ಅಸ್ತಿತ್ವದಲ್ಲಿರುವ ಉತ್ಪನ್ನಗಳ ಜೊತೆಗೆ ಹೊಸ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಪರಿಚಯಿಸಲಿದ್ದೇವೆ ಎಂದು ಅವರು ಹೇಳಿದರು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಟಯರ್‌ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಜೆಕೆ ಟಯರ್

ಜೆಕೆ ಟಯರ್ ಕಂಪನಿಯು ಇತ್ತೀಚೆಗಷ್ಟೇ ದೇಶದ ಮೊದಲ ಸ್ಮಾರ್ಟ್ ಟಯರ್ ಟೆಕ್ನಾಲಜಿಯನ್ನು ಬಿಡುಗಡೆಗೊಳಿಸಿದೆ. ಇದರ ಸಹಾಯದಿಂದ ಟಯರ್‌ಗಳ ಮೇಲೆ ನಿರಂತರವಾಗಿ ಗಮನ ಹರಿಸಬಹುದು. ಟಯರ್‌ನಲ್ಲಿ ಎಷ್ಟು ಒತ್ತಡ ಹಾಗೂ ತಾಪಮಾನವಿದೆ ಎಂಬ ಮಾಹಿತಿಯನ್ನು ಪಡೆಯಬಹುದು.

ಟಯರ್‌ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಜೆಕೆ ಟಯರ್

ಇದರ ಜೊತೆಗೆ ಕರೋನಾ ವೈರಸ್ ವಿರುದ್ಧ ಹೋರಾಡಲು ಜೆಕೆ ಟಯರ್ ಕಂಪನಿಯು ತನ್ನ ಉತ್ಪಾದನಾ ಘಟಕದಲ್ಲಿ ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ತಯಾರಿಸುತ್ತಿದೆ. ಟೋಟಲ್ ಕಂಟ್ರೋಲ್ ಹ್ಯಾಂಡ್ ಸ್ಯಾನಿಟೈಜರ್ ಎಂಬ ಹೆಸರಿನಲ್ಲಿ ಕಂಪನಿಯು ಹ್ಯಾಂಡ್ ಸ್ಯಾನಿಟೈಜರ್ ಉತ್ಪಾದಿಸಿದೆ.

Article Published On: Tuesday, May 26, 2020, 18:41 [IST]
English summary
JK Tyre creates new milestone in manufacturing Tyres. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+