ಲಾಕ್‌ಡೌನ್ ವಿನಾಯ್ತಿ: ಜೆಕೆ ಟೈರ್ ಉತ್ಪಾದನೆಗೆ ಸಿಕ್ತು ಚಾಲನೆ

ದೇಶದ ಜನಪ್ರಿಯ ಟೈರ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಜೆಕೆ ಟೈರ್ ಬರೋಬ್ಬರಿ ಒಂದೂವರೆ ತಿಂಗಳಿನ ನಂತರ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಸ ಸುರಕ್ಷಾ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲಾಗಿದೆ.

ಲಾಕ್‌ಡೌನ್ ವಿನಾಯ್ತಿ: ಜೆಕೆ ಟೈರ್ ಉತ್ಪಾದನೆಗೆ ಸಿಕ್ತು ಚಾಲನೆ

ಕೇಂದ್ರ ಸರ್ಕಾರದ ಹೊಸ ಸುರಕ್ಷಾ ಮಾರ್ಗಸೂಚಿಯಂತೆ ಹಸಿರು ಮತ್ತು ಕಿತ್ತಳೆ ವಲಯದಲ್ಲಿರುವ ಆಟೋ ಕಂಪನಿಗಳ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಆಟೋ ಉತ್ಪಾದನಾ ಕಂಪನಿಗಳಿಗೆ ಪೂರಕವಾಗಿ ಟೈರ್ ಉತ್ಪಾದನಾ ಕಂಪನಿಗಳು ಕೂಡಾ ಉತ್ಪಾದನೆ ಕೈಗೊಳ್ಳುತ್ತಿವೆ. ಜೆಕೆ ಟೈರ್ ಕಂಪನಿಯು ತಮಿಳುನಾಡು, ರಾಜಸ್ತಾನ ಮತ್ತು ಉತ್ತರಾಖಂಡ್‌ನಲ್ಲಿ ಟೈರ್ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಮೈಸೂರಿನಲ್ಲಿ ಸಂಶೋಧನಾ ಮತ್ತು ಅಭಿವೃದ್ದಿ ಘಟಕವನ್ನು ಹೊಂದಿದೆ.

ಲಾಕ್‌ಡೌನ್ ವಿನಾಯ್ತಿ: ಜೆಕೆ ಟೈರ್ ಉತ್ಪಾದನೆಗೆ ಸಿಕ್ತು ಚಾಲನೆ

ನಾಲ್ಕು ಘಟಕಗಳಲ್ಲೂ ಕಾರ್ಯಾಚರಣೆ ಆರಂಭಿಸಿರುವ ಜೆಕೆ ಟೈರ್ ಕಂಪನಿಯು ಕೇಂದ್ರ ಸರ್ಕಾರ ಮತ್ತು ಆಯಾ ರಾಜ್ಯ ಸರ್ಕಾರಗಳು ಸೂಚಿಸಿರುವ ಮಾರ್ಗಸೂಚಿಯೆಂತೆ ಕಾರ್ಯನಿರ್ವಹಣೆ ಮಾಡುತ್ತಿರುವುದಾಗಿ ಪ್ರತಿಕಾ ಪ್ರಕಟಣೆ ಹೊರಡಿಸಿದೆ.

ಲಾಕ್‌ಡೌನ್ ವಿನಾಯ್ತಿ: ಜೆಕೆ ಟೈರ್ ಉತ್ಪಾದನೆಗೆ ಸಿಕ್ತು ಚಾಲನೆ

ಇದಲ್ಲದೆ ಆಟೋ ಕಂಪನಿಗಳು ಈಗಾಗಲೇ ಉತ್ಪಾದನೆಯನ್ನು ಶುರು ಮಾಡಿದ್ದರಿಂದ ಅದಕ್ಕೆ ಪೂರಕವಾಗಿ ಬಿಡಿಭಾಗಗಳ ಪೂರೈಕೆಯಿದ್ದಾಗ ಮಾತ್ರ ವಾಹನಗಳ ಉತ್ಪಾದನೆ ಪರಿಪೂರ್ಣವಾಗಲಿದ್ದು, ಸದ್ಯ ಸ್ಟಾಕ್ ಪ್ರಮಾಣದಲ್ಲಿ ಮಾತ್ರವೇ ಉತ್ಪಾದನೆಯನ್ನು ಕೈಗೊಳ್ಳಲಾಗುತ್ತಿದೆ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಲಾಕ್‌ಡೌನ್ ವಿನಾಯ್ತಿ: ಜೆಕೆ ಟೈರ್ ಉತ್ಪಾದನೆಗೆ ಸಿಕ್ತು ಚಾಲನೆ

ಮುಂದಿನ ಒಂದು ವಾರದೊಳಗೆ ಎಲ್ಲಾ ಮಾದರಿಯ ಬಿಡಿಭಾಗಗಳ ಕಂಪನಿಗಳು ಉತ್ಪಾದನೆಯನ್ನು ಪುನಾರಂಭಿಸುವ ಅವಶ್ಯಕತೆಯಿದ್ದು, ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಹೊರತುಪಡಿಸಿ ಇನ್ನುಳಿದ ಕಡೆಗಳಲ್ಲಿ ಆಟೋ ಬಿಡಿಭಾಗಗಳ ಉತ್ಪಾದನೆಗೆ ಚಾಲನೆ ಸಿಗಲಿದೆ.

ಲಾಕ್‌ಡೌನ್ ವಿನಾಯ್ತಿ: ಜೆಕೆ ಟೈರ್ ಉತ್ಪಾದನೆಗೆ ಸಿಕ್ತು ಚಾಲನೆ

ಇನ್ನು ಕರೋನಾ ವೈರಸ್‌ನಿಂದಾಗಿ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದ್ದು, ಬಹುತೇಕ ವಾಣಿಜ್ಯ ವ್ಯಾಪಾರಗಳು ನೆಲಕಚ್ಚಿವೆ. ಭಾರತದಲ್ಲೂ ಲಾಕ್‌ಡೌನ್ ವಿಧಿಸಿದ ದಿನದಿಂದಲೂ ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿದ್ದರಿಂದ ಆಟೋ ಉದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕ ಬಿಕ್ಕಟ್ಟು ಶುರುವಾಗಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಲಾಕ್‌ಡೌನ್ ವಿನಾಯ್ತಿ: ಜೆಕೆ ಟೈರ್ ಉತ್ಪಾದನೆಗೆ ಸಿಕ್ತು ಚಾಲನೆ

ವೈರಸ್ ತಡೆಗಾಗಿ ಲಾಕ್‌ಡೌನ್ ಅನಿವಾರ್ಯವಾಗಿದ್ದರಿಂದ ಭಾರತೀಯ ಆಟೋ ಉದ್ಯಮವು ಸಹ ದಿನಂಪ್ರತಿ ನೂರಾರು ಕೋಟಿ ನಷ್ಟ ಅನುಭವಿಸುತ್ತಿದ್ದು, ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಆಟೋ ಕ್ಷೇತ್ರಕ್ಕೆ ವಿನಾಯ್ತಿ ನೀಡಲಾಗಿದೆಯಾದರೂ ಆರ್ಥಿಕ ಮುಗ್ಗಟ್ಟು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

Most Read Articles

Kannada
English summary
JK Tyre Resumes Operations Under Rules Set By The Government. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X