ಇನ್ಮುಂದೆ ಟೈರ್ ಜೊತೆ ಹ್ಯಾಂಡ್ ಸ್ಯಾನಿಟೈಜರ್ ಉತ್ಪಾದನೆ ಮಾಡಲಿದೆ ಜೆಕೆ ಟೈರ್

ದೇಶದ ಪ್ರಮುಖ ಟೈರ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಜೆಕೆ ಟೈರ್ ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ಈಗಾಗಲೇ ಸರ್ಕಾರದ ಜೊತೆ ಕೈಜೋಡಿಸುವ ಮೂಲಕ ಹಣಕಾಸು ನೆರವು ನೀಡಿದ್ದು, ಇದೀಗ ವೈರಸ್ ವಿರುದ್ಧ ಹೋರಾಟಕ್ಕಾಗಿ ಹ್ಯಾಂಡ್ ಸ್ಯಾನಿಟೈಜರ್ ಉತ್ಪನ್ನವನ್ನು ತನ್ನದೆ ಉದ್ಯಮ ಸಂಸ್ಥೆಗಳ ಅಡಿ ಉತ್ಪಾದನೆ ಮಾಡಲು ಸಿದ್ದವಾಗಿದೆ.

ಇನ್ಮುಂದೆ ಟೈರ್ ಜೊತೆ ಹ್ಯಾಂಡ್ ಸ್ಯಾನಿಟೈಜರ್ ಉತ್ಪಾದನೆ ಮಾಡಲಿದೆ ಜೆಕೆ ಟೈರ್

ಹ್ಯಾಂಡ್‌ ಸ್ಯಾನಿಟೈಜರ್ ಉತ್ಪಾದನೆಗಾಗಿ ಈಗಾಗಲೇ ಅಂತಿಮ ಸಿದ್ದತೆ ಮಾಡಿಕೊಂಡಿರುವ ಜೆಕೆ ಟೈರ್ ಕಂಪನಿಯು ಹೊಸ ಉತ್ಪನ್ನಕ್ಕೆ ಟೊಟಲ್ ಕಂಟ್ರೋಲ್ ಹ್ಯಾಂಡ್ ಸ್ಯಾನಿಟೈಜರ್ ಎಂದು ಹೆಸರಿಸಲಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಮಾನ್ಯತೆ ಪಡೆದುಕೊಂಡಿದೆ. ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಸಿದ್ದಗೊಂಡಿರುವ ಹೊಸ ಹ್ಯಾಂಡ್ ಸ್ಯಾನಿಟೈಜರ್ ಉತ್ಪನ್ನವನ್ನು ಮುಂದಿನ ಒಂದು ವಾರದೊಳಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ರಾಜಸ್ತಾನ ಘಟಕದಲ್ಲಿ ಉತ್ಪಾದನೆಗಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ಇನ್ಮುಂದೆ ಟೈರ್ ಜೊತೆ ಹ್ಯಾಂಡ್ ಸ್ಯಾನಿಟೈಜರ್ ಉತ್ಪಾದನೆ ಮಾಡಲಿದೆ ಜೆಕೆ ಟೈರ್

ಹೊಸದಾಗಿ ಉತ್ಪಾದನೆಗೊಳ್ಳಲಿರುವ ಹ್ಯಾಂಡ್ ಸ್ಯಾನಿಟೈಜರ್ ಉತ್ಪನ್ನವನ್ನು ಮೊದಲು ಕರೋನಾ ವಾರಿಯರ್ಸ್ ಮತ್ತು ಸಮುದಾಯದ ಆರೋಗ್ಯ ರಕ್ಷಣೆಗಾಗಿ ಬಳಕೆ ಮಾಡಿಕೊಳ್ಳಲಿದ್ದು, ಟೈರ್ ಮಾರಾಟ ಮಳಿಗೆಗಳಲ್ಲಿ ಆರೋಗ್ಯ ಕಾಳಜಿಗಾಗಿ ತನ್ನದೆ ಹೊಸ ಸುರಕ್ಷಾ ಉತ್ಪನ್ನ ಸಿದ್ದಪಡಿಸಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಇನ್ಮುಂದೆ ಟೈರ್ ಜೊತೆ ಹ್ಯಾಂಡ್ ಸ್ಯಾನಿಟೈಜರ್ ಉತ್ಪಾದನೆ ಮಾಡಲಿದೆ ಜೆಕೆ ಟೈರ್

ಇನ್ನು ಒಂದೂವರೆ ತಿಂಗಳಿನ ನಂತರ ಟೈರ್ ಉತ್ಪಾದನಾ ಮತ್ತು ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿರುವ ಜೆಕೆ ಟೈರ್ ಕಂಪನಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಸ ಸುರಕ್ಷಾ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವ ಮೂಲಕ ವೈರಸ್ ಭೀತಿಯನ್ನು ಹೋಗಲಾಡಿಸುವ ಯತ್ನದಲ್ಲಿದೆ.

ಇನ್ಮುಂದೆ ಟೈರ್ ಜೊತೆ ಹ್ಯಾಂಡ್ ಸ್ಯಾನಿಟೈಜರ್ ಉತ್ಪಾದನೆ ಮಾಡಲಿದೆ ಜೆಕೆ ಟೈರ್

ದೇಶದ ವಿವಿಧ ಭಾಗಗಳಲ್ಲಿರುವ ನಾಲ್ಕು ಉತ್ಪಾದನಾ ಘಟಕಗಳಲ್ಲೂ ಕಾರ್ಯಾಚರಣೆ ಆರಂಭಿಸಿರುವ ಜೆಕೆ ಟೈರ್ ಕಂಪನಿಯು ಕೇಂದ್ರ ಸರ್ಕಾರ ಮತ್ತು ಆಯಾ ರಾಜ್ಯ ಸರ್ಕಾರಗಳು ಸೂಚಿಸಿರುವ ಮಾರ್ಗಸೂಚಿಯೆಂತೆ ಕಾರ್ಯನಿರ್ವಹಣೆ ಮಾಡುತ್ತಿದ್ದು, ಹ್ಯಾಂಡ್ ಸ್ಯಾನಿಟೈಜರ್ ಉತ್ಪನ್ನವನ್ನು ಸಿದ್ದಪಡಿಸಲಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಇನ್ಮುಂದೆ ಟೈರ್ ಜೊತೆ ಹ್ಯಾಂಡ್ ಸ್ಯಾನಿಟೈಜರ್ ಉತ್ಪಾದನೆ ಮಾಡಲಿದೆ ಜೆಕೆ ಟೈರ್

ಜೆಕೆ ಟೈರ್ ಕಂಪನಿಯು ತಮಿಳುನಾಡು, ರಾಜಸ್ತಾನ ಮತ್ತು ಉತ್ತರಾಖಂಡ್‌ನಲ್ಲಿ ಟೈರ್ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಮೈಸೂರಿನಲ್ಲಿ ಸಂಶೋಧನಾ ಮತ್ತು ಅಭಿವೃದ್ದಿ ಘಟಕವನ್ನು ಹೊಂದಿದೆ.

ಇನ್ಮುಂದೆ ಟೈರ್ ಜೊತೆ ಹ್ಯಾಂಡ್ ಸ್ಯಾನಿಟೈಜರ್ ಉತ್ಪಾದನೆ ಮಾಡಲಿದೆ ಜೆಕೆ ಟೈರ್

ಮೈಸೂರಿನಲ್ಲಿರುವ ಸಂಶೋಧನಾ ಮತ್ತು ಅಭಿವೃದ್ದಿ ಘಟಕದಲ್ಲೇ ಅಭಿವೃದ್ದಿಗೊಂಡಿರುವ ಹೊಸ ಹ್ಯಾಂಡ್ ಸ್ಯಾನಿಟೈಜರ್ ಉತ್ಪನ್ನವು ರಾಜಸ್ತಾನ ಘಟಕದಲ್ಲಿ ಉತ್ಪಾದನೆಗೊಳ್ಳಲಿದ್ದು, ಕರೋನಾ ವೈರಸ್‌ನಿಂದಾಗಿ ಆಟೋ ಉತ್ಪಾದನಾ ಉದ್ಯಮ ಪ್ರಕ್ರಿಯೆಯು ಒಂದು ಸವಾಲಾಗಿ ಪರಿಣಮಿಸಿದೆ ಎನ್ನಬಹುದು.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಇನ್ಮುಂದೆ ಟೈರ್ ಜೊತೆ ಹ್ಯಾಂಡ್ ಸ್ಯಾನಿಟೈಜರ್ ಉತ್ಪಾದನೆ ಮಾಡಲಿದೆ ಜೆಕೆ ಟೈರ್

ಕರೋನಾ ವೈರಸ್‌ನಿಂದಾಗಿ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದ್ದು, ಬಹುತೇಕ ವಾಣಿಜ್ಯ ವ್ಯಾಪಾರಗಳು ನೆಲಕಚ್ಚಿವೆ. ಭಾರತದಲ್ಲೂ ಲಾಕ್‌ಡೌನ್ ವಿಧಿಸಿದ ದಿನದಿಂದಲೂ ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿದ್ದರಿಂದ ಆಟೋ ಉದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕ ಬಿಕ್ಕಟ್ಟು ಶುರುವಾಗಿದೆ.

Most Read Articles

Kannada
English summary
JK Tyre To Manufacture Hand Sanitizer To Help Fight COVID-19 Pandemic. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X